ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಗ್ದತ್ತ ದೇಶದ ಮೇಲೆ ಸಾಮ್ರಾಜ್ಯಗಳು ಆಕ್ರಮಣಮಾಡುತ್ತವೆ

ವಾಗ್ದತ್ತ ದೇಶದ ಮೇಲೆ ಸಾಮ್ರಾಜ್ಯಗಳು ಆಕ್ರಮಣಮಾಡುತ್ತವೆ

ವಾಗ್ದತ್ತ ದೇಶದ ಮೇಲೆ ಸಾಮ್ರಾಜ್ಯಗಳು ಆಕ್ರಮಣಮಾಡುತ್ತವೆ

ಉತ್ತರ ರಾಜ್ಯವಾದ ಇಸ್ರಾಯೇಲಿನ ರಾಜಧಾನಿಯಾದ ಸಮಾರ್ಯವು, ಸಾ.ಶ.ಪೂ. 740ರಲ್ಲಿ ಅಶ್ಶೂರ್ಯರಿಂದ ಜಯಿಸಲ್ಪಟ್ಟಿತ್ತು. ಹೀಗೆ ಇಸ್ರಾಯೇಲ್ಯರು ಒಂದು ಕ್ರೂರ ಸಾಮ್ರಾಜ್ಯದ ನಿಯಂತ್ರಣದ ಕೆಳಗೆ ಬಂದರು. ಅಶ್ಶೂರವು ಮೆಸೊಪೊತಾಮ್ಯದ ಬೈಲುಗಳ ಉತ್ತರ ಅಂಚಿನಲ್ಲಿ, ಫಲವಂತ ಬಾಲಚಂದ್ರ ಪ್ರದೇಶದ ನದಿಗಳಲ್ಲೇ ಅತಿ ದೊಡ್ಡ ನದಿಯಾದ ಟೈಗ್ರಿಸ್‌ನ ಸಮೀಪದಲ್ಲಿತ್ತು. ನಿಮ್ರೋದನು ನಿನೆವೆ ಮತ್ತು ಕೆಲಹ ಎಂಬ ಅಶ್ಶೂರ್ಯದ ಮುಖ್ಯ ನಗರಗಳನ್ನು ಸ್ಥಾಪಿಸಿದ್ದನು. (ಆದಿ 10:​8-12) IIIನೇ ಶಲ್ಮನೆಸೆರನ ದಿನಗಳಲ್ಲಿ, ಅಶ್ಶೂರವು ಪಶ್ಚಿಮದಿಕ್ಕಿನಲ್ಲಿ ಅಂದರೆ ಅರಾಮ್‌ ರಾಜ್ಯ ಮತ್ತು ಉತ್ತರ ಇಸ್ರಾಯೇಲಿನ ನೀರಾವರಿ ಹಾಗೂ ಫಲವತ್ತಾದ ಪ್ರದೇಶಗಳಲ್ಲಿ ವಿಸ್ತರಿಸಿತು.

ಬೈಬಲ್‌ನಲ್ಲಿ ಹೆಸರಿಸಲ್ಪಟ್ಟಿರುವ ರಾಜ IIIನೇ ತಿಗ್ಲತ್ಪಿಲೆಸೆರನ (ಪೂಲ್‌) ಆಳಿಕೆಯ ಕೆಳಗೆ ಅಶ್ಶೂರವು ಇಸ್ರಾಯೇಲಿನ ಮೇಲೆ ದಬ್ಬಾಳಿಕೆ ನಡೆಸಲಾರಂಭಿಸಿತು. ಈ ರಾಜನ ಮಿಲಿಟರಿ ಕಾರ್ಯಾಚರಣೆಯು, ದಕ್ಷಿಣದಲ್ಲಿದ್ದ ಯೆಹೂದವನ್ನೂ ಬಾಧಿಸಲಾರಂಭಿಸಿತು. (2ಅರ 15:19; 16:​5-18) ಸಕಾಲದಲ್ಲಿ ಅಶ್ಶೂರ್ಯದ ಉಕ್ಕಿಹರಿಯುವ ‘ನೀರುಗಳು’ ಯೆಹೂದದೊಳಕ್ಕೆ ಹಬ್ಬಿ, ಅದರ ರಾಜಧಾನಿಯಾದ ಯೆರೂಸಲೇಮನ್ನು ತಲಪಿದವು.​—⁠ಯೆಶಾ 8:​5-8.

