ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 5

ನಾವು ಬೈಬಲನ್ನ ನಂಬಬಹುದಾ?

ನಾವು ಬೈಬಲನ್ನ ನಂಬಬಹುದಾ?

ಒಬ್ಬ ವ್ಯಕ್ತಿಯನ್ನು ಭೇಟಿ ಮಾಡುವ ಮೊದಲೇ ಆ ವ್ಯಕ್ತಿ ಸರಿಯಲ್ಲ, ಒಳ್ಳೆಯವರಲ್ಲ ಅನ್ನೋ ತಪ್ಪು ಅಭಿಪ್ರಾಯ ನಿಮಗೆ ಯಾವಾಗಾದರೂ ಬಂದಿದೆಯಾ? ಬೇರೆಯವರು ಆ ವ್ಯಕ್ತಿ ಬಗ್ಗೆ ತಪ್ಪು ಮಾತಾಡುವುದನ್ನು ನೋಡಿ, ಆ ವ್ಯಕ್ತಿನೇ ಸರಿಯಲ್ಲ ಅಂತ ನೀವು ಅಂದ್ಕೊಂಡಿರಬಹುದು. ಆದರೆ ಅವರನ್ನ ಭೇಟಿ ಮಾಡಿದ ಮೇಲೆನೇ ನಿಮಗೆ ಗೊತ್ತಾಗುತ್ತೆ ಆ ವ್ಯಕ್ತಿ ಅಂತವರಲ್ಲ. ಬದಲಿಗೆ, ಅವರ ಬಗ್ಗೆ ಬೇರೆ ಜನ ಸುಳ್ಳನ್ನ ಹಬ್ಬಿಸಿದ್ದಾರೆ ಅಂತ. ಬೈಬಲ್‌ ವಿಷಯದಲ್ಲೂ ಇದೆ ಆಗಿದೆ.

ಜಾಸ್ತಿ ವಿದ್ಯಾಭ್ಯಾಸ ಇರೋ ಕೆಲವು ವ್ಯಕ್ತಿಗಳಿಗೆ ಬೈಬಲ್‌ ಬಗ್ಗೆ ತಪ್ಪು ಅಭಿಪ್ರಾಯ ಇದೆ. ಇದಕ್ಕೆ ಏನು ಕಾರಣ ಇರಬಹುದು? ಕೆಲವರು ಈ ರೀತಿ ಹೇಳುವುದನ್ನು ಕೇಳಿಸಿಕೊಂಡಾಗ ತುಂಬ ಜನರಿಗೆ ಬೈಬಲಲ್ಲಿ ಇರೋದು ಕಟ್ಟು ಕಥೆ, ವಿಜ್ಞಾನಕ್ಕೆ ವಿರುದ್ಧವಾಗಿದೆ ಅಂತ ಅಂದುಕೊಳ್ಳುತ್ತಾರೆ. ಇಂಥವರು ಬೈಬಲನ್ನ ತಪ್ಪಾದ ರೀತಿಯಲ್ಲಿ ತೋರಿಸುತ್ತಿದ್ದಾರಾ?

