ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ರಾಕ್ಷೆತೋಟದಲ್ಲಿ ಕೆಲಸಗಾರರು

ದ್ರಾಕ್ಷೆತೋಟದಲ್ಲಿ ಕೆಲಸಗಾರರು

ಅಧ್ಯಾಯ 97

ದ್ರಾಕ್ಷೆತೋಟದಲ್ಲಿ ಕೆಲಸಗಾರರು

“ಬಹು ಮಂದಿ ಮೊದಲಿನವರು,” ಯೇಸುವು ಈಗಾಗಲೇ ಹೇಳಿದ್ದನು, “ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು.” ಈಗ ಅವನು ಇದನ್ನು ಒಂದು ಕಥೆಯನ್ನು ಹೇಳುವದರ ಮೂಲಕ ಉದಾಹರಿಸುತ್ತಾನೆ. “ಪರಲೋಕ ರಾಜ್ಯವು” ಅವನು ಆರಂಭಿಸುವದು, “ಒಬ್ಬ ಮನೆಯ ಯಜಮಾನನಿಗೆ ಹೋಲಿಕೆಯಾಗಿದೆ. ಅವನು ತನ್ನ ದ್ರಾಕ್ಷೇತೋಟಕ್ಕೆ ಕೂಲೀ ಆಳುಗಳನ್ನು ಕರೆಯುವದಕ್ಕೆ ಬೆಳಿಗ್ಗೆ ಹೊರಟನು.”

ಯೇಸುವು ಮುಂದುವರಿಸುವದು: “ಆಳಿಗೆ ದಿನಕ್ಕೆ ಒಂದು ಪಾವಲಿಯಂತೆ [ದಿನಾರಿಯಸ್‌] ಕೂಲಿ ಗೊತ್ತು ಮಾಡಿ ಅವರನ್ನು ದ್ರಾಕ್ಷೇತೋಟಕ್ಕೆ [ಮನೆಯ ಯಜಮಾನನು] ಕಳುಹಿಸಿದನು. ತರುವಾಯ ಹೆಚ್ಚುಕಡಿಮೆ ಮೂರನೆಯ ಘಂಟೆಗೆ ಹೋಗಿ ಪೇಟೆಯಲ್ಲಿ ಸುಮ್ಮನೆ ನಿಂತಿದ್ದ ಇನ್ನು ಕೆಲವರನ್ನು ಕಂಡು—ನೀವು ಸಹ ನನ್ನ ದ್ರಾಕ್ಷೇತೋಟಕ್ಕೆ ಹೋಗಿರಿ; ನಿಮಗೆ ಸರಿಯಾದ ಕೂಲಿಯನ್ನು ಕೊಡುತ್ತೇನೆ ಅನ್ನಲು ಅವರು ತೋಟಕ್ಕೆ ಹೋದರು. ಅವನು ತಿರಿಗಿ ಹೆಚ್ಚುಕಡಿಮೆ ಆರನೆಯ ಘಂಟೆಗೆ ಮತ್ತು ಒಂಭತ್ತನೆಯ ಘಂಟೆಗೆ ಹೋಗಿ ಅದೇ ಪ್ರಕಾರ ಮಾಡಿದನು. ತಿರಿಗಿ ಹೆಚ್ಚುಕಡಿಮೆ ಹನ್ನೊಂದು ಘಂಟೆಗೆ ಹೋಗಿ ಬೇರೆ ಕೆಲವರು ನಿಂತಿರುವದನ್ನು ಕಂಡು—ದಿನವೆಲಾಲ್ಲ ಇಲ್ಲಿ ಸುಮ್ಮನೆ ಯಾಕೆ ನಿಂತಿದ್ದೀರಿ ಎಂದು ಕೇಳಲು ಅವರು—ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ ಅಂದಾಗ ಅವನು—ನೀವು ಸಹ ನನ್ನ ದ್ರಾಕ್ಷೇತೋಟಕ್ಕೆ ಹೋಗಿರಿ ಅಂದನು.”

