ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 15

ನಿಶ್ಚಿತಾಭಿಪ್ರಾಯ

ನಿಶ್ಚಿತಾಭಿಪ್ರಾಯ

1 ಥೆಸಲೊನೀಕ 1:5

ಏನು ಮಾಡಬೇಕು: ನೀವು ಹೇಳುತ್ತಾ ಇರುವುದು ಸತ್ಯ ಮತ್ತು ಮುಖ್ಯ ಅನ್ನುವ ರೀತಿ ಮಾತಾಡಿ.

ಹೇಗೆ ಮಾಡಬೇಕು:

  • ಚೆನ್ನಾಗಿ ತಯಾರಿ ಮಾಡಿ. ಮುಖ್ಯಾಂಶಗಳನ್ನು ಮತ್ತು ಅವುಗಳಿಗೆ ಬೈಬಲ್‌ ಕೊಡುವ ಆಧಾರಗಳನ್ನು ನೀವು ಅರ್ಥಮಾಡಿಕೊಳ್ಳುವ ವರೆಗೆ ಕೊಡಲಾಗಿರುವ ಮಾಹಿತಿಯನ್ನು ಅಧ್ಯಯನ ಮಾಡಿ. ಮುಖ್ಯಾಂಶಗಳನ್ನು ಕೆಲವು ಸರಳ ಪದಗಳಲ್ಲಿ ಹೇಳಲು ಪ್ರಯತ್ನಿಸಿ. ಆ ಅಂಶಗಳಿಂದ ಕೇಳುಗರಿಗೆ ಏನು ಪ್ರಯೋಜನ ಸಿಗುತ್ತದೆ ಎಂದು ನೋಡಿ. ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ.

  • ನಿಶ್ಚಿತಾಭಿಪ್ರಾಯವನ್ನು ತೋರಿಸುವ ಪದಗಳನ್ನು ಆರಿಸಿಕೊಳ್ಳಿ. ಮುದ್ರಿಸಿ ಕೊಡಲಾಗಿರುವ ಮಾಹಿತಿಯನ್ನು ಹಾಗೆಯೇ ಹೇಳುವ ಬದಲು ಸ್ವಂತ ಮಾತಿನಲ್ಲಿ ಹೇಳಿ. ನೀವು ಉಪಯೋಗಿಸುವ ಪದಗಳಲ್ಲಿ ನಿಮ್ಮಲ್ಲಿರುವ ನಿಶ್ಚಿತಾಭಿಪ್ರಾಯ ಗೊತ್ತಾಗಬೇಕು.

  • ಪ್ರಾಮಾಣಿಕವಾಗಿ ಉತ್ಸಾಹದಿಂದ ಮಾತಾಡಿ. ಸಾಕಷ್ಟು ಧ್ವನಿಯಿಂದ ಮಾತಾಡಿ. ಸೂಕ್ತವಾಗಿದ್ದರೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿ.