ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಮೋದವನವಾದ ಭೂಮಿಯೊಂದರ ಮೇಲೆ ಸದಾ ಜೀವಿಸಿರಿ

ಪ್ರಮೋದವನವಾದ ಭೂಮಿಯೊಂದರ ಮೇಲೆ ಸದಾ ಜೀವಿಸಿರಿ

ಭಾಗ 8

ಪ್ರಮೋದವನವಾದ ಭೂಮಿಯೊಂದರ ಮೇಲೆ ಸದಾ ಜೀವಿಸಿರಿ

1, 2. ದೇವರ ರಾಜ್ಯದ ಆಳಿಕೆಯಲ್ಲಿ ಜೀವನವು ಯಾವ ರೀತಿಯದ್ದಾಗಿರುವುದು?

1 ದೇವರು ಭೂಮಿಯಿಂದ ದುಷ್ಟತ್ವ ಮತ್ತು ಕಷ್ಟಾನುಭವವನ್ನು ತೆಗೆದು ಸ್ವರ್ಗೀಯ ರಾಜ್ಯದ ಪ್ರೀತಿಯ ನಿಯಂತ್ರಣದಲ್ಲಿರುವ ತನ್ನ ನೂತನ ಲೋಕವನ್ನು ಒಳತರುವಾಗ ಜೀವನವು ಯಾವ ರೀತಿಯದ್ದಾಗಿರುವುದು? ‘ತನ್ನ ಕೈದೆರೆದು ಜೀವಿಸುವ ಪ್ರತಿಯೊಂದು ಪ್ರಾಣಿಯ ಬಯಕೆಯನ್ನು ತೃಪ್ತಿಗೊಳಿಸುವೆನು’ ಎಂದು ದೇವರು ವಾಗ್ದಾನಿಸುತ್ತಾನೆ.—ಕೀರ್ತನೆ 145:16, NW.

2 ನಿಮ್ಮ ನ್ಯಾಯಸಮ್ಮತವಾದ ಬಯಕೆಗಳಾವುವು? ಸಂತುಷ್ಟವಾದ ಜೀವನ, ಪ್ರಯೋಜನಕರವಾದ ಕೆಲಸ, ಪ್ರಾಪಂಚಿಕ ಸಮೃದ್ಧಿ, ಸುಂದರವಾದ ಸುತ್ತುಗಟ್ಟುಗಳು, ಎಲ್ಲ ಜನರ ಮಧ್ಯೆ ಶಾಂತಿ, ಮತ್ತು ಅನ್ಯಾಯ, ರೋಗ, ಕಷ್ಟಾನುಭವ, ಮತ್ತು ಮರಣದಿಂದ ವಿಮುಕ್ತಿ—ಇವೇ ಅಲ್ಲವೆ? ಮತ್ತು ಒಂದು ಹರ್ಷಭರಿತ ಆಧ್ಯಾತ್ಮಿಕ ಹೊರನೋಟದ ಕುರಿತೇನು? ಆ ಎಲ್ಲ ವಿಷಯಗಳು ಬೇಗನೇ ದೇವರ ರಾಜ್ಯದ ಪ್ರಭುತ್ವದಲ್ಲಿ ಕೈಗೂಡಿಸಲ್ಪಡುವುವು. ಆ ನೂತನ ಲೋಕದಲ್ಲಿ ಬರಲಿರುವ ಅದ್ಭುತಕರವಾದ ಆಶೀರ್ವಾದಗಳ ಬಗೆಗೆ ಬೈಬಲ್‌ ಪ್ರವಾದನೆಗಳು ಏನು ಹೇಳುತ್ತವೊ ಅವನ್ನು ಗಮನಿಸಿರಿ.

ಮಾನವಕುಲ ಪರಿಪೂರ್ಣ ಶಾಂತಿಯಲ್ಲಿ

3-6. ಮಾನವರಿಗೆ ನೂತನ ಲೋಕದಲ್ಲಿ ಶಾಂತಿ ಇರುವುದೆಂಬುದಕ್ಕೆ ನಮಗೆ ಯಾವ ಆಶ್ವಾಸನೆಯಿದೆ?

