ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗರ್ಭಿಣಿ, ಆದರೆ ವಿವಾಹಿತಳಲ್ಲ

ಗರ್ಭಿಣಿ, ಆದರೆ ವಿವಾಹಿತಳಲ್ಲ

ಅಧ್ಯಾಯ 4

ಗರ್ಭಿಣಿ, ಆದರೆ ವಿವಾಹಿತಳಲ್ಲ

ಮರಿಯಳು ಗರ್ಭವತಿಯಾಗಿ ಮೂರು ತಿಂಗಳಾಗಿವೆ. ಅವಳು ಗರ್ಭವತಿಯಾಗಿದ್ದ ಪ್ರಾರಂಭಿಕ ಭಾಗವನ್ನು ಎಲಿಸಬೇತಳನ್ನು ಭೇಟಿಮಾಡುವ ಮೂಲಕ ಕಳೆದದ್ದೂ, ಆದರೆ ಈಗ ಅವಳು ನಜರೇತಿನ ತನ್ನ ಮನೆಗೆ ಹಿಂದಿರುಗಿದ್ದೂ ನಿಮಗೆ ನೆನಪಿದೆ. ಬೇಗನೆ ಅವಳ ಸ್ಥಿತಿಯು ಸ್ವಂತ ಊರಿನಲ್ಲಿ ಬಹಿರಂಗ ಸುದ್ದಿಯಾಗಲಿರುವದು. ನಿಜವಾಗಿಯೂ, ಅವಳು ಒಂದು ಸಂಕಟಮಯ ಸನ್ನಿವೇಶದಲ್ಲಿ ಇದ್ದಾಳೆ!

ಸನ್ನಿವೇಶವನ್ನು ಇನ್ನೂ ಕೆಟ್ಟದ್ದಾಗಿ ಮಾಡುವುದು ಯಾವುದೆಂದರೆ, ಮರಿಯಳು ಬಡಗಿಯಾದ ಯೋಸೇಫನ ಹೆಂಡತಿಯಾಗಲು ನಿಶ್ಚಿತಾರ್ಥವಾಗಿರುವುದೇ. ಮತ್ತು ಇಸ್ರಾಯೇಲ್‌ಗೆ ಕೊಟ್ಟ ದೇವರ ನಿಯಮದ ಪ್ರಕಾರ, ಒಬ್ಬನಿಗೆ ನಿಶ್ಚಿತಾರ್ಥಳಾದ ಹೆಣ್ಣು, ಇನ್ನೊಬ್ಬ ಪುರುಷನೊಡನೆ ಇಚ್ಛಾಪೂರ್ವಕವಾಗಿ ಲೈಂಗಿಕ ಸಂಬಂಧ ನಡಿಸಿದ ಪಕ್ಷದಲ್ಲಿ ಕಲ್ಲೆಸೆದು ಕೊಲ್ಲಲ್ಪಡುತ್ತಿದ್ದಳು ಎಂದು ಅವಳಿಗೆ ತಿಳಿದಿತ್ತು. ತನ್ನ ಗರ್ಭಧಾರಣೆಯ ಕುರಿತು ಯೋಸೇಫನಿಗೆ ಅವಳು ಹೇಗೆ ವಿವರಿಸ ಶಕ್ತಳು?

ಮೂರು ತಿಂಗಳು ಮರಿಯಳು ದೂರ ಹೋಗಿದ್ದರಿಂದ, ಯೋಸೇಫನು ಅವಳನ್ನು ನೋಡಲು ಕಾತರದಿಂದ ಇದ್ದನು ಎಂದು ನಾವು ಖಾತ್ರಿಯಿಂದ ಇರಬಹುದು. ಅವರು ಭೇಟಿಯಾದಾಗ, ಮರಿಯಳು ಅವನಿಗೆ ಸುದ್ದಿಯನ್ನು ತಿಳಿಸಿರಬಹುದಾದ ಸಂಭಾವ್ಯತೆ ಇದೆ. ತಾನು ದೇವರ ಪವಿತ್ರಾತ್ಮನಿಂದ ಗರ್ಭಿಣಿಯಾಗಿದ್ದೇನೆ ಎಂದು ಅವಳು ತನ್ನಿಂದ ಸಾಧ್ಯವಾಗುವಷ್ಟು ಚೆನ್ನಾಗಿ ವಿವರಿಸ ಪ್ರಯತ್ನಿಸಿದಿರ್ದಬಹುದು. ಆದರೆ ಯೋಸೇಫನಿಗೆ ಇದು ಎಷ್ಟು ಕಷ್ಟಸಾಧ್ಯವಾದ ವಿಷಯ ಎಂದು ನೀವೂ ಊಹಿಸ ಬಲ್ಲಿರಿ.

