ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಂದೆತನದ ಪ್ರಶ್ನೆ

ತಂದೆತನದ ಪ್ರಶ್ನೆ

ಅಧ್ಯಾಯ 69

ತಂದೆತನದ ಪ್ರಶ್ನೆ

ಜಾತ್ರೆಯ ಸಮಯದಲ್ಲಿ ಯೆಹೂದಿ ನಾಯಕರೊಂದಿಗಿನ ಯೇಸುವಿನ ಚರ್ಚೆಯು ಇನ್ನಷ್ಟು ಗಾಢತೆಯದ್ದಾಗಿ ಬೆಳೆಯುತ್ತದೆ. “ನೀವು ಅಬ್ರಹಾಮನ ಸಂತಾನದವರು ನಿಜ,” ಯೇಸುವು ಒಪ್ಪುತ್ತಾನೆ, “ಆದರೂ ನನ್ನ ವಾಕ್ಯವು ನಿಮ್ಮಲ್ಲಿ ಸಾಗದೆ ಇರುವ ಕಾರಣ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ. ನಾನು ನನ್ನ ತಂದೆಯ ಬಳಿಯಲ್ಲಿ ನೋಡಿದ್ದನ್ನು ಹೇಳುತ್ತೇನೆ; ನೀವೂ, ಆದಕಾರಣ ನಿಮ್ಮ ತಂದೆಯಿಂದ ಕೇಳಿದ್ದನ್ನು ಮಾಡುತ್ತೀರಿ.” (NW) ಅವರ ತಂದೆಯ ಗುರುತಿಸುವಿಕೆಯನ್ನು ಮಾಡದೆ ಇರುವದಾದರೂ, ಯೇಸುವು ಅವರ ತಂದೆಯು ತನ್ನ ತಂದೆಗಿಂತ ಭಿನ್ನನು ಎಂದು ಸ್ಪಷ್ಟಗೊಳಿಸುತ್ತಾನೆ. ಯೇಸುವಿನ ಮನಸ್ಸಿನಲ್ಲಿ ಇರುವವನು ಯಾರೆಂದು ತಿಳಿಯದೇ, ಯೆಹೂದಿ ಮುಖಂಡರು ಪ್ರತಿಕ್ರಿಯಿಸಿದ್ದು: “ನಮ್ಮ ತಂದೆಯು ಅಬ್ರಹಾಮನೇ.” ದೇವರ ಸ್ನೇಹಿತನಾಗಿದ್ದ ಅಬ್ರಹಾಮನಲ್ಲಿದ್ದಂಥ ನಂಬಿಕೆ ತಮ್ಮಲ್ಲಿ ಇದೆ ಎಂದವರು ಭಾವಿಸುತ್ತಿದ್ದರು.

ಆದಾಗ್ಯೂ, ಯೇಸುವು ತನ್ನ ಈ ಉತ್ತರದಿಂದ ಅವರನ್ನು ದಿಗ್ಭಮ್ರೆಗೊಳಿಸುತ್ತಾನೆ: “ನೀವು ಅಬ್ರಹಾಮನ ಮಕ್ಕಳಾಗಿದ್ದರೆ ಅಬ್ರಹಾಮನು ಮಾಡಿದಂಥ ಕೃತ್ಯಗಳನ್ನು ಮಾಡುತ್ತಿದ್ದೀರಿ.” ಖಂಡಿತವಾಗಿ ಒಬ್ಬ ನಿಜ ಮಗನು ತನ್ನ ತಂದೆಯನ್ನು ಅನುಕರಿಸುತ್ತಾನೆ. “ನೀವು ಹಾಗೆ ಮಾಡದೆ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾದ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ,” ಎಂದನು ಯೇಸು, “ಅಬ್ರಹಾಮನು ಹೀಗೆ ಮಾಡಲಿಲ್ಲ.” ಆದುದರಿಂದ ಯೇಸುವು ಪುನಃ ಹೇಳುವದು: “ನೀವು ನಿಮ್ಮ ತಂದೆಯ ಕೃತ್ಯಗಳನ್ನು ಮಾಡುತ್ತೀರಿ.”

