ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೊನೆಯ ಕಾಣಿಸಿಕೊಳ್ಳುವಿಕೆಗಳು ಮತ್ತು ಸಾ.ಶ.33ರ ಪಂಚಾಶತ್ತಮ

ಕೊನೆಯ ಕಾಣಿಸಿಕೊಳ್ಳುವಿಕೆಗಳು ಮತ್ತು ಸಾ.ಶ.33ರ ಪಂಚಾಶತ್ತಮ

ಅಧ್ಯಾಯ 131

ಕೊನೆಯ ಕಾಣಿಸಿಕೊಳ್ಳುವಿಕೆಗಳು ಮತ್ತು ಸಾ.ಶ.33ರ ಪಂಚಾಶತ್ತಮ

ಯೇಸುವು ಒಂದು ಸಂದರ್ಭದಲ್ಲಿ, ಅವನ 11 ಮಂದಿ ಅಪೊಸ್ತಲರು ಗಲಿಲಾಯದ ಒಂದು ಬೆಟ್ಟದಲ್ಲಿ ಅವರನ್ನು ಭೇಟಿಯಾಗುವ ಏರ್ಪಾಡುಗಳನ್ನು ಮಾಡಿದನು. ಇತರ ಶಿಷ್ಯರಿಗೂ ಈ ಕೂಟದ ಕುರಿತು ತಿಳಿಸಲಾಗಿತ್ತೆಂದು ತೋರುತ್ತದೆ, ಮತ್ತು ಒಟ್ಟಿಗೆ 500ಕ್ಕಿಂತಲೂ ಹೆಚ್ಚು ಮಂದಿ ಅಲ್ಲಿ ಜಮಾಯಿಸಿದ್ದರು. ಯೇಸುವು ಅಲ್ಲಿ ಕಾಣಿಸಿಕೊಂಡು, ಅವರಿಗೆ ಬೋಧಿಸಲಾರಂಭಿಸಿದಾಗ, ಎಂಥ ಆನಂದದ ಒಂದು ಅಧಿವೇಶನವಾಗಿ ಅದು ರುಜುವಾಯಿತು!

ಇತರ ಸಂಗತಿಗಳೊಂದಿಗೆ, ಪರಲೋಕದಲ್ಲಯೂ, ಭೂಲೋಕದಲ್ಲಿಯೂ ದೇವರು ತನಗೆ ಎಲ್ಲಾ ಅಧಿಕಾರ ಕೊಟ್ಟಿದ್ದಾನೆ ಎಂದು ಒಂದು ದೊಡ್ಡ ಸಮೂಹಕ್ಕೆ ಯೇಸುವು ವಿವರಿಸಿದನು. “ಆದ್ದರಿಂದ ನೀವು ಹೊರಟುಹೋಗಿ,” ಅವನು ಅಪ್ಪಣೆಕೊಡುವದು, “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶಮಾಡಿರಿ.”

ಅದರ ಕುರಿತು ಯೋಚಿಸಿರಿ! ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಭಾಗಿಗಳಾಗಲು ಒಂದೇ ರೀತಿಯ ನೇಮಕವನ್ನು ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಪಡೆಯುತ್ತಾರೆ. ಅವರ ಸಾರುವಿಕೆಯನ್ನು ಮತ್ತು ಕಲಿಸುವಿಕೆಯನ್ನು ನಿಲ್ಲಿಸಲು ವಿರೋಧಿಗಳು ಪ್ರಯತ್ನಿಸುವರು, ಆದರೆ ಯೇಸುವು ಅವರನ್ನು ಸಂತೈಸುವದು: “ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (NW) ಅವರ ಶುಶ್ರೂಪಷೆಯನ್ನು ಪೂರೈಸಲು ಅವರಿಗೆ ಸಹಾಯ ಮಾಡಲು, ಪವಿತ್ರಾತ್ಮನ ಮೂಲಕ ಅವನ ಹಿಂಬಾಲಕರೊಂದಿಗೆ ಯೇಸುವು ಇರುತ್ತಾನೆ.

