ಮಾಹಿತಿ ಇರುವಲ್ಲಿ ಹೋಗಲು

ಕುಟುಂಬ ಜೀವನವನ್ನು ಆನಂದಿಸಿರಿ

ಕುಟುಂಬ ಜೀವನವನ್ನು ಆನಂದಿಸಿರಿ

ಕುಟುಂಬ ಜೀವನವನ್ನು ಆನಂದಿಸಿರಿ

ಕುಟುಂಬಗಳು ನಿಜವಾಗಿಯೂ ಸಂತೋಷದಿಂದಿರಬಲ್ಲವೋ?

ಅದು ಹೇಗೆ ಸಾಧ್ಯ?

ಈ ಕಿರುಹೊತ್ತಗೆಯಲ್ಲಿ ಕಂಡುಬರುವ ಹಾಗೆ ಐಕ್ಯವಾಗಿ ಮತ್ತು ಸಂತೋಷದಿಂದಿರುವ ಯಾವುದೇ ಕುಟುಂಬಗಳ ಪರಿಚಯ ನಿಮಗಿದೆಯೇ? ಎಲ್ಲ ಕಡೆಯೂ ಕುಟುಂಬಗಳು ಒಡೆದು ಹೋಗುತ್ತಿವೆ. ವಿವಾಹ ವಿಚ್ಛೇದನ, ಕೆಲಸದಲ್ಲಿ ಭದ್ರತೆಯ ಕೊರತೆ, ಒಂಟಿಹೆತ್ತವರ ಉಭಯ ಸಂಕಟಗಳು, ಆಶಾಭಂಗಗಳು—ಇವೆಲ್ಲವು ಈ ವಿಷಮ ಸ್ಥಿತಿಗೆ ನೆರವು ನೀಡುತ್ತವೆ. ಕುಟುಂಬ ಜೀವನದ ಕುರಿತು ಒಬ್ಬ ತಜ್ಞನು ಪ್ರಲಾಸಿಸಿದ್ದು: “ಇಷ್ಟರೊಳಗೆ, ಕುಟುಂಬ ಅಳಿವಿನ ಭವಿಷ್ಯ ನುಡಿಯು ಎಲ್ಲರಿಗೂ ಚಿರಪರಿಚಿತವಾಗಿದೆ.”

ಇಂದು ಕುಟುಂಬಗಳು ಇಂತಹ ಗಂಭೀರ ಸಮಸ್ಯೆಗಳ ಗುಂಡಿನ ಮಳೆಗೆ ಯಾಕೆ ಗುರಿಯಾಗಿವೆ? ನಾವು ಕುಟುಂಬ ಜೀವನವನ್ನು ಹೇಗೆ ಆನಂದಿಸಬಹುದು?

ಕುಟುಂಬವು ಉದ್ಭವಿಸಿದ ವಿಧ

ಈ ಪ್ರಶ್ನೆಗಳಿಗೆ ಉತ್ತರನೀಡಲು, ಮದುವೆ ಮತ್ತು ಕುಟುಂಬದ ಮೂಲವನ್ನು ನಾವು ತಿಳಿಯುವುದು ಆವಶ್ಯಕವಾಗಿದೆ. ಏಕೆಂದರೆ ಇವುಗಳಿಗೆ ಒಬ್ಬ ಮೂಲಕರ್ತೃವು—ಒಬ್ಬ ಸೃಷ್ಟಿಕರ್ತನು ಇರುವದಾದರೆ—ಕುಟುಂಬ ಸದಸ್ಯರು ಮಾರ್ಗದರ್ಶನಕ್ಕಾಗಿ ಆತನೆಡೆಗೆ ನೋಡಬೇಕು, ಯಾಕಂದರೆ ಕುಟುಂಬ ಜೀವನವನ್ನು ಪೂರ್ಣವಾಗಿ ಆನಂದಿಸ ಶಕ್ಯವಾಗುವ ಅತ್ಯುತ್ತಮ ರೀತಿಯು ಆತನಿಗೆ ನಿಶ್ಚಯವಾಗಿ ಗೊತ್ತಿರುತ್ತದೆ.