3 “[ದೇವರು] ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿ ಬಿಟ್ಟಿದ್ದಾನೆ; ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದು ಹಾಕಿದ್ದಾನೆ; ರಥಗಳನ್ನು ದಹಿಸಿ ಬಿಟ್ಟಿದ್ದಾನೆ.”—ಕೀರ್ತನೆ 46:9.

4 “ಅವರೋ ತಮ್ಮ . . . ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”—ಯೆಶಾಯ 2:4.

5 “ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.

6 “ಸಮಸ್ತ ಭೂಮಿಯು ವಿಶ್ರಾಂತಿಯನ್ನು ಪಡೆದಿದೆ, ಕ್ಷೋಭೆಯಿಂದ ವಿಮುಕ್ತವಾಗಿದೆ. ಜನರು ಹರ್ಷಧ್ವನಿಗಳಿಂದ ಉತ್ಸಾಹಪೂರ್ಣರಾಗಿದ್ದಾರೆ.”—ಯೆಶಾಯ 14:7, NW.

ಮನುಷ್ಯ ಮತ್ತು ಮೃಗಗಳ ಮಧ್ಯೆ ಶಾಂತಿ

7, 8. ಜನರ ಮತ್ತು ಮೃಗಗಳ ಮಧ್ಯೆ ಯಾವ ಶಾಂತಿ ಇರುವುದು?

7 “ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡಿಸುವದು. ಹಸುವು ಕರಡಿಯು ಸಂಗಡ ಮೇಯುವವು; ಅವುಗಳ ಮರಿಗಳು ಜೊತೆಯಾಗಿ ಮಲಗುವವು; ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು. ಮೊಲೆಕೂಸು ನಾಗರಹುತ್ತದ ಮೇಲೆ ಆಡುವದು; ಮೊಲೆಬಿಟ್ಟ ಮಗು ಹಾವಿನ ಬಿಲದ ಮೇಲೆ ಕೈ ಹಾಕುವದು. . . . ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳು ಮಾಡುವದಿಲ್ಲ.”—ಯೆಶಾಯ 11:6-9.

8 “ಆ ಕಾಲದಲ್ಲಿ ನಾನು ನನ್ನ ಜನರಿಗಾಗಿ ಭೂಜಂತುಗಳಿಗೂ ಆಕಾಶಪಕ್ಷಿಗಳಿಗೂ ನೆಲದ ಕ್ರಿಮಿಕೀಟಗಳಿಗೂ ನಿಬಂಧನೆ ಮಾಡಿ . . . ನನ್ನ ಜನರು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.”—ಹೋಶೇಯ 2:18.

ಪರಿಪೂರ್ಣ ಆರೋಗ್ಯ, ಅನಂತ ಜೀವನ

9-14. ನೂತನ ಲೋಕದಲ್ಲಿ ಆರೋಗ್ಯದ ಸ್ಥಿತಿಗಳನ್ನು ವರ್ಣಿಸಿರಿ.

9 “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.”—ಯೆಶಾಯ 35:5, 6.

10 “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”—ಪ್ರಕಟನೆ 21:4.

11 “. . . ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24.

12 “ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವದು. ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು.”—ಯೋಬ 33:25.

13 “ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.”—ರೋಮಾಪುರ 6:23.

14 “ಆತನನ್ನು ನಂಬುವ . . . ಎಲ್ಲರೂ ನಿತ್ಯಜೀವವನ್ನು ಪಡೆಯಬೇಕು.”—ಯೋಹಾನ 3:16.

ಮೃತರು ಜೀವಕ್ಕೆ ಪುನಃಸ್ಥಾಪಿಸಲ್ಪಡುವುದು

15-17. ಆಗಲೇ ಸತ್ತಿರುವವರಿಗೆ ಯಾವ ನಿರೀಕ್ಷೆ ಇದೆ?

15 “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.”—ಅ. ಕೃತ್ಯಗಳು 24:15.

16 “ಸ್ಮರಣೆಯ ಸಮಾಧಿಗಳಲ್ಲಿ [ದೇವರ ಸ್ಮರಣೆಯಲ್ಲಿ] ಇರುವ ಸಕಲರೂ ಆತನ ಧ್ವನಿಯನ್ನು ಕೇಳಿ ಹೊರಗೆ ಬರುವ ಕಾಲವು ಬರುತ್ತದೆ.”—ಯೋಹಾನ 5:28, 29. NW.

