ಮುಖಪುಟ ಲೇಖನ | ಅಳಿಯದೇ ಉಳಿದ ಬೈಬಲ್
ಬೈಬಲ್ ವಿರೋಧವನ್ನು ಎದುರಿಸಿತು
ಅಪಾಯ: ಅನೇಕ ಧಾರ್ಮಿಕ ಮತ್ತು ರಾಜಕೀಯ ನಾಯಕರು ಬೈಬಲಿಗೆ ವಿರುದ್ಧವಾಗಿ ನಡ್ಕೊಂಡ್ರು. ಅಷ್ಟೇ ಅಲ್ಲ, ಅವರು ತಮ್ಮ ಅಧಿಕಾರ ದುರಪಯೋಗಿಸಿ ಸಾಮಾನ್ಯ ಜನರು ಬೈಬಲ್ ತಗೊಳ್ಳದೆ ಇರೋ ತರ, ಅದನ್ನ ಮುದ್ರಿಸದೆ ಇರೋ ತರ ಮತ್ತು ಅನುವಾದಿಸದೆ ಇರೋ ತರ ಮಾಡಿದ್ರು. ಅದಕ್ಕಿರೋ ಎರಡು ಕಾರಣಗಳನ್ನು ನೋಡೋಣ.
-
ಸುಮಾರು ಕ್ರಿಸ್ತ ಪೂರ್ವ 167ರಲ್ಲಿ: ಸೆಲ್ಯೂಸಿಡ್ ರಾಜ ಅಂಟಿಯೋಕಸ್ ಎಪಿಫಾನಿಸ್, ಯೆಹೂದ್ಯರು ಗ್ರೀಕ್ ಧರ್ಮ ಸ್ವೀಕರಿಸಬೇಕು ಅಂತ ನಿರ್ಬಂಧ ಹಾಕಿದ. ಅಷ್ಟೇ ಅಲ್ಲ, ಹೀಬ್ರು ಶಾಸ್ತ್ರವಚನಗಳ ಎಲ್ಲಾ ಪ್ರತಿಗಳನ್ನು ನಾಶ ಮಾಡೋಕೆ ಆಜ್ಞೆ ಕೊಟ್ಟ. ಅವನ ಸೇವಕರು “ನಿಯಮದ ಸುರುಳಿಗಳನ್ನ ಹರಿದು ಹಾಕಿದ್ರು ಮತ್ತು ಸುಟ್ಟು ಹಾಕಿದ್ರು. ಅಷ್ಟೇ ಅಲ್ಲ ಅದನ್ನು ಓದೋಕೆ ಬಯಸಿದವರನ್ನು ಕೊಂದು ಹಾಕಿದ್ರು” ಅಂತ ಇತಿಹಾಸಗಾರನಾದ ಹೆನ್ರಿಕ್ ಗ್ರೇಟ್ಸ್ ಬರೆದ್ರು.
-
ಮಧ್ಯ ಯುಗದಲ್ಲಿ: ಚರ್ಚಲ್ಲಿದ್ದ ಸಾಮಾನ್ಯ ಜನರು ಕ್ಯಾಥೋಲಿಕ್ ಬೋಧನೆಗಳಿಗೆ ಬದಲು ಬೈಬಲಲ್ಲಿ ಇರೊದನ್ನು ಕಲಿಸಿದ್ರಿಂದ ಕ್ಯಾಥೋಲಿಕ್ ನಾಯಕರು ಅವರ ಮೇಲೆ ತುಂಬ ಕೋಪಗೊಂಡ್ರು. ಯಾರಾದ್ರೂ ಲ್ಯಾಟಿನ್ ಭಾಷೆಯ ಕೀರ್ತನೆ ಪುಸ್ತಕಗಳನ್ನು ಬಿಟ್ಟು ಬೈಬಲಿನ ಬೇರೆ ಯಾವುದೇ ಪುಸ್ತಕವನ್ನು ಹೊಂದಿದ್ರೆ ಅವರನ್ನು ಧರ್ಮಭ್ರಷ್ಟರು ಅಂತ ಪರಿಗಣಿಸುತ್ತಿದ್ದರು. ಒಂದು ಚರ್ಚ್ ಕೂಟದಲ್ಲಿ ಧಾರ್ಮಿಕ ನಾಯಕರು ಕೆಲವು ಜನರ ಹತ್ತಿರ “ಸಂಶಯ ಬರೋ ಎಲ್ಲ ಮನೆಗಳನ್ನು ಮತ್ತು ನೆಲಮಾಳಿಗೆಗಳನ್ನ ಶ್ರದ್ಧೆಯಿಂದ, ಚೆನ್ನಾಗಿ ಮತ್ತು ಆಗಾಗ ಹುಡುಕ್ತಾ ಇರಿ. ಅಂಥ ಮನೆಗಳಲ್ಲಿ ಏನಾದ್ರು ಸಿಕ್ಕಿದ್ರೆ ಅದನ್ನು ಕೂಡ್ಲೆ ನಾಶಮಾಡಿ” ಅಂತ ಹೇಳಿದ್ರು.
