ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ

ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ

ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ

ಯಾವನೇ ಮನುಷ್ಯನನ್ನು ಪ್ರಶ್ನಾತೀತವಾಗಿ ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷನೆಂದು ಕರೆಯ ಸಾಧ್ಯವಿದೆಯೇ? ಮನುಷ್ಯನೊಬ್ಬನ ದೊಡ್ಡತನವನ್ನು ನೀವು ಹೇಗೆ ಅಳೆಯಬಲ್ಲಿರಿ? ಅವನ ಮಿಲಿಟರಿಯ ಅತಿಶಯವಾದ ಪ್ರತಿಭೆಯಿಂದಲೇ? ಅವನ ಶಾರೀರಿಕ ಬಲದಿಂದಲೇ? ಅವನ ಮಾನಸಿಕ ಶೌರ್ಯದಿಂದಲೇ?

‘ಯಾವುದನ್ನು ಬೆಳೆಯುವಂತೆ ಬಿಟ್ಟು ಹೋಗುತ್ತಾನೋ ಅದರಿಂದ, ಮತ್ತು ಅವನ ನಂತರವೂ ಪಟ್ಟು ಹಿಡಿದ ಹುರುಪಿನೊಂದಿಗೆ ಆ ಹೊಸ ಧಾರೆಯಲ್ಲಿ ಅಲೋಚಿಸುವಂತೆ ಅವನು ಇತರರನ್ನು ತೊಡಗಿಸಿದ್ದಾನೋ ಇಲ್ಲವೋ, ಅದರಿಂದ’ ಒಬ್ಬ ಮನುಷ್ಯನ ದೊಡ್ಡತನವನ್ನು ಅಳೆಯಸಾಧ್ಯವಿದೆ ಎಂದು ಇತಿಹಾಸಕಾರ ಏಚ್‌. ಜಿ. ವೆಲ್ಸ್‌ ಹೇಳಿದ್ದಾರೆ. ಕ್ರೈಸ್ತನೆಂದು ಹೇಳಿಕೊಳ್ಳದೆ ಇರುವದಾದರೂ, ವೆಲ್ಸ್‌ನು ಅಂಗೀಕರಿಸಿದ್ದು: “ಈ ಪರೀಕ್ಷೆಯಲ್ಲಿ ಯೇಸುವು ಮೊದಲಿಗನಾಗಿ ನಿಲ್ಲುತ್ತಾನೆ.”

ಮಹಾ ಅಲೆಗ್ಸಾಂಡರ್‌, ಷಾರ್ಲ್‌ಮೆನ್‌ (ಅವನ ಸ್ವಂತ ಜೀವಮಾನಕಾಲದಲ್ಲಿ ಕೂಡ “ಮಹಾ” [ಗ್ರೇಟ್‌] ಎಂದು ಬಿರುದು ಪಡೆದಿದ್ದನು), ಮತ್ತು ನೆಪೊಲಿಯನ್‌ ಬೊನಾಪಾರ್ಟ್‌ ಬಹಳ ಶಕ್ತಿಶಾಲಿ ಪ್ರಭುಗಳಾಗಿದ್ದರು. ಅವರ ದಿಗಿಲು ಹುಟ್ಟಿಸುವ ಹಾಜರಿಯಿಂದ ಯಾರ ಮೇಲೆ ದೊರೆತನ ನಡಿಸುತ್ತಿದ್ದರೋ, ಅವರ ಮೇಲೆ ಮಹಾ ಪ್ರಭಾವವನ್ನು ಬೀರಿದ್ದರು. ಆದರೂ, ನೆಪೊಲಿಯನ್‌ ಹೀಗೆ ಹೇಳಿದ್ದಾನೆಂದು ವರದಿಯಾಗಿದೆ: “ಅವನ ಶಾರೀರಿಕ ದೃಶ್ಯ ಹಾಜರಿಯು ಇಲ್ಲದೇ, ಯೇಸು ಕ್ರಿಸ್ತನು ಅವನ ಪ್ರಜೆಗಳ ಮೇಲೆ ಪ್ರಭಾವ ಬೀರಿದ್ದನು ಮತ್ತು ಆಧಿಪತ್ಯ ನಡಿಸಿದ್ದನು.”

ಅವನ ಕ್ರಿಯಾತ್ಮಕ ಬೋಧನೆಗಳಿಂದ ಮತ್ತು ಅವುಗಳ ಸಹಮತದಲ್ಲಿ ಅವನು ಜೀವಿಸಿದ್ದ ರೀತಿಯಿಂದ, ಯೇಸುವು ಸುಮಾರು ಎರಡು ಸಾವಿರ ವರ್ಷಗಳಿಂದ ಜನರ ಜೀವಿತಗಳ ಮೇಲೆ ಶಕ್ತಿಯುತವಾಗಿ ಪ್ರಭಾವ ಬೀರಿದ್ದಾನೆ. ಒಬ್ಬ ಲೇಖಕನು ಸರಿಯಾಗಿಯೇ ಅದನ್ನು ವ್ಯಕ್ತಪಡಿಸಿದ್ದು: “ಪಥಚಲನೆ ಮಾಡಿದ ಎಲ್ಲಾ ಸೇನೆಗಳು ಮತ್ತು ಕಟ್ಟಲ್ಪಟ್ಟ ಎಲ್ಲಾ ನೌಕಾಶಕ್ತಿಗಳು ಮತ್ತು ಆಸೀನರಾದ ಎಲ್ಲಾ ಪಾರ್ಲಿಮೆಂಟುಗಳು, ಆಳಿದ ಎಲ್ಲಾ ಅರಸರುಗಳು, ಇವೆಲ್ಲವುಗಳನ್ನೂ ಒಟ್ಟಿಗೆ ಕೂಡಿಸಿದರೆ, ಈ ಭೂಮಿಯ ಮೇಲೆ ಇದ್ದ ಮನುಷ್ಯನ ಜೀವಿತವನ್ನು ಅಷ್ಟೊಂದು ಬಲವತ್ತಾಗಿ ಪ್ರಭಾವಿಸಿರುವದಿಲ್ಲ.”

