ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಅಳಿಯದೇ ಉಳಿದ ಬೈಬಲ್‌

ಬೈಬಲ್‌ ಹಾಳಾಗದೆ ಹೇಗೆ ಉಳೀತು?

ಬೈಬಲ್‌ ಹಾಳಾಗದೆ ಹೇಗೆ ಉಳೀತು?

ಅಪಾಯ: ಬೈಬಲ್‌ ಬರಹಗಾರರು ಮತ್ತು ನಕಲುಗಾರರು ಪಪೈರಸ್‌ ಮತ್ತು ಚರ್ಮದ ಹಾಳೆಗಳ ಮೇಲೆ ಬೈಬಲ್‌ ಬರಹಗಳನ್ನ ಬರೆದರು. * (2 ತಿಮೊತಿ 4:13) ಅವರು ಈ ವಸ್ತುಗಳ ಮೇಲೆ ಬರೆದರೂ ಇಲ್ಲಿ ತನಕ ಬೈಬಲ್‌ ಹೇಗೆ ಉಳ್ಕೊಳ್ತು?

ಪಪೈರಸ್‌ ಹರಿಯುತ್ತೆ, ಅದರ ಬಣ್ಣ ಮಾಸಿಹೋಗುತ್ತೆ ಮತ್ತು ಸುಲಭವಾಗಿ ಹಾಳಾಗುತ್ತೆ. “ಹೋಗ್ತಾ ಹೋಗ್ತಾ ಈ ಹಾಳೆಗಳು ನಾರುಗಳನ್ನು ಬಿಟ್ಟುಕೊಳ್ಳುತ್ತೆ ಮತ್ತು ಅವು ಪುಡಿಪುಡಿಯಾಗುತ್ತೆ. ಸುರುಳಿಗಳನ್ನು ತೆಗೆದಿಡುವಾಗ ಅವು ಕೊಳೆತು ಹೋಗಬಹುದು ಮತ್ತು ತೇವಾಂಶದಿಂದ ಹಾಳಾಗಬಹುದು. ಇದನ್ನು ಮಣ್ಣಲ್ಲಿ ಹುಗಿದಿಟ್ಟಾಗಿ ಇಲಿಗಳು, ಕ್ರಿಮಿಕೀಟಗಳು ಮತ್ತು ಬಿಳಿ ಇರುವೆಗಳು ತಿಂದು ಹಾಕುತ್ತವೆ” ಅಂತ ಈಜಿಪ್ಟಿನ ಶಾಸ್ತ್ರಜ್ಞರಾದ ರಿಚರ್ಡ್‌ ಪಾರ್ಕಿನ್‌ಸನ್‌ ಮತ್ತು ಸ್ಟೀಫನ್‌ ಕ್ವಿರ್ಕ್‌ ಹೇಳುತ್ತಾರೆ. ತೆಗೆದಿಟ್ಟ ಕೆಲವು ಪಪೈರಸ್‌ ಪ್ರತಿಗಳನ್ನು ಹೊರಗೆ ತೆಗೆದಾಗ ಅದು ಬೆಳಕು ಮತ್ತು ಗಾಳಿಗೆ ಇನ್ನೂ ಬೇಗ ಹಾಳಾಯ್ತು.

ಚರ್ಮದ ಹಾಳೆಗಳು ಪಪೈರಸ್‌ ಹಾಳೆಗಳಿಗಿಂತ ಹೆಚ್ಚು ಬಾಳಿಕೆ ಬರುತ್ತೆ. ಆದ್ರೆ ಇವನ್ನು ಚೆನ್ನಾಗಿ ಇಡದಿದ್ರೆ ಅತಿಯಾದ ತಾಪಮಾನದಿಂದ, ತೇವಾಂಶದಿಂದ ಅಥವಾ ಸೂರ್ಯನ ಕಿರಣಗಳಿಂದ ಹಾಳಾಗಿ ಹೋಗಬಹುದು. * ಈ ಹಾಳೆಗಳನ್ನು ಕ್ರಿಮಿಕೀಟಗಳೂ ತಿನ್ನಬಹುದು. “ಈ ಕಾರಣದಿಂದ ಇಲ್ಲಿ ತನಕ ಕೆಲವೇ ಹಸ್ತಪ್ರತಿಗಳು ಉಳಿದುಕೊಂಡಿವೆ” ಅಂತ ಎವೆರಿಡೇ ರೈಟಿಂಗ್‌ ಇನ್‌ ದ ಗ್ರೀಕೋ ರೋಮನ್‌ ಪುಸ್ತಕ ಹೇಳುತ್ತೆ. ಒಂದುವೇಳೆ ಬೈಬಲ್‌ ಹಾಳಾಗಿ ಹೋಗಿದ್ರೆ ಅದ್ರಲ್ಲಿರೋ ಸಂದೇಶ ಕೂಡ ಹಾಳಾಗಿ ಹೋಗ್ತಿತ್ತು. ಅದು ನಮ್ಗೆ ಸಿಗುತ್ತಿರಲಿಲ್ಲ.