ಮರಿಯಳ ಸತ್ಕೀರ್ತಿಯ ಬಗ್ಗೆ ಯೋಸೇಫನಿಗೆ ತಿಳಿದಿತ್ತು. ಮತ್ತು ಅವನು ಅವಳನ್ನು ಬಹಳವಾಗಿ ಪ್ರೀತಿಸುತಿದ್ದನು ಎಂಬದೂ ವೇದ್ಯವಾಗುತ್ತದೆ. ಆದರೂ, ಅವಳು ಏನೇ ಹೇಳಿದರೂ, ಪರಪುರುಷನಿಂದ ಗರ್ಭವತಿಯಾಗಿದ್ದಾಳೆ ಎಂಬುದು ನಿಜವಾಗಿ ವ್ಯಕ್ತ. ಹೀಗಿದ್ದರೂ ಕೂಡಾ, ಅವಳು ಕಲ್ಲೆಸೆಯಲ್ಪಟ್ಟು ಕೊಲ್ಲಲ್ಪಡಲು ಅಥವಾ ಸಾರ್ವಜನಿಕವಾಗಿ ಅಪಮಾನಗೊಳಿಸಲ್ಪಡಲು ಯೋಸೇಫನು ಬಯಸುವದಿಲ್ಲ. ಆದುದರಿಂದ ರಹಸ್ಯವಾಗಿ ಅವಳನ್ನು ವಿಚ್ಛೇದಿಸುವ ನಿರ್ಧಾರಕ್ಕೆ ಅವನು ಬರುತ್ತಾನೆ. ಆ ಕಾಲದಲ್ಲಿ ಮದುವೆಗೆ ನಿಶ್ಚಿತಾರ್ಥವಾದ ವ್ಯಕ್ತಿಗಳನ್ನು ಮದುವೆಯಾದವರಂತೆ ಪರಿಗಣಿಸುತ್ತಿದ್ದರು ಮತ್ತು ಮದುವೆಯ ನಿಶ್ಚಿತಾರ್ಥವನ್ನು ಅಂತ್ಯಗೊಳಿಸಲು ವಿವಾಹ ವಿಚ್ಛೇದವು ಅವಶ್ಯವಾಗಿತ್ತು.

ತದನಂತರ, ಯೋಸೇಫನು ಈ ವಿಷಯಗಳನ್ನೆಲ್ಲಾ ಇನ್ನೂ ಯೋಚಿಸುತ್ತಾ ಇದ್ದು, ನಿದ್ದೆ ಹೋಗುತ್ತಾನೆ. ಯೆಹೋವನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, ಹೀಗನ್ನುತ್ತಾನೆ: “ಮರಿಯಳನ್ನು ನಿನ್ನ ಹೆಂಡತಿಯಾಗಿ ನಿನ್ನ ಮನೆಗೆ ಕರಕೊಂಡು ಹೋಗಲು ಅಂಜಬೇಡ, ಯಾಕಂದರೆ ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು. ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಪಾಪಗಳಿಂದ ರಕ್ಷಿಸುವನು.”

ಯೋಸೇಫನು ಎಚ್ಚರಗೊಂಡಾಗ, ಅವನೆಷ್ಟು ಕೃತಜ್ಞತೆಯುಳ್ಳವನಾಗಿದ್ದನು! ತಡಮಾಡದೆ ದೇವದೂತನು ಮಾರ್ಗದರ್ಶಿಸಿದಂತೆ ಮಾಡಿದನು. ಅವನು ಮರಿಯಳನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಈ ಬಹಿರಂಗ ಕೃತ್ಯವು ಮದುವೆಯ ಸಮಾರಂಭವೆಂದೂ, ಯೋಸೇಫನು ಮತ್ತು ಮರಿಯಳು ಈಗ ಅಧಿಕೃತವಾಗಿ ಮದುವೆಯಾದವರೆಂದೂ ಅದು ತೋರಿಸಿತು. ಆದರೆ ಮರಿಯಳು ಯೇಸುವನ್ನು ಹಡೆಯುವ ತನಕ, ಯೋಸೇಫನು ಅವಳೊಂದಿಗೆ ಲೈಂಗಿಕ ಸಂಬಂಧವಿಡಲಿಲ್ಲ.

ನೋಡಿರಿ! ಮರಿಯಳು ಪೂರ್ಣ ಗರ್ಭಿಣಿಯಾಗಿದ್ದರೂ, ಯೋಸೇಪನು ಅವಳನ್ನು ಕತ್ತೆಯ ಮೇಲೆ ಕುಳ್ಳಿರಿಸುತ್ತಾನೆ. ಅವರು ಎಲ್ಲಿಗೆ ಹೋಗುತ್ತಿದ್ದಾರೆ, ಮತ್ತು ಮರಿಯಳು ಹೆರಲು ಸಿದ್ಧವಾಗಿರುವ ಈ ಸಮಯದಲ್ಲಿ ಅವರು ಯಾಕೆ ಈ ಪ್ರಯಾಣ ಮಾಡುತ್ತಿದ್ದಾರೆ? ಲೂಕ 1:39-41, 56; ಮತ್ತಾಯ 1:18-25; ಧರ್ಮೋಪದೇಶಕಾಂಡ 22:23, 24.

▪ ಮರಿಯಳ ಗರ್ಭಧಾರಣೆಯು ಗೊತ್ತಾದಾಗ ಯೋಸೇಫನ ಮನಃಸ್ಥಿತಿ ಏನಾಗಿತ್ತು, ಮತ್ತು ಯಾಕೆ?

▪ ಅವರಿನ್ನೂ ಮದುವೆಯಾಗದೆ ಇದ್ದುದರಿಂದ, ಯೋಸೇಫನು ಮರಿಯಳನ್ನು ಹೇಗೆ ವಿಚ್ಛೇದಿಸ ಶಕ್ತನು?

▪ ಯಾವ ಬಹಿರಂಗ ಕೃತ್ಯವು ಯೋಸೇಫನ ಮತ್ತು ಮರಿಯಳ ಮದುವೆಯ ಸಮಾರಂಭವನ್ನು ಸೂಚಿಸಿತ್ತು?