ಒಬ್ಬ ಐತಿಹಾಸಿಕ ವ್ಯಕ್ತಿ

ಆದರೂ, ಸೋಜಿಗವಾಗಿಯೇ, ಯೇಸುವು ಎಂದಿಗೂ ಜೀವಿಸಿರಲೇ ಇಲ್ಲ ಎಂದು ಕೆಲವರು ಹೇಳುತ್ತಾರೆ—ಪರಿಣಾಮವಾಗಿ, ಅವನು ಮೊದಲನೆಯ ಶತಕದ ಕೆಲವು ಮನುಷ್ಯರ ಸೃಷ್ಟಿಯಾಗಿದ್ದಾನೆ. ಅಂಥ ಸಂದೇಹವಾದಿಗಳಿಗೆ ಉತ್ತರಿಸುತ್ತಾ, ಇತಿಹಾಸಕಾರ ವಿಲ್‌ ಡುರಾಂಟ್‌ ವಾದಿಸಿದ್ದು: “ಅಂಥ ಬಲಶಾಲಿ ಮತ್ತು ಆಕರ್ಷಕ ಒಂದು ವ್ಯಕ್ತಿತ್ವವನ್ನು, ನೈತಿಕತೆಯಲ್ಲಿ ಅಷ್ಟು ಉನ್ನತವಾದ ಮತ್ತು ಮಾನವ ಸಹೋದರತ್ವದ ಅಷ್ಟೊಂದು ಪ್ರೇರಕ ಒಂದು ನೋಟವನ್ನು ಒಂದು ಸಂತತಿಯಲ್ಲಿ ಕೇವಲ ಕೆಲವೇ ಸರಳ ಮನುಷ್ಯರು ರಚಿಸುವದು ತಾನೇ, ಸುವಾರ್ತೆಗಳಲ್ಲಿ ದಾಖಲೆಯಾದ ಯಾವುದೇ ಅದ್ಭುತಕ್ಕಿಂತ ಹೆಚ್ಚು ನಂಬಲಸಾಧ್ಯವಾದ ಒಂದು ಅದ್ಭುತವಾಗಬಹುದು.”

ನಿಮ್ಮನ್ನೇ ಕೇಳಿಕೊಳ್ಳಿರಿ: ಅಷ್ಟೊಂದು ಗಮನಾರ್ಹವಾದ ರೀತಿಯಲ್ಲಿ ಮಾನವ ಇತಿಹಾಸದ ಮೇಲೆ ಪ್ರಭಾವ ಬೀರಿದ ಒಬ್ಬ ವ್ಯಕ್ತಿಯು ಜೀವಿಸದೇ ಇರಲು ಸಾಧ್ಯವೇ? ದ ಹಿಸ್ಚೊರಿಯನ್ಸ್‌ ಹಿಸ್ಟರಿ ಆಫ್‌ ದ ವರ್ಲ್ಡ್‌ [ಲೋಕದ ಇತಿಹಾಸಕಾರರ ಇತಿಹಾಸ] ಎಂಬ ಸಂಶೋಧನೆಯ ಪುಸ್ತಕದಲ್ಲಿ ಅವಲೋಕಿಸಿದ್ದು: “[ಯೇಸುವಿನ] ಚಟುವಟಿಕೆಗಳ ಐತಿಹಾಸಿಕ ಫಲಿತಾಂಶವು, ಕಟ್ಟುನಿಟ್ಟಾದ ಐಹಿಕ ದೃಷ್ಟಿಕೋನದಲ್ಲಿ ಕೂಡ, ಇತಿಹಾಸದ ಬೇರೆ ಯಾವುದೇ ವ್ಯಕ್ತಿಗಿಂತ ಹೆಚ್ಚು ಪ್ರಮುಖವಾಗಿದೆ. ಲೋಕದ ಪ್ರಮುಖ ನಾಗರಿಕತೆಗಳಿಂದ ಅಂಗೀಕೃತವಾಗಿರುವಂತೆ, ಒಂದು ಹೊಸ ಶಕವು ಅವನ ಜನನದಿಂದ ಆರಂಭಗೊಂಡಿತು.”

