ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನಾಂಗವೊಂದು ನಷ್ಟವಾಯಿತು, ಆದರೆ ಎಲ್ಲರೂ ಅಲ್ಲ

ಜನಾಂಗವೊಂದು ನಷ್ಟವಾಯಿತು, ಆದರೆ ಎಲ್ಲರೂ ಅಲ್ಲ

ಅಧ್ಯಾಯ 79

ಜನಾಂಗವೊಂದು ನಷ್ಟವಾಯಿತು, ಆದರೆ ಎಲ್ಲರೂ ಅಲ್ಲ

ಫರಿಸಾಯನ ಮನೆಯ ಹೊರಗೆ ನೆರೆದವರೊಂದಿಗೆ ಯೇಸುವಿನ ಮಾತುಕತೆಯು ಆದ ಸ್ವಲ್ಪ ಸಮಯದಲ್ಲಿ, ಕೆಲವು ನಿರ್ದಿಷ್ಟ ಜನರು ಅವನಿಗೆ “ಪಿಲಾತನು [ರೋಮನ್‌ ದೇಶಾಧಿಪತಿ ಪೊಂತ್ಯ] ಗಲಿಲಾಯವದರ ರಕ್ತವನ್ನು ಅವರು ಕೊಟ್ಟ ಬಲಿಗಳ ಸಂಗಡ ಬೆರಸಿದರ” ಕುರಿತು ಹೇಳಿದರು. ಈ ಗಲಿಲಾಯದವರು, ಯೆರೂಸಲೇಮಿನ ಒಳಗೆ ನೀರನ್ನು ತರಲಿಕ್ಕಾಗಿ ಮೇಲುಕಾಲುವೆ ಕಟ್ಟಲು ಪಿಲಾತನು ದೇವಾಲಯದ ಭಂಡಾರದ ಹಣವನ್ನು ಉಪಯೋಗಿಸಿದ್ದರ ವಿರುದ್ಧವಾಗಿ ಸಾವಿರಾರು ಯೆಹೂದ್ಯರು ಪ್ರತಿಭಟನೆ ಮಾಡಿದಾಗ ಪ್ರಾಯಶಃ ಕೊಲ್ಲಲ್ಪಟ್ಟವರಾಗಿರಬಹುದು. ಅವರ ಸ್ವಂತ ದುಷ್ಟ ಕಾರ್ಯಗಳ ಕಾರಣ ಇಂಥಾ ಒಂದು ವಿಪತ್ತನ್ನು ಗಲಿಲಾಯದವರು ಅನುಭವಿಸಿದರು ಎಂದು ಈ ವರದಿಯನ್ನು ಯೇಸುವಿಗೆ ನೀಡಿದವರು ಸೂಚಿಸಿರಬಹುದು.

ಆದಾಗ್ಯೂ, ಯೇಸುವು, ಅವರನ್ನು ಸರಿಪಡಿಸುತ್ತಾ, ಕೇಳುವದು: “ಆ ಗಲಿಲಾಯದವರು ಅಂಥ ಕೊಲೆಯನ್ನು ಅನುಭವಿಸಿದ್ದರಿಂದ ಅವರನ್ನು ಎಲ್ಲಾ ಗಲಿಲಾಯದವರಿಗಿಂತ ಪಾಷ್ಠಿರೆಂದು ಭಾವಿಸುತ್ತೀರೋ? ಹಾಗೆ ಭಾವಿಸಕೂಡದೆಂದು ನಿಮಗೆ ಹೇಳುತ್ತೇನೆ” ಎಂದು ಯೇಸು ಉತ್ತರಿಸುತ್ತಾನೆ. ಅನಂತರ ಅವನು ಈ ಘಟನೆಯನ್ನು ಯೆಹೂದ್ಯರಿಗೆ ಎಚ್ಚರಿಕೆಯನ್ನೀಯಲು ಬಳಸುತ್ತಾನೆ: “ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಹಾಗೆಯೇ ಹಾಳಾಗಿ ಹೋಗುವಿರಿ.”

