ಕ್ರೈಸ್ತಪ್ರಪಂಚವು ದೇವರಿಗೂ ಬೈಬಲಿಗೂ ದ್ರೋಹ ಮಾಡಿದೆ
ಭಾಗ 4
ಕ್ರೈಸ್ತಪ್ರಪಂಚವು ದೇವರಿಗೂ ಬೈಬಲಿಗೂ ದ್ರೋಹ ಮಾಡಿದೆ
1, 2. ಕೆಲವು ಜನರಲ್ಲಿ ಬೈಬಲಿಗಾಗಿ ಗೌರವದ ಕೊರತೆಯಿರುವುದೇಕೆ, ಆದರೆ ಬೈಬಲು ಏನು ಹೇಳುತ್ತದೆ?
1 ಅನೇಕ ದೇಶಗಳಲ್ಲಿ ಜನರು, ಬೈಬಲನ್ನು ಅನುಸರಿಸುತ್ತೇವೆಂದು ವಾದಿಸುವವರ ದುರ್ನಡತೆಯ ಕಾರಣ ಅದನ್ನು ತ್ಯಜಿಸಿದ್ದಾರೆ ಮತ್ತು ಅದಕ್ಕೆ ಗೌರವದ ಕೊರತೆಯುಳ್ಳವರಾಗಿದ್ದಾರೆ. ಕೆಲವು ದೇಶಗಳಲ್ಲಿ, ಬೈಬಲು ಯುದ್ಧಕ್ಕೆ ನಡೆಸುವ ಗ್ರಂಥ, ಅದು ಬಿಳಿ ಜನರ ಗ್ರಂಥ ಮತ್ತು ಅದು ವಸಾಹತು ನೀತಿಯನ್ನು ಸಮರ್ಥಿಸುವ ಗ್ರಂಥವೆಂದು ಹೇಳಲಾಗಿದೆ. ಆದರೆ ಅವು ತಪ್ಪಭಿಪ್ರಾಯದ ವೀಕ್ಷಣಗಳು.
2 ಮಧ್ಯ ಪೂರ್ವದಲ್ಲಿ ಬರೆಯಲ್ಪಟ್ಟ ಬೈಬಲು, ಇಷ್ಟು ದೀರ್ಘ ಕಾಲದ ವರೆಗೆ ಕ್ರೈಸ್ತತ್ವದ ಹೆಸರಿನಲ್ಲಿ ಹೂಡಲ್ಪಟ್ಟ ವಸಾಹತು ನೀತಿಯ ಯುದ್ಧಗಳನ್ನಾಗಲಿ ದುರಾಶೆಯ ಶೋಷಣೆಯನ್ನಾಗಲಿ ಬೆಂಬಲಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಬೈಬಲನ್ನು ಓದುವುದರ ಮತ್ತು ಯೇಸು ಕಲಿಸಿದ ಸತ್ಯ ಕ್ರೈಸ್ತತ್ವದ ಬೋಧನೆಗಳನ್ನು ಕಲಿಯುವುದರ ಮೂಲಕ, ಬೈಬಲು ಯುದ್ಧ ಮಾಡುವುದನ್ನು, ಅನೈತಿಕಾಚಾರವನ್ನು, ಮತ್ತು ಇತರರನ್ನು ಶೋಷಿಸುವುದನ್ನು ಬಲವಾಗಿ ಖಂಡಿಸುತ್ತದೆಂದು ನೀವು ನೋಡುವಿರಿ. ದೋಷವಿರುವುದು ಲೋಭಿಗಳಾದ ಜನರಲ್ಲಿ, ಬೈಬಲಿನಲ್ಲಿ ಅಲ್ಲ. (1 ಕೊರಿಂಥ 13:1-6; ಯಾಕೋಬ 4:1-3; 5:1-6; 1 ಯೋಹಾನ 4:7, 8) ಆದುದರಿಂದ, ಬೈಬಲಿನ ಸುಸಲಹೆಗೆ ವ್ಯತಿರಿಕ್ತವಾಗಿ ಜೀವಿಸುವ ಸ್ವಾರ್ಥಿಗಳಾದ ಜನರ ಅಯೋಗ್ಯ ವರ್ತನೆ, ಬೈಬಲಿನ ನಿಕ್ಷೇಪಗಳಿಂದ ನೀವು ಪ್ರಯೋಜನ ಪಡೆಯುವುದನ್ನು ತಡೆಯುವಂತೆ ಬಿಡಬೇಡಿರಿ.
3. ಕ್ರೈಸ್ತಪ್ರಪಂಚದ ಕುರಿತು ಐತಿಹಾಸಿಕ ನಿಜತ್ವಗಳು ಏನು ತೋರಿಸುತ್ತವೆ?