ಹೌದು, ಅದರ ಕುರಿತು ಯೋಚಿಸಿರಿ. ಯೇಸುವು ಹುಟ್ಟಿದ್ದನೆಂದು ನೆನಸುವ ವರ್ಷದ ಮೇಲೆ ಕ್ಯಾಲಂಡರುಗಳು ಆಧರಿತವಾಗಿವೆ. “ಕ್ರಿ.ಪೂ. (B.C.) ಯಾ ಕ್ರಿಸ್ತ ಪೂರ್ವ ಎಂದು ಆ ವರ್ಷಕ್ಕಿಂತ ಮೊದಲಿನ ತಾರೀಕುಗಳು ಪಟ್ಟಿಮಾಡಲ್ಪಟ್ಟಿವೆ,” ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ವಿವರಿಸುತ್ತದೆ. “ಆ ವರ್ಷದ ನಂತರದ ತಾರೀಕುಗಳು ಕ್ರಿ.ಶ. (A.D.) ಯಾ ಅನ್ನೊ ಡೊಮಿನಿ (ನಮ್ಮ ಕರ್ತನ ವರ್ಷದಲ್ಲಿ) ಎಂದು ಪಟ್ಟಿ ಮಾಡಲ್ಪಟ್ಟಿವೆ.”

ಅದಾಗ್ಯೂ, ಯೇಸುವಿನ ಕುರಿತು ನಮಗೆ ನಿಜವಾಗಿ ತಿಳಿದಿರುವದೆಲ್ಲವೂ ಬೈಬಲಿನಲ್ಲಿ ಹೇಳಲ್ಪಟ್ಟದ್ದಾಗಿರುತ್ತದೆ ಎಂದು ಠೀಕಾಕಾರರು ತೋರಿಸುತ್ತಾರೆ. ಅವನ ಅಸ್ತಿತ್ವದ ಕುರಿತು, ಬೇರೆ ಯಾವುವೇ ಸಮಕಾಲೀನ ದಾಖಲೆಗಳಲ್ಲಿ ಇಲ್ಲ, ಎಂದವರು ಹೇಳುತ್ತಾರೆ. ಏಚ್‌. ಜಿ. ವೆಲ್ಸ್‌ ಕೂಡ ಬರೆದದ್ದು: “ಪ್ರಾಚೀನ ರೋಮನ್‌ ಇತಿಹಾಸಕಾರರು ಯೇಸುವನ್ನು ಪೂರ್ಣವಾಗಿ ಅಲಕ್ಷ್ಯ ಮಾಡಿರುತ್ತಾರೆ; ಅವನ ಸಮಯದ ಐತಿಹಾಸಿಕ ದಾಖಲೆಗಳಲ್ಲಿ ಅವನು ಯಾವುದೇ ಅಚ್ಚೊತ್ತಿರುವದಿಲ್ಲ.” ಇದು ಸತ್ಯವೋ?

ಆರಂಭದ ಐಹಿಕ ಇತಿಹಾಸಕಾರರಿಂದ ಯೇಸು ಕ್ರಿಸ್ತನ ಕುರಿತಾದ ಪರಾಮರ್ಶೆಯ ವಿಷಯಗಳು ಕೊಂಚವೇ ಆದರೂ, ಅಂಥಾ ಪರಾಮರ್ಶೆಯ ವಿಷಯಗಳು ಅಸ್ತಿತ್ವದಲ್ಲಿವೆ ಎಂಬುದು ನಿಜ. ಕೊರ್ನೇಲಿಯಸ್‌ ಟೆಸಿಟಸ್‌, ಒಬ್ಬ ಮೊದಲ ಶತಕದ ಗೌರವಾನಿತ್ವ ರೋಮನ್‌ ಇತಿಹಾಸಕಾರನು ಬರೆದುದು: “ಆ ಹೆಸರು [ಕ್ರೈಸ್ತರು] ಕ್ರಿಸ್ತನು ಎಂಬುದರಿಂದ ಬಂದಿರುತ್ತದೆ, ಇವನನ್ನು ತಿಬೇರಿಯನ ಆಳಿಕ್ವೆಯ ಸಮಯದಲ್ಲಿ ದೇಶಾಧಿಪತಿಯಾದ ಪೊಂತ್ಯ ಪಿಲಾತನು ಕೊಲ್ಲಿಸಿದ್ದನು.” ಸ್ಯೂಟೊನಿಯಸ್‌ ಮತ್ತು ಪಿನ್ಲೀ ದ ಯಂಗರ್‌, ಆ ಸಮಯದ ಇತರ ರೋಮನ್‌ ಲೇಖಕರು ಕೂಡ ಕ್ರಿಸ್ತನ ಕುರಿತು ಉಲ್ಲೇಖಿಸಿರುತ್ತಾರೆ. ಇದಕ್ಕೆ ಕೂಡಿಸಿ, ಮೊದಲನೆಯ ಶತಕದ ಯೆಹೂದಿ ಇತಿಹಾಸಕಾರನಾದ ಫೆವ್ಲಿಯಸ್‌ ಜೋಸೀಫಸ್‌ ಯಾಕೋಬನ ಕುರಿತು ಬರೆಯುತ್ತಾ, “ಕ್ರಿಸ್ತನೆಂದು ಕರೆಯಲ್ಪಡುತ್ತಿದ್ದ ಯೇಸುವಿನ ಸಹೋದರನು” ಎಂದು ಅವನನ್ನು ಗುರುತಿಸಿದ್ದಾನೆ.

