ಬದುಕು ಬದಲಾದ ವಿಧ
“ಜೀವನ ಅಂದರೆ ಇಷ್ಟೇನಾ? ಅಂತ ತುಂಬಾ ವರ್ಷಗಳಿಂದ ಯೋಚಿಸುತ್ತಿದ್ದೆ”—ರೊಸಾಲಿಂಡ್ ಜಾನ್
ಜನನ: 1963
ದೇಶ: ಬ್ರಿಟನ್
ಹಿಂದೆ: ಹೈಫೈ ಜೀವನ
ಹಿನ್ನೆಲೆ:
ನಾನು ದಕ್ಷಿಣ ಲಂಡನಿನ ಕ್ರೊಯ್ಡಾನಿನಲ್ಲಿ ಹುಟ್ಟಿದೆ. ನಾವು ಒಂಬತ್ತು ಜನ ಮಕ್ಕಳು. ನಮ್ಮ ಅಪ್ಪ-ಅಮ್ಮನ ಊರು ಕ್ಯಾರಿಬಿಯನ್ ದ್ವೀಪದ ಸೆಂಟ್ ವಿನ್ಸೆಂಟ್. ಅಮ್ಮ ಮೆಥಡಿಸ್ಟ್ ಚರ್ಚಿಗೆ ಹೋಗುತ್ತಿದ್ದರು. ಬೇರೆಬೇರೆ ವಿಷಯಗಳನ್ನು ಓದೋದು ಮತ್ತು ಕಲಿಯೋದು ಅಂದ್ರೆ ನನಗೆ ತುಂಬ ಇಷ್ಟ. ಆದರೆ ದೇವರ ಬಗ್ಗೆ ಕಲಿಯೋಕೆ ನನಗೆ ಇಷ್ಟ ಇರಲಿಲ್ಲ. ರಜೆ ಸಮಯದಲ್ಲಿ ಮನೆ ಹತ್ತಿರ ಇರುವ ಒಂದು ಕೆರೆ ಪಕ್ಕ ಕೂತು, ಲೈಬ್ರರಿಯಿಂದ ತಂದ ಪುಸ್ತಕಗಳನ್ನು ಓದ್ತಿದ್ದೆ.
ನಾನು ಸ್ಕೂಲ್ ಮುಗಿಸಿ ಸ್ವಲ್ಪ ವರ್ಷಗಳ ಆದ್ಮೇಲೆ ಅಗತ್ಯ ಇರೋರಿಗೆ ಸಹಾಯ ಮಾಡಬೇಕು ಅಂತ ನಿರ್ಧಾರ ಮಾಡಿದೆ. ಮನೆ-ಮಠ ಇಲ್ಲದವರಿಗೆ, ಅಂಗವಿಕಲರಿ, ಓದೋಕೆ ಬರೆಯೋಕೆ ಬರದೆ ಇರೋರಿಗೆ ಸಹಾಯ ಮಾಡೋಕೆ ಶುರು ಮಾಡಿದೆ. ಆಮೇಲೆ ನಾನು ಹೆಲ್ತ್ ಸೈನ್ಸ್ ಓದೋಕೆ ಯೂನಿವರ್ಸಿಟಿಗೆ ಸೇರಿಕೊಂಡೆ. ಗ್ರಾಜುಯೇಷನ್ ಆದ್ಮೇಲೆ ಕೈತುಂಬ ಸಂಬಳ ಸಿಗೋ ಒಂದು ಒಳ್ಳೆ ಕೆಲಸ ಸಿಕ್ತು. ಹೀಗೆ ಬೆಲೆಬಾಳುವ ವಸ್ತುಗಳನ್ನು ತಗೊಂಡೆ. ನಾನು ಫ್ರೀಲ್ಯಾನ್ಸ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಮತ್ತು ಸೋಶಿಯಲ್ ರಿಸರ್ಚರ್ ಆಗಿ ಕೆಲಸ ಮಾಡ್ತಿದ್ದೆ. ಅದಕ್ಕೆ ಕೆಲಸ ಮಾಡೋಕೆ ಲ್ಯಾಪ್ಟಾಪ್ ಮತ್ತು ಇಂಟರ್ನೆಟ್ ಇದ್ದರೆ ಸಾಕಾಗ್ತಿತ್ತು. ಕೆಲವೊಮ್ಮೆ ಎರಡು ಮೂರು ವಾರ ಕೆಲಸದ ಮೇಲೆ ಹೊರದೇಶಕ್ಕೆ ಹೋಗುತ್ತಿದ್ದೆ. ನನಗೆ ಇಷ್ಟ ಆಗಿರೋ ಹೋಟೆಲ್‌ನಲ್ಲಿ ಇರುತ್ತಿದ್ದೆ. ಎಲ್ಲಾ ಕಡೆ ಸುತ್ತಾಡುತ್ತಿದ್ದೆ. ಸ್ಪಾಗೆ, ಜಿಮ್ಗೆ ಹೋಗ್ತಿದ್ದೆ. ಈ ಹೈ-ಫೈ ಜೀವನವನ್ನ ತುಂಬ ಎಂಜಾಯ್ ಮಾಡ್ತಿದ್ದೆ. ನಂಗೆ ಎಲ್ಲಾ ಸೌಭಾಗ್ಯ ಇದ್ರೂನೂ ಕಷ್ಟದಲ್ಲಿರುವವರ ಬಗ್ಗೆ ಯಾವಾಗಲೂ ಯೋಚಿಸುತ್ತಿದ್ದೆ.