ಒಟ್ಟಿಗೆ, ತನ್ನ ಪುನರುತ್ಥಾನದ ನಂತರ 40 ದಿನಗಳ ತನಕ ಅವನ ಶಿಷ್ಯರೊಂದಿಗೆ ಯೇಸುವು ಸ್ವತಃ ಜೀವಂತನಾಗಿ ತೋರಿಸುತ್ತಾನೆ. ಈ ಸಮಯಾವಧಿಯ ಕಾಣಿಸಿಕೊಳ್ಳುವಿಕೆಗಳಲ್ಲಿ ದೇವರ ರಾಜ್ಯದ ಕುರಿತು ಅವನು ಅವರಿಗೆ ಉಪದೇಶಿಸುತ್ತಿದ್ದನು ಮತ್ತು ಅವನ ಶಿಷ್ಯರೋಪಾದಿ ಅವರ ಜವಾಬ್ದಾರಿಕೆಗಳನ್ನು ಅವನು ಒತ್ತಿ ಹೇಳುತ್ತಿದ್ದನು. ಒಂದು ಸಂದರ್ಭದಲ್ಲಿ ಅವನ ಮಲತಮ್ಮನಾದ ಯಾಕೋಬನಿಗೆ ಕೂಡ ಗೋಚರಿಸುತ್ತಾನೆ. ಮತ್ತು ತಾನು ಖಂಡಿತವಾಗಿಯೂ ಕ್ರಿಸ್ತನಾಗಿದ್ದೇನೆಂದು ಒಮ್ಮೆ ಅವಿಶ್ವಾಸಿಯಾಗಿದ್ದ ಅವನಿಗೆ ಮನವರಿಕೆ ಮಾಡಿಕೊಡುತ್ತಾನೆ.

ಅಪೊಸ್ತಲರು ಇನ್ನೂ ಗಲಿಲಾಯದಲ್ಲೇ ಇರುವಾಗ, ಅವರು ಯೆರೂಸಲೇಮಿಗೆ ಹಿಂದಿರುಗುವಂತೆ ಅವರಿಗೆ ಯೇಸುವು ಹೇಳಿರಬೇಕೆಂದು ವ್ಯಕ್ತವಾಗುತ್ತದೆ. ಅವರನ್ನು ಅಲ್ಲಿ ಭೇಟಿಯಾದಾಗ, ಅವನು ಅವರಿಗೆ ಅಂದದ್ದು: “ಯೋಹಾನನಂತೂ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ನಿಮಗಾದರೋ ಇನ್ನು ಸ್ವಲ್ಪ ದಿವಸಗಳೊಳಗೆ ಪವಿತ್ರಾತ್ಮದಲ್ಲಿ ಸ್ನಾನವಾಗುವದು. ಆದಕಾರಣ ನೀವು ಯೆರೂಸಲೇಮನ್ನು ಬಿಟ್ಟುಹೋಗದೆ ತಂದೆ ಮಾಡಿದಂಥ ನೀವು ನನ್ನಿಂದ ಕೇಳಿದಂಥ ವಾಗ್ದಾನಕ್ಕೆ ಕಾದುಕೊಂಡಿರ್ರಿ.”

ನಂತರ ಪುನಃ ತನ್ನ ಅಪೊಸ್ತಲರನ್ನು ಯೇಸುವು ಭೇಟಿಯಾಗುತ್ತಾನೆ ಮತ್ತು ಬೇಥಾನ್ಯದಷ್ಟು ದೂರಕ್ಕೆ ಅವರನ್ನು ಪಟ್ಟಣದಿಂದ ಹೊರಗೆ ಕರಕೊಂಡು ಹೋಗುತ್ತಾನೆ, ಇದು ಎಣ್ಣೇಮರಗಳ ಗುಡ್ಡದ ಪೂರ್ವ ಇಳಿಜಾರಿನಲ್ಲಿ ಇದೆ. ಶೀಘ್ರದಲ್ಲಿಯೇ ಪರಲೋಕಕ್ಕೆ ತೆರಳಲಿದ್ದೇನೆ ಎಂಬುದರ ವಿಷಯ ಅವರಿಗೆ ಅವನು ಎಲ್ಲಾ ಹೇಳಿದಾಗ್ಯೂ, ಭೂಮಿಯ ಮೇಲೆ ಅವನ ರಾಜ್ಯವು ಸ್ಥಾಪಿಸಲ್ಪಡಲಿದೆ ಎಂಬುದನ್ನು, ಆಶ್ಚರ್ಯಕರವಾಗಿ ಅವರು ಇನ್ನೂ ನಂಬುತ್ತಿದ್ದರು. ಆದ್ದರಿಂದ ಅವರು ವಿಚಾರಿಸುವದು: “ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್‌ ಜನರಿಗೆ ರಾಜ್ಯವನ್ನು ಸ್ಥಾಪಿಸಿಕೊಡುವಿಯೋ?”