3 ಬೈಬಲಿಗೆ ಹೊಂದಿಕೆಯಾಗಿ ಜೀವಿಸದೆ ಇರುವವರಲ್ಲಿ ಕ್ರೈಸ್ತಪ್ರಪಂಚದ ಜನರೂ ರಾಷ್ಟ್ರಗಳೂ ಸೇರಿವೆ. “ಕ್ರೈಸ್ತಪ್ರಪಂಚ” ವನ್ನು, ಎಲ್ಲಿ ಕ್ರೈಸ್ತತ್ವವು ಪ್ರಬಲವಾಗಿದೆಯೋ ಲೋಕದ ಆ ಭಾಗವೆಂಬುದಾಗಿ
ನಿರೂಪಿಸಲಾಗಿದೆ. ಇದು ಅಧಿಕಾಂಶವಾಗಿ, ಯಾವುದು ಸುಮಾರು ಸಾ.ಶ. ನಾಲ್ಕನೆಯ ಶತಮಾನದಿಂದ ಹಿಡಿದು ಪ್ರಖ್ಯಾತಿ ಪಡೆಯಿತೋ ಆ ಚರ್ಚ್ ಪದ್ಧತಿಗಳಿರುವ ಪಾಶ್ಚಾತ್ಯ ಲೋಕವಾಗಿದೆ. ಕ್ರೈಸ್ತಪ್ರಪಂಚದಲ್ಲಿ ಬೈಬಲು ಶತಮಾನಗಳಿಂದಲೂ ಇತ್ತು, ಮತ್ತು ಅದರ ಪುರೋಹಿತ ವರ್ಗದವರು ಅದನ್ನು ತಾವು ಕಲಿಸುತ್ತೇವೆಂದೂ, ತಾವು ದೇವರ ಪ್ರತಿನಿಧಿಗಳೆಂದೂ ಹೇಳಿಕೊಳ್ಳುತ್ತಾರೆ. ಆದರೆ ಕ್ರೈಸ್ತಪ್ರಪಂಚದ ಪುರೋಹಿತರೂ ಮಿಷನೆರಿಗಳೂ ಸತ್ಯವನ್ನು ಕಲಿಸುತ್ತಾರೊ? ಅವರ ವರ್ತನೆಗಳು ದೇವರನ್ನೂ ಬೈಬಲನ್ನೂ ನಿಜವಾಗಿಯೂ ಪ್ರತಿನಿಧೀಕರಿಸುತ್ತವೆಯೆ? ಕ್ರೈಸ್ತತ್ವವು ಕ್ರೈಸ್ತಪ್ರಪಂಚದಲ್ಲಿ ನಿಜವಾಗಿಯೂ ಅಸ್ತಿತ್ವದಲ್ಲಿದೆಯೆ? ಇಲ್ಲ. ಅದರ ಧರ್ಮವು ನಾಲ್ಕನೆಯ ಶತಮಾನದಲ್ಲಿ ಅಗ್ರ ಭಾಗಕ್ಕೆ ಬಂದಾಗಿನಿಂದ, ಕ್ರೈಸ್ತಪ್ರಪಂಚವು ದೇವರ ಮತ್ತು ಬೈಬಲಿನ ಶತ್ರುವಾಗಿ ಪರಿಣಮಿಸಿದೆ. ಹೌದು, ಕ್ರೈಸ್ತಪ್ರಪಂಚವು ದೇವರಿಗೂ ಬೈಬಲಿಗೂ ದ್ರೋಹ ಮಾಡಿದೆಯೆಂದು ಇತಿಹಾಸದ ನಿಜತ್ವಗಳು ತೋರಿಸುತ್ತವೆ.ಬೈಬಲಿನಲ್ಲಿಲ್ಲದ ಬೋಧನೆಗಳು
4, 5. ಬೈಬಲಿನಲ್ಲಿಲ್ಲದ ಯಾವ ಬೋಧನೆಗಳು ಚರ್ಚ್‌ಗಳಿಂದ ಕಲಿಸಲ್ಪಡುತ್ತವೆ?
4 ಕ್ರೈಸ್ತಪ್ರಪಂಚದ ಮೂಲ ಬೋಧನೆಗಳು ಬೈಬಲಿನಲ್ಲಲ್ಲ, ಗ್ರೀಸ್, ಈಜಿಪ್ಟ್, ಬ್ಯಾಬಿಲೋನ್, ಮತ್ತು ಇತರ ದೇಶಗಳ ಪುರಾತನ ಮಿಥ್ಯೆಗಳಲ್ಲಿ ಆಧಾರಗೊಂಡಿವೆ. ಮಾನವಾತ್ಮದ ಅಂತರ್ಗತ ಅಮರತ್ವ, ನರಕಾಗ್ನಿಯಲ್ಲಿ ನಿತ್ಯ ಯಾತನೆ, ಪರ್ಗೆಟರಿ, ಮತ್ತು ತ್ರಯೈಕ್ಯ (ಒಂದು ದೇವತ್ವದಲ್ಲಿ ಮೂರು ವ್ಯಕ್ತಿಗಳು)—ಇಂತಹ ಬೋಧನೆಗಳು ಬೈಬಲಿನಲ್ಲಿ ಕಂಡುಬರುವುದಿಲ್ಲ.
