‘ನಾನು ಕಲಿಸಿದ್ದನ್ನ ಮಾಡ್ತಾ ಇರಿ’
‘ನಾನು ಕಲಿಸಿದ್ದನ್ನ ಮಾಡ್ತಾ ಇರಿ’
“ನಾನು ಕಲಿಸಿದ್ದನ್ನ ಯಾವಾಗ್ಲೂ ಮಾಡ್ತಾ ಇದ್ರೆ ನೀವು ನನ್ನ ನಿಜ ಶಿಷ್ಯರಾಗ್ತೀರ. ಸತ್ಯ ಏನಂತ ನಿಮಗೆ ಗೊತ್ತಾಗುತ್ತೆ. ಆ ಸತ್ಯ ನಿಮ್ಮನ್ನ ಬಿಡುಗಡೆ ಮಾಡುತ್ತೆ.”—ಯೋಹಾನ 8:31, 32.
ಈ ಮಾತಿನ ಅರ್ಥ: ಯೆಹೋವ ದೇವರು ಕಲಿಸಿದ ವಿಷಯಗಳನ್ನೇ ಯೇಸು ಕಲಿಸಿದನು. “ನಾನು ನನಗೆ ಇಷ್ಟ ಬಂದಿದ್ದನ್ನ ಮಾತಾಡಲಿಲ್ಲ. ನನ್ನನ್ನ ಕಳಿಸಿದ ನನ್ನ ಅಪ್ಪ ನಾನೇನು ಹೇಳಬೇಕು, ಏನು ಕಲಿಸಬೇಕು” ಅಂತ ಹೇಳಿಕೊಟ್ಟಿದ್ದಾನೆ ಅಂದನು. (ಯೋಹಾನ 12:49) ಅವನು ಸೃಷ್ಟಿಕರ್ತನಾದ ದೇವರಿಗೆ ಪ್ರಾರ್ಥಿಸುವಾಗ “ನಿನ್ನ ಮಾತುಗಳೇ ಸತ್ಯ” ಅಂತ ಹೇಳಿದನು. ಯೇಸು ಜನ್ರಿಗೆ ಕಲಿಸಿದಾಗೆಲ್ಲ ದೇವರ ವಾಕ್ಯದಲ್ಲಿರುವ ಮಾತುಗಳನ್ನು ಹೇಳ್ತಾ ಇದ್ದನು. (ಯೋಹಾನ 17:17; ಮತ್ತಾಯ 4:4, 7, 10) ನಿಜ ಕ್ರೈಸ್ತರು ಯೇಸು ‘ಕಲಿಸಿದ್ದನ್ನ ಯಾವಾಗಲೂ ಮಾಡ್ತಾ ಇರುತ್ತಾರೆ’ ಅಂದ್ರೆ ಬೈಬಲಲ್ಲಿರೋ ದೇವರ ಮಾತುಗಳೇ “ಸತ್ಯ” ಅಂತ ನಂಬುತ್ತಾರೆ. ಬೈಬಲ್ ಹೇಳಿರೋ ಪ್ರಕಾರನೇ ತಮ್ಮ ಜೀವನವನ್ನು ನಡೆಸುತ್ತಾರೆ.
ಒಂದನೇ ಶತಮಾನದ ಕ್ರೈಸ್ತರು ದೇವರ ವಾಕ್ಯವನ್ನ ಗೌರವಿಸುತ್ತಿದ್ದರು: ಅಪೊಸ್ತಲ ಪೌಲ ಯೇಸುವಿನಂತೆ ದೇವರ ವಾಕ್ಯವನ್ನ ಗೌರವಿಸುತ್ತಿದ್ದನು. ಅದಕ್ಕೆ ಪೌಲ “ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.” ಅದು ನಮಗೆ ಸಹಾಯಮಾಡುತ್ತೆ ಅಂತ ಹೇಳಿದನು. (2 ತಿಮೊತಿ 3:16) ಹಿರಿಯರು ಕಲಿಸುವಾಗ, ‘ಭರವಸೆಗೆ ಯೋಗ್ಯವಾದ ದೇವರ ಮಾತುಗಳನ್ನ ಚಾಚೂತಪ್ಪದೆ’ ಪಾಲಿಸಿದರು. (ತೀತ 1:7, 9) “ಈ ಲೋಕದ ಜ್ಞಾನದಿಂದ, ಅರ್ಥವಾಗದ ಮೋಸದ ಮಾತುಗಳಿಂದ . . . ಅವು ಕ್ರಿಸ್ತ ಕಲಿಸಿದ ವಿಷ್ಯಗಳಿಗೆ ತಕ್ಕ ಹಾಗಿಲ್ಲ, ಮಾನವ ಸಂಪ್ರದಾಯಗಳಿಗೆ, ಲೋಕದ ವಿಷ್ಯಗಳಿಗೆ ತಕ್ಕ ಹಾಗಿವೆ.” (ಕೊಲೊಸ್ಸೆ 2:8) ಅದಕ್ಕೆ ಅದರಿಂದ ದೂರ ಇರಬೇಕು ಅಂತ ಆಗಿನ ಕಾಲದ ಕ್ರೈಸ್ತರಿಗೆ ಪೌಲ ಎಚ್ಚರಿಕೆ ಕೊಟ್ಟನು.
