ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾನಾದಲ್ಲಿರುವಾಗ ಎರಡನೆಯ ಅದ್ಭುತ

ಕಾನಾದಲ್ಲಿರುವಾಗ ಎರಡನೆಯ ಅದ್ಭುತ

ಅಧ್ಯಾಯ 20

ಕಾನಾದಲ್ಲಿರುವಾಗ ಎರಡನೆಯ ಅದ್ಭುತ

ಯೂದಾಯದಲ್ಲಿ ವಿಸ್ತಾರವಾದ ಸಾರುವ ಚಟುವಟಿಕೆಯನ್ನು ನಡಿಸಿದ ನಂತರ, ಯೇಸುವು ತನ್ನ ಊರು-ಕ್ಷೇತ್ರಕ್ಕೆ ಹಿಂದಿರುಗಿದಾಗ, ಅದು ವಿಶ್ರಾಂತಿ ಪಡೆಯಲಿಕ್ಕಾಗಿ ಇರಲಿಲ್ಲ. ಬದಲಾಗಿ ಅವನು ತಾನು ಬೆಳೆದ ಪ್ರದೇಶವಾದ ಗಲಿಲಾಯದಲ್ಲಿ ಅಧಿಕ ಶುಶ್ರೂಷೆಯನ್ನು ಮಾಡಲು ಅವನು ಪ್ರಾರಂಭಿಸುತ್ತಾನೆ. ಆದರೆ ಅವನ ಶಿಷ್ಯರು ಅವನೊಂದಿಗೆ ನಿಲ್ಲುವ ಬದಲು ಅವರ ಕುಟುಂಬಗಳಿಗೆ, ಮನೆಗಳಿಗೆ ಮತ್ತು ಅವರ ಹಿಂದಿನ ವೃತ್ತಿಗಳಿಗೆ ಹಿಂತೆರಳಿದರು.

ಯೇಸುವು ಯಾವ ಸಂದೇಶದೊಂದಿಗೆ ಶುಶ್ರೂಷೆಯನ್ನು ಆರಂಭಿಸಿದನು? ಇದೇ: “ದೇವರ ರಾಜ್ಯವು ಸಮೀಪಿಸಿತು, ಜನರೇ, ನೀವು ಪಶ್ಚಾತ್ತಾಪ ಪಡಿರಿ ಮತ್ತು ಸುವಾರ್ತೆಯ ಮೇಲೆ ಭರವಸವಿಡಿರಿ.” ಮತ್ತು ಪ್ರತಿವರ್ತನೆ ಏನಾಗಿತ್ತು? ಗಲಿಲಾಯದವರು ಅವನನ್ನು ಸ್ವೀಕರಿಸಿದರು. ಎಲ್ಲರಿಂದಲೂ ಅವನು ಗೌರವಾನಿತ್ವನಾದನು. ಆದಾಗ್ಯೂ, ಇದು ವಿಶೇಷವಾಗಿ ಅವನ ಸಂದೇಶದ ಕಾರಣದಿಂದಲೇ ಅಲ್ಲ, ಬದಲಾಗಿ, ಕೆಲವು ತಿಂಗಳುಗಳ ಮೊದಲು ಯೆರೂಸಲೇಮಿನಲ್ಲಿ ಪಸ್ಕಹಬ್ಬಕ್ಕಾಗಿ ಅವರಲ್ಲಿ ಅನೇಕರು ನೆರೆದಿದ್ದರು ಮತ್ತು ಅಲ್ಲಿ ಅವನು ನಡೆಸಿದ ಗಮನಾರ್ಹವಾದ ಸೂಚಕ ಕಾರ್ಯಗಳನ್ನು ನೋಡಿದ್ದರು.

ಯೇಸುವು ತನ್ನ ಮಹಾ ಗಲಿಲಾಯದ ಶುಶ್ರೂಷೆಯನ್ನು ಕಾನಾದಲ್ಲಿ ಆರಂಭಿಸಿರಬೇಕು. ಇದಕ್ಕೆ ಮೊದಲು, ಯೂದಾಯದಿಂದ ಅವನು ಹಿಂದಕ್ಕೆ ಬಂದಾಗ, ಒಂದು ಮದುವೆಯಲ್ಲಿ ನೀರನ್ನು ದ್ರಾಕ್ಷಾರಸವನ್ನಾಗಿ ಪರಿವರ್ತಿಸಿದ್ದನು ಎಂಬುದನ್ನು ನೀವು ನೆನಪಿಸಬಹುದು. ಈ ಎರಡನೆಯ ಸಂದರ್ಭದಲ್ಲಿ, ಅರಸ ಹೆರೋದ ಅಂತಿಪ್ಪನ ಒಬ್ಬ ಸರಕಾರಿ ಅಧಿಕಾರಿಯ ಮಗನು ಅತಿ ಅಸ್ವಸ್ಥನಾಗಿದ್ದನು. ಯೂದಾಯದಿಂದ ಯೇಸುವು ಗಲಿಲಾಯಕ್ಕೆ ಹಿಂದಿರಿಗಿ ಬಂದಿದ್ದಾನೆಂದು ಕೇಳಿ, ತನ್ನ ಮನೇಊರಾದ ಕಪೆರ್ನೌಮಿನಿಂದ ಈ ಅಧಿಕಾರಿಯು ಯೇಸುವನ್ನು ಕಾಣಲು ಬಹುದೂರ ಪ್ರಯಾಣ ಮಾಡಿ ಬರುತ್ತಾನೆ. ‘ನನ್ನ ಮಗನು ಸಾಯುವ ಮೊದಲು, ಶೀಘ್ರವೇ ಬಾ’ ಎಂದು ಬೇಡಿಕೊಳ್ಳುತ್ತಾನೆ.

