ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಮ್ಮ ಮಧ್ಯ ಪ್ರೀತಿ ಇರಲಿ”

“ನಿಮ್ಮ ಮಧ್ಯ ಪ್ರೀತಿ ಇರಲಿ”

“ನಿಮ್ಮ ಮಧ್ಯ ಪ್ರೀತಿ ಇರಲಿ”

“ನಾನು ಒಂದು ಹೊಸ ಆಜ್ಞೆ ಕೊಡ್ತಾ ಇದ್ದೀನಿ. ನೀವು ಒಬ್ಬರನ್ನೊಬ್ರು ಪ್ರೀತಿಸಬೇಕು. ನಾನು ನಿಮ್ಮನ್ನ ಪ್ರೀತಿಸಿದ ತರಾನೇ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು. ಅದೇ ಆ ಆಜ್ಞೆ. ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ.”—ಯೋಹಾನ 13:34, 35.

ಈ ಮಾತಿನ ಅರ್ಥ: ಯೇಸು ತನ್ನ ಶಿಷ್ಯರನ್ನ ತುಂಬ ಪ್ರೀತಿಸಿದನು. ಅದೇ ತರ ಶಿಷ್ಯರು ಎಲ್ಲರನ್ನ ಪ್ರೀತಿಸಬೇಕು ಅಂತ ಹೇಳಿದನು. ಹಾಗಾದ್ರೆ ಯೇಸು ಹೇಗೆ ತನ್ನ ಪ್ರೀತಿಯನ್ನು ತೋರಿಸಿದನು? ಆಗಿನ ಕಾಲದ ಜನರು ಬೇರೆ ದೇಶದವರಿಗೆ, ಸ್ತ್ರೀಯರಿಗೆ ಮರ್ಯಾದೆ ಕೊಡುತ್ತಿರಲಿಲ್ಲ. ಆದರೆ ಯೇಸು ಅವರನ್ನೆಲ್ಲ ಪ್ರೀತಿಸಿದನು. (ಯೋಹಾನ 4:7-10) ಯೇಸು ಜನರನ್ನ ಪ್ರೀತಿಸಿದ್ರಿಂದ ಅವರಿಗೆ ತನ್ನ ಸಮಯ, ಶಕ್ತಿಯನ್ನ ಕೊಟ್ಟು ಸಹಾಯ ಮಾಡಿದನು. (ಮಾರ್ಕ 6:30-34) ಅಷ್ಟೇ ಅಲ್ಲ “ನಾನು ಒಳ್ಳೇ ಕುರುಬ. ಒಳ್ಳೇ ಕುರುಬ ಕುರಿಗಳಿಗೋಸ್ಕರ ಪ್ರಾಣ ಕೊಡ್ತಾನೆ” ಅಂತ ಹೇಳಿದನು. ಈ ರೀತಿ ಪ್ರೀತಿಯನ್ನ ಯಾರೂ ತೋರಿಸೋಕೆ ಸಾಧ್ಯನೇ ಇರ್ತಿರಲಿಲ್ಲ.—ಯೋಹಾನ 10:11.

