ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭವಿಷ್ಯವಾಣಿ 4. ಇತರರನ್ನು ಪ್ರೀತಿಸದವರು

ಭವಿಷ್ಯವಾಣಿ 4. ಇತರರನ್ನು ಪ್ರೀತಿಸದವರು

ಭವಿಷ್ಯವಾಣಿ 4. ಇತರರನ್ನು ಪ್ರೀತಿಸದವರು

“ಇತರರನ್ನು ಪ್ರೀತಿಸದವರು.”—2 ತಿಮೊತಿ 3:1-3, ಪರಿಶುದ್ಧ ಬೈಬಲ್‌.

● ಉತ್ತರ ವೇಲ್ಸ್‌ನಲ್ಲಿ ಕ್ರಿಸ್‌ ಅನ್ನೋ ಒಬ್ಬ ವ್ಯಕ್ತಿ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಸಹಾಯಮಾಡೋ ಒಂದು ಸಂಸ್ಥೆಯಲ್ಲಿ ಕೆಲಸ ಮಾಡ್ತಾನೆ. ಅವನು ಹೀಗೆ ಹೇಳ್ತಾನೆ: “ಒಂದಿನ ನನಗೆ ಗೊತ್ತಿರೋ ಒಬ್ಬ ಹೆಂಗಸು ನಮ್ಮ ಸಂಸ್ಥೆಗೆ ಬಂದಿದ್ದಳು. ಅವಳ ಗಂಡ ಅವಳನ್ನ ಎಷ್ಟು ಹೊಡೆದಿದ್ದ ಅಂದ್ರೆ ಅವಳನ್ನ ನೋಡಿ ನನಗೆ ಗುರುತು ಹಿಡಿಯಲಿಕ್ಕೂ ಆಗಲಿಲ್ಲ. ಇನ್ನು ಕೆಲವು ಹೆಂಗಸರು ಮಾನಸಿಕವಾಗಿ ಎಷ್ಟು ಹೊಡೆತ ತಿಂದಿರುತ್ತಾರಂದ್ರೆ ಅವರಿಗೆ ಬೇರೆಯವರನ್ನ ಕಣ್ಣೆತ್ತಿ ನೋಡಕ್ಕೂ ಕಷ್ಟ ಆಗುತ್ತೆ.”

ನಿಜ ಏನು? ಆಫ್ರಿಕದ ಒಂದು ದೇಶದಲ್ಲಿ ಮೂರರಲ್ಲಿ ಒಬ್ಬ ಹೆಂಗಸು ಚಿಕ್ಕವರಿರುವಾಗಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾರೆ. ಅದೇ ದೇಶದಲ್ಲಿ ನಡೆಸಿದ ಒಂದು ಸರ್ವೆ ಪ್ರಕಾರ ಮೂರರಲ್ಲಿ ಒಬ್ಬ ವ್ಯಕ್ತಿ ಹೆಂಡತಿನ ಹೊಡೆಯೋದ್ರಲ್ಲಿ ತಪ್ಪೇನಿಲ್ಲ ಅನ್ನೋ ಹೇಳಿಕೆ ಕೊಟ್ಟಿದ್ದಾರೆ. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರಲ್ಲಿ ಸ್ತ್ರೀಯರು ಮಾತ್ರವಲ್ಲ ಪುರುಷರೂ ಇದ್ದಾರೆ. ಉದಾಹರಣೆಗೆ ಕೆನಡದಲ್ಲಿ 10 ರಲ್ಲಿ 3 ಪುರುಷರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.

ತಪ್ಪು ಅಭಿಪ್ರಾಯಗಳು? ಕೌಟುಂಬಿಕ ದೌರ್ಜನ್ಯ ಯಾವಾಗಲೂ ಇತ್ತು. ಹಿಂದೆ ಅದು ಯಾರಿಗೂ ಗೊತ್ತಾಗ್ತಾ ಇರಲಿಲ್ಲ, ಈಗ ಅದು ಎಲ್ರಿಗೂ ಗೊತ್ತಾಗ್ತಾ ಇದೆ ಅಷ್ಟೇ.