ಅವರ ತಪ್ಪು ಕಲ್ಪನೆಗಳನ್ನು ಸರಿಪಡಿಸಲು ಪುನಃ ಪ್ರಯತ್ನಿಸುವ ಬದಲಾಗಿ, ಯೇಸುವು ಸರಳವಾಗಿ ಉತ್ತರಿಸುವದು: “ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ.” ಅನಂತರ ಅವರು ಮಾಡಲೇ ಬೇಕಾದ ಕೆಲಸದ ಕುರಿತು ಒತ್ತಿ ಹೇಳುತ್ತಾ, ಅವನು ಹೇಳುವದು: “ಆದರೆ ನಿಮ್ಮ ಮೇಲೆ ಪವಿತ್ರಾತ್ಮ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು.”

ಅವರು ಇನ್ನೂ ನೋಡುತ್ತಾ ಇರುವಾಗಲೇ, ಯೇಸುವು ಪರಲೋಕಕ್ಕೆ ಏರಿಸಲ್ಪಟ್ಟನು ಮತ್ತು ಅನಂತರ ಅವರ ನೋಟವನ್ನು ಒಂದು ಮೋಡವು ಮರೆಮಾಡಿತು. ಅವನ ಮಾಂಸಿಕ ದೇಹವು ಅಪಾರ್ಥಿವವಾಗಿ ಮಾಡಿದ [ಭೌತಿಕ ರೂಪ ಬದಲಾಯಿಸಿದ] ನಂತರ, ಅವನು ಆತ್ಮ ವ್ಯಕ್ತಿಯಾಗಿ ಪರಲೋಕಕ್ಕೆ ಏರುತ್ತಾನೆ. 11 ಮಂದಿ ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇರುವಾಗ, ಶುಭ್ರವಸ್ತ್ರಧಾರಿಗಳಾದ ಇಬ್ಬರು ಅವರ ಹತ್ತರ ನಿಂತುಕೊಂಡರು. ಈ ರೂಪಾಂತರಿಸಲ್ಪಟ್ಟ ದೇವದೂತರು ಅವರಿಗೆ ಕೇಳುವದು: “ಗಲಿಲಾಯದವರೇ, ನೀವು ಯಾಕೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಗೆ ಸೇರಿಸಲ್ಪಟ್ಟಿರುವ ಈ ಯೇಸು ಯಾವ ರೀತಿಯಲ್ಲಿ ಆಕಾಶದೊಳಕ್ಕೆ ಹೋಗಿರುವದನ್ನು ಕಂಡಿರೋ, ಅದೇ ರೀತಿಯಲ್ಲಿ ಬರುವನು.”

ಯಾವುದೇ ಸಾರ್ವಜನಿಕ ಗೌಜು-ಗದ್ದಲವಿಲ್ಲದೆ, ಕೇವಲ ತನ್ನ ನಂಬಿಗಸ್ತ ಹಿಂಬಾಲಕರು ನೋಡುತ್ತಿದ್ದಂತೆಯೇ, ಯೇಸುವು ಭೂಮಿಯನ್ನು ಬಿಟ್ಟುಹೋದ ವಿಧಾನವಾಗಿತ್ತು. ಆದುದರಿಂದ ಅವನು ಅದೇ ರೀತಿಯಲ್ಲಿ ಹಿಂತೆರಳುವನು—ಸಾರ್ವಜನಿಕ ಗೌಜು-ಗದ್ದಲವಿಲ್ಲದೇ ಮತ್ತು ಅವನು ಹಿಂತೆರಳಿದ್ದಾನೆ ಮತ್ತು ರಾಜ್ಯದ ಬಲದೊಂದಿಗೆ ಅವನ ಸಾನಿಧ್ಯತೆಯನ್ನು ಆರಂಭಿಸಿದ್ದಾನೆ ಎಂದು ಅವನ ನಂಬಿಗಸ್ತ ಹಿಂಬಾಲಕರು ಮಾತ್ರ ವಿವೇಚಿಸುವಂಥ ರೀತಿಯಲ್ಲಿ.