ದ ನ್ಯೂ ಎನ್‌ಸೈಕ್ಲೊಪೀಡಿಯಾ ಬ್ರಿಟಾನಿಕ ಈ ರೀತಿ ಕೊನೆಗೊಳಿಸುತ್ತದೆ: “ಯೇಸುವಿನ ಐತಿಹಾಸಿಕತ್ವದ ಕುರಿತು ಕ್ರೈಸ್ತತ್ವದ ವಿರೋಧಿಗಳು ಕೂಡ ಪ್ರಾಚೀನ ಕಾಲಗಳಲ್ಲಿ ಎಂದಿಗೂ ಸಂದೇಹ ಪಟ್ಟಿರಲಿಲ್ಲ ಎಂದು ಈ ಸ್ವತಂತ್ರವಾದ ದಾಖಲೆಗಳು ರುಜುಪಡಿಸುತ್ತವೆ. 18-ನೆಯ ಶತಮಾನದ ಅಂತಿಮ ಭಾಗದಲ್ಲಿ, 19ನೆಯ ಶತಮಾನದಲ್ಲಿ ಮತ್ತು ಇಪ್ಪತ್ತನೆಯ ಶತಕದ ಆರಂಭದಲ್ಲಿ, ಮೊದಲ ಬಾರಿ ಮತ್ತು ಸಾಕಷ್ಟು ನೆಲೆಯಿಲ್ಲದ ಅಧಾರದ ಮೇಲೆ ಇದನ್ನು ವಾದಿಸಲಾಯಿತು.”

ಆದಾಗ್ಯೂ, ಆವಶ್ಯಕವಾಗಿಯೇ, ಯೇಸುವಿನ ಕುರಿತು ಏನೆಲ್ಲಾ ತಿಳಿದದೆಯೋ ಅದು, ಅವನ ಮೊದಲನೆಯ ಶತಕದ ಹಿಂಬಾಲಕರಿಂದ ದಾಖಲೆ ಮಾಡಲ್ಪಟ್ಟದೆ. ಅವರ ವರದಿಗಳು ಸುವಾರ್ತೆಗಳಲ್ಲಿ—ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನರಿಂದ ಬರೆಯಲ್ಪಟ್ಟ ಬೈಬಲ್‌ ಪುಸ್ತಕಗಳು—ಸಂರಕ್ಷಿಸಲ್ಪಟ್ಟಿವೆ. ಯೇಸುವಿನ ಪರಿಚಯದ ಕುರಿತು ಈ ದಾಖಲೆಗಳು ಏನನ್ನು ಹೇಳುತ್ತವೆ?

ವಾಸ್ತವದಲ್ಲಿ, ಅವನು ಯಾರಾಗಿದ್ದನು?

ಯೇಸುವಿನ ಮೊದಲನೆಯ ಶತಕದ ಸಹವಾಸಿಗಳು ಈ ಪ್ರಶ್ನೆಯ ಮೇಲೆ ಚಿಂತನೆ ಮಾಡಿದ್ದರು. ಬಿರುಗಾಳಿ ಎದ್ದು ಅಲ್ಲೋಲಕಲ್ಲೋಲಗೊಂಡ ಸಮುದ್ರವನ್ನು ಯೇಸುವು ಗದರಿಸಿದ ಮೂಲಕ ಅದ್ಭುತಕರವಾಗಿ ಶಾಂತಗೊಳಿಸಿದ್ದನ್ನು ಅವರು ನೋಡಿದಾಗ, ಆಶ್ಚರ್ಯಗೊಂಡು ವಿಸ್ಮಿತರಾದರು: “ಈತನು ಯಾರಿರಬಹುದು?” ಎಂದರು. ನಂತರ, ಇನ್ನೊಂದು ಸಂದರ್ಭದಲ್ಲಿ, ಯೇಸುವು ತನ್ನ ಅಪೊಸ್ತಲರಿಗೆ ಕೇಳಿದ್ದು: “ಆದರೆ ನೀವು ನನ್ನನ್ನು ಯಾರನ್ನುತ್ತೀರಿ?”—ಮಾರ್ಕ 4:41; ಮತ್ತಾಯ 16:15.

ನಿಮಗೆ ಆ ಪ್ರಶ್ನೆಯನ್ನು ಕೇಳುವದಾದರೆ, ನೀವು ಹೇಗೆ ಉತ್ತರಿಸುವಿರಿ? ವಾಸ್ತವವಾಗಿ ಯೇಸುವು ದೇವರಾಗಿದ್ದನೋ? ಇಂದು ಅನೇಕರು ಅವನು ಹಾಗಿದ್ದನು ಎಂದು ನಂಬುತ್ತಾರೆ. ಆದರೂ, ಅವನು ದೇವರಾಗಿದ್ದನು ಎಂದು ಅವನ ಸಂಗಾತಿಗಳು ಎಂದಿಗೂ ನಂಬಿರಲಿಲ್ಲ. ಯೇಸುವಿನ ಪ್ರಶ್ನೆಗೆ ಅಪೊಸ್ತಲ ಪೇತ್ರನ ಪ್ರತಿವರ್ತನೆ ಇದಾಗಿತ್ತು: “ನೀನು ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು.”—ಮತ್ತಾಯ 16:16.

