ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಷೇಮೆಯ ಒಂದು ಪಾಠ

ಕ್ಷೇಮೆಯ ಒಂದು ಪಾಠ

ಅಧ್ಯಾಯ 64

ಕ್ಷೇಮೆಯ ಒಂದು ಪಾಠ

ಯೇಸು ತನ್ನ ಶಿಷ್ಯರೊಂದಿಗೆ ಕಪೆರ್ನೌಮಿನ ಮನೆಯಲ್ಲಿಯೇ ಬಹುಶಃ ಇದ್ದಿರಬೇಕು. ಸಹೋದರರ ನಡುವಣ ಸಮಸ್ಯೆಗಳನ್ನು ನಿರ್ವಹಿಸುವದು ಹೇಗೆ ಎಂದು ಅವರೊಂದಿಗೆ ಅವನು ಚರ್ಚಿಸುತ್ತಿದ್ದನು, ಆದ್ದರಿಂದ ಪೇತ್ರನು ವಿಚಾರಿಸುವದು: “ಸ್ವಾಮೀ, ನನ್ನ ಸಹೋದರನು ತಪ್ಪು ಮಾಡುತ್ತಾ ಬಂದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು?” ಯಾಕಂದರೆ ಯೆಹೂದಿ ಧಾರ್ಮಿಕ ಬೋಧಕರು ಮೂರು ಸಾರಿ ಕ್ಷಮಿಸಬಹುದು ಎಂದು ಪ್ರಸ್ತಾಪ ಮಾಡುತ್ತಿದುದ್ದರಿಂದ, “ಏಳು ಸಾರಿಯೋ?” ಎಂದು ಸೂಚಿಸುವದು ಒಂದು ಮಹಾ ಉದಾರತೆ ಎಂದು ಪೇತ್ರನು ಪ್ರಾಯಶಃ ಎಣಿಸಿರಬಹುದು.

ಆದರೆ ಅಂಥಾ ದಾಖಲೆಯನ್ನು ಇಡುವ ಇಡೀ ಕಲ್ಪನೆಯೇ ತಪ್ಪಾಗಿರುತ್ತದೆ. ಯೇಸು ಪೇತ್ರನನ್ನು ಸರಿಪಡಿಸಿದ್ದು: “ಏಳು ಸಾರಿ ಅಲ್ಲ, ಏಳೆಪ್ಪತ್ತು [ಎಪ್ಪತ್ತೇಳು] ಸಾರಿ ಎಂದು ನಾನು ನಿನಗೆ ಹೇಳುತ್ತೇನೆ.” ಪೇತ್ರನು ತನ್ನ ಸಹೋದರನನ್ನು ಕ್ಷಮಿಸುವದರಲ್ಲಿ ಎಷ್ಟೊಂದು ಸಾರಿ ಎಂಬ ಒಂದು ಮಿತಿಯನ್ನು ಇಡಕೂಡದು ಎಂದವನು ತೋರಿಸುತ್ತಾನೆ.

ಕ್ಷಮಿಸುವ ಅವರ ಹಂಗಿನ ಕುರಿತಾಗಿ ಶಿಷ್ಯರ ಮೇಲೆ ಅಚ್ಚೊತ್ತಲು, ಯೇಸುವು ಅವರಿಗೆ ಒಂದು ದೃಷ್ಟಾಂತವನ್ನು ಹೇಳುತ್ತಾನೆ. ತನ್ನ ಸೇವಕರೊಂದಿಗೆ ಲೆಕ್ಕವನ್ನು ತೀರಿಸಲು ಬಯಸುವ ಒಬ್ಬ ಅರಸನ ಕುರಿತಾಗಿ ಅದಿರುತ್ತದೆ. ಆಗ ಅವನಿಗೆ 6,00,00,000 ದೀನಾರಿಗಳಷ್ಟು ದೊಡ್ಡ ಮೊತ್ತದ ಸಾಲವನ್ನು ಕೊಡಲಿದ್ದ ಒಬ್ಬ ಸೇವಕನನ್ನು ಹಿಡತಂದರು. ಅವನು ಅದನ್ನು ತೀರಿಸುವದಕ್ಕೆ ಯಾವುದೇ ಸಾಧ್ಯತೆ ಇರಲಿಲ್ಲ. ಆದುದರಿಂದ ಯೇಸುವು ವಿವರಿಸುವಂತೆ, ಅವನನ್ನೂ ಅವನ ಹೆಂಡತಿ ಮಕ್ಕಳನ್ನೂ ಮಾರಿ ಅದನ್ನು ತೀರಿಸಬೇಕೆಂದು ಅರಸನು ಅಪ್ಪಣೆ ಮಾಡಿದನು.