5 ಉದಾಹರಣೆಗೆ, ಕೆಟ್ಟ ಜನರು ಒಂದು ಅಗ್ನಿಮಯ ನರಕದಲ್ಲಿ ಸದಾ ಯಾತನೆಗೊಳಗಾಗುವರು ಎಂಬ ಬೋಧನೆಯನ್ನು ಪರಿಗಣಿಸಿರಿ. ಈ ವಿಚಾರವು ನಿಮಗೆ ಹೇಗೆನಿಸುತ್ತದೆ? ಅನೇಕರಿಗೆ ಇದು ಹೇವರಿಕೆಯದ್ದಾಗಿ ಕಂಡುಬರುತ್ತದೆ. ದೇವರು ಮನುಷ್ಯರಿಗೆ ಸದಾಕಾಲಕ್ಕೂ ಚಿತ್ರಹಿಂಸೆ ಕೊಡುವನು, ಅವರನ್ನು ಅತ್ಯಂತ ನೋವಿನಲ್ಲಿ ಇಡುವನು ಎಂಬುದು ಅವರಿಗೆ ಅಸಮಂಜಸವಾಗಿ ಕಂಡುಬರುತ್ತದೆ. ಇಂಥ ಒಂದು ಅಮಾನುಷ ವಿಚಾರವು ಬೈಬಲಿನ ದೇವರಿಗೆ ವಿರುದ್ಧವಾಗಿದೆ, ಏಕೆಂದರೆ, “ದೇವರು ಪ್ರೀತಿಸ್ವರೂಪಿಯು.” (1 ಯೋಹಾನ 4:8) ಇಂಥ ಒಂದು ಬೋಧನೆಯು, ಸರ್ವಶಕ್ತನಾದ ದೇವರ ‘ಮನಸ್ಸಿನಲ್ಲಿಯೂ ಹುಟ್ಟಲ್ಲಿಲ’ ಎಂಬುದು ಬೈಬಲಿನಲ್ಲಿ ಸ್ಪಷ್ಟವಾಗಿದೆ.—ಯೆರೆಮೀಯ 7:31; 19:5; 32:35.
6. ಅಮರವಾದ ಆತ್ಮದ ಬೋಧನೆಯನ್ನು ಬೈಬಲು ಹೇಗೆ ತಪ್ಪೆಂದು ತೋರಿಸುತ್ತದೆ?
6 ಇಂದು ಅನೇಕ ಧರ್ಮಗಳು—ಕ್ರೈಸ್ತಪ್ರಪಂಚದ ಚರ್ಚುಗಳು ಸೇರಿ—ಮಾನವರಲ್ಲಿ ಒಂದು ಅಮರವಾದ ಆತ್ಮವಿದೆಯೆಂದೂ ಅದು ಮರಣದಲ್ಲಿ ಸ್ವರ್ಗಕ್ಕೋ ನರಕಕ್ಕೋ ಹೋಗುತ್ತದೆಂದೂ ಕಲಿಸುತ್ತವೆ. ಇದು ಬೈಬಲಿನ ಒಂದು ಬೋಧನೆಯಲ್ಲ. ಇದಕ್ಕೆ ಬದಲಾಗಿ, ಬೈಬಲ್ ಸ್ಪಷ್ಟವಾಗಿ ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ನೀನು ಸೇರಬೇಕಾದ ಪಾತಾಳ [ಶಿಯೋಲ್, NW, ಸಮಾಧಿ] ದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” (ಪ್ರಸಂಗಿ 9:5, 10) ಮತ್ತು ಮರಣದಲ್ಲಿ ಮನುಷ್ಯನು “ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು” ಎಂದು ಕೀರ್ತನೆಗಾರನು ಹೇಳುತ್ತಾನೆ.—ಕೀರ್ತನೆ 146:4.
7. ದೇವರ ನಿಯಮವನ್ನು ಮುರಿದುದಕ್ಕೆ ಆದಾಮನಿಗೂ ಹವ್ವಳಿಗೂ ಶಿಕ್ಷೆ ಏನಾಗಿತ್ತು?
7 ಆದಾಮ ಮತ್ತು ಹವ್ವ ದೇವರ ನಿಯಮವನ್ನು ಮುರಿದಾಗ, ದೊರೆತ ಶಿಕ್ಷೆ ಅಮರತ್ವವಾಗಿರಲಿಲ್ಲವೆಂಬುದನ್ನೂ ಜ್ಞಾಪಿಸಿಕೊಳ್ಳಿರಿ. ಅದೊಂದು ಕೊಡುಗೆಯಾಗುತ್ತಿತ್ತು, ಶಿಕ್ಷೆಯಾಗುತ್ತಿರಲ್ಲಿಲ! ಇದಕ್ಕೆ ಆದಿಕಾಂಡ 3:19) ಹೀಗೆ, ಆತ್ಮದ ಅಂತರ್ಗತ ಅಮರತ್ವವು ಬೈಬಲಿನಲ್ಲಿಲ್ಲ, ಬದಲಿಗೆ ತಮಗಿಂತ ಮೊದಲಾಗಿ ಜೀವಿಸಿದ್ದ ಕ್ರೈಸ್ತ್ಯೇತರರಿಂದ ಕ್ರೈಸ್ತಪ್ರಪಂಚವು ಎರವು ತೆಗೆದುಕೊಂಡ ಸಂಗತಿಯಾಗಿದೆ.