ಮುಂದರಿಸುತ್ತಾ, ಯೇಸುವು ಇನ್ನೊಂದು ಸ್ಥಳೀಕ ದುರಂತವನ್ನು ನೆನಪಿಗೆ ತರುತ್ತಾನೆ, ಪ್ರಾಯಶಃ ಇದು ಸಹಾ ಮೇಲುಕಾಲುವೆಯ ಕಟ್ಟುವಿಕೆಯೊಂದಿಗೆ ಜೊತೆಗೂಡಿರಬಹುದು. ಅವನು ಕೇಳುವದು: “ಇಲ್ಲವೇ ಸಿಲೊವಾಮಿನಲ್ಲಿ ಬುರುಜುಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಅಪರಾಧಿಗಳೆಂದು ಭಾವಿಸುತ್ತೀರೋ?” ಇಲ್ಲ, ಈ ಮನುಷ್ಯರ ಕೆಟ್ಟತನದ ಕಾರಣದಿಂದಾಗಿ ಅವರಿಗೆ ಅ ಮರಣ ಸಂಭವಿಸಿದ್ದಲ್ಲ ಎಂದು ಯೇಸು ಹೇಳುತ್ತಾನೆ. ಬದಲಿಗೆ “ಕಾಲವೂ ಪ್ರಾಪ್ತಿಯೂ” ಸಾಮಾನ್ಯವಾಗಿ ಅಂಥಾ ದುರಂತಗಳಿಗೆ ಜವಾಬ್ದಾರವಾಗಿರುತ್ತವೆ. ಆದಾಗ್ಯೂ, ಯೇಸುವು ಪುನಃ ಆ ಸಂದರ್ಭವನ್ನು ಉಪಯೋಗಿಸಿ ಎಚ್ಚರಿಸುತ್ತಾನೆ: “ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ಹಾಳಾಗಿ ಹೋಗುವಿರಿ.”

ಅನಂತರ ಯೇಸುವು ಒಂದು ಯಥೋಚಿತವಾದ ಸಾಮ್ಯವನ್ನು ಕೊಡುವದನ್ನು ಮುಂದರಿಸುತ್ತಾ, ವಿವರಿಸುವದು: “ಒಬ್ಬಾನೊಬ್ಬನು ತನ್ನ ದ್ರಾಕ್ಷೆಯ ತೋಟದಲ್ಲಿ ಒಂದು ಅಂಜೂರದ ಗಿಡವನ್ನು ನೆಡಿಸಿದನು. ತರುವಾಯ ಅವನು ಅದರಲ್ಲಿ ಹಣ್ಣನ್ನು ಹುಡುಕುತ್ತಾ ಬಂದನು, ಸಿಕ್ಕಲಿಲ್ಲ. ಬಳಿಕ, ಅವನು ತೋಟಮಾಡುವವನಿಗೆ—ನೋಡು, ನಾನು ಮೂರು ವರ್ಷದಿಂದಲೂ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ; ಆದರೂ ನನಗೆ ಸಿಕ್ಕಲಿಲ್ಲ. ಇದನ್ನು ಕಡಿದು ಹಾಕು; ಇದರಿಂದ ಭೂಮಿಯು ಯಾಕೆ ಬಂಜೆಯಾಗಬೇಕು ಎಂದು ಹೇಳಿದನು. ಆದರೆ ತೋಟಮಾಡುವವನು—ಅಯ್ಯಾ, ಈ ವರುಷವೂ ಇದನ್ನು ಬಿಡು; ಅಷ್ಟರಲ್ಲಿ ನಾನು ಇದರ ಸುತ್ತಲೂ ಅಗಿದು, ಗೊಬ್ಬರ ಹಾಕುತ್ತೇನೆ; ಮುಂದೆ ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಇದನ್ನು ಕಡಿದು ಹಾಕಬಹುದು ಎಂದು ಉತ್ತರ ಕೊಟ್ಟನು.”