ಒಂದನೇ ಶತಮಾನದ ಕ್ರೈಸ್ತರು ಹೇಗೆ ಪ್ರೀತಿ ತೋರಿಸಿದರು: ಅವರು ಒಬ್ಬರನ್ನೊಬ್ಬರು “ಸಹೋದರ” ಅಥವಾ “ಸಹೋದರಿ” ಅಂತ ಕರೆದರು. (ಫಿಲೆಮೋನ 1, 2) ಶಿಷ್ಯರಿಗೆ “ಯೆಹೂದ್ಯ ಗ್ರೀಕ ಅನ್ನೋ ಭೇದಭಾವ ಇಲ್ಲ. ಯಾಕಂದ್ರೆ ನಮ್ಮೆಲ್ಲರಿಗೂ ಒಬ್ಬನೇ ಒಡೆಯ” ಅಂತ ಅವರು ನಂಬುತ್ತಿದ್ದರು. ಹಾಗಾಗಿ ಎಲ್ಲ ಜನಾಂಗದವರನ್ನ ತಮ್ಮ ಸಭೆಗೆ ಸೇರಿಸಿಕೊಳ್ಳುತ್ತಿದ್ದರು. (ರೋಮನ್ನರಿಗೆ 10:11, 12) ಕ್ರಿಸ್ತಶಕ 33ರ ನಂತರ ಯೆರೂಸಲೇಮಿನಲ್ಲಿದ್ದ ಶಿಷ್ಯರು “ತಮ್ಮ ಜಮೀನು, ಆಸ್ತಿಪಾಸ್ತಿ ಮಾರಿ ಬಂದ ಹಣವನ್ನ ಎಲ್ರಿಗೂ ಅವರವ್ರ ಅಗತ್ಯಕ್ಕೆ ತಕ್ಕಂತೆ ಹಂಚ್ಕೊಡ್ತಾ ಇದ್ರು.” ಹೊಸದಾಗಿ ಶಿಷ್ಯರಾದವರು ಯೆರೂಸಲೇಮಿನಲ್ಲೇ ಇದ್ದು ‘ಅಪೊಸ್ತಲರು ಕಲಿಸ್ತಿದ್ದ ವಿಷ್ಯಗಳಿಗೆ ಅವರು ಯಾವಾಗ್ಲೂ ಚೆನ್ನಾಗಿ ಗಮನಕೊಡಲಿ’ ಅಂತ ಅವರು ಹೀಗೆ ಮಾಡುತ್ತಿದ್ದರು. (ಅಪೊಸ್ತಲರ ಕಾರ್ಯ 2:41-45) ಅವರು ಹೀಗೆ ಮಾಡೋಕೆ ಕಾರಣ ಏನು? ಅಪೊಸ್ತಲರು ಸತ್ತು ಸುಮಾರು 200 ವರ್ಷಗಳ ನಂತರ ಕ್ರೈಸ್ತರ ಬಗ್ಗೆ ಜನರಿಗಿದ್ದ ಅಭಿಪ್ರಾಯದ ಬಗ್ಗೆ ಇತಿಹಾಸಗಾರನಾದ ಟರ್ಟಲಿಯನ್‌ ಹೀಗೆ ಹೇಳ್ತಾನೆ: “ಕ್ರೈಸ್ತರು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತಾರಂದ್ರೆ . . . ಅವರು ಒಬ್ಬರು ಇನ್ನೊಬ್ಬರಿಗೋಸ್ಕರ ಪ್ರಾಣ ಕೊಡಕ್ಕೂ ರೆಡಿ ಇದ್ದರು.”

ಇವತ್ತು ಒಬ್ಬರನ್ನೊಬ್ಬರು ಯಾರು ಪ್ರೀತಿಸುತ್ತಿದ್ದಾರೆ? ದ ಹಿಸ್ಟರಿ ಆಫ್‌ ದ ಡಿಕ್ಲೈನ್‌ ಆ್ಯಂಡ್‌ ಫಾಲ್‌ ಆಫ್‌ ದ ರೋಮನ್‌ ಎಂಪೈರ್‌ (1837) ಅನ್ನೋ ಪುಸ್ತಕ ಹೀಗೆ ಹೇಳುತ್ತೆ: ಅನೇಕ ಶತಮಾನಗಳಿಂದ ತಾವು ಕ್ರೈಸ್ತರು ಅಂತ ಹೇಳಿಕೊಂಡವರೇ, “ಒಬ್ಬರಿಗೊಬ್ಬರು ತುಂಬ ಕ್ರೂರವಾಗಿ ನಡೆದುಕೊಳ್ಳುತ್ತಾರೆ. ಬೇರೆ ಜನಾಂಗದಿಂದ ಅವರಿಗೆ ಆಗೋ ಸಮಸ್ಯೆಗಳಿಗಿಂತ ಇವರ ಮಧ್ಯಾನೇ ಹೊಡೆದಾಟಗಳು ಜಾಸ್ತಿ.” ಇತ್ತೀಚಿಗೆ ಅಮೆರಿಕದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಅನೇಕ ಜಾತಿಯ ಜನರು ಬೇರೆ ಜಾತಿಯ ಜನರನ್ನ ತುಂಬ ಕೀಳಾಗಿ ನೋಡುತ್ತಾರೆ ಅಥವಾ ಭೇದಭಾವ ಮಾಡುತ್ತಾರೆ. ತಮ್ಮದೇ ಜಾತಿಯ ಜನರು ಬೇರೆ ದೇಶದಲ್ಲಿದ್ರೆ ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಅಥವಾ ಕಷ್ಟಗಳಿದ್ರೆ ಅವರಿಗೆ ಯಾವ ಸಹಾಯನೂ ಮಾಡುತ್ತಿರಲಿಲ್ಲ.