ಬದಲಾಗಿ, “ಮಣ್ಣಿನಿಂದ ತೆಗೆಯಲ್ಪಟ್ಟವರಲ್ಲವೋ; ತಿರಿಗಿ ಮಣ್ಣಿಗೆ ಸೇರುತ್ತೀರಿ,” ಎಂದು ಅವರಿಗೆ ಹೇಳಲಾಯಿತು. ದೇವರು ಆದಾಮನಿಗೆ ಒತ್ತಿ ಹೇಳಿದ್ದು: “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” (8. ಕ್ರೈಸ್ತಪ್ರಪಂಚದ ತ್ರಯೈಕ್ಯ ಬೋಧನೆಯನ್ನು ಬೈಬಲು ಹೇಗೆ ತಪ್ಪೆಂದು ತೋರಿಸುತ್ತದೆ?
8 ಅಲ್ಲದೆ, ಕ್ರೈಸ್ತಪ್ರಪಂಚದ ತ್ರಯೈಕ್ಯ ಬೋಧನೆಯು ದೇವರನ್ನು, ಆತನು ಯಾರೋ ಒಬ್ಬ ರಹಸ್ಯಗರ್ಭಿತ ತ್ರಿತ್ವ ದೇವರು ಎಂದು ಚಿತ್ರಿಸುತ್ತದೆ. ಆದರೆ ಆ ಬೋಧನೆಯೂ ಬೈಬಲಿನಲ್ಲಿ ಕಂಡುಬರುವುದಿಲ್ಲ. ಉದಾಹರಣೆಗೆ, ಯೆಶಾಯ 40:25 ರಲ್ಲಿ ದೇವರು ಸ್ಪಷ್ಟವಾಗಿ ಹೇಳುವುದು: “ನನ್ನನ್ನು ಯಾರಿಗೆ ಹೋಲಿಸಿ ಸರಿಸಮಾನ ಮಾಡುತ್ತೀರಿ” ಇದಕ್ಕೆ ಉತ್ತರವು ವ್ಯಕ್ತ: ಯಾವನೂ ಆತನಿಗೆ ಸಮಾನನಾಗಸಾಧ್ಯವಿಲ್ಲ. ಅಲ್ಲದೆ, ಕೀರ್ತನೆ 83:18 ಸರಳವಾಗಿ ಹೇಳುವುದು: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲೆಲ್ಲಾ ಸರ್ವೂನ್ನತನೆಂದು ಗ್ರಹಿಸುವರು.”—ಇವನ್ನೂ ನೋಡಿರಿ, ಯೆಶಾಯ 45:5; 46:9; ಯೋಹಾನ 5:19; 6:38; 7:16.
9. ಬೈಬಲಿನ ಬೋಧನೆಗಳ ಮತ್ತು ಕ್ರೈಸ್ತಪ್ರಪಂಚದ ಚರ್ಚುಗಳ ಬೋಧನೆಗಳ ಕುರಿತು ನಾವೇನು ಹೇಳಸಾಧ್ಯವಿದೆ?
9 ದೇವರ ಮತ್ತು ಆತನ ಉದ್ದೇಶಗಳ ಕುರಿತ ಬೈಬಲಿನ ಬೋಧನೆಗಳು ಸ್ಪಷ್ಟವೂ ಸುಲಭಗ್ರಾಹ್ಯವೂ ನ್ಯಾಯಸಮ್ಮತವೂ ಆಗಿವೆ. ಆದರೆ ಕ್ರೈಸ್ತಪ್ರಪಂಚದ ಚರ್ಚ್‌ಗಳ ಬೋಧನೆಗಳು ಹಾಗಲ್ಲ. ಇನ್ನೂ ಕೀಳಾದ ವಿಷಯವೇನಂದರೆ, ಅವು ಬೈಬಲಿಗೆ ವಿರುದ್ಧವಾಗಿವೆ.
ದೇವಭಕ್ತಿಯಿಲ್ಲದ ಕ್ರಿಯೆಗಳು
10, 11. ಬೈಬಲಿನ ಬೋಧನೆಗಳು ಕ್ರೈಸ್ತಪ್ರಪಂಚದ ಚರ್ಚ್‌ಗಳದ್ದಕ್ಕೆ ಯಾವ ರೀತಿಗಳಲ್ಲಿ ಎದುರುಬದುರಾಗಿವೆ?