ಯೇಸುವು ತಾನು ದೇವರೆಂದು ಎಂದೂ ವಾದಿಸಿರಲಿಲ್ಲ, ಬದಲು ತಾನು ವಾಗ್ದಾನಿತ ಮೆಸ್ಸೀಯ ಇಲ್ಲವೇ ಕ್ರಿಸ್ತನು ಆಗಿದ್ದನು ಎಂದು ಅವನು ಅಂಗೀಕರಿಸಿದ್ದಾನೆ. ತಾನು ದೇವರಲ್ಲ ಬದಲು “ದೇವರ ಮಗನಾಗಿದ್ದೇನೆ,” ಎಂದು ಕೂಡ ಅವನು ಹೇಳಿದ್ದನು. (ಯೋಹಾನ 4:25, 26; 10:36) ಆದರೂ, ಇತರ ಯಾವನೇ ಮನುಷ್ಯನಂತೆ, ಯೇಸು ಒಬ್ಬ ಮನುಷ್ಯನಾಗಿದ್ದನೆಂದು ಬೈಬಲ್‌ ಹೇಳುವದಿಲ್ಲ. ಬೇರೆ ಎಲ್ಲಾ ವಿಷಯಗಳಿಗಿಂತ ಮುಂಚಿತವಾಗಿ ದೇವರಿಂದ ಸೃಷ್ಟಿಸಲ್ಪಟ್ಟ ಕಾರಣ, ಅವನು ಒಬ್ಬ ಅತಿ ವಿಶೇಷ ವ್ಯಕ್ತಿಯಾಗಿದ್ದನು. (ಕೊಲೊಸ್ಸೆ 1:15) ಅಗಣಿತ ಕೋಟ್ಯಾನುಕೋಟಿ ವರ್ಷಗಳಿಂದ, ಈ ಭೌತಿಕ ವಿಶ್ವವು ಕೂಡ ಸೃಷ್ಟಿಸಲ್ಪಡುವ ಮೊದಲು, ಪರಲೋಕದಲ್ಲಿ ಒಬ್ಬ ಆತ್ಮ ವ್ಯಕ್ತಿಯಾಗಿ ಯೇಸುವು ಜೀವಿಸಿದ್ದನು ಮತ್ತು ಅವನ ತಂದೆಯೂ, ಮಹಾ ನಿರ್ಮಾಣಿಕನೂ ಆದ ಯೆಹೋವ ದೇವರೊಂದಿಗಿನ ಒಂದು ಆಪ್ತ ಸಂಬಂಧದಲ್ಲಿ ಆನಂದಿಸಿದ್ದನು.—ಜ್ಞಾನೋಕ್ತಿ 8:22, 27-31.

ಅನಂತರ, ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ದೇವರು ತನ್ನ ಮಗನ ಜೀವವನ್ನು ಒಬ್ಬಾಕೆ ಸ್ತ್ರೀಯ ಗರ್ಭಕ್ಕೆ ಸ್ಥಾನಾಂತರ ಮಾಡಿದನು ಮತ್ತು ಹೀಗೆ ಸ್ತ್ರೀಯ ಮೂಲಕ ಸಾಮಾನ್ಯ ರೀತಿಯಲ್ಲಿ ಜನಿಸಲ್ಪಟ್ಟ ಯೇಸುವು ದೇವರ ಮಾನವ ಪುತ್ರನಾದನು. (ಗಲಾತ್ಯ 4:4) ಗರ್ಭದಲ್ಲಿ ಯೇಸುವು ರೂಪುಗೊಳ್ಳುತ್ತಿದ್ದಾಗ ಮತ್ತು ಬಾಲಕನೋಪಾದಿ ಬೆಳೆಯುತ್ತಿದ್ದಾಗ, ಅವನ ಐಹಿಕ ಹೆತ್ತವರಾಗಿರಲು ಯಾರನ್ನು ದೇವರು ಆರಿಸಿದ್ದನೋ, ಅವರ ಮೇಲೆ ಆತನು ಆತುಕೊಂಡಿದ್ದನು. ಕ್ರಮೇಣ, ಅವನು ಯೌವನಕ್ಕೆ ಕಾಲಿಟ್ಟನು ಮತ್ತು ಪರಲೋಕದಲ್ಲಿ ದೇವರೊಂದಿಗೆ ಅವನಿಗೆ ಮೊದಲಿದ್ದ ಸಹವಾಸದ ಪೂರ್ಣ ನೆನಪು ಅವನಿಗೆ ಕೊಡಲ್ಪಟ್ಟಿತು.—ಯೋಹಾನ 8:23; 17:5.