ಅಶ್ಶೂರದ ಅರಸನಾದ ಸನ್ಹೇರೀಬನು, ಸಾ.ಶ.ಪೂ. 732ರಲ್ಲಿ ಯೆಹೂದದ ಮೇಲೆ ಆಕ್ರಮಣ ಮಾಡಿದನು. (2ಅರ 18:​13, 14) ಇಲಕಲಿನ ಪ್ರದೇಶದಲ್ಲಿ, ವ್ಯೂಹ ಯುಕ್ತಿಗಾಗಿ ಒಳ್ಳೆಯ ಸ್ಥಾನದಲ್ಲಿದ್ದ ಲಾಕೀಷ್‌ನೊಂದಿಗೆ ಯೆಹೂದದ 46 ಪಟ್ಟಣಗಳನ್ನು ಅವನು ವಶಪಡಿಸಿ ಲೂಟಿಮಾಡಿದನು. ಭೂಪಟವು ತೋರಿಸುವಂತೆ, ಹೀಗೆ ಮಾಡುವುದರಿಂದಾಗಿ ಅವನ ಸೈನ್ಯಗಳು ಯೆರೂಸಲೇಮಿನ ಸುತ್ತಲೂ ನೈರುತ್ಯಕ್ಕೂ ಇದ್ದವು, ಮತ್ತು ಹೀಗೆ ಯೆಹೂದದ ರಾಜಧಾನಿಯು ಸುತ್ತುವರಿಯಲ್ಪಟ್ಟಿತು. ಸನ್ಹೇರೀಬನು ತನ್ನ ಐತಿಹಾಸಿಕ ದಾಖಲೆಗಳಲ್ಲಿ, ತಾನು ಹಿಜ್ಕೀಯನನ್ನು “ಪಂಜರದಲ್ಲಿದ್ದ ಪಕ್ಷಿಯಂತೆ” ಇಟ್ಟೆನೆಂದು ಕೊಚ್ಚಿಕೊಳ್ಳುತ್ತಾನೆ. ಆದರೆ ದೇವದೂತನೊಬ್ಬನು ಸನ್ಹೇರೀಬನ ಸೈನಿಕರನ್ನು ನಾಶಮಾಡಿದ ಸಂಗತಿಯನ್ನು ಅಶ್ಶೂರದ ದಾಖಲೆಗಳು ತಿಳಿಸುವುದಿಲ್ಲ.​—⁠2ಅರ 18:​17-36; 19:​35-37.

