ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮತ್ತೆ ಭೇಟಿ ಮಾಡಿ

ಪಾಠ 8

ತಾಳ್ಮೆ

ತಾಳ್ಮೆ

ತತ್ವ: “ಪ್ರೀತಿ ಇರುವವನು ತಾಳ್ಮೆ . . . ತೋರಿಸ್ತಾನೆ.” —1 ಕೊರಿಂ. 13:4.

ಯೇಸು ಏನು ಮಾಡಿದನು?

1. ವಿಡಿಯೋ ನೋಡಿ ಅಥವಾ ಯೋಹಾನ 7:3-5 ಮತ್ತು 1 ಕೊರಿಂಥ 15:3, 4, 7 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1.   ಎ. ಯೇಸು ಹೇಳಿದ ಸಂದೇಶಕ್ಕೆ ಆತನ ತಮ್ಮಂದಿರು ಮೊದಲು ಹೇಗೆ ಪ್ರತಿಕ್ರಿಯಿಸಿದ್ರು?

  2.  ಬಿ. ಯೇಸು ತನ್ನ ತಮ್ಮ ಯಾಕೋಬನಿಗೆ ತಾಳ್ಮೆಯಿಂದ ಸಹಾಯ ಮಾಡಿದನು ಅಂತ ಹೇಗೆ ಗೊತ್ತಾಗುತ್ತೆ?

ನಮಗೇನು ಪಾಠ?

2. ಕೆಲವ್ರಿಗೆ ಬೈಬಲ್‌ ಸತ್ಯನ ಒಪ್ಕೊಳ್ಳೋಕೆ ಸ್ವಲ್ಪ ಜಾಸ್ತಿ ಟೈಮ್‌ ಬೇಕಾಗುತ್ತೆ. ಅದಕ್ಕೆ ನಾವು ತಾಳ್ಮೆ ತೋರಿಸಬೇಕು.

ಯೇಸು ತರ ನೀವೂ ಮಾಡಿ

3. ಬೇರೆ ವಿಧಾನ ಬಳಸಿ. ಒಬ್ಬ ವ್ಯಕ್ತಿ ತಕ್ಷಣ ಬೈಬಲ್‌ ಅಧ್ಯಯನಕ್ಕೆ ಒಪ್ಕೊಂಡಿಲ್ಲ ಅಂದ್ರೆ ಒತ್ತಾಯ ಮಾಡಬೇಡಿ. ಸಾಧ್ಯ ಆದ್ರೆ ವಿಡಿಯೋ ಅಥವಾ ಲೇಖನಗಳನ್ನ ಬಳಸಿ ಬೈಬಲ್‌ ಅಧ್ಯಯನ ಅಂದ್ರೆ ಏನು, ಅದ್ರಿಂದ ಅವರಿಗೇನು ಪ್ರಯೋಜನ ಆಗುತ್ತೆ ಅಂತ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡಿ.

4. ಬೇರೆಯವರ ಜೊತೆ ಹೋಲಿಸಬೇಡಿ. ಎಲ್ಲರೂ ಒಂದೇ ತರ ಇರಲ್ಲ. ನಿಮ್ಮ ಸಂಬಂಧಿಕರು ಅಥವಾ ಬೇರೆ ಯಾರಾದ್ರೂ ಬೈಬಲ್‌ ಅಧ್ಯಯನಕ್ಕೆ ಒಪ್ಪದಿರಬಹುದು ಅಥವಾ ಬೈಬಲಲ್ಲಿರೋ ಯಾವುದಾದ್ರೂ ಒಂದು ವಿಷ್ಯನ ಒಪ್ಕೊಳ್ಳೋಕೆ ಅವ್ರಿಗೆ ಕಷ್ಟ ಆಗ್ತಿರಬಹುದು. ಆಗ ಅವ್ರಿಗೆ ಯಾಕೆ ಹಾಗೆ ಅನಿಸ್ತಿದೆ ಅಂತ ಯೋಚ್ನೆ ಮಾಡಿ. ಅವರ ಧರ್ಮದಲ್ಲಿರೋ ಯಾವುದಾದ್ರೂ ಒಂದು ಆಚಾರ-ವಿಚಾರ ಬಿಡೋಕೆ ಅವ್ರಿಗೆ ಕಷ್ಟ ಆಗ್ತಿರಬಹುದು. ಅವರ ಸಂಬಂಧಿಕರು ಅಥವಾ ಅಕ್ಕಪಕ್ಕದವರು ಏನ್‌ ಅಂದ್ಕೊಳ್ತಾರೋ ಅನ್ನೋ ಭಯ ಇರಬಹುದು. ಹಾಗಾಗಿ ಅವ್ರಿಗೆ ಸ್ವಲ್ಪ ಟೈಮ್‌ ಕೊಡಿ. ಬೈಬಲ್‌ ಕಲಿಯೋದ್ರಿಂದ ಅವ್ರಿಗೆ ಪ್ರಯೋಜನ ಇದೆ ಅಂತ ಅರ್ಥ ಆಗೋ ತನಕ ತಾಳ್ಮೆಯಿಂದ ಕಾಯಿರಿ.

5. ಪ್ರಾರ್ಥನೆ ಮಾಡಿ. ನಿರೀಕ್ಷೆ ಕಳ್ಕೊಳ್ಳದೆ ಇರೋಕೆ ಮತ್ತು ಜಾಣ್ಮೆಯಿಂದ ಮಾತಾಡೋಕೆ ಯೆಹೋವನ ಹತ್ರ ಕೇಳ್ಕೊಳ್ಳಿ. ಒಂದುವೇಳೆ ಆ ವ್ಯಕ್ತಿಗೆ ಅಷ್ಟು ಆಸಕ್ತಿ ಇಲ್ಲ ಅಂತ ನಿಮಗೆ ಅನಿಸಿದ್ರೆ ಅವರನ್ನ ಭೇಟಿ ಮಾಡೋದನ್ನ ಯಾವಾಗ ನಿಲ್ಲಿಸಬೇಕು ಅಂತ ತಿಳ್ಕೊಳ್ಳೋಕೂ ಯೆಹೋವನ ಹತ್ರ ಪ್ರಾರ್ಥನೆ ಮಾಡಿ.—1 ಕೊರಿಂ. 9:26.