ಅವನನ್ನು ಮಹಾ ಪುರುನನ್ನಾಗಿ ಮಾಡಿದ್ದ ಸಂಗತಿ

ತನ್ನ ಪರಲೋಕದ ತಂದೆಯನ್ನು ಅವನು ಜಾಗರೂಕತೆಯಿಂದ ಅನುಕರಿಸಿದ್ದರಿಂದ, ಯೇಸುವು ಜೀವಿಸಿರುವವರಲ್ಲಿ ಅತ್ಯಂತ ಮಹಾ ಪುರುಷನಾದನು. ಒಬ್ಬ ನಂಬಿಗಸ್ತ ಪುತ್ರನೋಪಾದಿ, ಯೇಸುವು ಅವನ ತಂದೆಯನ್ನು ಎಷ್ಟೊಂದು ನಿಖರವಾಗಿ ಅನುಕರಿಸಿದನೆಂದರೆ, ಅವನು ತನ್ನ ಹಿಂಬಾಲಕರಿಗೆ ಹೀಗೆ ಹೇಳಶಕ್ತನಾದನು: “ನನ್ನನ್ನು ನೋಡಿದವನು ನನ್ನ ತಂದೆಯನ್ನು ಕೂಡ ನೋಡಿದ್ದಾನೆ.” (ಯೋಹಾನ 14:9, 10) ಭೂಮಿಯಲ್ಲಿರುವ ಪ್ರತಿಯೊಂದು ಸಂದರ್ಭದಲ್ಲಿ, ಸರ್ವಶಕ್ತ ದೇವರಾದ ತನ್ನ ತಂದೆಯು ಮಾಡಬಹುದಾದ ರೀತಿಯಲ್ಲಿಯೇ ಅವನು ಮಾಡಿದನು. “ನನ್ನಷ್ಟಕ್ಕೆ ನಾನೇ ಏನೂ ಮಾಡದೆ,” ಯೇಸುವು ವಿವರಿಸುವದು, “ತಂದೆಯು ನನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದೆನು.” (ಯೋಹಾನ 8:28) ಆದುದರಿಂದ ಯೇಸುಕ್ರಿಸ್ತನ ಜೀವಿತವನ್ನು ನಾವು ಅಭ್ಯಾಸ ಮಾಡುವಾಗ, ತತ್ಪರಿಣಾಮವಾಗಿ, ದೇವರು ಏನಾಗಿದ್ದಾನೆ ಎಂಬುದರ ಒಂದು ಸ್ಪಷ್ಟವಾದ ಚಿತ್ರಣವನ್ನು ಪಡೆಯತ್ತೇವೆ.

ಆದಕಾರಣ, “ದೇವರನ್ನು ಯಾರೂ ಎಂದು ಕಂಡಿಲ್ಲ,” ಎಂದು ಅಪೊಸ್ತಲ ಯೋಹಾನನು ಅಂಗೀಕರಿಸಿದರೂ, “ದೇವರು ಪ್ರೀತಿಸ್ವರೂಪಿಯು” ಎಂದು ಅವನು ಬರೆಯಶಕ್ತನಾದನು. (ಯೋಹಾನ 1:18; 1 ಯೋಹಾನ 4:8) ಯೋಹಾನನು ಇದನ್ನು ಮಾಡಶಕ್ತನಾದನು ಯಾಕಂದರೆ ತಂದೆಯ ಪರಿಪೂರ್ಣ ಪ್ರತಿಬಿಂಬವಾಗಿದ್ದ ಯೇಸುವಿನಲ್ಲಿ ಅವನು ಏನನ್ನು ಕಂಡನೋ ಅದರ ಮೂಲಕ ದೇವರ ಪ್ರೀತಿಯನ್ನು ತಿಳಿಯ ಶಕ್ತನಾದನು. ಯೇಸುವು ಕನಿಕರ, ದಯೆ, ನಮ್ರತೆ ಇದ್ದವನೂ ಮತ್ತು ಸಮೀಪಿಸಬಹುದಾದವನೂ ಆಗಿದ್ದನು. ಅವನೊಂದಿಗೆ ನಿರ್ಬಲರೂ, ಕೆಳಗೆ ತುಳಿಯಲ್ಪಟ್ಟವರೂ ನೆಮ್ಮದಿ ಪಡೆಯುತ್ತಿದ್ದರು, ತದ್ರೀತಿಯಲ್ಲಿ ಎಲ್ಲಾ ವಿಧದ ಜನರೂ—ಪುರುಷರು, ಸ್ತ್ರೀಯರು, ಮಕ್ಕಳು, ಐಶ್ವರ್ಯವಂತರು, ಬಡವರು, ಬಲಶಾಲಿಗಳು, ಘೋರ ಪಾಪಿಗಳು ಕೂಡ. ಹೃದಯದಲ್ಲಿ ದುಷ್ಟರಾಗಿದವ್ದರು ಮಾತ್ರ ಅವನನ್ನು ಮೆಚ್ಚುತ್ತಿರಲಿಲ್ಲ.

ಒಬ್ಬರು ಇನ್ನೊಬ್ಬರನ್ನು ಪ್ರೀತಿಸಬೇಕೆಂದು ಯೇಸುವು ತನ್ನ ಹಿಂಬಾಲಕರಿಗೆ ಕೇವಲ ಕಲಿಸಿದ್ದು ಮಾತ್ರವಲ್ಲ, ಅದು ಹೇಗೆ ಎಂದೂ ಅವನು ತೋರಿಸಿದನು. “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ,” ಅವನು ಅಂದದ್ದು, “ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.” (ಯೋಹಾನ 13:34) “ಕ್ರಿಸ್ತನ ಪ್ರೀತಿಯನ್ನು” ತಿಳಿಯುವದು, “ಜ್ಞಾನಕ್ಕೆ ಮೀರಿದ್ದು” ಎಂದು ಅವನ ಅಪೊಸ್ತಲರಲ್ಲೊಬ್ಬನು ವಿವರಿಸುತ್ತಾನೆ. (ಎಫೆಸ 3:19) ಹೌದು, ಕ್ರಿಸ್ತನು ಪ್ರದರ್ಶಿಸಿದ ಪ್ರೀತಿಯು ಜಿಜ್ಞಾಸೆಯ ತಲೇ ಜ್ಞಾನಕ್ಕಿಂತ ಮೇಲಕ್ಕೇರಿ, ಅದಕ್ಕೆ ಇತರರು ಪ್ರತಿಸ್ಪಂದಿಸುವಂತೆ “ಒತ್ತಾಯಮಾಡುತ್ತದೆ.” (2 ಕೊರಿಂಥ 5:14) ಈ ರೀತಿಯಲ್ಲಿ, ಯೇಸುವಿನ ಪ್ರೀತಿಯ ಅತಿಶಯವಾದ ಮಾದರಿಯು, ನಿರ್ದಿಷ್ಟವಾಗಿ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷನಾಗಿ ಅವನನ್ನು ಮಾಡಿತ್ತು. ಶತಮಾನಗಳಿಂದ ಅವನ ಪ್ರೀತಿಯು ಲಕ್ಷಾಂತರ ಹೃದಯಗಳನ್ನು ಸ್ಪರ್ಶಿಸಿದೆ ಮತ್ತು ಒಳ್ಳಿತಿಗಾಗಿ ಅವರ ಜೀವಿತವನ್ನು ಪ್ರಭಾವಿಸಿದೆ.