ಅಶ್ಶೂರ ಸಾಮ್ರಾಜ್ಯದ ದಿನಗಳು ಅಂತ್ಯವಾಗಲಿದ್ದವು. ಈಗ ಯಾವುದು ಇರಾನ್‌ ದೇಶವಾಗಿದೆಯೋ ಅಲ್ಲಿನ ಗುಡ್ಡಗಾಡು ಪ್ರಸ್ಥಭೂಮಿಯಲ್ಲಿ ಮುಖ್ಯವಾಗಿ ವಾಸಿಸುತ್ತಿದ್ದ ಮೇದ್ಯರು, ಅಶ್ಶೂರ್ಯರ ಸೇನೆಯಲ್ಲಿ ಉಳಿದಿದ್ದವರೊಂದಿಗೆ ಹೋರಾಡಲಾರಂಭಿಸಿದರು. ಇದರಿಂದಾಗಿ ಅಶ್ಶೂರವು, ದಂಗೆಯೇಳಲಾರಂಭಿಸಿದ್ದ ತನ್ನ ಪಾಶ್ಚಾತ್ಯ ಪ್ರಾಂತಗಳಿಗೆ ಕೊಡುತ್ತಿದ್ದ ಗಮನವನ್ನು ಇತ್ತ ತಿರುಗಿಸಿತು. ಈ ನಡುವೆ, ಬಾಬೆಲಿನವರು ಹೆಚ್ಚೆಚ್ಚು ಬಲಿಷ್ಠರಾಗುತ್ತಾ ಇದ್ದರು. ಅವರು ಅಶ್ಶೂರ್‌ ಪಟ್ಟಣವನ್ನೂ ಸೆರೆಹಿಡಿದರು. ಸಾ.ಶ.ಪೂ. 632ರಲ್ಲಿ “ರಕ್ತಮಯಪುರಿ” ಆಗಿದ್ದ ನಿನೆವೆಯನ್ನು ಬಾಬೆಲಿನವರು, ಮೇದ್ಯರು ಮತ್ತು ಕಪ್ಪು ಸಮುದ್ರದ ಉತ್ತರದಿಂದ ಬಂದಿರುವ ಆಕ್ರಮಣಕಾರಿ ಜನರಾದ ಹೂಣರ ಒಂದು ಮೈತ್ರಿಕೂಟವು ಸೆರೆಹಿಡಿದು ನಾಶಮಾಡಿತು. ಇದು, ನಹೂಮ ಮತ್ತು ಚೆಫನ್ಯರ ಪ್ರವಾದನೆಗಳನ್ನು ನೆರವೇರಿಸಿತು.​—⁠ನಹೂ 3:1; ಚೆಫ 2:⁠13.

ಅಶ್ಶೂರವು ಖಾರಾನಿನಲ್ಲಿ ತನ್ನ ಮಾರಕ ಹೊಡೆತವನ್ನು ಪಡೆದುಕೊಂಡು ಕೊನೆಗೊಂಡಿತು. ಬಾಬೆಲಿನವರ ಪಟ್ಟುಹಿಡಿದ ಒಂದು ಪಡೆಯು ಆಕ್ರಮಿಸಿದಾಗ, ಐಗುಪ್ತದಿಂದ ಸಹಾಯ ಬರುವ ವರೆಗೆ ಅಶ್ಶೂರ್ಯರು ತಡೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಫರೋಹ ನೆಕೋ ಉತ್ತರ ದಿಕ್ಕಿನತ್ತ ಸಾಗುತ್ತಿದ್ದಾಗ, ಯೆಹೂದದ ರಾಜ ಯೋಷೀಯನು ಮೆಗಿದ್ದೋವಿನಲ್ಲಿ ಅವನನ್ನು ಅಡ್ಡಗಟ್ಟಿದನು. (2ಪೂರ್ವ 35:20) ನೆಕೋ ಕೊನೆಗೆ ಖಾರಾನ್‌ ತಲಪಿದಾಗ, ತೀರ ತಡವಾಗಿತ್ತು. ಅಶ್ಶೂರ ಸಾಮ್ರಾಜ್ಯ ಆಗಲೇ ನೆಲಕಚ್ಚಿತ್ತು.