ಇವತ್ತು ಯಾರು ದೇವರ ವಾಕ್ಯವನ್ನ ಗೌರವಿಸುತ್ತಿದ್ದಾರೆ? ಕ್ಯಾಥೋಲಿಕ್ ಚರ್ಚಿನ ಬೋಧನೆ ಬಗ್ಗೆ ಕ್ಯಾಟೆಕಿಸಂ ಆಫ್ ಕ್ಯಾಥೋಲಿಕ್ ಚರ್ಚ್ ಹೀಗೆ ಹೇಳುತ್ತೆ: ‘ಕ್ಯಾಥೋಲಿಕ್ ಚರ್ಚಿನವರು, ಬೈಬಲಿನಲ್ಲಿರೋದ್ರ ಜೊತೆಗೆ ತಮ್ಮ ಪವಿತ್ರ ಸಂಪ್ರದಾಯದ ಬಗ್ಗೆನೂ ಬೋಧಿಸುತ್ತಾರೆ. ಯಾಕಂದ್ರೆ ಅವರಿಗೆ, ತಮ್ಮ ಪವಿತ್ರ ಸಂಪ್ರದಾಯ ಬೈಬಲಿನಷ್ಟೇ ಪ್ರಾಮುಖ್ಯ.’ ಕೆನಡಾದ ಮ್ಯಾಕ್ಲೀನ್ಸ್ ಪತ್ರಿಕೆಯ ಒಂದು ಲೇಖನ ಹೀಗೆ ಹೇಳುತ್ತೆ: “ನಮಗೀಗ ಒಳ್ಳೊಳ್ಳೆ ಐಡಿಯಾಗಳು ಇರುವಾಗ ಯಾಕೆ ಎರಡು ಸಾವಿರ ವರ್ಷಗಳ ಹಿಂದೆ ಯೇಸು ಹೇಳಿರೋದನ್ನ ಪಾಲಿಸಬೇಕು. ಅವರು ಕಲಿಸಿದ ವಿಷಯನ ಈಗಿನ ವಿಷಯಗಳಿಗೆ ಸೇರಿಸಿ ಇದರ ಮೌಲ್ಯವನ್ನ ಯಾಕೆ ಕಡಿಮೆ ಮಾಡಬೇಕು.”
ಯೆಹೋವನ ಸಾಕ್ಷಿಗಳ ಬಗ್ಗೆ ನ್ಯೂ ಕ್ಯಾಥೊಲಿಕ್ ಎನ್‌ಸೈಕ್ಲಪೀಡಿಯ ಹೀಗೆ ಹೇಳುತ್ತೆ: “ಯೆಹೋವನ ಸಾಕ್ಷಿಗಳು ಬೈಬಲಿನಲ್ಲಿ ಇರೋದನ್ನ ಮಾತ್ರ ನಂಬುತ್ತಾರೆ ಮತ್ತು ಅದರಲ್ಲಿ ಇರೋದನ್ನೇ ಪಾಲಿಸೋಕೆ ತಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತಾರೆ.” ಇತ್ತೀಚಿಗೆ ಒಬ್ಬ ಯೆಹೋವನ ಸಾಕ್ಷಿ ಕೆನಡಾದಲ್ಲಿ ಇರುವ ಒಬ್ಬ ವ್ಯಕ್ತಿಗೆ ತನ್ನನ್ನ ಪರಿಚಯಿಸುತ್ತಿದ್ದಾಗ ಅವನು ಮಧ್ಯದಲ್ಲಿ ಬಾಯಿ ಹಾಕಿ, “ನಿಮ್ಮ ಕೈಯಲ್ಲಿರೋ ಬೈಬಲ್ ನೋಡಿ ನೀವು ಯಾರು ಅಂತ ನನಗೆ ಗೊತ್ತಾಯ್ತು” ಅಂತ ಹೇಳುತ್ತಾನೆ.