ಆಸಕ್ತಿಕರವಾಗಿ, ಕುಟುಂಬ ಏರ್ಪಾಡಿಗೆ ಮೂಲಕರ್ತೃವೇ ಇರಲಿಲ್ಲವೆಂದು ಅನೇಕರು ನಂಬುತ್ತಾರೆ. ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನ ಹೇಳುವುದು: “ಕೆಲವು ಪಂಡಿತರು ಮದುವೆಯ ಮೂಲವನ್ನು ಮನುಷ್ಯನ ಕೆಳಗಿರುವ ಪ್ರಾಣಿಗಳ ಜೋಡಿಯಾಗಿ ಕೂಡುವ ಏರ್ಪಾಡಿಗೆ ಪತ್ತೆಹಚ್ಚುವ ಪ್ರವೃತ್ತಿಯವರಾಗಿದ್ದಾರೆ.” ಆದರೂ, ಯೇಸು ಕ್ರಿಸ್ತನು ಪುರುಷ ಮತ್ತು ಸ್ತ್ರೀಯ ಸೃಷ್ಟಿಯ ಬಗ್ಗೆ ಮಾತಾಡಿದನು. ಅವನು ಪೂರ್ವದ ಬೈಬಲ್‌ ದಾಖಲೆಯ ಅಧಿಕಾರವನ್ನು ಆಧಾರಿಸುತ್ತಾ ಹೇಳಿದ್ದು: “ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”—ಮತ್ತಾಯ 19:4-6.

ಆದುದರಿಂದ ಯೇಸು ಕ್ರಿಸ್ತನೇ ಸರಿ. ಒಬ್ಬ ಬುದ್ಧಿಶಕ್ತಿಯ ದೇವರು ಮೊದಲನೆಯ ಮಾನವರನ್ನು ಸೃಷ್ಟಿಸಿ, ಸಂತೋಷ ಕುಟುಂಬ ಜೀವನಕ್ಕೆ ಏರ್ಪಾಡು ಮಾಡಿದನು. ದೇವರು ಪ್ರಥಮ ದಂಪತಿಗಳನ್ನು ಮದುವೆಯಲ್ಲಿ ಸೇರಿಸಿ, ಪುರುಷನು “ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು” ಎಂದು ಹೇಳಿದನು. (ಆದಿಕಾಂಡ 2:22-24) ಆದುದರಿಂದ, ಇಂದಿನ ಕೌಟುಂಬಿಕ ಸಮಸ್ಯೆಗಳು ಸೃಷ್ಟಿಕರ್ತನು ತನ್ನ ವಾಕ್ಯವಾದ, ಬೈಬಲ್‌ನಲ್ಲಿ ಸ್ಥಾಪಿಸಿದ ಮಟ್ಟಗಳನ್ನು ಉಲ್ಲಂಘಿಸುವ ಜೀವನಶೈಲಿಗಳನ್ನು ಬೆನ್ನಟ್ಟುವುದರಿಂದ ಇರಬಲ್ಲದೇ?

ಯಶಸ್ವಿಗೆ ಯಾವ ದಾರಿ?