ಬಾಬೆಲ್‌ ಸಾಮ್ರಾಜ್ಯ

ತೂಗುದೋಟಗಳು ಎಂದಾಕ್ಷಣ ಯಾವ ನಗರವು ನಿಮ್ಮ ಮನಸ್ಸಿಗೆ ಬರುತ್ತದೆ? ಬಾಬೆಲ್‌. ಇದು, ಅದೇ ಹೆಸರುಳ್ಳ ಮತ್ತು ಪ್ರವಾದನೆಯಲ್ಲಿ ರೆಕ್ಕೆಗಳುಳ್ಳ ಸಿಂಹದಿಂದ ಚಿತ್ರಿಸಲ್ಪಟ್ಟಿರುವ ಲೋಕ ಶಕ್ತಿಯ ರಾಜಧಾನಿಯಾಗಿದೆ. (ದಾನಿ 7:⁠4) ಆ ನಗರವು ಅದರ ಐಶ್ವರ್ಯ, ವ್ಯಾಪಾರ, ಮತ್ತು ಧರ್ಮ ಹಾಗೂ ಜ್ಯೋತಿಷ್ಯಶಾಸ್ತ್ರದ ವಿಕಸನಕ್ಕಾಗಿ ಸುಪ್ರಸಿದ್ಧವಾಗಿತ್ತು. ಆ ಸಾಮ್ರಾಜ್ಯದ ಕೇಂದ್ರವು, ಟೈಗ್ರಿಸ್‌ ಮತ್ತು ಯೂಫ್ರೇಟೀಸ್‌ ನದಿಗಳ ಮಧ್ಯದಲ್ಲಿರುವ ದಕ್ಷಿಣ ಮೆಸೊಪೊತಾಮ್ಯದ ಜವುಗುಭೂಮಿ ಬಯಲುಪ್ರದೇಶದಲ್ಲಿತ್ತು. ಆ ನಗರವು ಯೂಫ್ರೇಟೀಸ್‌ ನದಿಯ ಎರಡೂ ಬದಿಗಳಲ್ಲಿತ್ತು, ಮತ್ತು ಅದರ ಗೋಡೆಗಳು ಬೇಧಿಸಲಾರದಂಥವುಗಳಾಗಿ ತೋರಿದವು.

ಬಾಬೆಲಿನವರು ಉತ್ತರ ಅರಬಸ್ಥಾನದ ಕಲ್ಲುಬಂಡೆ ತುಂಬಿರುವ ಮರುಭೂಮಿಯನ್ನು ದಾಟುವ ವ್ಯಾಪಾರಿ ಮಾರ್ಗಗಳನ್ನು ಆರಂಭಿಸಿದರು. ಒಂದು ಹಂತದಲ್ಲಿ ರಾಜ ನೆಬೊನೈಡಸನು, ತೇಮಾದಲ್ಲಿ ವಾಸಿಸಿ, ಬಾಬೆಲಿನಲ್ಲಿ ಆಳುವ ಕೆಲಸವನ್ನು ಬೇಲ್ಶಚ್ಚರನಿಗೆ ವಹಿಸಿದನು.

ಬಾಬೆಲು ಕಾನಾನಿನ ಮೇಲೆ ಮೂರು ಬಾರಿ ದಾಳಿಮಾಡಿತು. ಬಾಬೆಲಿನವರು ಸಾ.ಶ.ಪೂ. 625ರಲ್ಲಿ ಐಗುಪ್ತ್ಯರನ್ನು ಕರ್ಕೆಮೀಷಿನಲ್ಲಿ ಸೋಲಿಸಿದ ನಂತರ, ದಕ್ಷಿಣದಿಕ್ಕಿನಲ್ಲಿ ಹಮಾತ್‌ನತ್ತ ಮುಂದುವರಿದರು. ಅಲ್ಲಿ ಅವರು ಪುನಃ ಒಮ್ಮೆ ಪಲಾಯನಗೈಯುತ್ತಿದ್ದ ಐಗುಪ್ತ್ಯರನ್ನು ಸೋಲಿಸಿದರು. ಆಮೇಲೆ ಬಾಬೆಲಿನವರು, ಕರಾವಳಿಯಲ್ಲಿ ದಕ್ಷಿಣದಿಕ್ಕಿನತ್ತ ಐಗುಪ್ತದ ಹಳ್ಳದ [“ಐಗುಪ್ತದ ತೊರೆ ಕಣಿವೆಯ,” NW] ವರೆಗೆ ಮುಂದುವರಿದರು, ಮತ್ತು ಮಾರ್ಗದಲ್ಲಿ ಅಷ್ಕೆಲೋನ್‌ನನ್ನು ನಾಶಮಾಡಿದರು. (2ಅರ 24:7; ಯೆರೆ 47:​5-7) ಈ ಕಾರ್ಯಾಚರಣೆಯ ಸಮಯದಲ್ಲೇ ಯೆಹೂದವು ಬಾಬೆಲಿನ ಒಂದು ಸಾಮಂತ ರಾಜ್ಯವಾಯಿತು.​—⁠2ಅರ 24:⁠1.