ಈ ಅಭಿಪ್ರಾಯ ಸರಿನಾ? ಹಿಂದಿನ ಕಾಲಕ್ಕೆ ಹೋಲಿಸೋದಾದ್ರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರೋ ಕೌಟುಂಬಿಕ ದೌರ್ಜನ್ಯ ಬೆಳಕಿಗೆ ಬರುತ್ತಿದೆ ನಿಜ. ಕೌಟುಂಬಿಕ ದೌರ್ಜನ್ಯ ಆಗ್ತಾ ಇದೆ ಅನ್ನೋದು ಬೆಳಕಿಗೆ ಬರ್ತಿರೋದಾದ್ರೂ ಆ ತರ ನಡಿಯೋದು ಕಡಿಮೆ ಆಗ್ತಿದ್ಯಾ? ಇಲ್ವೇ ಇಲ್ಲ. ಇವತ್ತು ಜನ್ರಲ್ಲಿ ಪ್ರೀತಿ, ಮಮತೆ ಕಡಿಮೆಯಾಗಿದೆ ಅಂತ ಇದ್ರಿಂದಾನೇ ಗೊತ್ತಾಗುತ್ತೆ.

ನಿಮ್ಮ ಅಭಿಪ್ರಾಯ ಏನು? 2 ತಿಮೊತಿ 3:1-3 ರಲ್ಲಿರೋ ಮಾತುಗಳು ನೆರವೇರುತ್ತಾ ಇದ್ಯಾ? ಇವತ್ತು ತುಂಬ ಕುಟುಂಬಗಳಲ್ಲಿ ಪ್ರೀತಿ, ಮಮತೆ ಕಡಿಮೆಯಾಗಿರೋದನ್ನ ನೀವು ಗಮನಿಸ್ತಾ ಇದ್ದೀರಾ?

ಇದು ನೆರವೇರುತ್ತಾ ಇರೋ 5 ನೇ ಭವಿಷ್ಯವಾಣಿ. ಇದು ನಮ್ಮ ಬೀಡಾದ ಭೂಮಿಗೆ ಸಂಬಂಧಪಟ್ಟಿದೆ. ಬೈಬಲ್‌ ಇದರ ಬಗ್ಗೆ ಏನು ಹೇಳುತ್ತೆ ಅಂತ ಈಗ ನೋಡೋಣ.

[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರ]

“ಇಷ್ಟೆಲ್ಲಾ ಕೌಟುಂಬಿಕ ದೌರ್ಜನ್ಯ ನಡೆದ್ದಿದ್ರೂ ಈ ರೀತಿ ನಡೆದಿದೆ ಅಂತ ಸಮಾಜ ಒಪ್ಪೋದೇ ಇಲ್ಲ. ಈ ರೀತಿ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರು ನನಗೆ ಈ ರೀತಿ ಆಗಿದೆ ಅಂತ ಹೇಳ್ಕೊಂಡು ಕಂಪ್ಲೇಂಟ್‌ ಕೊಡಲ್ಲ. ಒಂದು ಅಂದಾಜಲ್ಲಿ ಹೇಳೋದಾದ್ರೆ ಒಬ್ಬ ಸ್ತ್ರೀ ಗಂಡ ಹೊಡೆದಿದ್ದಾನೆ ಅಂತ ಬಂದು ಕಂಪ್ಲೇಂಟ್‌ ಕೊಡೋದಕ್ಕಿಂತ ಮುಂಚೆ ಈಗಾಗಲೇ 35 ಸಲ ಹೊಡೆತ ತಿಂದಿರುತ್ತಾಳೆ.”—ವೇಲ್ಸ್‌ನಲ್ಲಿರೋ ಕೌಟುಂಬಿಕ ದೌರ್ಜನ್ಯದ ವಿರುದ್ಧ ಮಾತಾಡೋ ಸ್ತ್ರೀ ಪ್ರತಿನಿಧಿಯ ಹೆಲ್ಪ್‌ಲೈನ್‌.