ಬದುಕನ್ನೇ ಬದಲಾಯಿಸಿತು ಬೈಬಲ್:
‘ಜೀವನ ಅಂದ್ರೆ ಇಷ್ಟೇನಾ’ ಅಂತ ತುಂಬ ವರ್ಷಗಳಿಂದ ಯೋಚನೆ ಮಾಡ್ತಿದ್ದೆ. ಆದರೆ ಇದಕ್ಕೆ ಬೈಬಲಿಂದ ಉತ್ತರ ಹುಡುಕೋಕೆ ಯಾವತ್ತೂ ಪ್ರಯತ್ನ ಮಾಡಿಲ್ಲ. 1999ರಲ್ಲಿ ನನ್ನ ತಂಗಿ ಮಾರ್ಗರೆಟ್ ಮತ್ತು ಅವಳ ಫ್ರೆಂಡ್ ನನ್ನನ್ನ ಭೇಟಿ ಮಾಡಕ್ಕೆ ಬಂದಿದ್ದರು. ಅವರಿಬ್ಬರೂ ಯೆಹೋವನ ಸಾಕ್ಷಿಗಳಾಗಿದ್ದರು. ಅವಳ ಫ್ರೆಂಡ್ ನನ್ನನ್ನು ತುಂಬ ಚೆನ್ನಾಗಿ ಮಾತಾಡಿಸಿದರು. ನನ್ನ ತಂಗಿಯ ಫ್ರೆಂಡ್ ಜೊತೆ ಬೈಬಲ್ ಅಧ್ಯಯನ ಮಾಡೋಕೆ ಒಪ್ಪಿಕೊಂಡೆ. ಆದ್ರೆ ಯಾಕೆ ಒಪ್ಪಿಕೊಂಡೆ ಅಂತ ಇವತ್ತಿಗೂ ಗೊತ್ತಿಲ್ಲ. ಆದರೆ ಕೆಲಸದಲ್ಲಿ ತುಂಬ ಬಿಸಿಯಾಗಿ ಇದ್ದದ್ದರಿಂದ ಅಷ್ಟೇನು ಪ್ರಗತಿ ಮಾಡ್ಲಿಲ್ಲ.
