ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 4

ವಚನಗಳ ಪರಿಚಯ

ವಚನಗಳ ಪರಿಚಯ

ಮತ್ತಾಯ 22:41-45

ಏನು ಮಾಡಬೇಕು: ಒಂದು ವಚನ ಓದುವ ಮುಂಚೆ ನಿಮ್ಮ ಕೇಳುಗರ ಮನಸ್ಸನ್ನು ಸಿದ್ಧಪಡಿಸಿ.

ಹೇಗೆ ಮಾಡಬೇಕು:

  • ಒಂದು ವಚನವನ್ನು ಯಾಕೆ ಓದಬೇಕೆಂದಿದ್ದೀರಿ ಎಂದು ಯೋಚಿಸಿ. ವಚನದಲ್ಲಿ ನೀವು ಒತ್ತಿಹೇಳಲಿರುವ ಅಂಶದ ಕಡೆ ಕೇಳುಗರ ಗಮನ ಹೋಗುವ ರೀತಿಯಲ್ಲಿ ಪ್ರತಿ ವಚನವನ್ನು ಪರಿಚಯಿಸಿ.

  • ನಿಮ್ಮ ಬೋಧನೆಗೆ ಬೈಬಲ್‌ ಆಧಾರವಾಗಿರಲಿ. ದೇವರಲ್ಲಿ ನಂಬಿಕೆ ಇರುವ ಜನರ ಜೊತೆ ಮಾತಾಡುವಾಗ, ಬೈಬಲನ್ನು ದೇವರ ವಾಕ್ಯ ಎಂದು ಹೇಳಿ. ಆಗ ನೀವು ಹೇಳುತ್ತಿರುವುದು ಮನುಷ್ಯರ ವಿಚಾರಗಳಲ್ಲ ಎಂದು ಗೊತ್ತಾಗುತ್ತದೆ.

  • ವಚನದ ಬಗ್ಗೆ ಆಸಕ್ತಿ ಹುಟ್ಟಿಸಿ. ಒಂದು ಪ್ರಶ್ನೆಯನ್ನು ಕೇಳಿ, ಉತ್ತರವನ್ನು ವಚನದಿಂದ ತೋರಿಸಿ. ಒಂದು ಸಮಸ್ಯೆಯ ಬಗ್ಗೆ ಹೇಳಿ, ಪರಿಹಾರವನ್ನು ವಚನದಿಂದ ತೋರಿಸಿ. ಒಂದು ತತ್ವವನ್ನು ಹೇಳಿ, ಅದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಘಟನೆಯನ್ನು ಬೈಬಲಿಂದ ತೋರಿಸಿ.