10 ಸುಳ್ಳು ಬೋಧನೆಗಳನ್ನು ಕಲಿಸಿರುವುದಲ್ಲದೆ, ಕ್ರೈಸ್ತಪ್ರಪಂಚವೆಂಬಾಕೆ ಅವಳ ಕ್ರಿಯೆಗಳ ಮೂಲಕ ದೇವರಿಗೂ ಬೈಬಲಿಗೂ ದ್ರೋಹವೆಸಗಿದ್ದಾಳೆ. ಪುರೋಹಿತ ವರ್ಗವೂ ಚರ್ಚ್‌ಗಳೂ ಗತ ಶತಮಾನಗಳಲ್ಲಿ ಮಾಡಿರುವ, ಮತ್ತು ನಮ್ಮ ದಿನಗಳಲ್ಲಿಯೂ ಮಾಡುತ್ತಾ ಮುಂದುವರಿಸಿರುವ ವಿಷಯಗಳು, ಬೈಬಲಿನ ದೇವರು ಕೇಳಿಕೊಳ್ಳುವುದಕ್ಕೆ ವಿರುದ್ಧವಾಗಿವೆ ಮತ್ತು ಕ್ರೈಸ್ತತ್ವದ ಸ್ಥಾಪಕನಾದ ಯೇಸು ಕ್ರಿಸ್ತನು ಕಲಿಸಿ, ಮಾಡಿದುದಕ್ಕೆ ವಿರುದ್ಧವಾಗಿವೆ.
11 ದೃಷ್ಟಾಂತಕ್ಕೆ, ಈ ಲೋಕದ ರಾಜಕೀಯ ವಿಚಾರಗಳಲ್ಲಿ ತಲೆಹಾಕಬಾರದೆಂದೂ ಅದರ ಯುದ್ಧಗಳಲ್ಲಿ ಸಿಕ್ಕಿಕೊಳ್ಳಬಾರದೆಂದೂ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. ಅವರು ಶಾಂತಿಪ್ರಿಯರಾಗಿರಬೇಕು, ನಿಯಮಬದ್ಧರಾಗಿರಬೇಕು, ತಮ್ಮ ಜೊತೆ ಮಾನವರನ್ನು ಯಾವ ಅವಿಚಾರಾಭಿಪ್ರಾಯವೂ ಇಲ್ಲದೆಪ್ರೀತಿಸಬೇಕು, ಇತರರ ಜೀವವನ್ನು ತೆಗೆಯುವ ಬದಲಿಗೆ ತಮ್ಮ ಸ್ವಂತ ಜೀವಗಳನ್ನೇ ತ್ಯಾಗ ಮಾಡಲು ಸಿದ್ಧರಾಗಿರಬೇಕೆಂದು ಅವನು ಅವರಿಗೆ ಕಲಿಸಿದನು.—ಯೋಹಾನ 15:13; ಅ. ಕೃತ್ಯಗಳು 10:34, 35; 1 ಯೋಹಾನ 4:20, 21.
12. ಸತ್ಯ ಕ್ರೈಸ್ತರನ್ನು ಏನು ಗುರುತಿಸುವುದೆಂದು ಯೇಸು ನುಡಿದನು?
12 ಇತರ ಮಾನವರಿಗಾಗಿರುವ ಪ್ರೀತಿಯು ನಿಜ ಕ್ರೈಸ್ತರನ್ನು ಸುಳ್ಳು ಕ್ರೈಸ್ತರಿಂದ, ಸುಳ್ಳು ಹಕ್ಕುದಾರರಿಂದ ಗುರುತಿಸುವ ಗುರುತಾಗಿರುವುದೆಂದು ಯೇಸು ಕಲಿಸಿದನೆಂಬುದು ಸತ್ಯ. ತನ್ನನ್ನು ಹಿಂಬಾಲಿಸುವವರಿಗೆ ಅವನಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:34, 35; 15:12.
13, 14. ಕ್ರೈಸ್ತಪ್ರಪಂಚದ ಚರ್ಚ್‌ಗಳು ದೇವರನ್ನು ಪ್ರತಿನಿಧೀಕರಿಸುವುದಿಲ್ಲವೆಂದು ಯಾವುದು ತೋರಿಸುತ್ತದೆ?
1 ಯೋಹಾನ 3:10-12, 15) ಹೀಗೆ, ವೈದಿಕರೂ ಅವರ ಹಿಂಬಾಲಕರೂ ತಾವು ಕ್ರೈಸ್ತರೆಂದು ಹೇಳಿರುವುದಾದರೂ, ‘ನಿನ್ನ ಕತ್ತಿಯನ್ನು ಒರೆಯಲ್ಲಿ ಸೇರಿಸು’ ಎಂದು ತನ್ನ ಹಿಂಬಾಲಕರಿಗೆ ಹೇಳಿದ ಯೇಸು ಕ್ರಿಸ್ತನ ಬೋಧನೆಗಳಿಗೆ ಅವರು ವಿರುದ್ಧವಾಗಿ ವರ್ತಿಸಿದ್ದಾರೆ.—ಮತ್ತಾಯ 26:51, 52.