ಯೇಸುವು ಯೆಹೂದಿ ಜನಾಂಗದಲ್ಲಿ ನಂಬಿಕೆ ಬೆಳೆಸುವ ಪ್ರಯತ್ನದಲ್ಲಿ ಮೂರಕ್ಕಿಂತಲೂ ಹೆಚ್ಚು ವರ್ಷಗಳನ್ನು ವ್ಯಯಿಸಿದನು. ಆದರೆ ಅವನ ಶ್ರಮದ ಫಲವಾಗಿ ಎಂಬಂತೆ ಕೇವಲ ಕೆಲವೇ ನೂರು ಶಿಷ್ಯರುಗಳನ್ನು ಎಣಿಸಸಾಧ್ಯವಿತ್ತು. ಈಗ, ಅವನ ಶುಶ್ರೂಷೆಯ ನಾಲ್ಕನೆಯ ವರ್ಷದಲ್ಲಿ ಅವನು ತನ್ನ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸುತ್ತಾನೆ, ಯೂದಾಯ ಮತ್ತು ಪೆರಿಯಾದಲ್ಲಿ ಸಾರುವದನ್ನು ಮತ್ತು ಕಲಿಸುವದನ್ನು ಹುರುಪಿನಿಂದ ಮಾಡುವುದರ ಮೂಲಕ, ಸಾಂಕೇತಿಕವಾಗಿ ಅಗೆದನು ಮತ್ತು ಗೊಬ್ಬರವನ್ನು ಹಾಕಿದನು. ಆದರೂ, ಏನೂ ಪ್ರಯೋಜನವಾಗಲಿಲ್ಲ! ಜನಾಂಗವು ದೇವರ ಕಡೆಗೆ ತಿರುಗಿಕೊಳ್ಳಲು ನಿರಾಕರಿಸಿತು ಮತ್ತು ಆ ಮೂಲಕ ನಾಶನದ ದಾರಿಯಲ್ಲಿ ಅದು ಇತ್ತು. ಜನಾಂಗದ ಕೇವಲ ಉಳಿಕೆಯವರು ಮಾತ್ರ ಪ್ರತಿವರ್ತನೆ ತೋರಿಸಿದರು.

ಇದಾದ ಸ್ವಲ್ಪ ಸಮಯದ ಮೇಲೆ, ಯೇಸುವು ಸಬ್ಬತ್‌ ದಿನದಲ್ಲಿ ಸಭಾಮಂದಿರವೊಂದರಲ್ಲಿ ಬೋಧಿಸುತ್ತಿದ್ದನು. ಅಲ್ಲಿ ಅವನು ಹದಿನೆಂಟು ವರ್ಷಗಳಿಂದ ದೆವ್ವ ಬಡಿದು ನಡುಬೊಗ್ಗಿಹೋದ ಒಬ್ಬ ಸ್ತ್ರೀಯಿದ್ದಳು. ಕನಿಕರದಿಂದ ಯೇಸುವು ಆಕೆಯನ್ನು ಸಂಬೋಧಿಸುವದು: “ಅಮ್ಮಾ, ನಿನಗೆ ರೋಗ ಬಿಡುಗಡೆಯಾಯಿತು.” ಆಗ ಅವನು ಆಕೆಯ ಮೇಲೆ ಕೈಗಳನ್ನಿಟ್ಟನು ಮತ್ತು ಅವಳು ತಕ್ಷಣವೇ ನೆಟ್ಟಗಾದಳು ಮತ್ತು ದೇವರನ್ನು ಕೊಂಡಾಡಲು ಆರಂಭಿಸಿದಳು.

ಆದಾಗ್ಯೂ, ಸಭಾಮಂದಿರದ ಅಧಿಕಾರಿಯು ಕೋಪಗೊಂಡನು. “ಕೆಲಸಮಾಡುವದಕ್ಕೆ ಆರು ದಿನಗಳು ಇವೆಯಷ್ಟೇ” ಎಂದು ಪ್ರತಿಭಟಿಸುತ್ತಾನೆ. “ಆ ದಿವಸಗಳಲ್ಲಿ ಬಂದು ವಾಸಿಮಾಡಿಕೊಳ್ಳಿರಿ, ಸಬ್ಬತ್‌ ದಿನದಲ್ಲಿ ಮಾತ್ರ ಬೇಡ.” ಈ ರೀತಿಯಲ್ಲಿ ಅಧಿಕಾರಿಯು ಗುಣಪಡಿಸುವ ಯೇಸುವಿನ ಶಕ್ತಿಯನ್ನು ಅಂಗೀಕರಿಸುತ್ತಾನೆ, ಆದರೆ ಸಬ್ಬತ್‌ ದಿನದಲ್ಲಿ ಜನರು ವಾಸಿಮಾಡಿಸಿಕೊಳ್ಳಲು ಬರುವದನ್ನು ಖಂಡಿಸುತ್ತಾನೆ!