ಸಾ.ಶ.ಪೂ. 618ರಲ್ಲಿ ಯೆಹೂದದ ರಾಜ ಯೆಹೋಯಾಕೀಮನು ದಂಗೆಯೆದ್ದನು. ತದನಂತರ ಬಾಬೆಲು, ಹತ್ತಿರದ ರಾಷ್ಟ್ರಗಳ ಸೇನೆಗಳನ್ನು ಯೆಹೂದದ ವಿರುದ್ಧ ಕಳುಹಿಸಿತು, ಮತ್ತು ಬಾಬೆಲಿನ ಸ್ವಂತ ಪಡೆಗಳು ಯೆರೂಸಲೇಮಿಗೆ ಮುತ್ತಿಗೆಹಾಕಿ ಅದನ್ನು ಜಯಿಸಿದವು. ಸ್ವಲ್ಪ ಸಮಯದಲ್ಲೇ, ರಾಜ ಚಿದ್ಕೀಯನು ತನ್ನ ರಾಜ್ಯವು ಐಗುಪ್ತದೊಂದಿಗೆ ಸ್ನೇಹವನ್ನು ಬೆಳಸುವಂತೆ ಮಾಡುವ ಮೂಲಕ, ಬಾಬೆಲಿನವರನ್ನು ಯೆಹೂದದ ವಿರುದ್ಧ ವಿಪರೀತವಾಗಿ ರೊಚ್ಚಿಗೆಬ್ಬಿಸಿದನು. ಆದುದರಿಂದ ಅವರು ಪುನಃ ದಾಳಿಮಾಡಿ ಯೆಹೂದದ ಪಟ್ಟಣಗಳನ್ನು ನಾಶಮಾಡಲಾರಂಭಿಸಿದರು. (ಯೆರೆ 34:⁠7) ಕೊನೆಯಲ್ಲಿ, ನೆಬೂಕದ್ನೆಚ್ಚರನು ತನ್ನ ಸೇನೆಯ ಗಮನವನ್ನು ಯೆರೂಸಲೇಮಿನ ಕಡೆಗೆ ತಿರುಗಿಸಿ, ಅದನ್ನು ಸಾ.ಶ.ಪೂ. 607ರಲ್ಲಿ ಜಯಿಸಿದನು.​—⁠2ಪೂರ್ವ 36:​17-21; ಯೆರೆ 39:⁠10.

[ಪುಟ 23ರಲ್ಲಿರುವ ಚೌಕ]

ಈ ಅವಧಿಯ ಬೈಬಲ್‌ ಪುಸ್ತಕಗಳು:

ಹೋಶೇಯ

ಯೆಶಾಯ

ಮೀಕ

ಜ್ಞಾನೋಕ್ತಿ (ಭಾಗಶಃ)

ಚೆಫನ್ಯ

ನಹೂಮ

ಹಬಕ್ಕೂಕ

ಪ್ರಲಾಪಗಳು

ಓಬದ್ಯ

ಯೆಹೆಜ್ಕೇಲ

1 ಮತ್ತು 2 ಅರಸುಗಳು

ಯೆರೆಮೀಯ

[ಪುಟ 23ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಅಶ್ಶೂರ್‌ ಸಾಮ್ರಾಜ್ಯ

B4 ಮೋಫ್‌ (ನೋಫ್‌)

B4 ಚೋವನ್‌

B5 ಈಜಿಪ್ಟ್‌

C2 ಸೈಪ್ರಸ್‌ (ಕಿತ್ತೀಮ್‌)