ನೀವು ಈ ಕಿರುಹೊತ್ತಗೆಯನ್ನ ಓದಿ, ಬೈಬಲ್‌ ವಿಜ್ಞಾನಕ್ಕೆ ವಿರುದ್ಧವಾಗಿಲ್ಲ ಅಂತ ತಿಳಿದುಕೊಂಡಾಗ ಖಂಡಿತ ನಿಮಗೆ ಆಶ್ಚರ್ಯ ಆಗಿರಬಹುದು. ತುಂಬ ಜನರಿಗೆ ನಿಮ್ಮ ತರಾನೇ ಅನಿಸಿದೆ. ಅನೇಕ ಧರ್ಮಗಳು ಬೈಬಲ್‌ ‘ಹೀಗೆ ಹೇಳುತ್ತೆ ಹಾಗೆ ಹೇಳುತ್ತೆ’ ಅಂಥ ಕಲಿಸುತ್ತಾರೆ. ಆದರೆ ಬೈಬಲ್‌ನಲ್ಲಿ ನಿಜವಾಗಲೂ ಏನಿದೆ ಅಂತ ಜನರು ತಿಳಿದುಕೊಂಡಾಗ ಅವರಿಗೆ ಆಶ್ಚರ್ಯ ಆಗುತ್ತೆ. ಉದಾಹರಣೆಗೆ, ದೇವರು ಇಡೀ ವಿಶ್ವವನ್ನ 24 ಗಂಟೆಗಳು ಇರುವ 6 ದಿನದಲ್ಲಿ ಮಾಡಿದರು ಅಂತ ಕೆಲವರು ಹೇಳುತ್ತಾರೆ. ಈ ವಿಶ್ವ ಇಷ್ಟೇ ಸಮಯದಲ್ಲಿ ಆಯಿತು ಅಂತ ವಿಜ್ಞಾನಿಗಳು ಊಹಿಸಿಕೊಳ್ಳೋದನ್ನ ತಪ್ಪು ಅಂತ ಬೈಬಲ್‌ ಹೇಳುವುದಿಲ್ಲ. a

ಭೂಮಿ ಮೇಲೆ ದೇವರು ಜೀವಿಗಳನ್ನ ಹೇಗೆ ಸೃಷ್ಟಿ ಮಾಡಿದರು ಅನ್ನೋದರ ಬಗ್ಗೆ ಬೈಬಲ್‌ ಕೊಡುವ ಸ್ವಲ್ಪ ಮಾಹಿತಿಯಿಂದಾನೇ ಇಂದು ವಿಜ್ಞಾನಿಗಳು, ಸಂಶೋಧನೆ ಮಾಡುವುದಕ್ಕೆ ಮತ್ತು ಅದರ ಪ್ರಕಾರ ಸಿದ್ಧಾಂತಗಳನ್ನ ಮಾಡುವುದಕ್ಕೆ ಆಗಿದೆ. ದೇವರು ಎಲ್ಲ ಪ್ರಾಣಿಗಳನ್ನ ‘ಅದರದರ ಜಾತಿಗನುಸಾರ’ ಸೃಷ್ಟಿ ಮಾಡಿದರು ಅಂತ ಬೈಬಲ್‌ ಹೇಳುತ್ತೆ. (ಆದಿಕಾಂಡ 1:11, 21, 24) ಸೃಷ್ಟಿಯ ಬಗ್ಗೆ ಬೈಬಲಲ್ಲಿರುವ ಈ ಮಾತುಗಳು ವಿಜ್ಞಾನ ಯಾವುದು ಸತ್ಯ ಅಂತ ತೋರಿಸುತ್ತೋ ಅದಕ್ಕೆ ಹೊಂದಿಕೆಯಲ್ಲಿ ಇದೆ. ಆದರೆ ಅದರ ಸಿದ್ಧಾಂತಕ್ಕೆ ಹೊಂದಿಕೆಯಲ್ಲಿಲ್ಲ. ಎಷ್ಟೋ ವರ್ಷಗಳಿಂದ ವಿಜ್ಞಾನಿಗಳು ಹೊಸ ಸಿದ್ಧಾಂತಗಳನ್ನ ಮಾಡುತ್ತಾರೆ, ಸ್ವಲ್ಪ ದಿನ ಆದ ಮೇಲೆ ಅವನ್ನ ತಳ್ಳಿಹಾಕುತ್ತಾರೆ, ಆದರೆ ಸತ್ಯಾಂಶ ಮಾತ್ರ ಯಾವತ್ತೂ ಬದಲಾಗಲ್ಲ.