ಇನ್ನೂ ಕೂಡಾ ಅವರಿಗೆ ಯೇಸುವು ಏನು ಮಾತಾಡುತ್ತಾನೆ ಎಂಬ ಗ್ರಹಿಕೆ ಆಗಲಿಲ್ಲ. ತಾವು ಅಬ್ರಹಾಮನ ನ್ಯಾಯಸಮ್ಮತರಾದ ಮಕ್ಕಳು ಎಂದೇ ಅವರು ವಾದಿಸುತ್ತಾ, ಹೇಳುವದು: “ನಾವು ಹಾದರಕ್ಕೆ ಹುಟ್ಟಿದವರಲ್ಲ.” ಆದುದರಿಂದ ಅಬ್ರಹಾಮನಂತೆ ನಿಜ ಆರಾಧಕರು ತಾವು ಎನ್ನುತ್ತಾ, ಅವರು ಸಮರ್ಥಿಸುವದು: “ನಮಗೆ ಒಬ್ಬನೇ ತಂದೆ, ಆತನು ದೇವರೇ.”

ಆದರೆ ದೇವರು ನಿಜವಾಗಿ ಅವರ ತಂದೆಯಾಗಿದ್ದನೋ? “ದೇವರು ನಿಮ್ಮ ತಂದೆಯಾಗಿದ್ದರೆ,” ಯೇಸುವು ಪ್ರತಿಕ್ರಿಯಿಸುವದು, “ನನ್ನನ್ನು ಪ್ರೀತಿಸುತ್ತಿದ್ದೀರಿ; ಯಾಕಂದರೆ ನಾನು ದೇವರಿಂದಲೇ ಹೊರಟು ಲೋಕಕ್ಕೆ ಬಂದವನಾಗಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ; ಆತನೇ ನನ್ನನ್ನು ಕಳುಹಿಸಿದ್ದಾನೆ. ನೀವು ನನ್ನ ಮಾತನ್ನು ಗ್ರಹಿಸದೆ ಇರುವದಕ್ಕೆ ಕಾರಣವೇನು?”

ತನ್ನನ್ನು ಅವರು ನಿರಾಕರಿಸುವದರಿಂದ ಆಗುವ ಫಲಿತಾಂಶಗಳನ್ನು ಯೇಸುವು ಈ ಧಾರ್ಮಿಕ ಮುಖಂಡರುಗಳಿಗೆ ತೋರಿಸಲು ಪ್ರಯತ್ನಿಸಿದನು. ಆದರೆ ಈಗ ಅವನು ನೇರವಾಗಿ ಹೇಳುವದು: “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ.” ಪಿಶಾಚನು ಎಂಥಾ ವಿಧದ ತಂದೆ? ಅವನು ಕೊಲೆಗಾರನು ಎಂದು ಯೇಸು ಗುರುತಿಸಿದನು ಮತ್ತು ಇದನ್ನೂ ಹೇಳಿದನು: “ಅವನು ಸುಳ್ಳುಗಾರನೂ, ಸುಳ್ಳಿಗೆ ಮೂಲಪುರುಷನೂ (ತಂದೆಯೂ) ಆಗಿದ್ದಾನೆ.” ಯೇಸುವು ಕೊನೆಗೊಳಿಸಿದ್ದು: “ದೇವರಿಂದ ಹುಟ್ಟಿದವನು ದೇವರ ಮಾತುಗಳನ್ನು ಕೇಳುತ್ತಾನೆ. ನೀವು ದೇವರಿಂದ ಹುಟ್ಟದ ಕಾರಣ ಅವುಗಳನ್ನು ಕೇಳುವದಿಲ್ಲ.”

ಯೇಸುವಿನ ಖಂಡಿಸುವಿಕೆಯಿಂದ ಸಿಟ್ಟುಗೊಂಡು, ಯೆಹೂದ್ಯರು ಉತ್ತರಿಸುವದು: “ನೀನು ಸಮಾರ್ಯನೂ ದೆವ್ವಹಿಡಿದವನೂ ಆಗಿದ್ದೀ ಎಂದು ನಾವು ಹೇಳುವದು ಸರಿಯಲ್ಲವೋ?” “ಸಮಾರ್ಯನು” ಎಂಬ ಪದಪ್ರಯೋಗವು ತುಚ್ಛೀಕಾರದ ಮತ್ತು ಅವಹೇಳನದ ಒಂದು ವ್ಯಕ್ತಪಡಿಸುವಿಕೆಯಾಗಿರುತ್ತದೆ, ಯಾಕಂದರೆ ಯೆಹೂದ್ಯರಿಂದ ಸಮಾರ್ಯರು ದ್ವೇಷಿಸಲ್ಪಡುತ್ತಿದ್ದ ಜನರಾಗಿದ್ದರು.