13 ಆದರೂ, ಶತಮಾನ ಶತಮಾನಗಳಲ್ಲಿ, ಕ್ರೈಸ್ತಪ್ರಪಂಚದ ವೈದಿಕರು ರಾಜಕಾರಣದಲ್ಲಿ ತಲೆಹಾಕಿ ತಮ್ಮ ರಾಷ್ಟ್ರಗಳ ಯುದ್ಧಗಳನ್ನು ಬೆಂಬಲಿಸಿದ್ದಾರೆ. ಅವರು ಈ ಶತಮಾನದ ಎರಡು ಲೋಕ ಯುದ್ಧಗಳಂತಹ ಕ್ರೈಸ್ತಪ್ರಪಂಚದೊಳಗಿನ ಯುದ್ಧಗಳಲ್ಲೇ ವಿರೋಧಿಸುವ ಪಕ್ಷಗಳನ್ನೂ ಬೆಂಬಲಿಸಿದ್ದಾರೆ. ಆ ಹೋರಾಟಗಳಲ್ಲಿ ಪ್ರತಿಯೊಂದು ಪಕ್ಷದ ವೈದಿಕರು ವಿಜಯಕ್ಕಾಗಿ ಪ್ರಾರ್ಥಿಸಿದರು, ಮತ್ತು ಒಂದು ದೇಶದ ಒಂದು ಧರ್ಮದ ಸದಸ್ಯರು ಅದೇ ಧರ್ಮದ ಇನ್ನೊಂದು ದೇಶದ ಸದಸ್ಯರನ್ನು ಕೊಲ್ಲುತ್ತಿದ್ದರು. ಆದರೆ ಸೈತಾನನ ಮಕ್ಕಳು—ದೇವರದ್ದಲ್ಲ—ವರ್ತಿಸುವ ವಿಧವದು ಎಂದು ಬೈಬಲು ಹೇಳುತ್ತದೆ. (14 ಶತಮಾನಗಳಿಂದ ಚರ್ಚ್‌ಗಳು, ಕ್ರೈಸ್ತಪ್ರಪಂಚದ ರಾಜಕೀಯ ಶಕ್ತಿಗಳೊಂದಿಗೆ, ಆ ರಾಷ್ಟ್ರಗಳು ಸಾಮ್ರಾಜ್ಯಶಾಹಿ ಯುಗದಲ್ಲಿ ಇತರ ಜನರನ್ನು ಜಯಿಸಿ, ಗುಲಾಮರನ್ನಾಗಿ ಮಾಡಿ, ಅಪಮಾನ ಮಾಡಿದಾಗ ಅವುಗಳೊಂದಿಗೆ ಸಹಕರಿಸಿದವು. ಆಫ್ರಿಕದಲ್ಲಿ ಶತಮಾನಗಳ ತನಕ ಈ ಸ್ಥಿತಿಯಿತ್ತು. ಪಾಶ್ಚಾತ್ಯ ರಾಷ್ಟ್ರಗಳು ಆಫೀಮು ಯುದ್ಧಕಾಲದಲ್ಲಿ ಮತ್ತು ಬಾಕ್ಸರ್ ರಹಸ್ಯ ಸಂಘದ ದಂಗೆಯ ಕಾಲದಲ್ಲಿ ಬಲಾತ್ಕಾರದಿಂದ ತಮ್ಮ ಪ್ರಭಾವ ಕ್ಷೇತ್ರಗಳನ್ನು ಸೃಷ್ಟಿಸಿದಾಗ ಚೀನಾ ದೇಶವೂ ಇದನ್ನು ಅನುಭವಿಸಿತು.
15. ಕ್ರೈಸ್ತಪ್ರಪಂಚದ ಚರ್ಚ್‌ಗಳಿಂದ ಯಾವ ದುಷ್ಕೃತ್ಯಗಳು ಮಾಡಲ್ಪಟ್ಟಿವೆ?
