ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ ಬಿ

ನಾನು ಮಾತನ್ನ ಯಾವಾಗ ನಿಲ್ಲಿಸಲಿ?

ನಾನು ಮಾತನ್ನ ಯಾವಾಗ ನಿಲ್ಲಿಸಲಿ?

“ಶಾಶ್ವತ ಜೀವ ಪಡೆಯೋ ಯೋಗ್ಯತೆ” ಇರೋ ಜನ್ರ ಜೊತೆ ನಾವು ಮಾತಾಡೋಕೆ ಇಷ್ಟ ಪಡ್ತೀವಿ. (ಅ. ಕಾ. 13:48) ಅದಕ್ಕೆ ಒಬ್ಬ ವ್ಯಕ್ತಿ ಪ್ರಾಮಾಣಿಕವಾಗಿ ಏನಾದ್ರೂ ಪ್ರಶ್ನೆ ಕೇಳಿದ್ರೆ ಅಥವಾ ಏನಾದ್ರೂ ಅರ್ಥ ಆಗಿಲ್ಲ ಅಂತ ಹೇಳಿದ್ರೆ ನಾವು ಮಾತು ಮುಂದುವರಿಸ್ತೀವಿ.

ಆದ್ರೆ ಆ ವ್ಯಕ್ತಿ ಕೋಪ ಮಾಡ್ಕೊಂಡ್ರೆ, ಜಗಳಕ್ಕೆ ಇಳಿದ್ರೆ, ನಮ್ಮ ಜೊತೆ ಮಾತಾಡೋಕೆ ಇಷ್ಟ ಇಲ್ಲ ಅಂದ್ರೆ ನಾವು ಜಾಣ್ಮೆಯಿಂದ ಸಮಾಧಾನದಿಂದ ಮಾತನ್ನ ಅಲ್ಲಿಗೆ ನಿಲ್ಲಿಸಬೇಕಾಗುತ್ತೆ. (ಜ್ಞಾನೋ. 17:14) ಆಗ್ಲೂ ನಾವು ಗೌರವದಿಂದ ಪ್ರೀತಿಯಿಂದ ಮಾತಾಡ್ತೀವಿ. ಇದ್ರಿಂದ ಆ ವ್ಯಕ್ತಿ ಮುಂದೊಂದು ದಿನ ನಮ್ಮ ಜೊತೆ ಮಾತಾಡೋಕೆ ಇಷ್ಟಪಡಬಹುದು.—1 ಪೇತ್ರ 2:12.