ಸಮಾರ್ಯನು ಎಂಬಂಥಾ ಆ ಅವಹೇಳನದ ನಿಂದೆಯನ್ನು ಅಲಕ್ಷ್ಯಿಸಿ, ಯೇಸುವು ಪ್ರತ್ಯುತ್ತರಿಸುವದು: “ನಾನು ದೆವ್ವ ಹಿಡಿದವನಲ್ಲ, ನನ್ನ ತಂದೆಯನ್ನು ಸನ್ಮಾನಿಸುವವನಾಗಿದ್ದಾನೆ; ಆದರೂ ನೀವು ನನ್ನನ್ನು ಅವಮಾನ ಪಡಿಸುತ್ತೀರಿ.” ಮುಂದರಿಸುತ್ತಾ, ಯೇಸುವು ಅಚ್ಚರಿಗೊಳಿಸುವ ಒಂದು ವಾಗ್ದಾನವನ್ನು ಮಾಡುತ್ತಾನೆ: “ಯಾವನಾದರೂ ನನ್ನ ವಾಕ್ಯವನ್ನು ಕೈಕೊಂಡು ನಡೆದರೆ ಅವನು ಎಂದಿಗೂ ಸಾವನ್ನು ಕಾಣುವದಿಲ್ಲ.” ಅವನನ್ನು ಹಿಂಬಾಲಿಸುವವರೆಲ್ಲರೂ ಅಕ್ಷರಶಃ ಮರಣವನ್ನು ಎಂದಿಗೂ ಅನುಭವಿಸುವದಿಲ್ಲ ಎಂದು ಯೇಸುವು ಹೇಳಿದ್ದರ ಅರ್ಥವಲ್ಲ ಎಂಬದು ನಿಜ. ಬದಲು, ಅವರು ನಿತ್ಯ ನಾಶನವನ್ನು ಯಾ ಪುನರುತ್ಥಾನವಿಲ್ಲದ “ಎರಡನೆಯ ಮರಣವನ್ನು” ಎಂದಿಗೂ ಕಾಣುವದಿಲ್ಲ ಎಂದರ್ಥ.

ಆದಾಗ್ಯೂ, ಯೆಹೂದ್ಯರು ಯೇಸುವಿನ ಮಾತುಗಳನ್ನು ಅಕ್ಷರಶಃ ತೆಗೆದುಕೊಂಡರು. ಆದುದರಿಂದ, ಅವರು ಹೇಳುವದು: “ನೀನು ದೆವ್ವ ಹಿಡಿದವನೆಂದು ಈಗ ನಮಗೆ ತಿಳಿಯಿತು; ಅಬ್ರಹಾಮನು ಸತ್ತನು, ಪ್ರವಾದಿಗಳೂ ಸತ್ತರು. ಆದರೆ ನೀನು—ನನ್ನ ವಾಕ್ಯವನ್ನು ಕೈಕೊಂಡು ನಡೆಯುವವನು ಎಂದಿಗೂ ಸಾವನ್ನು ಅನುಭವಿಸುವದಿಲ್ಲ ಎಂದು ಹೇಳುತ್ತೀ. ನಮ್ಮ ಮೂಲಪುರುಷನಾದ ಅಬ್ರಹಾಮನಿಗಿಂತ ನೀನು ದೊಡ್ಡವನೋ? ಅವನೂ ಸತ್ತು ಹೋದನು, ಪ್ರವಾದಿಗಳೂ ಸತ್ತುಹೋದರು; ನಿನ್ನನ್ನು ಯಾರೆಂತ ಮಾಡಿಕೊಳ್ಳುತ್ತೀ?”

ಈ ಸಂಪೂರ್ಣ ಚರ್ಚೆಯಲ್ಲಿ, ತಾನು ವಾಗ್ದಾನಿಸಲ್ಪಟ್ಟ ಮೆಸ್ಸೀಯ ಎಂಬ ವಾಸ್ತವಾಂಶಕ್ಕೆ ಯೇಸುವು ತೋರಿಸುತ್ತಿದ್ದನು ಎಂದು ವ್ಯಕ್ತವಾಗುತ್ತದೆ. ಆದರೆ ಅವನ ಪರಿಚಯದ ಬಗ್ಗೆ ನೇರವಾಗಿ ಉತ್ತರಿಸುವದರ ಬದಲು, ಯೇಸುವು ಹೇಳಿದ್ದು: “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ ನನ್ನ ಮಹಿಮೆ ಹುರುಳಿಲ್ಲದ್ದು. ನನ್ನನ್ನು ಮಹಿಮೆಪಡಿಸುವವನು ನನ್ನ ತಂದೆಯೇ. ನೀವು ಆತನನ್ನು ನಮ್ಮ ದೇವರು ಅನ್ನುತ್ತೀರಿ; ಆದರೂ ನೀವು ಆತನನ್ನು ತಿಳಿಯದೆ ಇದ್ದೀರಿ. ನಾನಂತು ಆತನನ್ನು ಬಲ್ಲೆನು; ಆತನನ್ನು ಅರಿಯೆನೆಂದು ಹೇಳಿದರೆ ನಿಮ್ಮ ಹಾಗೆ ಸುಳ್ಳುಗಾರನಾಗುವೆನು.”