“ಕಪಟಿಗಳು ನೀವು,” ಯೇಸುವು ಉತ್ತರಿಸುತ್ತಾನೆ, “ನಿಮ್ಮಲ್ಲಿ ಪ್ರತಿಯೊಬ್ಬನೂ ಸಬ್ಬತ್‌ ದಿನದಲ್ಲಿ ತನ್ನ ಎತ್ತನ್ನಾಗಲಿ ಕತ್ತೆಯನ್ನಾಗಲಿ ಗೋದಲಿಯಿಂದ ಬಿಚ್ಚಿ ನೀರು ಕುಡಿಸುವದಕ್ಕಾಗಿ ಹಿಡುಕೊಂಡು ಹೋಗುತ್ತಾನಲ್ಲವೇ. ಹಾಗಾದರೆ ಹದಿನೆಂಟು ವರುಷಗಳ ತನಕ ಸೈತಾನನು ಕಟ್ಟಿಹಾಕಿದ್ದವಳೂ ಅಬ್ರಹಾಮನ ಸಂತಾನದವಳೂ ಆಗಿರುವ ಈಕೆಯನ್ನು ಸಬ್ಬತ್‌ ದಿನದಲ್ಲಿ ಈ ಕಟ್ಟಿನೊಳಗಿಂದ ಬಿಡಿಸಬಾರದೋ?”

ಒಳ್ಳೇದು, ಇದನ್ನು ಕೇಳಿ ಯೇಸುವನ್ನು ವಿರೋಧಿಸುವವರಿಗೆ ನಾಚಿಗೆಯಾಯಿತು. ಆದಾಗ್ಯೂ, ಗುಂಪುಕೂಡಿದ್ದ ಜನರೆಲ್ಲಾ ಯೇಸುವು ಮಾಡುತ್ತಿರುವ ಎಲ್ಲಾ ಮಹತ್ಕಾರ್ಯಗಳಲ್ಲಿ ಸಂತೋಷ ಪಟ್ಟರು. ಇದಕ್ಕೆ ಪ್ರತಿವರ್ತನೆಯಲ್ಲಿ ಯೇಸುವು ದೇವರ ರಾಜ್ಯದ ಕುರಿತಾದ ಎರಡು ಪ್ರವಾದನಾ ದೃಷ್ಟಾಂತಗಳನ್ನು ಪುನರಾವರ್ತಿಸುತ್ತಾನೆ. ಇದನ್ನು ಆತನು ಸುಮಾರು ಒಂದು ವರ್ಷದ ಹಿಂದೆ ಗಲಿಲಾಯ ಸಮುದ್ರದಲ್ಲಿನ ಒಂದು ದೋಣಿಯ ಮೇಲೆ ನಿಂತು ಅವನು ಕೊಟ್ಟಿದ್ದನು. ಲೂಕ 13:1-21; ಪ್ರಸಂಗಿ 9:11; ಮತ್ತಾಯ 13:31-33.

▪ ಇಲ್ಲಿ ಯಾವ ದುರಂತಗಳನ್ನು ತಿಳಿಸಲಾಗಿದೆ, ಮತ್ತು ಅವುಗಳಿಂದ ಯೇಸುವು ಯಾವ ಪಾಠಗಳನ್ನು ಕಲಿಸುತ್ತಾನೆ?

▪ ಫಲಕೊಡದ ಅಂಜೂರದ ಮರದಿಂದ ಮತ್ತು ಅದನ್ನು ಫಲಭರಿತವಾದದ್ದಾಗಿ ಮಾಡಲು ನಡಿಸಿದ ಪ್ರಯತ್ನಗಳ ಯಾವ ಅನ್ವಯವನ್ನು ಮಾಡಬಹುದು?

▪ ಯೇಸುವಿನ ಗುಣಪಡಿಸುವಿಕೆಯ ಶಕ್ತಿಯ ಕುರಿತಾಗಿ ಅಧಿಕಾರಿಯು ಏನನ್ನು ಅಂಗೀಕರಿಸಿದನು, ಆದರೂ ಆ ಮನುಷ್ಯನ ಕಪಟತನವನ್ನು ಯೇಸುವು ಹೇಗೆ ಬಹಿರಂಗಗೊಳಿಸಿದನು?