C3 ಸೀದೋನ್‌

C3 ತೂರ್‌

C3 ಮೆಗಿದ್ದೋ

C3 ಸಮಾರ್ಯ

C4 ಯೆರೂಸಲೇಮ್‌$

C4 ಅಷ್ಕೆಲೋನ್‌

C4 ಲಾಕೀಷ್‌

D2 ಖಾರಾನ್‌

D2 ಕರ್ಕೆಮೀಷ್‌

D2 ಅರ್ಪಾದ್‌

D2 ಹಮಾತ್‌

D3 ರಿಬ್ಲ

D3 ಸಿರಿಯ

D3 ದಮಸ್ಕ

E2 ಗೋಜಾನ್‌

E2 ಮೆಸೊಪೊತಾಮ್ಯ

F2 ಮಿನ್ನಿ

F2 ಅಶ್ಶೂರ್‌

F2 ಕೊರಸ್‌ಬಡ್‌

F2 ನಿನೆವೆ

F2 ಕೆಲಹ

F2 ಅಶ್ಶೂರ್‌

F3 ಬಬಿಲೋನ್ಯ

F3 ಬಾಬೆಲ್‌

F4 ಕಸ್ದೀಯ

F4 ಯೆರೆಕ್‌

F4 ಊರ್‌

G3 ಶೂಷನ್‌

G4 ಏಲಾಮ್‌

ಬಾಬೆಲ್‌ ಸಾಮ್ರಾಜ್ಯ

C3 ಸೀದೋನ್‌

C3 ತೂರ್‌

C3 ಮೆಗಿದ್ದೋ

C3 ಸಮಾರ್ಯ

C4 ಯೆರೂಸಲೇಮ್‌

C4 ಅಷ್ಕೆಲೋನ್‌

C4 ಲಾಕೀಷ್‌

D2 ಖಾರಾನ್‌

D2 ಕರ್ಕೆಮೀಷ್‌

D2 ಅರ್ಪಾದ್‌

D2 ಹಮಾತ್‌

D3 ರಿಬ್ಲ

D3 ಸಿರಿಯ

D3 ದಮಸ್ಕ

D5 ತೇಮಾ

E2 ಗೋಜಾನ್‌

E2 ಮೆಸೊಪೊತಾಮ್ಯ

E4 ಅರೇಬಿಯ

F2 ಮಿನ್ನಿ

F2 ಅಶ್ಶೂರ್‌

F2 ಕೊರಸ್‌ಬಡ್‌

F2 ನಿನೆವೆ

F2 ಕೆಲಹ

F2 ಅಶ್ಶೂರ್‌

F3 ಬಬಿಲೋನ್ಯ

F3 ಬಾಬೆಲ್‌

F4 ಕಸ್ದೀಯ

F4 ಯೆರೆಕ್‌

F4 ಊರ್‌

G3 ಶೂಷನ್‌

G4 ಏಲಾಮ್‌

[ಬೇರೆ ಸ್ಥಳಗಳು]

G2 ಮೇದ್ಯ

ಮುಖ್ಯ ರಸ್ತೆಗಳು (ಪ್ರಕಾಶನ ನೋಡಿ)

[ಜಲಾಶಯಗಳು]

B3 ಮೆಡಿಟರೇನಿಯನ್‌ ಸಮುದ್ರ (ಮಹಾ ಸಮುದ್ರ)

C5 ಕೆಂಪು ಸಮುದ್ರ

H1 ಕ್ಯಾಸ್ಪಿಯನ್‌ ಸಮುದ್ರ

H5 ಪರ್ಷಿಯನ್‌ ಖಾರಿ

[ನದಿಗಳು]

B5 ನೈಲ್‌

E2 ಯೂಫ್ರೇಟೀಸ್‌

F3 ಟೈಗ್ರಿಸ್‌

[ಪುಟ 22ರಲ್ಲಿರುವ ಚಿತ್ರ]

ಲಾಕೀಷ್‌ ದಿಬ್ಬ

[ಪುಟ 22ರಲ್ಲಿರುವ ಚಿತ್ರ]

ಪ್ರಾಚೀನ ಮೆಗಿದ್ದೋವಿನ ಮಾದರಿ ಆಕೃತಿ

[ಪುಟ 23ರಲ್ಲಿರುವ ಚಿತ್ರ]

ಬಾಬೆಲಿನ ತೂಗುದೋಟಗಳ ಬಗ್ಗೆ ಕಲಾಕಾರನೊಬ್ಬನ ಚಿತ್ರಣ