ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಲೋಕದವರ ತರ ಇಲ್ಲ”

“ಲೋಕದವರ ತರ ಇಲ್ಲ”

“ಲೋಕದವರ ತರ ಇಲ್ಲ”

‘ಇವರು ಈ ಲೋಕದವರ ತರ ಇಲ್ಲ. ಅದಕ್ಕೇ ಲೋಕ ಇವ್ರನ್ನ ದ್ವೇಷಿಸ್ತಾ ಇದೆ.’—ಯೋಹಾನ 17:14.

ಈ ಮಾತಿನ ಅರ್ಥ: ಯೇಸು ಈ ಲೋಕದ ಭಾಗ ಅಲ್ಲ. ಅದಕ್ಕೆ ಆತನು ಸಾಮಾಜಿಕ ಮತ್ತು ರಾಜಕೀಯ ಗಲಭೆಗಳಲ್ಲಿ ತಲೆಹಾಕುತ್ತಿರಲಿಲ್ಲ. “ನನ್ನ ಆಳ್ವಿಕೆ ಈ ಲೋಕದ ಸರಕಾರಗಳ ತರ ಅಲ್ಲ. ಆ ತರ ಇದ್ದಿದ್ರೆ ನಾನು ಯೆಹೂದ್ಯರ ಕೈಗೆ ಸಿಗದ ಹಾಗೆ ನನ್ನ ಸೇವಕರು ಯುದ್ಧ ಮಾಡ್ತಿದ್ರು. ಆದ್ರೆ ನನ್ನ ಆಳ್ವಿಕೆ ಈ ಲೋಕದ್ದಲ್ಲ” ಅಂತ ಯೇಸು ಹೇಳಿದನು. (ಯೋಹಾನ 18:36) ದೇವರು ಇಷ್ಟಪಡದ ರೀತಿಯಲ್ಲಿ ಮಾತಾಡಬಾರದು, ನಡೆದುಕೊಳ್ಳಬಾರದು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು.—ಮತ್ತಾಯ 20:25-27.

ಒಂದನೇ ಶತಮಾನದ ಕ್ರೈಸ್ತರು ಈ ಲೋಕದವರ ತರ ಇರಲಿಲ್ಲ: ಒಂದನೇ ಶತಮಾನದ ಕ್ರೈಸ್ತರ ಬಗ್ಗೆ ಧಾರ್ಮಿಕ ಬರಹಗಾರನಾದ ಜೊನಾಥನ್‌ ಡೈಮಂಡ್‌ ಹೇಳೋದು: ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು “ಯುದ್ಧ ಮಾಡುತ್ತಿರಲಿಲ್ಲ. ಎಷ್ಟೇ ಕಷ್ಟ ಆದರೂ ಅವಮಾನ ಆದರೂ ಜೈಲಿಗೆ ಹಾಕಿದ್ರೂ ಅಥವಾ ಸಾಯಿಸಿದ್ರೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ, ತಟಸ್ಥರಾಗಿರುತ್ತಿದ್ದರು.” ಅವರು ಬೈಬಲಿನಲ್ಲಿರುವ ನೀತಿನಿಯಮಗಳನ್ನು ಪಾಲಿಸಿದ್ರಿಂದ ಬೇರೆಯವರ ತರ ಇರಲಿಲ್ಲ. “ಈಗ ನೀವು ಜನ್ರ ಜೊತೆ ಸೇರಿ ಅವ್ರ ಅಸಹ್ಯ ಕೆಲಸಗಳಲ್ಲಿ ಕೈಜೋಡಿಸ್ತಾ ಇಲ್ಲ ಅಂತ ಅವರು ಆಶ್ಚರ್ಯ ಪಡ್ತಾರೆ. ಅದಕ್ಕೇ ನಿಮ್ಮ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡ್ತಾರೆ” ಅಂತ ಕ್ರೈಸ್ತರಿಗೆ ಹೇಳಲಾಗಿತ್ತು. (1 ಪೇತ್ರ 4:4) ಇತಿಹಾಸಗಾರನಾದ ವಿಲ್‌ ಡ್ಯುರಂಟ್‌ ಹೇಳೋ ಪ್ರಕಾರ, ಕ್ರೈಸ್ತರು ‘ಬೈಬಲಿನಲ್ಲಿದ್ದ ನೀತಿ ನಿಯಮಗಳನ್ನ ಮಾತ್ರ ಪಾಲಿಸುತ್ತಿದ್ದರು. ಅದಕ್ಕೆ ಅನೈತಿಕ ಜೀವನ ನಡೆಸುತ್ತಾ ಇದ್ದವರಿಗೆ ಕ್ರೈಸ್ತರನ್ನ ಕಂಡರೆ ಆಗುತ್ತಿರಲಿಲ್ಲ.’