17 “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ [ಹೇಡೀಸ್‌, NW ಸಮಾಧಿ.] ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು.”—ಪ್ರಕಟನೆ 20:13.

ಭೂಮಿ, ಸಮೃದ್ಧಿಯಿರುವ ಒಂದು ಪ್ರಮೋದವನ

18-22. ಇಡೀ ಭೂಮಿಯು ಏನಾಗಿ ಮಾರ್ಪಡಿಸಲ್ಪಡುವುದು?

18 “ಶುಭದಾಯಕ ವೃಷ್ಟಿಯು ಆಗುವದು; ತೋಟದ ಮರಗಳು ಹಣ್ಣು ಬಿಡುವವು; ಹೊಲಗಳು ಒಳ್ಳೆಯ ಬೆಳೆ ಕೊಡುವವು; ಜನರು ಸ್ವದೇಶದಲ್ಲಿ ನೆಮ್ಮದಿಯಾಗಿರುವರು.”—ಯೆಹೆಜ್ಕೇಲ 34:26, 27.

19 “ಭೂಮಿಯು ಒಳ್ಳೇ ಬೆಳೆಯನ್ನು ಕೊಟ್ಟಿರುತ್ತದೆ. ದೇವರು, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸುವನು.”—ಕೀರ್ತನೆ 67:6.

20 “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು.”—ಯೆಶಾಯ 35:1.

21 “ಬೆಟ್ಟಗುಡ್ಡಗಳು ನಿಮ್ಮ ಮುಂದೆ ಜಯಘೋಷಮಾಡುವವು, ಅಡವಿಯ ಮರಗಳೆಲ್ಲಾ ಚಪ್ಪಾಳೆ ಹೊಡೆಯುವವು. ಮುಳ್ಳಿಗೆ ಬದಲಾಗಿ ತುರಾಯಿಯೂ ದತ್ತೂರಿಗೆ ಪ್ರತಿಯಾಗಿ ಸುಗಂಧವೂ ಬೆಳೆಯುವವು.”—ಯೆಶಾಯ 55:12, 13.

22 “ನೀನು ನನ್ನ ಸಂಗಡ ಪ್ರಮೋದವನದಲ್ಲಿರುವಿ.”—ಲೂಕ 23:43, NW.

ಸರ್ವರಿಗೂ ಒಳ್ಳೆಯ ವಸತಿ

23, 24. ಅಲ್ಲಿ ಸರ್ವರಿಗೆ ಸಾಕಷ್ಟು ಒಳ್ಳೆಯ ವಸತಿ ಇರುವುದೆಂಬುದಕ್ಕೆ ಯಾವ ಆಶ್ವಾಸನೆ ನಮಗಿದೆ?

23 “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು . . . ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು. . . . ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನೂ ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು.”—ಯೆಶಾಯ 65:21-23.

24 “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಮೀಕ 4:4.

ನೀವು ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ

25. ನಮಗೆ ಭವಿಷ್ಯತ್ತಿಗಾಗಿ ಯಾವ ಅದ್ಭುತಕರವಾದ ಹೊರನೋಟವಿದೆ?

25 ಭವಿಷ್ಯತ್ತಿಗಾಗಿ ಎಷ್ಟು ಅದ್ಭುತಕರವಾದ ಒಂದು ಹೊರನೋಟ! ದೇವರ ನೂತನ ಲೋಕದಲ್ಲಿ ಇಂದಿನ ಸರ್ವ ಸಮಸ್ಯೆಗಳು ಗತಕಾಲದ ವಿಷಯಗಳಾಗಿರುವುವು ಎಂಬ ಸ್ಥಿರ ನಿರೀಕ್ಷೆಯಲ್ಲಿ ಆಧಾರಗೊಂಡಿರುವಾಗ ಜೀವಿತಗಳಿಗೆ ಈಗ ಎಂತಹ ವಾಸ್ತವವಾದ ಉದ್ದೇಶವಿರಬಲ್ಲದು! “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾಯ 65:17) ಮತ್ತು ಆಗ ಜೀವವು ಅನಂತವಾಗಿರುವುದೆಂದು ತಿಳಿಯುವುದು ಎಷ್ಟು ದುಃಖಶಾಮಕ: “[ದೇವರು] ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು.”—ಯೆಶಾಯ 25:8.