ಆಗ ಆ ಸೇವಕನು ಅವನ ಒಡೆಯನು ಕಾಲಿಗೆ ಅಡ್ಡಬಿದ್ದು ಅವನೊಡನೆ ಬೇಡುತ್ತಾನೆ: “ಸ್ವಲ್ಪ ತಾಳಿಕೋ, ನಿನ್ನದೆಲ್ಲಾ ನಾನು ಕೊಟ್ಟು ತೀರಿಸುತ್ತೇನೆ.”

19 ಅವನೆಡೆಗೆ ಕನಿಕರಗೊಂಡು, ಒಡೆಯನು ಸೇವಕನ ದೊಡ್ಡ ಮೊತ್ತದ ಸಾಲವನ್ನು ರದ್ದುಮಾಡುತ್ತಾನೆ. ಆದರೆ ಅವನು ಇದನ್ನು ಮಾಡಿಯಾದ ಮೇಲೆ, ಯೇಸುವು ಮುಂದರಿಸುವದು, ಈ ಸೇವಕನು ಹೊರಗೆ ಬಂದಾಗ, ಅವನಿಗೆ 100 ದೀನಾರಿಗಳನ್ನು ಕೊಡಲಿಕ್ಕಿದ್ದ ಜೊತೆಸೇವಕನನ್ನು ಕಾಣುತ್ತಾನೆ. ಈಗ ಈ ಮನುಷ್ಯನು ತನ್ನ ಜೊತೆಸೇವಕನ ಕುತ್ತಿಗೆ ಹಿಸುಕುತ್ತಾ, ಉಸಿರುಕಟ್ಟಿಸಿ ಹೇಳುವದು: “ನನ್ನ ಸಾಲ ತೀರಿಸು.”

ಆದರೆ ಈ ಜೊತೆಸೇವಕನ ಹತ್ತಿರ ಹಣವಿರಲಿಲ್ಲ. ಆದುದರಿಂದ ಅವನು ಸಾಲ ಕೊಟ್ಟ ಆ ಸೇವಕನ ಕಾಲಿಗೆ ಎರಗಿ, ಬೇಡುತ್ತಾನೆ: “ಸ್ವಲ್ಪ ತಾಳಿಕೋ, ತೀರಿಸುತ್ತೇನೆ.” ಅವನ ಒಡೆಯನಿಗಿಂತ ಪ್ರತಿಕೂಲವಾಗಿ ಆ ಸೇವಕನು ಕರುಣೆ ಇಲ್ಲದವನಾಗಿದ್ದನು ಮತ್ತು ಅವನು ತನ್ನ ಜೊತೆ ಸೇವಕನನ್ನು ಹಿಡಿದು ಸೆರೆಮನೆಯಲ್ಲಿ ಹಾಕಿಸುತ್ತಾನೆ.

ಒಳ್ಳೇದು, ಯೇಸುವು ಮುಂದುವರಿಸುವದು, ಏನು ಸಂಭವಿಸಿತೋ ಅದನ್ನು ನೋಡಿದ ಇತರ ಸೇವಕರು ಒಡೆಯನಿಗೆ ಹೋಗಿ ಎಲ್ಲಾ ತಿಳಿಸುತ್ತಾರೆ. ಅವನು ಕೋಪದಿಂದ ಆ ಸೇವಕನನ್ನು ಕರೇ ಕಳುಹಿಸುತ್ತಾನೆ: “ಎಲಾ ನೀಚನೇ,” ಅವನನ್ನುತ್ತಾನೆ, “ನೀನು ನನ್ನನ್ನು ಬೇಡಿಕೊಂಡದ್ದರಿಂದ ಆ ಸಾಲವನ್ನೆಲ್ಲಾ ನಾನು ಬಿಟ್ಟುಬಿಟ್ಟೆನೆಲ್ಲಾ; ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೆಸೇವಕನನ್ನು ಕರುಣಿಸಬಾರದಾಗಿತ್ತೇ?” ಸಿಟ್ಟೇಳುವಂತೆ ಕೆರಳಿಸಲ್ಪಟ್ಟದ್ದರಿಂದ, ಒಡೆಯನು ಈ ನಿಷ್ಕರುಣಿ ಸೇವಕನನ್ನು ತನಗೆ ಕೊಡಬೇಕಾಗಿದ್ದ ಸಾಲ ತೀರಿಸುವ ತನಕ ಪೀಡಿಸುವವರ ಕೈಗೆ ಒಪ್ಪಿಸಿದನು.