ಇವತ್ತು ಯಾರು ಲೋಕದವರ ತರ ಇಲ್ಲ? ಕ್ರೈಸ್ತ ತಾಟಸ್ಥ್ಯದ ಬಗ್ಗೆ ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡಿಯ ಹೀಗೆ ಹೇಳುತ್ತೆ: “ಆಯುಧಗಳನ್ನ ಇಟ್ಟುಕೊಳ್ಳಲ್ಲ ಅಂತ ಹೇಳಿದ್ರೆ ಅದೊಂದು ಮಹಾ ಅಪರಾಧ.” ಮಾನವ ಹಕ್ಕುಗಳ ಸಂಘಟನೆಯಾದ ಆಫ್ರಿಕನ್‌ ರೈಟ್ಸ್‌ ಹೇಳೋ ಪ್ರಕಾರ, 1994ರಲ್ಲಿ ರುವಾಂಡದಲ್ಲಾದ ಹತ್ಯಾಕಾಂಡದಲ್ಲಿ ಎಲ್ಲಾ ಚರ್ಚಿನವರು ಭಾಗವಹಿಸಿದ್ರು. “ಆದರೆ ಯೆಹೋವನ ಸಾಕ್ಷಿಗಳು ಮಾತ್ರ ಅದರಲ್ಲಿ ಭಾಗವಹಿಸಲಿಲ್ಲ.”

ನಾಜಿ ಹತ್ಯಾಕಾಂಡದ ಬಗ್ಗೆ ಮಾತಾಡುತ್ತಾ ಒಬ್ಬ ಹೈಸ್ಕೂಲ್‌ ಟೀಚರ್‌, “ಅವರ ಕ್ರೂರ ಕೃತ್ಯಗಳ ಬಗ್ಗೆ ಮತ್ತು ಅವರು ಹೇಳಿದ ಸುಳ್ಳುಗಳ ಬಗ್ಗೆ ಯಾವ ವ್ಯಕ್ತಿಯಾಗಲಿ, ಸಂಘಟನೆಯಾಗಲಿ ಪ್ರಶ್ನೆ ಮಾಡಲಿಲ್ಲ” ಅಂತ ಬೇಜಾರು ಮಾಡಿಕೊಂಡರು. ಆದರೆ ಅವರು ಅಮೆರಿಕದಲ್ಲಿರುವ ಹೋಲೋಕಾಸ್ಟ್‌ ಮೆಮೋರಿಯಲ್‌ ಮ್ಯೂಸಿಯಮ್‌ಗೆ ಹೋಗಿ ಇದರ ಬಗ್ಗೆ ವಿಚಾರಿಸಿದಾಗ, ಈ ನಾಜಿಗಳು ಎಷ್ಟೇ ಕ್ರೂರವಾಗಿ ನಡೆದುಕೊಂಡ್ರೂ ಯೆಹೋವನ ಸಾಕ್ಷಿಗಳು ಮಾತ್ರ ಅವರ ನಂಬಿಕೆಯನ್ನ ಬಿಟ್ಟುಕೊಡದೆ ತಟಸ್ಥರಾಗಿದ್ದರು ಅಂತ ಅರ್ಥಮಾಡಿಕೊಂಡರು.

ಲೈಂಗಿಕತೆ ಮತ್ತು ಮದುವೆ ಬಗ್ಗೆ ಏನು? “ಮದುವೆ ಮುಂಚೆ ಲೈಂಗಿಕತೆಯಲ್ಲಿ ಒಳಗೂಡೋದು, ಮದುವೆ ಆಗದೆ ಒಟ್ಟಿಗೆ ಇರೋದು ಮತ್ತು ಇನ್ನಿತರ ವಿಷಯಗಳಲ್ಲಿ ಚರ್ಚ್‌ ಹೇಳೋದನ್ನ ಹೆಚ್ಚಿನ ಕ್ಯಾಥೊಲಿಕ್‌ ಯುವಕರು ಒಪ್ಪಿಕೊಳ್ಳುತ್ತಿರಲಿಲ್ಲ” ಅಂತ ಯು.ಎಸ್‌. ಕ್ಯಾಥೊಲಿಕ್‌ ಪತ್ರಿಕೆ ಹೇಳುತ್ತೆ. ಅದೇ ಪತ್ರಿಕೆಯಲ್ಲಿ ಒಬ್ಬ ಚರ್ಚಿನ ಅಧಿಕಾರಿ ಹೀಗೆ ಹೇಳುತ್ತಾನೆ: ‘ಮದುವೆಯಾಗೋಕೆ ಚರ್ಚಿಗೆ ಬಂದವರಲ್ಲಿ 50 ಪ್ರತಿಶತಕ್ಕಿಂತ ಹೆಚ್ಚು ಜನರು ಈಗಾಗಲೇ ಒಟ್ಟಿಗೆ ಜೀವನ ಮಾಡಿರುತ್ತಾರೆ.’ ಆದರೆ “ಯೆಹೋವನ ಸಾಕ್ಷಿಗಳು ಮದುವೆ ಮತ್ತು ಲೈಂಗಿಕತೆಯ ಬಗ್ಗೆ ಬೈಬಲಿನಲ್ಲಿರುವ ನೀತಿನಿಯಮಗಳನ್ನೇ ಪಾಲಿಸುತ್ತಾರೆ, ಅದನ್ನ ಕಡೆಗಣಿಸಲ್ಲ” ಅಂತ ದ ನ್ಯೂ ಎನ್‌ಸೈಕ್ಲಪೀಡಿಯ ಬ್ರಿಟಾನಿಕ ಹೇಳುತ್ತೆ.