ಮುಂದರಿಸುತ್ತಾ, ಯೇಸುವು ಪುನೊಮ್ಮೆ ನಂಬಿಗಸ್ತ ಅಬ್ರಹಾಮನನ್ನು ಸೂಚಿಸಿ ಮಾತಾಡುತ್ತಾನೆ: “ನಿಮ್ಮ ಮೂಲಪುರುಷನಾದ ಅಬ್ರಹಾಮನು ನನ್ನ ದಿನವನ್ನು ನೋಡೇನೆಂದು ಉಲ್ಲಾಸಪಟ್ಟನು; ಅದನ್ನು ನೋಡಿ ಸಂತೋಷಗೊಂಡನು.” ಹೌದು, ನಂಬಿಕೆಯ ಕಣ್ಣುಗಳಿಂದ ಅಬ್ರಹಾಮನು ವಾಗ್ದಾನಿಸಲ್ಪಟ್ಟ ಮೆಸ್ಸೀಯನ ಆಗಮನವನ್ನು ಮುನ್ನೋಡಿದನು. ಅಪನಂಬಿಕೆಯಿಂದ ಯೆಹೂದ್ಯರು ಪ್ರತಿಕ್ರಿಯಿಸಿದ್ದು: “ನಿನಗೆ ಇನ್ನೂ ಐವತ್ತು ವರುಷವಾಗಿಲ್ಲ; ಅಬ್ರಹಾಮನನ್ನು ನೋಡಿದ್ದೀಯಾ?”

“ನಿಮಗೆ ನಿಜನಿಜವಾಗಿ ಹೇಳುತ್ತೇನೆ,” ಯೇಸುವು ಉತ್ತರಸಿದ್ದು: “ಅಬ್ರಹಾಮನು ಹುಟ್ಟುವದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ.” ಯೇಸುವು ವಾಸ್ತವದಲ್ಲಿ, ಪರಲೋಕದಲ್ಲಿ ಒಬ್ಬ ಬಲಾಢ್ಯ ಆತ್ಮವ್ಯಕ್ತಿಯಾಗಿ ಮಾನವಪೂರ್ವ ಅಸ್ತಿತ್ವದಲ್ಲಿದ್ದದನ್ನು ಸೂಚಿಸುತ್ತಾನೆ.

ಅಬ್ರಹಾಮನಿಗಿಂತಲೂ ಮೊದಲು ಅಸ್ತಿತ್ವದಲ್ಲಿದ್ದೆನು ಎಂಬ ಯೇಸುವಿನ ವಾದದಿಂದ ಕೋಪಗೊಂಡು, ಯೆಹೂದ್ಯರು ಆತನೆಡೆಗೆ ಎಸೆಯಲು ಕಲ್ಲುಗಳನ್ನು ತೆಗೆದುಕೊಂಡರು. ಆದರೆ ಅವನು ಅಡಗಿಕೊಳ್ಳುತ್ತಾನೆ ಮತ್ತು ಯಾವುದೇ ಹಾನಿಗೊಳಗಾಗದೆ ದೇವಾಲಯದಿಂದ ಹೊರಟು ಹೋಗುತ್ತಾನೆ. ಯೋಹಾನ 8:37-59; ಪ್ರಕಟನೆ 3:14; 21:8

▪ ಅವನಿಗೆ ಮತ್ತು ಅವನ ವೈರಿಗಳಿಗೆ ಭಿನ್ನರಾದ ತಂದೆಗಳು ಇದ್ದಾರೆ ಎಂದು ಯೇಸು ತೋರಿಸಿದ್ದು ಹೇಗೆ?

▪ ಯೆಹೂದ್ಯರು ಯೇಸುವನ್ನು ಒಬ್ಬ ಸಮಾರ್ಯನು ಎಂದು ಕರೆದದರ್ದಲ್ಲಿ ಏನು ವಿಶೇಷತೆ ಇದೆ?

▪ ಅವನ ಹಿಂಬಾಲಕರು ಎಂದಿಗೂ ಸಾವನ್ನು ಕಾಣುವದಿಲ್ಲ ಎಂದು ಯೇಸುವು ಯಾವ ಅರ್ಥದಲ್ಲಿ ಹೇಳಿದ್ದನು?