ಯೇಸು ಪ್ರತಿವರ್ತಿಸುತ್ತಾನೆ: ‘ನೀನು ಮನೆಗೆ ಹೋಗು. ನಿನ್ನ ಮಗನು ಸ್ವಸ್ಥನಾದನು!’ ಹೆರೋದನ ಅಧಿಕಾರಿಯು ನಂಬುತ್ತಾನೆ ಮತ್ತು ಮನೆಯ ಕಡೆಗೆ ತನ್ನ ಪ್ರಯಾಣವನ್ನು ಆರಂಭಿಸುತ್ತಾನೆ. ಅವನು ದಾರಿಯಲ್ಲಿರುವಾಗ, ಅವನ ಆಳುಗಳು ಎಲ್ಲಾ ಚೆನ್ನಾಗಿದೆ, ಅವನ ಮಗನು ಗುಣಮುಖನಾಗಿದ್ದಾನೆ ಎಂದು ಹೇಳಲು ಅವಸರದಿಂದ ಬರುತ್ತಿದ್ದರು! ‘ಅವನಿಗೆ ಎಷ್ಟು ಘಂಟೆಗೆ ಗುಣವಾಯಿತು?’ ಎಂದವನು ಕೇಳುತ್ತಾನೆ.

‘ನಿನ್ನೆ ಮಧ್ಯಾಹ್ನ ಒಂದು ಘಂಟೆಗೆ,’ ಎಂದವರು ಉತ್ತರಿಸುತ್ತಾರೆ.

‘ನಿನ್ನ ಮಗನು ಸ್ವಸ್ಥನಾದನು!’ ಎಂದು ಯೇಸು ಹೇಳಿದ್ದ ತಾಸಿನಲ್ಲಿಯೇ ಇದಾಯಿತೆಂದು ಅಧಿಕಾರಿಯು ತಿಳಿದುಕೊಳ್ಳುತ್ತಾನೆ. ಅನಂತರ, ಆ ಮನುಷ್ಯನೂ, ಅವನ ಇಡೀ ಮನೆವಾರ್ತೆಯವರೂ ಕ್ರಿಸ್ತನ ಶಿಷ್ಯರಾಗುತ್ತಾರೆ.

ಹೀಗೆ ಕಾನಾವು ಯೇಸು ಎರಡು ಸಾರಿ ಅದ್ಭುತಗಳನ್ನು ನಡಿಸಿದ ಮೆಚ್ಚಿಗೆಯ ಸ್ಥಳವಾಗಿ, ಯೂದಾಯದಿಂದ ಆತನ ಹಿಂದಿರುಗುವಿಕೆಯನ್ನು ಸೂಚಿಸಿತು. ಆದರೂ ಅಷ್ಟರ ತನಕ ಅವನು ನಡಿಸಿದ ಅದ್ಭುತಗಳು ಅವು ಮಾತ್ರವಾಗಿರಲಿಲ್ಲ, ಆದರೆ ಅವು ಗಮನಾರ್ಹವಾಗಿದ್ದವು ಯಾಕಂದರೆ ಅವು ಅವನು ಗಲಿಲಾಯಕ್ಕೆ ಹಿಂತೆರಳಿದ್ದಾನೆ ಎಂದು ಗುರುತಿಸಿದವು.

ಯೇಸುವು ಈಗ ನಜರೇತಿನ ಮನೆಗೆ ಹೊರಡುತ್ತಾನೆ. ಅಲ್ಲಿ ಅವನಿಗೆ ಏನು ಕಾದಿರುತ್ತದೆ? ಯೋಹಾನ 4:43-54; ಮಾರ್ಕ 1:14, 15; ಲೂಕ 4:14, 15.

▪ ಗಲಿಲಾಯಕ್ಕೆ ಯೇಸು ಹಿಂದಿರುಗಿದಾಗ, ಅವನ ಶಿಷ್ಯರಿಗೆ ಏನು ಸಂಭವಿಸುತ್ತದೆ, ಮತ್ತು ಜನರು ಅವನನ್ನು ಹೇಗೆ ಸ್ವೀಕರಿಸುತ್ತಾರೆ?

▪ ಯೇಸು ಯಾವ ಅದ್ಭುತವನ್ನು ನಡಿಸುತ್ತಾನೆ, ಮತ್ತು ಇದು ಅದರಲ್ಲಿ ಒಳಗೂಡಿದವರ ಮೇಲೆ ಯಾವ ಪರಿಣಾಮ ಬೀರಿತು?

▪ ಯೇಸುವಿನಿಂದ ಕಾನಾ ಹೇಗೆ ಪ್ರಯೋಜನ ಪಡೆಯಿತು?