26. ದೇವರ ನೂತನ ಲೋಕದಲ್ಲಿ ಸದಾಕಾಲ ಜೀವಿಸುವುದಕ್ಕಿರುವ ಕೀಲಿ ಕೈ ಏನು?

26 ಈಗ ಎಷ್ಟೋ ಹತ್ತಿರವಾಗಿರುವ ಆ ಪ್ರಮೋದವನವಾದ ನೂತನ ಲೋಕದಲ್ಲಿ ಸದಾ ಜೀವಿಸಲು ನೀವು ಬಯಸುತ್ತೀರೊ? ‘ಈ ಲೋಕದ ಅಂತ್ಯದಲ್ಲಿ ದೇವರ ಅನುಗ್ರಹವನ್ನು ಪಡೆದು ಆತನ ನೂತನ ಲೋಕದಲ್ಲಿ ಜೀವಿಸುತ್ತಾ ಹೋಗಲು ನಾನೇನು ಮಾಡುವ ಅಗತ್ಯವಿದ್ದೀತು?’ ಎಂದು ನೀವು ಕೇಳೀರಿ. ಯೇಸು ದೇವರಿಗೆ ಮಾಡಿದ ಒಂದು ಪ್ರಾರ್ಥನೆಯಲ್ಲಿ ಸೂಚಿಸಿದ್ದನ್ನು ನೀವು ಮಾಡುವುದು ಅಗತ್ಯ: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.

27. ದೇವರ ಉದ್ದೇಶದಲ್ಲಿ ಭಾಗವಹಿಸುವರೆ ನೀವೇನು ಮಾಡತಕ್ಕದ್ದು?

27 ಆದುದರಿಂದ, ಒಂದು ಬೈಬಲನ್ನು ಪಡೆದುಕೊಂಡು, ಈ ಬ್ರೋಷರಿನಲ್ಲಿ ನೀವು ಓದಿರುವುದನ್ನು ದೃಢೀಕರಿಸಿರಿ. ಈ ಬೈಬಲ್‌ ಸತ್ಯತೆಗಳನ್ನು ಅಧ್ಯಯನ ಮಾಡಿ ಕಲಿಸುವ ಇತರರನ್ನು ಹುಡುಕಿರಿ. ಬೈಬಲಿಗೆ ವಿರುದ್ಧವಾದುದನ್ನು ಕಲಿಸುವ ಮತ್ತು ಮಾಡುವ ಕಪಟಾಚಾರದ ಧರ್ಮಗಳಿಂದ ನಿಮ್ಮನ್ನು ಬಿಡಿಸಿಕೊಂಡು ಸ್ವತಂತ್ರರಾಗಿರಿ. ಆಗಲೇ ದೇವರ ಚಿತ್ತವನ್ನು ಮಾಡುತ್ತಿರುವ ಇತರ ಲಕ್ಷಗಟ್ಟಲೆ ಜನರೊಂದಿಗೆ, ನೀವೂ ಪ್ರಮೋದವನವಾದ ಭೂಮಿಯಲ್ಲಿ ಮಾನವರು ನಿತ್ಯವಾಗಿ ಜೀವಿಸುವ ದೇವರ ಉದ್ದೇಶದಲ್ಲಿ ಹೇಗೆ ಪಾಲಿಗರಾಗಬಲ್ಲಿರೆಂದು ಕಲಿಯಿರಿ. ಮತ್ತು ದೇವರ ಪ್ರೇರಿತ ವಾಕ್ಯವು ಸಮೀಪ ಭವಿಷ್ಯದ ಕುರಿತು ಪ್ರಕಟಿಸುವುದನ್ನು ಮನಸ್ಸಿಗೆ ತೆಗೆದುಕೊಳ್ಳಿರಿ: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17.

[ಅಧ್ಯಯನ ಪ್ರಶ್ನೆಗಳು]

[ಪುಟ 42 ರಲ್ಲಿರುವ ಚಿತ್ರ]

ಭೂಪ್ರಮೋದವನವೊಂದನ್ನು ಪುನಃಸ್ಥಾಪಿಸುವ ದೇವರ ಉದ್ದೇಶವು ಬೇಗನೆ ಕೈಗೂಡಲಿರುವುದು