ನೀವು ನಿಸ್ಸಂದೇಹವಾಗಿ ಅರಿತಿರುವಂತೆ, ಆಧುನಿಕ ಲೋಕವು ಸ್ವ-ಪ್ರಯೋಜನವನ್ನು ಹಾಗೂ ಸ್ವ-ನೆರವೇರಿಕೆಯನ್ನು ಉತ್ತೇಜಿಸುತ್ತದೆ. “ಲೋಭವು ಆರೋಗ್ಯಕರವಾಗಿದೆ,” ಎಂದು ಒಬ್ಬ ಬಂಡವಾಳಗಾರನು ಅಮೆರಿಕದ ಒಂದು ಕಾಲೇಜಿನ ಪದವೀಧರರ ವರ್ಗಕ್ಕೆ ಹೇಳಿದನು. “ನೀವು ಲೋಭಿಯಾಗಿದ್ದರೂ ನಿಮ್ಮ ವಿಷಯದಲ್ಲಿ ಒಳ್ಳೆಯವರೆಂದು ಭಾವಿಸ ಬಲ್ಲಿರಿ.” ಆದರೆ ಪ್ರಾಪಂಚಿಕ ಸೊತ್ತುಗಳನ್ನು ಬೆನ್ನಟ್ಟುವುದು ಸಾಫಲ್ಯಕ್ಕೆ ನಡಿಸುವದಿಲ್ಲ. ಪ್ರಾಪಂಚಿಕತೆಯು, ನಿಜಕ್ಕೂ, ಕುಟುಂಬ ಜೀವನಕ್ಕಿರುವ ಅತಿ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ, ಯಾಕಂದರೆ ಅದು ಮಾನವ ಸಂಬಂಧಗಳ ನಡುವೆ ಬಂದು ಜನರ ಸಮಯ ಹಾಗೂ ಹಣವನ್ನು ಬರಿದು ಮಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಸಂತೋಷಕ್ಕೆ ಏನು ಪ್ರಾಮುಖ್ಯವೆಂದು ನೋಡಲು ಕೇವಲ ಎರಡು ಬೈಬಲ್‌ ಜ್ಞಾನೋಕ್ತಿಗಳು ಹೇಗೆ ಸಹಾಯ ಮಾಡುತ್ತವೆಂದು ಗಮನಿಸಿರಿ.

“ದ್ವೇಷವಿರುವಲ್ಲಿ ಅತ್ಯುತ್ತಮವಾದ ಮಾಂಸಕ್ಕಿಂತಲೂ ಪ್ರೇಮವಿರುವಲ್ಲಿ ಸಸ್ಯಾಹಾರವನ್ನು ತಿನ್ನುವುದೇ ಉತ್ತಮ.”

“ತೊಂದರೆ ತುಂಬಿದ ಮನೆಯಲ್ಲಿ ಔತಣದೂಟ ಮಾಡುವುದಕ್ಕಿಂತಲೂ ಮನಶ್ಶಾಂತಿಯಿಂದ ರೊಟ್ಟಯ ಒಣ ತುತ್ತನ್ನು ತಿನ್ನುವುದು ಲೇಸು.”

ಜ್ಞಾನೋಕ್ತಿ 15:17; 17:1, “ಟುಡೇಸ್‌ ಇಂಗ್ಲಿಷ್‌ ವರ್ಷನ್‌.

ಅವುಗಳು ಶಕ್ತಿಯುತವಾಗಿವೆ, ಅಲ್ಲವೇ? ಈ ಆದ್ಯತೆಗಳಿಗೆ ಪ್ರತಿಯೊಂದು ಕುಟುಂಬವು ಹಿಡಿದುಕೊಂಡಲ್ಲಿ, ಈ ಲೋಕವು ಎಷ್ಟು ಭಿನ್ನವಾಗಿದ್ದಿರಬಹುದೆಂದು ಯೋಚಿಸಿರಿ! ಕುಟುಂಬ ಸದಸ್ಯರು ಒಬ್ಬರು ಇನ್ನೊಬ್ಬರೊಂದಿಗೆ ಹೇಗೆ ವ್ಯವಹರಿಸಬೇಕೆಂಬ ಬೆಲೆಬಾಳುವ ಮಾರ್ಗದರ್ಶನವನ್ನು ಕೂಡ ಬೈಬಲ್‌ ಒದಗಿಸುತ್ತದೆ. ಅದು ಕೊಡುವ ಕೇವಲ ಕೆಲವು ಮಾರ್ಗದರ್ಶಕ ಸೂಚನೆಗಳನ್ನು ಗಮನಿಸಿರಿ.

ಗಂಡಂದಿರು: ‘ನಿಮ್ಮ ಸ್ವಂತ ಶರೀರದಂತೆಯೇ ನಿಮ್ಮ ಹೆಂಡತಿಯನ್ನು ಪ್ರೀತಿಸಿರಿ.’ಎಫೆಸ 5:28-30, NW.