ಒಂದುವೇಳೆ ಬೈಬಲ್ ವಿರೋಧಿಗಳು ಬೈಬಲನ್ನು ಸಂಪೂರ್ಣವಾಗಿ ನಾಶ ಮಾಡಿಬಿಟ್ಟಿದ್ರೆ ಅದರಲ್ಲಿರೋ ಸಂದೇಶನೂ ನಮ್ಮ ಕೈಗೆ ಸಿಗುತ್ತಿರಲಿಲ್ಲ.
ಬೈಬಲ್ ಹೇಗೆ ಉಳಿದುಕೊಳ್ತು? ರಾಜ ಅಂಟಿಯೋಕ ಇಸ್ರಾಯೇಲಿನಲ್ಲಿದ್ದ ಎಲ್ಲಾ ಶಾಸ್ತ್ರವಚನಗಳನ್ನ ನಾಶ ಮಾಡೋಕೆ ಪ್ರಯತ್ನಿಸಿದ. ಆದ್ರೆ ಆ ಸಮಯದಲ್ಲಿ ಇಸ್ರಾಯೇಲಿನ ತುಂಬ ಯೆಹೂದಿಗಳು ಇಸ್ರಾಯೇಲಿನ ಹೊರಗಡೆ ಜೀವಿಸ್ತಾ ಇದ್ರು. ಕ್ರಿಸ್ತ ಶಕ ಒಂದನೇ ಶತಮಾನದಲ್ಲಿ ಸುಮಾರು 60 ಶೇಕಡದಷ್ಟು ಯೆಹೂದಿಗಳು ಇಸ್ರಾಯೇಲಿನ ಹೊರಗಡೆ ಜೀವಿಸ್ತಾ ಇದ್ರು ಅಂತ ಕೆಲವು ತತ್ವಜ್ಞಾನಿಗಳು ಹೇಳ್ತಾರೆ. ಈ ಇಸ್ರಾಯೇಲ್ಯರು ತಮ್ಮ ಸಭಾಮಂದಿರಗಳಲ್ಲಿ ಶಾಸ್ತ್ರವಚನಗಳ ಪ್ರತಿಗಳನ್ನು ಇಟ್ಟುಕೊಂಡಿದ್ರು. ಇದೇ ಪ್ರತಿಗಳನ್ನು ಅವರ ಮುಂದಿನ ತಲೆಮಾರಿನವರು ಮತ್ತು ಕ್ರೈಸ್ತರು ಬಳಸಿದ್ರು.—ಅಪೊಸ್ತಲರ ಕಾರ್ಯ 15:21.
ಮಧ್ಯ ಯುಗದಲ್ಲಿ ಬೈಬಲನ್ನು ತುಂಬ ಇಷ್ಟಪಡುತ್ತಿದ್ದ ಜನರು ಹಿಂಸೆ ಇದ್ರೂ ಬೈಬಲನ್ನು ಭಾಷಾಂತರಿಸಿ ಅದರ ಪ್ರತಿಗಳನ್ನು ಮಾಡಿದ್ರು. 15ನೇ ಶತಮಾನದ ಮಧ್ಯದಷ್ಟಕ್ಕೆ ಸಾಗಿಸಬಹುದಾದ ಮುದ್ರಣ ಯಂತ್ರವನ್ನು ಕಂಡುಹಿಡಿಯಲಾಯಿತು. ಆದ್ರೆ ಇದನ್ನ ಕಂಡುಹಿಡಿಯೋಕೆ ಮುಂಚೆನೇ ಬೈಬಲಿನ ಭಾಗಗಳು 33 ಭಾಷೆಗಳಲ್ಲಿ ಲಭ್ಯವಿತ್ತು. ಈ ಯಂತ್ರ ಬಂದ ಮೇಲೆ ಬೈಬಲ್ ಭಾಷಾಂತರ ಮತ್ತು ಮುದ್ರಣ ಜಾಸ್ತಿ ಆಯ್ತು.
ಇದರಿಂದ ಏನು ಪ್ರಯೋಜನವಾಯ್ತು? ಪ್ರಬಲ ರಾಜರ ಮತ್ತು ತಪ್ಪಾಗಿ ಬೋಧಿಸುತ್ತಿದ್ದ ಪಾದ್ರಿಗಳ ವಿರೋಧ ಇದ್ರೂ ಇತಿಹಾಸದಲ್ಲೇ ಬೈಬಲಷ್ಟು ಭಾಷಾಂತರ ಆಗಿ ವಿತರಣೆಯಾದ ಪುಸ್ತಕ ಬೇರೊಂದಿಲ್ಲ. ಬೈಬಲ್ ಅನೇಕರ ಜೀವನವನ್ನೇ ಬದಲಾಯಿಸಿದೆ. ಕೆಲವು ದೇಶಗಳು ತಮ್ಮ ಕಾನೂನಿಗೆ ಬೈಬಲಲ್ಲಿರೋ ನಿಯಮಗಳನ್ನು ಸೇರಿಸಿವೆ. ಅಷ್ಟೇ ಅಲ್ಲ ಬೈಬಲಲ್ಲಿರೋ ಭಾಷೆಯನ್ನೂ ಬಳಸುತ್ತಿವೆ.