ನಾನು ಡಾಕ್ಟರೇಟ್ ಪಡ್ಕೊಳೋಕೆ, ಸೋಶಿಯಲ್ ರಿಸರ್ಚ್ ಡಿಗ್ರಿ ಕೋರ್ಸ್ ಮಾಡೋಕೆ 2002ರಲ್ಲಿ ಸೌಥ್ವೆಸ್ಟ್ ಇಂಗ್ಲೆಂಡಿಗೆ ಹೋದೆ. ನಾನು ಮತ್ತೆ ನನ್ನ ಮಗ ತಪ್ಪದೆ ಮೀಟಿಂಗ್ ಹೋಗೋಕೆ ಶುರು ಮಾಡಿದ್ವಿ. ಯುನಿವರ್ಸಿಟಿಗೆ ಹೋಗಿ ಕಲಿಯೋದಂದ್ರೆ ನನಗೆ ತುಂಬ ಇಷ್ಟ. ಆದ್ರೆ ಜೀವನದಲ್ಲಿ ಬರೋ ಕಷ್ಟ ಸಮಸ್ಯೆಗಳ ಬಗ್ಗೆ, ಅದನ್ನ ನಿಭಾಯಿಸೋದು ಹೇಗೆ ಅಂತ ಕಲಿಯೋಕೆ ಬೈಬಲ್ ಸಹಾಯ ಮಾಡಿತು. ಮತ್ತಾಯ 6:24ರಲ್ಲಿ ಇಬ್ಬರು ಯಜಮಾನರಿಗೆ ಸೇವೆ ಮಾಡಕಾಗಲ್ಲ ಅಂತ ಹೇಳಿರೋ ಮಾತು ನಿಜ ಅಂತ ನನಗೆ ಅರ್ಥ ಆಯ್ತು. ದುಡ್ಡಿಗೆ ಪ್ರಾಮುಖ್ಯತೆ ಕೊಡಬೇಕಾ ಅಥವಾ ಯೆಹೋವನಿಗೆ ಪ್ರಾಮುಖ್ಯತೆ ಕೊಡಬೇಕಾ ಅನ್ನೋ ನಿರ್ಧಾರ ಮಾಡಬೇಕಾಯ್ತು.
ಆದರೆ 2001ರಲ್ಲಿ, ನಿಮ್ಮ ಬಗ್ಗೆ ಚಿಂತಿಸುವ ಒಬ್ಬ ಸೃಷ್ಟಿಕರ್ತ ಇದ್ದಾನಾ? * ಅನ್ನೋ ಪುಸ್ತಕದಲ್ಲಿ ಬುಕ್ ಸ್ಟಡಿ ನಡೆಯುತ್ತಿತ್ತು, ಅದಕ್ಕೂ ಹೋಗುತ್ತಿದ್ದೆ. ನಮ್ಮೆಲ್ಲ ಸಮಸ್ಯೆಗಳನ್ನ ಸರಿ ಮಾಡೋಕೆ ಸೃಷ್ಟಿಕರ್ತನಾದ ಯೆಹೋವನಿಂದ ಮಾತ್ರ ಸಾಧ್ಯ ಅಂತ ನನಗೆ ಅರ್ಥ ಆಯ್ತು. ಆದ್ರೆ ಜೀವನ ಮಾಡೋಕೆ ಸೃಷ್ಟಿಕರ್ತನ ಅವಶ್ಯಕತೆ ಇಲ್ಲ ಅಂತ ಯುನಿವರ್ಸಿಟಿಯಲ್ಲಿ ಕಲಿಸುತ್ತಿದ್ದರು. ಇದನ್ನ ಕೇಳಿ ನನಗೆ ಸಿಕ್ಕಾಪಟ್ಟೆ ಕೋಪ ಬಂತು. ಯೂನಿವರ್ಸಿಟಿಗೆ ಸೇರಿಕೊಂಡು ಬರೀ ಎರಡೇ ತಿಂಗಳಾಗಿತ್ತು ಅಷ್ಟೇ. ಆದರೆ ಯೆಹೋವನ ಬಗ್ಗೆ ಇನ್ನೂ ಹೆಚ್ಚನ್ನ ತಿಳ್ಕೊಬೇಕಂತ ಅದನ್ನ ಬಿಟ್ಟುಬಿಟ್ಟೆ.