15 ಇತಿಹಾಸದ ಅಂಧಕಾರ ಯುಗಗಳೆಂದು ಕರೆಯಲ್ಪಟ್ಟ ಆ ಶತಮಾನಗಳಲ್ಲಿ, ಕ್ರೈಸ್ತಪ್ರಪಂಚದ ಧರ್ಮಗಳು ತಮ್ಮೊಂದಿಗೆ ಅಸಮ್ಮತಿ ತೋರಿಸಿದವರನ್ನು ಹಿಂಸಿಸಿ, ಚಿತ್ರಹಿಂಸೆಗೊಳಪಡಿಸಿ, ಕೊಲ್ಲುವುದರಲ್ಲಿಯೂ ಅಗ್ರಸ್ಥಾನದಲ್ಲಿದ್ದವು. ನೂರಾರು ವರ್ಷಕಾಲ ಬಾಳಿದ ಪಾಷಂಡ ವಿಚಾರಣೆಯ ಸಮಯಗಳಲ್ಲಿ, ಚಿತ್ರಹಿಂಸೆ ಮತ್ತು ಕೊಲೆಯಂತಹ ಅಮಾನುಷ ಆಚರಣೆಗಳು ಸಭ್ಯರೂ ನಿರ್ದೋಷಿಗಳೂ ಆದವರ ವಿರುದ್ಧ ಅಧಿಕೃತವಾಗಿ ನಡಿಸಲ್ಪಟ್ಟವು. ಇದನ್ನು ಮಾಡಿದವರು ತಾವೆಲ್ಲರೂ ಕ್ರೈಸ್ತರೆಂದು ಹೇಳಿಕೊಂಡ ವೈದಿಕರೂ ಅವರ ಅನುಯಾಯಿಗಳೂ ಆಗಿದ್ದರು. ಜನಸಾಮಾನ್ಯರಿಗೆ ಓದಸಾಧ್ಯವಾಗದಂತೆ, ಅವರು ಬೈಬಲನ್ನು ನಿರ್ನಾಮ ಮಾಡಲು ಸಹ ಪ್ರಯತ್ನಿಸಿದರು.
ಕ್ರಿಸ್ತೀಯವಲ್ಲ
16, 17. ಚರ್ಚ್‌ಗಳು ಕ್ರಿಸ್ತೀಯವಲ್ಲವೆಂದು ನಾವೇಕೆ ಹೇಳಬಲ್ಲೆವು?
16 ಇಲ್ಲ, ಕ್ರೈಸ್ತಪ್ರಪಂಚದ ರಾಷ್ಟ್ರಗಳೂ ಚರ್ಚ್‌ಗಳೂ ಕ್ರಿಸ್ತೀಯರಾಗಿದುದ್ದೂ ಇಲ್ಲ, ಆಗಿರುವುದೂ ಇಲ್ಲ. ಅವರು ದೇವರ ಸೇವಕರುಗಳಲ್ಲ. ಆತನ ಪ್ರೇರಿತ ವಾಕ್ಯವು ಅವರ ಕುರಿತು ಹೇಳುವುದು: “ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯರೂ ಸತ್ಕಾರ್ಯಗಳಿಗೆಲ್ಲಾ ಅಪ್ರಯೋಜಕರೂ ಆಗಿರುವದರಿಂದ ದೇವರನ್ನು ಅರಿಯೆವೆಂದು ತಮ್ಮ ಕಾರ್ಯಗಳಿಂದಲೇ ಹೇಳಿದಂತಾಯಿತು.”—ತೀತ 1:16.
17 ಸುಳ್ಳು ಧರ್ಮವನ್ನು ಅದರ ಉತ್ಪನ್ನದ, ಅದರ ಫಲದ ಮೂಲಕ ಗುರುತಿಸುವುದು ಸಾಧ್ಯವೆಂದು ಯೇಸು ಹೇಳಿದನು. ಅವನಂದದ್ದು: “ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ. ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ. . . . ಹಾಗೆಯೇ ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು. ಒಳ್ಳೇ ಮರವು ಕೆಟ್ಟ ಫಲವನ್ನು ಕೊಡಲಾರದು; ಹುಳುಕು ಮರವು ಒಳ್ಳೇ ಫಲವನ್ನು ಕೊಡಲಾರದು. ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ. ಹೀಗಿರಲಾಗಿ ಅವರ ಫಲಗಳಿಂದ ಅವರನ್ನು [ಸುಳ್ಳುಪ್ರವಾದಿಗಳನ್ನು] ತಿಳಿದುಕೊಳ್ಳುವಿರಿ.”—ಮತ್ತಾಯ 7:15-20.
18. ಕ್ರೈಸ್ತಪ್ರಪಂಚದ ಬೋಧನೆಗಳಿಂದ ಮತ್ತು ಕ್ರಿಯೆಗಳಿಂದ ಏನು ಫಲಿಸಿದೆ?
18 ಹೀಗೆ, ಅವು ಏನು ಕಲಿಸಿವೆಯೋ, ಯಾವುದನ್ನು ಮಾಡಿವೆಯೋ ಅದರ ಮೂಲಕ, ತಾವು ಬೈಬಲಿನಲ್ಲಿ ನಂಬಿಕೆಯುಳ್ಳವರು, ದೇವಭಯವುಳ್ಳವರು, ಮತ್ತು ಕ್ರೈಸ್ತರು ಎಂಬ ತಮ್ಮ ವಾದವು ಸುಳ್ಳೆಂದು ಕ್ರೈಸ್ತಪ್ರಪಂಚದ ಧರ್ಮಗಳು ಪ್ರದರ್ಶಿಸಿವೆ. ಅವರು ದೇವರಿಗೂ ಬೈಬಲಿಗೂ ದ್ರೋಹ ಮಾಡಿದ್ದಾರೆ. ಹಾಗೆ ಮಾಡಿರುವುದರಲ್ಲಿ ಅವರು ಲಕ್ಷಗಟ್ಟಲೆ ಜನರನ್ನು ಜುಗುಪ್ಸೆಗೊಳಿಸಿ, ಒಬ್ಬ ಪರಮಾತ್ಮನಲ್ಲಿಡುವ ನಂಬಿಕೆಯಿಂದ ಅವರನ್ನು ತಿರುಗಿಸಿದ್ದಾರೆ.