ಸರಳ, ಆದರೆ ಬಹಳ ಪ್ರಾಯೋಗಿಕ! ಒಬ್ಬ ಗಂಡನು ‘ತನ್ನ ಹೆಂಡತಿಗೆ ಮಾನವನ್ನು ಸಲ್ಲಿಸಬೇಕು’ ಎಂದು ಕೂಡ ಬೈಬಲ್‌ ಸೂಚಿಸುತ್ತದೆ. (1 ಪೇತ್ರ 3:7) ಇದನ್ನು ಅವನು ಅವಳಿಗೆ ಕೋಮಲತೆ, ಗ್ರಹಿಕೆ ಮತ್ತು ಪುನಃ ಅಶ್ವಾಸನೆ ಸೇರಿರುವ ವಿಶೇಷ ಗಮನವನ್ನು ಕೊಟ್ಟು ಮಾಡುತ್ತಾನೆ. ಅವನು ಆಕೆಯ ಅಭಿಪ್ರಾಯಗಳಿಗೆ ಸಹ ಮಹತ್ವ ಕೊಡುತ್ತಾನೆ ಮತ್ತು ಆಕೆಗೆ ಕಿವಿಗೊಡುತ್ತಾನೆ. (ಆದಿಕಾಂಡ 21:12 ಹೋಲಿಸಿ.) ತಾನು ನೋಡಿಕೊಳ್ಳಲ್ಪಡಬೇಕೆಂದು ಬಯಸುವಂತೆಯೇ, ಗಂಡನು ಹೆಂಡತಿಯನ್ನು ಆಸಕ್ತಿಯಿಂದ ನೋಡಿಕೊಂಡರೆ, ಯಾವುದೇ ಕುಟುಂಬವೂ ಪ್ರಯೋಜನ ಪಡೆಯುವುದೆಂದು ನೀವು ಒಪ್ಪುವುದಿಲ್ಲವೇ?—ಮತ್ತಾಯ 7:12.

ಹೆಂಡತಿಯರು: “ನಿಮ್ಮ ಗಂಡನಿಗೆ ಆಳವಾದ ಗೌರವ ತೋರಿಸಿರಿ.”ಎಫೆಸ 5:33, NW.

ತನ್ನ ಗಂಡನು ಅವನ ಭಾರವಾದ ಜವಾಬ್ದಾರಿಕೆಗಳನ್ನು ನಿರ್ವಹಿಸಲು ಸಹಾಯ ಮಾಡುವ ಮೂಲಕ ಹೆಂಡತಿಯೊಬ್ಬಳು ಕುಟುಂಬದ ಸಂತೋಷಕ್ಕೆ ನೆರವು ನೀಡುತ್ತಾಳೆ. “ಅವನಿಗೆ ಸರಿಬೀಳುವ ಸಹಕಾರಿ” ಯನ್ನಾಗಿ ಹೆಂಡತಿಯೊಬ್ಬಳನ್ನು ದೇವರು ಒದಗಿಸಿದರ್ದಲ್ಲಿ, ಇದನ್ನೇ ಉದ್ದೇಶಿಸಲಾಗಿತ್ತು. (ಆದಿಕಾಂಡ 2:18) ಹೆಂಡತಿಯೊಬ್ಬಳು ತನ್ನ ಗಂಡನ ನಿರ್ಣಯಗಳಿಗೆ ಬೆಂಬಲ ಕೊಡುವ ಮೂಲಕ ಮತ್ತು ಕುಟುಂಬ ಧ್ಯೇಯಗಳನ್ನು ಸಾಧಿಸುವದರಲ್ಲಿ ಅವನೊಂದಿಗೆ ಸಹಕರಿಸುವ ಮೂಲಕ ಮರ್ಯಾದೆಯನ್ನು ತೋರಿಸುವಾಗ, ಕುಟುಂಬ ಜೀವನಕ್ಕೆ ಬರುವ ಆಶೀರ್ವಾದಗಳನ್ನು ನೀವು ಗಣ್ಯ ಮಾಡಬಲ್ಲಿರೋ?