ನನ್ನ ಜೀವನದಲ್ಲಿ ಬೇಕಾದ ಬದಲಾವಣೆಗಳನ್ನು ಮಾಡ್ಕೊಳ್ಳೋಕೆ ಜ್ಞಾನೋಕ್ತಿ 3:5, 6ರಲ್ಲಿರೋ ಮಾತು ಸಹಾಯ ಮಾಡಿತು. ಅಲ್ಲಿ ಹೀಗಿದೆ: “ಪೂರ್ಣ ಹೃದಯದಿಂದ ಯೆಹೋವನ ಮೇಲೆ ನಂಬಿಕೆ ಇಡು, ನಿನ್ನ ಸ್ವಂತ ಬುದ್ಧಿ ಮೇಲೆ ಆತ್ಕೊಳ್ಳಬೇಡ. ಅದನ್ನ ಮನಸ್ಸಲ್ಲಿ ಇಟ್ಕೊಂಡು ಎಲ್ಲ ಕೆಲಸ ಮಾಡು, ಆಗ ದೇವರು ನಿನಗೆ ಸರಿ ದಾರಿ ತೋರಿಸ್ತಾನೆ.” ನಾನು ಖುಷಿಯಾಗಿರೋದು ಯೆಹೋವನಿಂದ, ದುಡ್ಡು ಅಥವಾ ಕೆಲಸದಿಂದ ಅಲ್ಲ. ಮುಂದೆ ಯೆಹೋವ ಏನಲ್ಲ ಮಾಡಲಿದ್ದಾನೆ ಅಂತ ಕಲಿತಾಗ, ಯೇಸು ನಮಗೋಸ್ಕರ ಪ್ರಾಣ ಕೊಟ್ಟ ಅಂತ ತಿಳ್ಕೊಂಡಾಗ ನನ್ನನ್ನೇ ಯೆಹೋವನಿಗೋಸ್ಕರ ಸಮರ್ಪಿಸಿಕೊಂಡೆ. ಏಪ್ರಿಲ್ 2003ರಲ್ಲಿ ದೀಕ್ಷಾಸ್ನಾನ ತಗೊಂಡೆ. ಯೆಹೋವನಿಗೆ ಜಾಸ್ತಿ ಸಮಯ ಕೊಡೋಕೆ ಕೆಲವು ಬದಲಾವಣೆಗಳನ್ನ ಮಾಡಿಕೊಂಡೆ.
ಸಿಕ್ಕಿದ ಪ್ರಯೋಜನಗಳು:
ಯೆಹೋವನ ಜೊತೆ ನನಗಿರೋ ಫ್ರೆಂಡಶಿಪ್‌ಗೆ ಬೆಲೆ ಕಟ್ಟೋಕೆ ಆಗಲ್ಲ. ಯೆಹೋವನ ಬಗ್ಗೆ ಹೆಚ್ಚು ತಿಳ್ಕೊಂಡಷ್ಟು ನೆಮ್ಮದಿ ಇದೆ, ಖುಷಿಯಾಗೂ ಇದ್ದೀನಿ. ನನಗೆ ಸಿಕ್ಕಿರೋ ಇನ್ನೊಂದು ಆಶೀರ್ವಾದ ಯೆಹೋವನನ್ನ ಪ್ರೀತಿಸೋ ಫ್ರೆಂಡ್ಸ್.
ಕಲಿಯೋ ಆಸೆ ನನಗಿನ್ನೂ ಹೋಗಿಲ್ಲ. ಬೈಬಲ್ ಮತ್ತು ಮೀಟಿಂಗಿಂದ ಕಲಿಯೋ ವಿಷಯಗಳು ನನಗೆ ತೃಪ್ತಿ ಕೊಡುತ್ತೆ. ನನ್ನ ನಂಬಿಕೆ ಬಗ್ಗೆ ಎಲ್ಲರ ಹತ್ರ ಹೇಳಿಕೊಳ್ಳೋಕೆ ತುಂಬ ಇಷ್ಟಪಡ್ತೀನಿ. ಇದು ನನ್ನ ಜೀವನದಲ್ಲಿ ತುಂಬ ಪ್ರಾಮುಖ್ಯವಾಗಿರೋ ವಿಷಯ. ಯಾಕಂದ್ರೆ ಈಗ ಒಳ್ಳೆ ಜೀವನ ಪಡ್ಕೊಳ್ಳೋಕೆ ಮತ್ತು ಮುಂದೆ ಒಳ್ಳೆ ಜೀವನವನ್ನು ಎಂಜಾಯ್ ಮಾಡೋಕೆ ಜನರಿಗೆ ಸಹಾಯ ಮಾಡ್ತಿದ್ದೀನಿ. ಜೂನ್ 2008ರಿಂದ ನಾನು ಪಯನೀಯರ್ ಸೇವೆ ಮಾಡ್ತಾ ಖುಷಿಯಾಗಿದ್ದೀನಿ. ತೃಪ್ತಿನೂ ಇದೆ. ಈಗ ಲೈಫ್ ಅಂದ್ರೆ ಏನು ಅಂತ ನನಗೆ ಗೊತ್ತಾಯ್ತು. ಇದನ್ನ ಅರ್ಥ ಮಾಡಿಸಿದ್ದಕ್ಕೆ ಯೆಹೋವನಿಗೆ ತುಂಬ ಥ್ಯಾಂಕ್ಸ್ ಹೇಳ್ತೀನಿ.
^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.