ಧರ್ಮಗಳಲ್ಲಿ ನಡೆಯುತ್ತಿರುವ ಹಿಂಸೆ, ಭ್ರಷ್ಟಾಚಾರ, ಕಪಟತನ ಇದನೆಲ್ಲಾ ನೋಡಿ ಅನೇಕ ಜನರು ಬೈಬಲ್‌ ಕಲಿಯುವುದಕ್ಕೆ ಮುಂದೆ ಬರಲ್ಲ. ತುಂಬ ಜನ ‘ನಾನು ಬೈಬಲ್‌ ಪ್ರಕಾರನೇ ನಡಿತೀನಿ’ ಅಂತ ಹೇಳುತ್ತಾರೆ. ಆದರೆ ಅವರು ಅದಕ್ಕೆ ವಿರುದ್ಧವಾಗಿರೋ ಕೆಲಸ ಮಾಡಿದಾಗ, ಬೈಬಲ್‌ ಸರಿಯಲ್ಲ ಅಂತ ಹೇಳಕ್ಕಾಗುತ್ತಾ? ಕೆಲವು ಜನರು, ವಿಕಾಸದ ಸಿದ್ಧಾಂತಗಳನ್ನ ಬಳಸಿಕೊಂಡು ಬೇರೆಲ್ಲ ಜಾತಿಗಿಂತ ತಮ್ಮ ಜಾತಿನೇ ಶ್ರೇಷ್ಠ ಅಂತ ರುಜುಪಡಿಸೋಕೆ ಪ್ರಯತ್ನಿಸುತ್ತಾರೆ. ಇದನ್ನು ನೋಡಿ ಕೆಲವು ಜನರಿಗೆ ಮತ್ತು ವಿಜ್ಞಾನಿಗಳಿಗೆ ಶಾಕ್‌ ಆಗಿದೆ. ಈ ಆಧಾರದ ಮೇಲೆ ವಿಕಾಸವಾದದ ಸಿದ್ಧಾಂತ ಸುಳ್ಳು ಅಂತ ಹೇಳೋದು ಸರಿನಾ? ಈ ಸಿದ್ಧಾಂತಗಳ ಕುರಿತು ಸಂಶೋಧನೆ ಮಾಡಿ ನಮ್ಮ ಹತ್ತಿರ ಈಗಾಗಲೇ ಇರುವ ಆಧಾರಗಳ ಜೊತೆಗೆ ಹೋಲಿಕೆ ಮಾಡಿ ನೋಡುವುದು ಒಳ್ಳೇದು.