ಅಪೊಸ್ತಲರು ಎಣ್ಣೇಮರಗಳ ಗುಡ್ಡದಿಂದ ಇಳಿದು, ಕಿದ್ರೋನ್‌ ಹಳ್ಳವನ್ನು ದಾಟಿ ಪುನಃ ಯೆರೂಸಲೇಮನ್ನು ಪ್ರವೇಶಿಸುತ್ತಾರೆ. ಯೇಸುವಿನ ಅಪ್ಪಣೆಗೆ ವಿಧೇಯತೆಯಲ್ಲಿ ಅವರು ಅಲ್ಲಿ ಕಾದು ನಿಲ್ಲುತ್ತಾರೆ. ಹತ್ತು ದಿನಗಳ ನಂತರ, ಸಾ.ಶ. 33ರ ಯೆಹೂದ್ಯರ ಪಂಚಾಶತ್ತಮ ಹಬ್ಬದ ಸಮಯದಲ್ಲಿ, ಯೆರೂಸಲೇಮಿನ ಮೇಲಂತಸ್ತಿನಲ್ಲಿ 120 ಶಿಷ್ಯರು ಕೂಡಿಬಂದಿದ್ದಾಗ, ಬಿರುಗಾಳಿ ಬೀಸುತ್ತದೋ ಎಂಬಂತೆ ಫಕ್ಕನೆ ಶಬ್ದವುಂಟಾಗಿ ಇಡೀ ಮನೆಯನ್ನು ತುಂಬಿಕೊಂಡಿತು. ಉರಿಯಂತಿದ್ದ ಅಗ್ನಿಯ ನಾಲಿಗೆಗಳು ಅವರಿಗೆ ಕಾಣಿಸಿ, ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕೂತುಕೊಂಡವು ಮತ್ತು ಶಿಷ್ಯರೆಲ್ಲರೂ ಬೇರೆಬೇರೆ ಭಾಪಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು. ಇದು ಯೇಸುವು ವಾಗ್ದಾನಿಸಿದ ಪವಿತ್ರಾತ್ಮದ ಸುರಿಯುವಿಕೆಯಾಗಿತ್ತು! ಮತ್ತಾಯ 28:16-20; ಲೂಕ 24:49-52; 1 ಕೊರಿಂಥ 15:5-7; ಅ.ಕೃತ್ಯಗಳು 1:3-15; 2:1-4.

▪ ಗಲಿಲಾಯದ ಬೆಟ್ಟವೊಂದರಲ್ಲಿ ಯೇಸುವು ಯಾರಿಗೆ ವಿದಾಯದ ಉಪದೇಶಗಳನ್ನು ಕೊಡುತ್ತಾನೆ, ಮತ್ತು ಈ ಉಪದೇಶಗಳು ಏನಾಗಿದ್ದವು?

▪ ಅವನ ಶಿಷ್ಯರಿಗೆ ಯೇಸುವು ಯಾವ ಸಂತೈಸುವಿಕೆಯನ್ನು ನೀಡುತ್ತಾನೆ, ಮತ್ತು ಅವನು ಅವರೊಂದಿಗೆ ಹೇಗೆ ಇರುವನು?

▪ ಅವನ ಶಿಷ್ಯರಿಗೆ ಪುನರುತ್ಥಾನದ ನಂತರ ಎಷ್ಟು ಸಮಯದ ತನಕ ಯೇಸು ಕಾಣಿಸಿಕೊಳ್ಳುತ್ತಾನೆ, ಮತ್ತು ಅವನು ಅವರಿಗೆ ಏನನ್ನು ಉಪದೇಶಿಸುತ್ತಾನೆ?

▪ ಯೇಸುವಿನ ಮರಣದ ಮೊದಲು ಶಿಷ್ಯನೊಬ್ಬನಾಗಿರದ ಯಾವ ವ್ಯಕ್ತಿಗೆ ಯೇಸುವು ಕಾಣಿಸಿಕೊಂಡನು ಎಂದು ತೋರುತ್ತದೆ?

▪ ಅವನ ಅಪೊಸ್ತಲರೊಂದಿಗೆ ಯಾವ ಕೊನೆಯ ಎರಡು ಕೂಟಗಳನ್ನು ಯೇಸುವು ನಡಿಸಿದನು, ಮತ್ತು ಆ ಸಂದರ್ಭದಲ್ಲಿ ಏನು ಸಂಭವಿಸುತ್ತದೆ?

▪ ಹೇಗೆ ಹೋದನೋ, ಅದೇ ರೀತಿಯಲ್ಲಿ ಯೇಸುವು ಹಿಂತೆರಳುವದು ಹೇಗೆ?

▪ ಸಾ.ಶ. 33ರ ಪಂಚಾಶತ್ತಮದಲ್ಲಿ ಏನು ಸಂಭವಿಸುತ್ತದೆ?