ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಷ್ಯರಾಗೋಕೆ ಕಲಿಸಿ

ಪಾಠ 12

ಧೈರ್ಯ

ಧೈರ್ಯ

ತತ್ವ: “ಎಣ್ಣೆ, ಧೂಪದಿಂದ ಹೃದಯಕ್ಕೆ ಉಲ್ಲಾಸ, ಪ್ರಾಮಾಣಿಕ ಸಲಹೆಯಿಂದ ಸಿಗೋ ಸಿಹಿಯಾದ ಸ್ನೇಹದಿಂದ ಮನಸ್ಸಿಗೆ ಖುಷಿ.”—ಜ್ಞಾನೋ. 27:9.

ಯೇಸು ಏನು ಮಾಡಿದನು?

1. ವಿಡಿಯೋ ನೋಡಿ ಅಥವಾ ಮಾರ್ಕ 10:17-22 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1.   ಎ. ಆ ಯುವ ಅಧಿಕಾರಿಯಲ್ಲಿ ಯೇಸು ಯಾವ ಒಳ್ಳೇ ಗುಣಗಳನ್ನ ನೋಡಿರಬಹುದು?

  2.  ಬಿ. ಆ ವ್ಯಕ್ತಿಗೆ ಸಲಹೆ ಕೊಡೋಕೆ ಯೇಸುಗೆ ಪ್ರೀತಿ ಮತ್ತು ಧೈರ್ಯ ಎರಡೂ ಯಾಕೆ ಬೇಕಿತ್ತು?

ನಮಗೇನು ಪಾಠ?

2. ವಿದ್ಯಾರ್ಥಿ ಪ್ರಗತಿ ಆಗಬೇಕಾದ್ರೆ ಏನು ಮಾಡಬೇಕಂತ ನಾವು ಮುಚ್ಚುಮರೆಯಿಲ್ಲದೇ ಪ್ರೀತಿಯಿಂದ ಹೇಳಬೇಕು.

ಯೇಸು ತರ ನೀವೂ ಮಾಡಿ

3. ಗುರಿಗಳನ್ನಿಟ್ಟು ಅದನ್ನ ಮುಟ್ಟೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ.

  1.   ಎ. ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ ಪ್ರತಿ ಪಾಠದ ಕೊನೆಯಲ್ಲಿರೋ “ಇದನ್ನ ಮಾಡಿ ನೋಡಿ” ಚೌಕ ಬಳಸಿ.

  2.  ಬಿ. ನಿಮ್ಮ ವಿದ್ಯಾರ್ಥಿ ಇಟ್ಟಿರೋ ಚಿಕ್ಕ ಅಥವಾ ದೊಡ್ಡ ಗುರಿಗಳನ್ನ ಮುಟ್ಟೋಕೆ ಏನೇನು ಮಾಡಬೇಕು ಅಂತ ಅವರಾಗೇ ತಿಳ್ಕೊಳ್ಳೋಕೆ ಸಹಾಯ ಮಾಡಿ.

  3.  ಸಿ. ಅವರು ಪ್ರಗತಿ ಮಾಡಿದಾಗೆಲ್ಲಾ ಹೊಗಳಿ.

4. ವಿದ್ಯಾರ್ಥಿಯ ಪ್ರಗತಿಗೆ ಯಾವುದು ಅಡ್ಡ ಬರ್ತಿದೆ ಅಂತ ಯೋಚಿಸಿ, ಅದನ್ನ ಜಯಿಸೋಕೆ ಸಹಾಯ ಮಾಡಿ.

  1.   ಎ. ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ:

    • ‘ದೀಕ್ಷಾಸ್ನಾನ ತಗೊಳ್ಳೋಕೆ ನನ್ನ ವಿದ್ಯಾರ್ಥಿ ಯಾಕೆ ಹಿಂದೆ ಮುಂದೆ ನೋಡ್ತಿದ್ದಾರೆ?’

    • ‘ನಾನು ಅವ್ರಿಗೆ ಹೇಗೆ ಸಹಾಯ ಮಾಡಬಹುದು?’

  2.  ಬಿ. ವಿದ್ಯಾರ್ಥಿ ಏನು ಮಾಡಬೇಕಂತ ಮುಚ್ಚುಮರೆಯಿಲ್ಲದೇ ಪ್ರೀತಿಯಿಂದ ಹೇಳೋಕೆ ಧೈರ್ಯಕ್ಕೋಸ್ಕರ ಪ್ರಾರ್ಥನೆ ಮಾಡಿ.

5. ವಿದ್ಯಾರ್ಥಿ ಪ್ರಗತಿ ಮಾಡ್ತಿಲ್ಲ ಅಂದ್ರೆ ಸ್ಟಡಿ ನಿಲ್ಲಿಸಿ.

  1.   ಎ. ವಿದ್ಯಾರ್ಥಿ ಪ್ರಗತಿ ಮಾಡ್ತಿದ್ದಾರಾ ಇಲ್ವಾ ಅಂತ ತಿಳ್ಕೊಳ್ಳೋಕೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ.

    • ‘ನನ್ನ ವಿದ್ಯಾರ್ಥಿ ಕಲ್ತಿದ್ದನ್ನ ಪಾಲಿಸ್ತಿದ್ದಾರಾ?’

    • ‘ಅವರು ಕೂಟಗಳಿಗೆ ಬರ್ತಿದ್ದಾರಾ? ಕಲ್ತಿದ್ದನ್ನ ಬೇರೆವ್ರಿಗೆ ಹೇಳ್ತಿದ್ದಾರಾ?’

    • ‘ಅವರು ತುಂಬಾ ಸಮಯದಿಂದ ಸ್ಟಡಿ ತಗೊಳ್ತಿದ್ದಾರಲ್ವಾ, ಆದ್ರೆ ಅವ್ರಿಗೆ ನಿಜವಾಗ್ಲೂ ಯೆಹೋವನ ಸಾಕ್ಷಿ ಆಗೋಕೆ ಆಸೆ ಇದ್ಯಾ?’

  2.  ಬಿ. ಒಂದುವೇಳೆ ನಿಮ್ಮ ಬೈಬಲ್‌ ವಿದ್ಯಾರ್ಥಿ ಪ್ರಗತಿ ಮಾಡ್ತಿಲ್ಲ ಅಂದ್ರೆ ಹೀಗೆ ಮಾಡಿ:

    • ಅವರನ್ನ ಯಾವುದು ತಡೀತಾ ಇದೆ ಅಂತ ಯೋಚ್ನೆ ಮಾಡೋಕೆ ಹೇಳಿ.

    • ನೀವು ಸ್ಟಡಿನಾ ಯಾಕೆ ನಿಲ್ಲಿಸ್ತಾ ಇದ್ದೀರ ಅಂತ ಸಮಾಧಾನವಾಗಿ ವಿವರಿಸಿ.

    • ಅವ್ರಿಗೆ ಮತ್ತೆ ಸ್ಟಡಿ ಮಾಡಬೇಕಂದ್ರೆ ಅವರು ಏನ್‌ ಮಾಡಬೇಕು ಅಂತನೂ ಹೇಳಿ.