ಬೈಬಲ್‌ ವಿಷಯದಲ್ಲೂ ಇದನ್ನೇ ಮಾಡಿ ನೋಡಿ. ಬೈಬಲ್‌ ಕಲಿಸುವಂಥ ವಿಷಯಗಳು ಧಾರ್ಮಿಕ ಸಂಘಟನೆಗಳು ಕಲಿಸೋ ವಿಷಯಗಳಿಗಿಂತ ತುಂಬ ಭಿನ್ನವಾಗಿದೆ ಅಂತ ನೀವು ತಿಳಿದುಕೊಂಡಾಗ ನಿಮಗೆ ಆಶ್ಚರ್ಯನೂ ಆಗುತ್ತೆ ತುಂಬ ಖುಷಿನೂ ಆಗುತ್ತೆ. ಯುದ್ಧ, ಹಿಂಸೆ, ಜಾತಿಯ ಬಗ್ಗೆ ಮಾಡುವ ಜಗಳಗಳು ಇಂಥ ಯಾವ ವಿಷಯಗಳಲ್ಲೂ ನಾವು ಭಾಗವಹಿಸಬಾರದು ಅಂತ ಬೈಬಲ್‌ ಹೇಳುತ್ತೆ. ಅದರಲ್ಲೂ ಒಬ್ಬರನ್ನ ದ್ವೇಷಿಸೋದು ತಪ್ಪು ಅಂತ ಅದರಲ್ಲಿ ಇದೆ. (ಯೆಶಾಯ 2:2-4; ಮತ್ತಾಯ 5:43, 44; 26:52) ಎಲ್ಲವನ್ನೂ ಕಣ್ಣು ಮುಚ್ಚಿ ನಂಬಿ ಅಂತ ಬೈಬಲ್‌ ಹೇಳುತ್ತಿಲ್ಲ. ಬದಲಿಗೆ, ನಿಜ ಆಧಾರಗಳ ಮೇಲೆ ನಿಮ್ಮ ನಂಬಿಕೆಯನ್ನ ಬೆಳೆಸಿಕೊಳ್ಳಿ ಮತ್ತು ಯೋಚನಾ ಸಾಮರ್ಥ್ಯ ಉಪಯೋಗಿಸಿ ದೇವರ ಸೇವೆ ಮಾಡಿ ಅಂತ ಬೈಬಲ್‌ನಲ್ಲಿದೆ. (ರೋಮನ್ನರಿಗೆ 12:1; ಇಬ್ರಿಯ 11:1) ನಿಮಗೆ ಬರುವ ಯಾವುದೇ ಪ್ರಶ್ನೆಯನ್ನ ಮನಸ್ಸಲ್ಲಿ ಇಟ್ಟುಕೊಳ್ಳುವ ಬದಲು ಅದರ ಬಗ್ಗೆ ಸಂಶೋಧನೆ ಮಾಡಿ, ಉತ್ತರ ತಿಳಿದುಕೊಳ್ಳಿ ಅಂತ ಬೈಬಲ್‌ ನಮ್ಮನ್ನ ಪ್ರೋತ್ಸಾಹಿಸುತ್ತೆ.

ಉದಾಹರಣೆಗೆ, ಒಂದುವೇಳೆ ದೇವರು ಇರುವುದಾದರೆ ಕೆಟ್ಟ ಕೆಲಸಗಳನ್ನ ನಡೆಯುವಂತೆ ಯಾಕೆ ಬಿಟ್ಟಿದ್ದಾನೆ? ಈ ಪ್ರಶ್ನೆಗೆ ಅಥವಾ ನಿಮಗೆ ಬರುವ ಯಾವುದೇ ಪ್ರಶ್ನೆಗೆ ಬೈಬಲ್‌ ತೃಪ್ತಿಕರವಾದ ಉತ್ತರವನ್ನ ಕೊಡುತ್ತೆ. b ಬೈಬಲ್‌ನಿಂದ ಉತ್ತರ ತಿಳಿದುಕೊಳ್ಳೋಕೆ ಪ್ರಯತ್ನ ಮಾಡುತ್ತಾ ಇರಿ ಅಂತ ನಾವು ನಿಮ್ಮನ್ನ ಪ್ರೋತ್ಸಾಹಿಸುತ್ತೇವೆ. ಆಗ ನಿಮಗೆ ಆಸಕ್ತಿಕರವಾದ, ತೃಪ್ತಿಕರವಾದ ಮತ್ತು ಮನಮುಟ್ಟುವ ಉತ್ತರಗಳು ಖಂಡಿತ ಸಿಗುತ್ತೆ. ಬೈಬಲ್‌ ನಿಜವಾಗಲೂ ಒಂದು ಅದ್ಭುತಕರವಾದ ಪುಸ್ತಕವಾಗಿದೆ, ಇದರಲ್ಲಿ ಸಂಶಯವೇ ಇಲ್ಲ!

a ಹೆಚ್ಚಿನ ಮಾಹಿತಿಗಾಗಿ ವಾಸ್‌ ಲೈಫ್‌ ಕ್ರೀಯೆಟೆಡ್‌? (ಇಂಗ್ಲಿಷ್‌) ಅನ್ನೋ ಕಿರುಹೊತ್ತಗೆಯನ್ನ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

b ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಅನ್ನೋ ಪುಸ್ತಕದ 11ನೇ ಅಧ್ಯಾಯ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.