ಆದರೂ, ಕೆಲವರು ಅಡ್ಡಿ ಮಾಡಬಹುದು: ‘ಕ್ರಿಸ್ತನ ಹೆಸರಿನಲ್ಲಿ ಗೈಯಲ್ಪಟ್ಟ ಎಲ್ಲಾ ಪಾತಕಗಳನ್ನು ನೋಡಿರಿ—ಧರ್ಮಯುದ್ಧಗಳು [ಕ್ರುಸೇಡುಗಳು], ಮಠೀಯ ನ್ಯಾಯವಿಚಾರಣೆಗಳು, ಮತ್ತು ಪರಸ್ಪರ ವಿರೋಧದ ಯುದ್ಧರಂಗದಲ್ಲಿ ಕ್ರೈಸ್ತರೆಂದು ಹೇಳಿಕೊಳ್ಳುವವರು ಒಬ್ಬರನ್ನೊಬ್ಬರು ಲಕ್ಷಾಂತರಗಟ್ಟಲೆಯಲ್ಲಿ ಕೊಲ್ಲುವದು.’ ಯೇಸುವಿನ ಹಿಂಬಾಲಕರೆಂದು ಹೇಳಿಕೊಳ್ಳುವ ತಮ್ಮ ವಾದವನ್ನು ಈ ಜನರು ಅಲ್ಲಗಳೆಯುತ್ತಾರೆ ಎಂಬುದು ಸತ್ಯವಾಗಿರುತ್ತದೆ. ಅವನ ಬೋಧನೆಗಳು ಮತ್ತು ಜೀವಿತಾ ಮಾರ್ಗವು ಅವರ ಕೃತ್ಯಗಳನ್ನು ಖಂಡಿಸುತ್ತವೆ. ಒಬ್ಬ ಹಿಂದುವಾಗಿದ್ದ, ಮೋಹನದಾಸ್‌ ಗಾಂಧೀಯವರೂ ಇದನ್ನು ಹೇಳುವಂತೆ ನಡಿಸಲ್ಪಟ್ಟರು: ‘ನಾನು ಕ್ರಿಸ್ತನನ್ನು ಪ್ರೀತಿಸುತ್ತೇನೆ, ಆದರೆ ಕ್ರಿಸ್ತನು ಜೀವಿಸಿದಂತೆ ಅವರು ಜೀವಿಸದೆ ಇರುವ ಕಾರಣ ನಾನು ಕ್ರೈಸ್ತರನ್ನು ಹೇಸುತ್ತೇನೆ.’

ಅವನ ಕುರಿತು ಕಲಿಯುವದರಿಂದ ಪ್ರಯೋಜನ

ಯೇಸು ಕ್ರಿಸ್ತನ ಜೀವಿತ ಮತ್ತು ಶುಶ್ರೂಷೆಯ ಕುರಿತು ಅಧ್ಯಯನ ಮಾಡುವದಕ್ಕಿಂತ ಬೇರೆ ಯಾವದೂ ಹೆಚ್ಚು ಪ್ರಾಮುಖ್ಯವಾಗಿರ ಸಾಧ್ಯವಿಲ್ಲ. “ಯೇಸುವನ್ನು . . . ಶೃದ್ಧೆಯಿಂದ ದೃಷ್ಟಿಸಿರಿ,” [NW] ಎಂದು ಅಪೊಸ್ತಲ ಪೌಲನು ಪ್ರೇರಿಸಿದ್ದಾನೆ. “ಅವನನ್ನು ಹತ್ತಿರದಿಂದ ಗಮನಿಸಿರಿ.” ಮತ್ತು ದೇವರು ತಾನೇ ತನ್ನ ಮಗನ ಕುರಿತು ಆಜ್ಞಾಪಿಸಿದ್ದು: “ಈತನ ಮಾತನ್ನು ಕೇಳಿರಿ.” ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಎಂಬ ಈ ಪುಸ್ತಕವು ಅದನ್ನು ತಾನೇ ಮಾಡಲು ನಿಮಗೆ ಸಹಾಯ ಮಾಡಲಿರುವದು.—ಇಬ್ರಿಯ 12:2, 3; ಮತ್ತಾಯ 17:5.

