ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 7

ಭರವಸಾರ್ಹ ಮಾಹಿತಿ

ಭರವಸಾರ್ಹ ಮಾಹಿತಿ

ಲೂಕ 1:3

ಏನು ಮಾಡಬೇಕು: ಕೇಳುಗರು ಸರಿಯಾದ ತೀರ್ಮಾನಕ್ಕೆ ಬರಲು ವಿಶ್ವಾಸಾರ್ಹ ಮೂಲಗಳಿಂದ ಸಿಗುವ ಮಾಹಿತಿಯನ್ನು ಉಪಯೋಗಿಸಿ.

ಹೇಗೆ ಮಾಡಬೇಕು:

  • ವಿಶ್ವಾಸಾರ್ಹವಾದ ಮೂಲಗಳನ್ನು ಉಪಯೋಗಿಸಿ. ನಿಮ್ಮ ಹೇಳಿಕೆಗಳು ಬೈಬಲಿನ ಮೇಲೆ ಆಧರಿಸಿರಲಿ. ಸಾಧ್ಯವಾದಾಗೆಲ್ಲಾ ಬೈಬಲಿಂದಲೇ ಓದಿ. ನೀವು ಒಂದು ವೈಜ್ಞಾನಿಕ ವಿಚಾರ, ವಾರ್ತಾ ವರದಿ, ಅನುಭವ ಅಥವಾ ಬೇರೆ ಮಾಹಿತಿಯನ್ನು ಉಪಯೋಗಿಸುವುದಾದರೆ ಅದರ ಮೂಲ ವಿಶ್ವಾಸಾರ್ಹವಾಗಿದೆಯಾ ಮತ್ತು ಅದರಲ್ಲಿರುವುದು ಇತ್ತೀಚಿನ ಮಾಹಿತಿನಾ ಎಂದು ಖಚಿತಪಡಿಸಿಕೊಳ್ಳಿ.

  • ಮಾಹಿತಿಯ ಮೂಲಗಳನ್ನು ಸರಿಯಾಗಿ ಉಪಯೋಗಿಸಿ. ವಚನಗಳ ವಿವರಣೆಯು ಅದರ ಹಿನ್ನೆಲೆ, ಬೈಬಲಲ್ಲಿರುವ ಇಡೀ ಸಂದೇಶ ಮತ್ತು ನಂಬಿಗಸ್ತ ಆಳು ಕೊಟ್ಟಿರುವ ಪ್ರಕಾಶನಗಳಿಗೆ ಹೊಂದಿಕೆಯಲ್ಲಿರಬೇಕು. (ಮತ್ತಾ. 24:45) ಹೊರಗಿನ ಮೂಲಗಳಿಂದ ಸಾಕ್ಷ್ಯಾಧಾರಗಳನ್ನು ತೆಗೆದುಕೊಳ್ಳುವುದಾದರೆ ಅದನ್ನು ನಮಗೆ ಹೇಗೆ ಬೇಕೋ ಹಾಗೆ ಬದಲಾಯಿಸಿಕೊಳ್ಳಬಾರದು.

  • ಆಧಾರ ಕೊಟ್ಟು ವಿವರಿಸಿ. ಒಂದು ವಚನ ಓದಿದ ಮೇಲೆ ಅಥವಾ ಒಂದು ಮೂಲದಿಂದ ಮಾಹಿತಿಯನ್ನು ಕೊಟ್ಟ ಮೇಲೆ ಕೇಳುಗರು ಸರಿಯಾದ ತೀರ್ಮಾನಕ್ಕೆ ಬರಲು ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳಿ ಅಥವಾ ಉದಾಹರಣೆ ಕೊಟ್ಟು ವಿವರಿಸಿ.