ಮದುವೆಸಂಗಾತಿಗಳು: “ಗಂಡಂದಿರು ಮತ್ತು ಹೆಂಡತಿಯರು ಒಬ್ಬರಿಗೊಬ್ಬರು ನಂಬಿಗಸ್ತರಾಗಿರಬೇಕು.”ಇಬ್ರಿಯ 13:4, ಟಿಇವಿ.

ಅವರು ಹಾಗಿದ್ದರೆ, ಕುಟುಂಬ ಜೀವನವು ಪ್ರಯೋಜನ ಹೊಂದುವುದು ನಿಶ್ಚಯ. ವ್ಯಭಿಚಾರವು ಅನೇಕ ಬಾರಿ ಒಂದು ಕುಟುಂಬವನ್ನು ಧ್ವಂಸಗೊಳಿಸುತ್ತದೆ. (ಜ್ಞಾನೋಕ್ತಿ 6:27-29, 32) ಆದುದರಿಂದ, ವಿವೇಕಪ್ರದವಾಗಿ, ಬೈಬಲ್‌ ಪ್ರೇರಿಸುವುದು: “ನಿನ್ನ ಹೆಂಡತಿಯೊಂದಿಗೆ ಸಂತೋಷದಿಂದಿರು ಮತ್ತು ನೀನು ಮದುವೆಯಾದ ಹುಡುಗಿಯಲ್ಲಿ ಆನಂದವನ್ನು ಕಂಡುಕೊಳ್ಳು . . . ನೀನು ನಿನ್ನ ಪ್ರೀತಿಯನ್ನು ಪರಸ್ತ್ರೀಗೆ ಏಕೆ ಕೊಡಬೇಕು?”—ಜ್ಞಾನೋಕ್ತಿ 5:18-20, ಟಿಇವಿ.

ಹೆತ್ತವರು: “ನಡೆಯಬೇಕಾದ [ಅವರ] ಮಾರ್ಗಕ್ಕೆ ತಕ್ಕಂತೆ [ನಿಮ್ಮ ಮಕ್ಕಳನ್ನು] ಶಿಕ್ಷಿಸಿರಿ.”—ಜ್ಞಾನೋಕ್ತಿ 22:6.

ಹೆತ್ತವರು ಮಕ್ಕಳಿಗೆ ಸಮಯ ಮತ್ತು ಗಮನವನ್ನು ಕೊಡುವಾಗ, ಕುಟುಂಬ ಜೀವನವು ನಿಶ್ಚಯವಾಗಿ ಉತ್ತಮಗೊಳ್ಳುವುದು. ಆದುದರಿಂದ, ಹೆತ್ತವರು ತಮ್ಮ ಮಕ್ಕಳಿಗೆ ಸರಿಯಾದ ತತ್ವಗಳನ್ನು ‘ಮನೆಯಲ್ಲಿರುವಾಗಲೂ ಪ್ರಯಾಣದಲ್ಲಿರುವಾಗಲೂ ಮಲಗುವಾಗಲೂ ಏಳುವಾಗಲೂ’ ಕಲಿಸಲು ಬೈಬಲ್‌ ಉತ್ತೇಜಿಸುತ್ತದೆ. (ಧರ್ಮೋಪದೇಶಕಾಂಡ 11:19) ಅವರನ್ನು ಶಿಕ್ಷಿಸುವ ಮೂಲಕ ತಾವು ತಮ್ಮ ಮಕ್ಕಳನ್ನು ಪ್ರೀತಿಸುತ್ತೇವೆಂದು ಹೆತ್ತವರು ತೋರಿಸಬೇಕೆಂದು ಕೂಡ ಬೈಬಲ್‌ ಹೇಳುತ್ತದೆ.—ಎಫೆಸ 6:4.

ಮಕ್ಕಳು: “ಮಕ್ಕಳೇ, ಕರ್ತನಿಗೆ ಸೇರಿಕೆಯಲ್ಲಿ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ.ಎಫೆಸ 6:1, NW.