19. ಕ್ರೈಸ್ತಪ್ರಪಂಚದ ವೈಫಲ್ಯವು ದೇವರ ಮತ್ತು ಬೈಬಲಿನ ವೈಫಲ್ಯವೆಂದು ಅರ್ಥವೊ?
19 ಆದರೂ, ಕ್ರೈಸ್ತಪ್ರಪಂಚದ ವೈದಿಕರ ಮತ್ತು ಚರ್ಚ್‌ಗಳ ವೈಫಲ್ಯವು ಹಾಗೂ ಕ್ರೈಸ್ತಪ್ರಪಂಚದ ಹೊರಗಿರುವ ಧರ್ಮಗಳ ವೈಫಲ್ಯವು ಬೈಬಲು ವಿಫಲಗೊಂಡಿದೆ ಎಂಬ ಅರ್ಥವನ್ನು ತರುವುದಿಲ್ಲ. ದೇವರು ವಿಫಲಗೊಂಡಿದ್ದಾನೆಂದೂ ಇದರ ಅರ್ಥವಾಗುವುದಿಲ್ಲ. ಬದಲಾಗಿ ಅಸ್ತಿತ್ವದಲ್ಲಿರುವ ಮತ್ತು ನಮ್ಮ ವಿಷಯದಲ್ಲಿ ಚಿಂತಿಸುವ ಒಬ್ಬ ಪರಮಾತ್ಮನ ಕುರಿತು ಬೈಬಲು ನಮಗೆ ತಿಳಿಸುತ್ತದೆ. ಸಮರ್ಪಕವಾಗಿರುವುದನ್ನು ಮಾಡಬಯಸುವ ಪ್ರಾಮಾಣಿಕ ಹೃದಯಿಗಳಿಗೆ, ಭೂಮ್ಯಾದ್ಯಂತವಾಗಿ ನ್ಯಾಯ ಮತ್ತು ಶಾಂತಿಯು ಬಳಕೆಯಲ್ಲಿರುವುದನ್ನು ನೋಡಬಯಸುವವರಿಗೆ ಆತನು ಹೇಗೆ ಪ್ರತಿಫಲ ನೀಡುವನೆಂದು ಅದು ತೋರಿಸುತ್ತದೆ. ದುಷ್ಟತ್ವ ಮತ್ತು ಕಷ್ಟಾನುಭವವು ಇರುವಂತೆ ದೇವರು ಏಕೆ ಅನುಮತಿಸಿದ್ದಾನೆಂದೂ, ಜೊತೆ ಮಾನವರಿಗೆ ಹಾನಿ ಮಾಡುವವರನ್ನೂ, ದೇವರನ್ನು ಸೇವಿಸುತ್ತೇವೆಂದು ಹೇಳಿಕೊಳ್ಳುತ್ತಾ ಹಾಗೆ ಮಾಡದವರನ್ನೂ ಆತನು ಹೇಗೆ ತೊಲಗಿಸಿ ಬಿಡುವನೆಂದೂ ಅದು ತೋರಿಸುತ್ತದೆ.
[ಅಧ್ಯಯನ ಪ್ರಶ್ನೆಗಳು]
[ಪುಟ 28 ರಲ್ಲಿರುವ ಚಿತ್ರಗಳು]
ಡ್ಯಾಂಟೆಯ “ಇನ್‌ಫೆರ್ನೊ [ನರಕ]”
ಕ್ರೈಸ್ತಪ್ರಪಂಚದ ತ್ರಯೈಕ್ಯ
[Credit Line]
Doré’s illustration of Barrators—Giampolo for Dante’s Divine Comedy
ಹಿಂದು ತ್ರಯೈಕ್ಯ
[Credit Line]
Courtesy of The British Museum
ಈಜಿಪ್ಟಿನ ತ್ರಯೈಕ್ಯ
[Credit Line]
Museo Egizio, Turin
[ಪುಟ 29 ರಲ್ಲಿರುವ ಚಿತ್ರಗಳು]
ಯೇಸುವಿನ ಬೋಧನೆಗಳಿಗೆ ವಿರುದ್ಧವಾಗಿ, ಎರಡೂ ಪಕ್ಷಗಳ ವೈದಿಕರು ಯುದ್ಧಗಳನ್ನು ಬೆಂಬಲಿಸಿದ್ದಾರೆ
[Credit Line]
U.S. Army photo