2004 ಫ್ಲಾರಿಡಾದಲ್ಲಿ ಎರಡು ತಿಂಗಳಲ್ಲೇ ನಾಲ್ಕು ಚಂಡಮಾರುತಗಳು ಬಂದವು. ಆಗ ಫ್ಲಾರಿಡಾದ ಎಮರ್ಜೆನ್ಸಿ ಆಪರೇಷನ್ಸ್‌ ಕಮಿಟಿಯ ಅಧಿಕಾರಿಯೊಬ್ಬರು, ವಿಪತ್ತು ಪರಿಹಾರ ಕೆಲಸಕ್ಕಾಗಿ ಬಳಸುತ್ತಿದ್ದ ವಸ್ತುಗಳೆಲ್ಲ ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿದೆಯಾ ಅಂತ ಪರೀಕ್ಷಿಸೋಕೆ ಬಂದರು. ಆಗ ಅವರು ಹೀಗೆ ಹೇಳ್ತಾರೆ: ಪರಿಹಾರಕ್ಕಾಗಿ ಕೊಡಲಾದ ವಸ್ತುಗಳನ್ನ ಬೇರೆಯವರಿಗಿಂತ ಯೆಹೋವನ ಸಾಕ್ಷಿಗಳು ವ್ಯವಸ್ಥಿತವಾದ ಮತ್ತು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಹಾಗಾಗಿ ಅವರು ಕೇಳುವ ಯಾವ ಅಗತ್ಯ ವಸ್ತುಗಳನ್ನು ಕೊಡಲಿಕ್ಕೂ ನಾನು ರೆಡಿ ಇದ್ದೀನಿ ಅಂದರು. 1997ರಲ್ಲಿ ಡೆಮಾಕ್ರೆಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋದಲ್ಲಿ ವಿಪತ್ತು ಸಂಭವಿಸಿತು. ಆಗ ಯೆಹೋವನ ಸಾಕ್ಷಿಗಳು ಅಲ್ಲಿರುವ ತಮ್ಮ ಸಹೋದರರಿಗೆ ಮತ್ತು ಬೇರೆಯವರಿಗೆ ಸಹಾಯ ಮಾಡಲಿಕ್ಕಾಗಿ ಔಷಧಿ, ಆಹಾರ ಮತ್ತು ಬಟ್ಟೆಗಳನ್ನ ಕೊಟ್ಟರು. ಯುರೋಪಿನಲ್ಲಿರುವ ತಮ್ಮ ಸಹೋದರರಿಗೆ ಅಗತ್ಯ ವಸ್ತುಗಳನ್ನ ಖರೀದಿಸಲಿಕ್ಕಾಗಿ ಯೆಹೋವನ ಸಾಕ್ಷಿಗಳು ಸುಮಾರು ಮೂರುವರೆ ಕೋಟಿ ಖರ್ಚು ಮಾಡಿದ್ದಾರೆ.