ಅನಂತರ ಯೇಸುವು ಕೊನೆಗೊಳಿಸಿದ್ದು: “ನಿಮ್ಮಲ್ಲಿ ತನ್ನ ಸಹೋದರನಿಗೆ ಮನಃ (ಹೃದಯ, NW) ಪೂರ್ವಕವಾಗಿ ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು.”

ಕ್ಷಮೆಯ ಎಂತಹ ಒಂದು ಉತ್ತಮ ಪಾಠ ಇದಾಗಿರುತ್ತದೆ! ನಮ್ಮ ಪಾಪದ ದೊಡ್ಡ ಸಾಲವನ್ನು ದೇವರು ಕ್ಷಮಿಸಿರುವದರೊಂದಿಗೆ ಒಬ್ಬ ಕ್ರೈಸ್ತ ಸಹೋದರನಿಂದ ನಮ್ಮ ವಿರುದ್ಧ ಗೈದ ಪಾಪ ಏನೇ ಆದರೂ ತುಲನಾತ್ಮಕವಾಗಿ ಖಂಡಿತವಾಗಿಯೂ ಸಣ್ಣದ್ದಾಗಿರುತ್ತದೆ. ಇನ್ನೂ ಅಧಿಕವಾಗಿ, ಯೆಹೋವ ದೇವರು ನಮ್ಮನ್ನು ಸಾವಿರಾರು ಬಾರಿ ಕ್ಷಮಿಸಿರುತ್ತಾನೆ. ಆಗಾಗ್ಯೆ, ಅವನ ವಿರುದ್ಧವಾಗಿ ನಾವು ಗೈದ ಪಾಪಗಳ ಅರುಹೂ ಕೂಡಾ ನಮಗಿರುವದಿಲ್ಲ. ಆದುದರಿಂದ ಕೆಲವು ಸಾರಿ, ದೂರಲು ನಮಗೆ ಸಕಾರಣವಿದ್ದರೂ, ನಾವು ನಮ್ಮ ಸಹೋದರರನ್ನು ಕ್ಷಮಿಸಸಾಧ್ಯವಿಲ್ಲವೇ? ನೆನಪಿಡಿರಿ, ಪರ್ವತ ಪ್ರಸಂಗದಲ್ಲಿ ಯೇಸುವು ನಮಗೆ ಕಲಿಸಿದಂತೆ, ದೇವರು “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸುವನು.” ಮತ್ತಾಯ 18:21-35; 6:12; ಕೊಲೊಸ್ಸೆ 3:13.

▪ ತನ್ನ ಸಹೋದರನನ್ನು ಕ್ಷಮಿಸುವದರ ಕುರಿತಾದ ಪೇತ್ರನ ಪ್ರಶ್ನೆಯನ್ನು ಪ್ರಚೋದಿಸಿದ್ದು ಯಾವುದು, ಮತ್ತು ಒಬ್ಬನನ್ನು ಏಳು ಸಾರಿ ಕ್ಷಮಿಸುವದು ಒಂದು ಉದಾರತೆಯ ಸಲಹೆ ಎಂದು ಅವನು ಯಾಕೆ ಪರಿಗಣಿಸಿರಬಹುದು?

▪ ತನ್ನ ಸೇವಕನ ಕರುಣೆಯ ವಿನಂತಿಗಾಗಿ ಅರಸನು ತೋರಿಸಿದ ಪ್ರತಿವರ್ತನೆಯು, ಆ ಸೇವಕನು ತನ್ನ ಜೊತೆಸೇವಕನ ವಿನಂತಿಗೆ ತೋರಿಸಿದ ಪ್ರತಿವರ್ತನೆಗಿಂತ ಭಿನ್ನವಾಗಿದ್ದದ್ದು ಹೇಗೆ?

▪ ಯೇಸುವಿನ ದೃಷ್ಟಾಂತದಿಂದ ನಾವೇನು ಕಲಿಯುತ್ತೇವೆ?