ನಿಜ, ಈ ನಿಯಮರಹಿತ ಲೋಕದಲ್ಲಿ, ನಿಮ್ಮ ಹೆತ್ತವರಿಗೆ ವಿಧೇಯರಾಗಿರುವುದು ಯಾವಾಗಲೂ ಸುಲಭವಲ್ಲ. ಆದರೂ, ಕುಟುಂಬದ ಮೂಲಕರ್ತೃವು ನಮಗೆ ಹೇಳಿದ್ದನ್ನು ಮಾಡುವುದು ವಿವೇಕವೆಂದು ನೀವು ಒಪ್ಪುವದಿಲ್ಲವೋ? ನಮ್ಮ ಕುಟುಂಬ ಜೀವಿತವನ್ನು ಸಂತೋಷಗೊಳಿಸಲು ಯಾವುದು ಅತ್ಯುತ್ತಮವೆಂದು ಆತನಿಗೆ ಗೊತ್ತಿದೆ. ಆದುದರಿಂದ ನಿಮ್ಮ ಹೆತ್ತವರಿಗೆ ವಿಧೇಯರಾಗಲು ಕಷ್ಟಪಟ್ಟು ಪ್ರಯತ್ನಿಸಿರಿ. ಕೆಟ್ಟದನ್ನು ಮಾಡಲು ಇರುವ ಲೋಕದ ಅನೇಕ ಶೋಧನೆಗಳನ್ನು ವಿಸರ್ಜಿಸಲು ದೃಢನಿರ್ಣಯ ಮಾಡಿರಿ.—ಜ್ಞಾನೋಕ್ತಿ 1:10-19.

ಬೈಬಲ್‌ನ ಸಲಹೆಯನ್ನು ಎಷ್ಟರ ಮಟ್ಟಿಗೆ ಪ್ರತಿಯೊಬ್ಬ ಕುಟುಂಬದ ಸದಸ್ಯನು ಅನ್ವಯಿಸುತ್ತಾನೋ, ಅಷ್ಟರ ಮಟ್ಟಿಗೆ ಕುಟುಂಬ ಜೀವಿತವು ಪ್ರಯೋಜನ ಹೊಂದುವುದು. ಕುಟುಂಬವು ಒಂದು ಹೆಚ್ಚು ಉತ್ತಮವಾದ ಜೀವಿತವನ್ನು ಈಗ ಅನುಭವಿಸುವುದಷ್ಟೇಯಲ್ಲ, ಅದಕ್ಕೆ ದೇವರು ವಾಗ್ದಾನಿಸಿರುವ ನೂತನ ಜಗತ್ತಿನಲ್ಲಿ ಒಂದು ಅದ್ಭುತಕರವಾದ ಭವಿಷ್ಯತ್ತಿನ ಪ್ರತೀಕ್ಷೆಯೂ ಇರುವುದು. (2 ಪೇತ್ರ 3:13; ಪ್ರಕಟನೆ 21:3, 4) ಆದುದರಿಂದ ಬೈಬಲನ್ನು ಕೂಡಿ ಅಭ್ಯಾಸಿಸುವದನ್ನು ಒಂದು ಕೌಟುಂಬಿಕ ರೂಢಿಯನ್ನಾಗಿ ಮಾಡಿರಿ! ಲೋಕಾದ್ಯಂತ ಲಕ್ಷಾಂತರ ಕುಟುಂಬಗಳು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸ ಬಲ್ಲಿರಿ ಎಂಬ ಸುಂದರ ಸಚಿತ್ರ ಪುಸ್ತಕದಲ್ಲಿ ಒದಗಿಸಿರುವ ಮಾರ್ಗದರ್ಶನವನ್ನು ನಿಜವಾಗಿಯೂ ಪ್ರಯೋಜನಕಾರಿಯೆಂದು ಕಂಡುಕೊಂಡಿವೆ.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ ಉಪಯೋಗಿಸಲ್ಪಟ್ಟ ಬೈಬಲ್‌ ಭಾಷಾಂತರವು ‘ಇಂಡಿಯಾ ಸಿಲೋನ್‌ ದೇಶಗಳ ಸತ್ಯವೇದ ಸಂಘದ ಕನ್ನಡ ಬೈಬಲ್‌’ ಆಗಿದೆ.