ಬೈಬಲ್‌ ಹೇಗೆ ಉಳಿದುಕೊಳ್ತು? ಇಸ್ರಾಯೇಲಿನ ರಾಜರು “ನಿಯಮ ಪುಸ್ತಕ ತಗೊಂಡು ಅದ್ರಲ್ಲಿರೋ ಎಲ್ಲ ವಿಷ್ಯಗಳನ್ನ ಒಂದು ಪುಸ್ತಕದಲ್ಲಿ ಬರಿಬೇಕು.” ಅಂತ ಮೋಶೆಯ ನಿಯಮ ಹೇಳಿತ್ತು. ಅವರು ಬೈಬಲಿನ ಮೊದಲ ಐದು ಪುಸ್ತಕಗಳನ್ನ ಬರೆಯಬೇಕಿತ್ತು. (ಧರ್ಮೋಪದೇಶಕಾಂಡ 17:18) ಅಷ್ಟೇ ಅಲ್ಲ ಕ್ರಿಸ್ತ ಶಕ ಒಂದನೇ ಶತಮಾನದಲ್ಲಿ ನಿಪುಣ ನಕಲುಗಾರರು ಅನೇಕ ಹಸ್ತಪ್ರತಿಗಳನ್ನ ಮಾಡಿದ್ರಿಂದ ಇಸ್ರಾಯೇಲಿನ ಎಲ್ಲಾ ಸಭಾಮಂದಿರಗಳಲ್ಲಿ ಮತ್ತು ಮಕೆದೋನ್ಯದ ಬೇರೆಬೇರೆ ಕಡೆಗಳಲ್ಲಿ ಶಾಸ್ತ್ರವಚನಗಳು ಜನರಿಗೆ ಸಿಗ್ತಿತ್ತು. (ಲೂಕ 4:16, 17; ಅಪೊಸ್ತಲರ ಕಾರ್ಯ 17:11) ಹಾಗಾದ್ರೆ ಇಷ್ಟೊಂದು ಹಳೆಯ ಹಸ್ತಪ್ರತಿಗಳು ಇಲ್ಲಿ ತನಕ ಹೇಗೆ ಉಳ್ಕೊಳ್ತು?

ಮೃತ ಸಮುದ್ರ ಸುರುಳಿಗಳು ಅಂತ ಕರೆಯುವ ಹಸ್ತಪ್ರತಿಗಳನ್ನ ಅನೇಕ ವರ್ಷ ಮಣ್ಣಿನ ಜಾಡಿಗಳಲ್ಲಿ ಇಟ್ಟು ತೇವಾಂಶ ಇಲ್ಲದ ಗುಹೆಗಳಲ್ಲಿ ಸಂರಕ್ಷಿಸಿ ಇಟ್ರು.

“ಯೆಹೂದ್ಯರು ಶಾಸ್ತ್ರವಚನಗಳಿದ್ದ ಸುರುಳಿಗಳನ್ನ ಜಾಡಿಗಳಲ್ಲಿ ಸಂರಕ್ಷಿಸಿ ಇಡ್ತಿದ್ರು” ಅಂತ ಹೊಸ ಒಡಂಬಡಿಕೆಯ ತತ್ವಜ್ಞಾನಿಯಾದ ಫಿಲಿಪ್‌ ಡಬ್ಲೂ ಕಂಫರ್ಟ್‌ ಹೇಳ್ತಾರೆ. ಕ್ರೈಸ್ತರು ಈ ರೀತಿಯಲ್ಲಿ ಸುರುಳಿಗಳನ್ನ ಸಂರಕ್ಷಿಸಿ ಇಡುತಿದ್ರು. ಹಾಗಾಗಿ ಕೆಲವು ಹಳೆಯ ಹಸ್ತಪ್ರತಿಗಳು ಮಣ್ಣಿನ ಜಾಡಿಗಳಲ್ಲಿ, ಕತ್ತಲೆ ಕೋಣೆಗಳಲ್ಲಿ, ಗುಹೆಗಳಲ್ಲಿ ಮತ್ತು ತೇವಾಂಶ ಇಲ್ಲದಿರೋ ಜಾಗಗಳಲ್ಲಿ ಸಿಕ್ತು.

ಇದರಿಂದ ಏನು ಪ್ರಯೋಜನವಾಯ್ತು? 2000 ವರ್ಷಕ್ಕಿಂತ ಹೆಚ್ಚು ಹಳೇದಾದ ಬೈಬಲಿನ ಹಸ್ತಪ್ರತಿಗಳ ಸಾವಿರಾರು ಭಾಗಗಳು ಇಲ್ಲಿ ತನಕ ಉಳ್ಕೊಂಡಿವೆ. ತುಂಬ ಹಳೇದಾದ ಮತ್ತು ತುಂಬ ಹಸ್ತಪ್ರತಿಗಳಿರೋ ಪುಸ್ತಕ ಅಂದ್ರೆ ಅದು ಬೈಬಲ್‌ ಮಾತ್ರ. ಬೇರೆ ಯಾವುದೂ ಇಲ್ಲ.

^ ಪ್ಯಾರ. 3 ಪಪೈರಸನ್ನು ನೀರಲ್ಲಿ ಬೆಳೆಯುವ ಪಪೈರಸ್‌ ಅನ್ನೋ ಗಿಡದಿಂದ ತಯಾರಿಸಲಾಗುತ್ತೆ. ಚರ್ಮದ ಹಾಳೆಗಳನ್ನ ಪ್ರಾಣಿಗಳ ಚರ್ಮದಿಂದ ತಯಾರಿಸಲಾಗುತ್ತೆ.

^ ಪ್ಯಾರ. 5 ಉದಾಹರಣೆಗೆ, ಅಮೇರಿಕಾದ ಸ್ವಾತಂತ್ರ್ಯ ಘೋಷಣೆಯನ್ನ ಚರ್ಮದ ಹಾಳೆಯಲ್ಲಿ ಬರೆದು ಸಹಿ ಮಾಡಿದ್ರು. ಇದನ್ನ ಬರೆದು ಸುಮಾರು 250 ವರ್ಷಗಳಾಗಿರೋದ್ರಿಂದ ಅದರಲ್ಲಿ ಇರೋದು ಮಾಸಿ ಹೋಗಿದೆ. ಹಾಗಾಗಿ ಓದೋಕೆ ತುಂಬ ಕಷ್ಟವಾಗ್ತಿದೆ.