ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 11

ಉತ್ಸಾಹ

ಉತ್ಸಾಹ

ರೋಮನ್ನರಿಗೆ 12:11

ಏನು ಮಾಡಬೇಕು: ಉತ್ಸಾಹದಿಂದ ಮಾತಾಡುತ್ತಾ ನಿಮ್ಮ ಕೇಳುಗರನ್ನು ಪ್ರೋತ್ಸಾಹಿಸಿ ಮತ್ತು ಅವರ ಭಾವನೆಗಳನ್ನು ಬಡಿದೆಬ್ಬಿಸಿ.

ಹೇಗೆ ಮಾಡಬೇಕು:

  • ಮಾಹಿತಿ ಮೊದಲು ನಿಮ್ಮ ಮನಮುಟ್ಟಲಿ. ನಿಮ್ಮ ನೇಮಕವನ್ನು ನೀಡಲು ತಯಾರಿ ಮಾಡುವಾಗ ನೀವು ನೀಡಲಿರುವ ಮಾಹಿತಿ ಎಷ್ಟು ಮುಖ್ಯ ಎಂದು ಯೋಚಿಸಿ. ಮಾಹಿತಿಯನ್ನು ನೀವು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ಅದನ್ನು ಹೇಳುವಾಗ ಅದು ನಿಮ್ಮ ಹೃದಯದಾಳದಿಂದ ಬರಬೇಕು.

  • ನಿಮ್ಮ ಕೇಳುಗರ ಬಗ್ಗೆ ಯೋಚಿಸಿ. ನೀವು ಓದಲಿರುವ ಅಥವಾ ಕಲಿಸಲಿರುವ ವಿಷಯದಿಂದ ಬೇರೆಯವರಿಗೆ ಹೇಗೆ ಪ್ರಯೋಜನವಾಗುತ್ತದೆ ಎಂದು ಯೋಚಿಸಿ. ನೀವು ಕೊಡುವ ಮಾಹಿತಿಯಿಂದ ಸಿಗುವ ಪ್ರಯೋಜನವನ್ನು ಕೇಳುಗರು ಗ್ರಹಿಸುವಂತೆ ಮಾಡಲು ಅದನ್ನು ಯಾವ ವಿಧದಲ್ಲಿ ಪ್ರಸ್ತುತಪಡಿಸಬಹುದು ಎಂದು ಯೋಚಿಸಿ.

  • ಜೀವ ತುಂಬಿ. ಲವಲವಿಕೆಯಿಂದ ಮಾತಾಡಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸ್ವಾಭಾವಿಕವಾದ ಸನ್ನೆಗಳನ್ನು ಮತ್ತು ಮುಖಭಾವವನ್ನು ಉಪಯೋಗಿಸಿ.