ನಾಲ್ಕು ಸುವಾರ್ತೆಗಳಲ್ಲಿ ತಿಳಿಸಲ್ಪಟ್ಟಂಥ ಯೇಸುವಿನ ಐಹಿಕ ಜೀವಿತದ ಪ್ರತಿಯೊಂದು ಘಟನೆಯನ್ನು, ಅವನು ನೀಡಿದ ಭಾಷಣಗಳ, ಮತ್ತು ಸಾಮ್ಯಗಳ ಮತ್ತು ಅದ್ಭುತಗಳ ಸಹಿತ, ಸಾದರ ಪಡಿಸಲು ಪ್ರಯತ್ನವನ್ನು ಮಾಡಲಾಗಿದೆ. ಎಷ್ಟು ಸಾಧ್ಯವೋ ಅಷ್ಟೊಂದು ಮಟ್ಟಿಗೆ, ಅದು ಸಂಭವಿಸಿದ ಕ್ರಮಬದ್ಧತೆಯಲ್ಲಿ ಪ್ರತಿಯೊಂದನ್ನು ಅಳವಡಿಸಲಾಗಿದೆ. ಪ್ರತಿಯೊಂದು ಅಧ್ಯಾಯದ ಅಂತ್ಯದಲ್ಲಿ ಯಾವ ಅಧ್ಯಾಯದ ಮೇಲೆ ಆಧರಿತವಾಗಿದೆಯೋ ಆ ಬೈಬಲ್‌ ವಚನಗಳ ಪಟ್ಟಿಯೊಂದು ಇದೆ. ಈ ವಚನಗಳನ್ನು ಓದುವಂತೆ ಮತ್ತು ಕೊಡಲ್ಪಟ್ಟ ಪರಾಮರ್ಶೆಯ ಪ್ರಶ್ನೆಗಳನ್ನು ಉತ್ತರಿಸುವಂತೆ ನಿಮ್ಮನ್ನು ಉತ್ತೇಜಿಸಲಾಗಿದೆ.

ಇತ್ತೇಚಿಗೆ ಶಿಕಾಗೋ ವಿಶ್ವ ವಿದ್ಯಾಲಯದ ಒಬ್ಬ ಶಾಸ್ತ್ರಜ್ಞನು ಹೀಗೆ ಹೇಳಿದನು: “ಕಳೆದ ಎಪ್ಪತ್ತು ವರ್ಷಗಳಲ್ಲಿ ಯೇಸುವಿನ ಕುರಿತು, ಇದರ ಹಿಂದಿನ ಎರಡು ಸಾವಿರ ವರ್ಷಗಳಿಗಿಂತಲೂ ಅಧಿಕವಾಗಿ ಬರೆಯಲಾಗಿದೆ.” ಆದರೂ, ಸುವಾರ್ತೆ ಪುಸ್ತಕಗಳ ದಾಖಲೆಗಳನ್ನು ವ್ಯಕ್ತಿಗತವಾಗಿ ಪರಿಗಣಿಸುವ ಅಗತ್ಯವಿದೆ, ಯಾಕಂದರೆ ದ ಎನ್‌ಸೈಕ್ಲೊಪೀಡಿಯಾ ಬ್ರಿಟಾನಿಕ ಹೇಳುವದು: “ಬಹು ಮಂದಿ ಆಧುನಿಕ ವಿದ್ಯಾರ್ಥಿಗಳು ಯೇಸುವಿನ ಮತ್ತು ಸುವಾರ್ತೆ ಪುಸ್ತಕಗಳ ಕುರಿತಾದ ಪರಸ್ಪರ ತಿಕ್ಕಾಟದ ವಾದವಿಷಯಗಳಿಂದ ಈಗಾಗಲೇ ಎಷ್ಟೊಂದು ಪೂರ್ವಾಗ್ರಹದಿಂದ ತುಂಬಲ್ಪಟ್ಟಿದ್ದಾರೆ ಅಂದರೆ ಅವುಗಳನ್ನು ಅವುಗಳ ಮೂಲದಲ್ಲಿಯೇ ಅಧ್ಯಯನ ಮಾಡುವದನ್ನು ನಿರ್ಲಕ್ಷ್ಯಿಸಿದ್ದಾರೆ.”

ಸುವಾರ್ತೆ ಪುಸ್ತಕಗಳ ದಾಖಲೆಗಳ ಒಂದು ನಿಕಟ, ಪೂರ್ವಾಗ್ರಹಪೀಡಿತವಲ್ಲದ ಪರಿಗಣನೆಯ ನಂತರ, ಮಾನವ ಇತಿಹಾಸದ ಎಲ್ಲಾ ಘಟನೆಗಳ ಅತಿ ಮಹಾ ಘಟನೆಯು ರೋಮನ್‌ ಕೈಸರ ಔಗುಸ್ತನ ಆಳಿಕ್ವೆಯಲ್ಲಿ ಸಂಭವಿಸಿತು ಎಂದು ನೀವು ಒಪ್ಪುವಿರಿ ಎಂದು ನಾವು ಭಾವಿಸುತ್ತೇವೆ, ಆಗ ನಜರೇತಿನ ಯೇಸುವು, ನಮ್ಮ ಪರವಾಗಿ ಅವನ ಜೀವವನ್ನು ಕೊಡಲು ಕಾಣಿಸಿಕೊಂಡನು.