ಮನೆಯ ಯಜಮಾನನು ಅಥವಾ ದ್ರಾಕ್ಷೇತೋಟದ ಧನಿಯು ಯೆಹೋವ ದೇವರಾಗಿದ್ದಾನೆ, ಮತ್ತು ಇಸ್ರಾಯೇಲ್‌ ಜನಾಂಗವು ಆ ದ್ರಾಕ್ಷೇತೋಟವಾಗಿದೆ. ದ್ರಾಕ್ಷೇತೋಟದಲ್ಲಿ ಕೂಲೀ ಆಳುಗಳು ನಿಯಮಶಾಸ್ತ್ರದೊಳಗೆ ತರಲ್ಪಟ್ಟ ಜನರಾಗಿದ್ದಾರೆ; ವಿಶೇಷವಾಗಿ ಅವರು ಅಪೊಸ್ತಲರ ದಿನಗಳಲ್ಲಿ ಜೀವಿಸುತ್ತಿದ್ದ ಯೆಹೂದ್ಯರಾಗಿರುತ್ತಾರೆ. ಪೂರ್ಣದಿನದ ಕೆಲಸಗಾರರೊಡನೆ ಮಾತ್ರ ಸಂಬಳದ ಕರಾರನ್ನು ಮಾಡಲಾಗಿತ್ತು. ಒಂದು ದಿನದ ಕೆಲಸಕ್ಕೆ ಕೂಲಿಯು ಒಂದು ಪಾವಲಿಯಾಗಿತ್ತು. “ಮೂರನೆಯ ಘಂಟೆ” ಅಂದರೆ ಬೆಳಿಗ್ಯೆ 9.00 ಆಗಿರುವದರಿಂದ, ಮೂರನೆಯ, ಆರನೆಯ, ಒಂಭತ್ತನೆಯ ಮತ್ತು ಹನ್ನೊಂದನೆಯ ಘಂಟೆಗೆ ಕೆಲಸಕ್ಕೆ ಕರೆಯಲ್ಪಟ್ಟವರು, ಯಥಾಪ್ರಕಾರ ಕೇವಲ 9, 6, 3, ಮತ್ತು 1 ಘಂಟೆ ಕೆಲಸಮಾಡಿರುತ್ತಾರೆ.

12-ಘಂಟೆಗಳ ಇಲ್ಲವೆ ಪೂರ್ಣದಿನದ ಕೆಲಸಗಾರರು ಧಾರ್ಮಿಕ ಕೆಲಸದಲ್ಲಿ ನಿರಂತರ ತೊಡಗಿರುವ ಯೆಹೂದ್ಯ ಮುಖಂಡರುಗಳನ್ನು ಪ್ರತಿನಿಧಿಸುತ್ತಾರೆ. ತಮ್ಮ ಜೀವಿತದ ಹೆಚ್ಚಿನ ಭಾಗವನ್ನು ಮೀನು ಹಿಡಿಯುವದರಲ್ಲಿ ಇಲ್ಲವೇ ಇನ್ನಿತರ ಐಹಿಕ ಕೆಲಸಗಳಲ್ಲಿ ಉಪಯೋಗಿಸಿದ್ದ ಯೇಸುವಿನ ಶಿಷ್ಯರಂತೆ ಅವರು ಇರಲಿಲ್ಲ. ಸಾ.ಶ. 29ರ ಮಾಗಿ ಕಾಲದ ತನಕ “ಮನೆಯ ಯಜಮಾನನು” ಅವನ ಈ ಶಿಷ್ಯರುಗಳನ್ನು ಒಟ್ಟುಗೂಡಿಸಲು ಯೇಸು ಕ್ರಿಸ್ತನನ್ನು ಕಳುಹಿಸುವ ತನಕ ಹಾಗಿರಲಿಲ್ಲ. ಅವರು ಈ ರೀತಿ “ಕಡೆಯವರು” ಇಲ್ಲವೆ, 11-ನೆಯ ತಾಸಿನ ದ್ರಾಕ್ಷೇತೋಟದ ಕೆಲಸಗಾರರಾಗಿರುತ್ತಾರೆ.

ಕೊನೆಗೆ, ಯೇಸುವಿನ ಮರಣದೊಂದಿಗೆ ಸಾಂಕೇತಿಕ ಕೆಲಸದ ದಿನವು ಮುಗಿಯುತ್ತದೆ ಮತ್ತು ಕೆಲಸಗಾರರಿಗೆ ಕೂಲಿ ಕೊಡುವ ಸಮಯ ಬರುತ್ತದೆ. ಕೂಲಿಕೊಡುವ ಒಂದು ಅಸಾಮಾನ್ಯ ನಿಯಮವು, ಕೊನೆಯವನಿಗೆ ಮೊದಲು ಕೊಡುವದು ಪಾಲಿಸಲ್ಪಡುತ್ತದೆ, ಅದನ್ನು ಹೀಗೆ ವಿವರಿಸಲಾಗಿದೆ: “ಸಂಜೇಹೊತ್ತಿಗೆ ದ್ರಾಕ್ಷೇತೋಟದ ಯಜಮಾನನು ತನ್ನ ಪಾರುಪತ್ಯಗಾರನಿಗೆ—ಆ ಆಳುಗಳನ್ನು ಕರೆದು ಕಡೆಗೆ ಬಂದವರನ್ನು ಮೊದಲು ಮಾಡಿಕೊಂಡು ಮೊದಲು ಬಂದವರ ತನಕ ಅವರಿಗೆ ಕೂಲಿ ಕೊಡು ಎಂದು ಹೇಳಿದನು. ಆಗ ಸಾಯಂಕಾಲ ಐದು ಗಂಟೆಗೆ ಬಂದವರಿಗೆ [ಹನ್ನೊಂದನೆಯ ತಾಸಿಗೆ] ಒಂದೊಂದು ಪಾವಲಿ ಸಿಕ್ಕಿತು. ತರುವಾಯ ಮೊದಲಿನವರು ಬಂದು ತಮಗೆ ಹೆಚ್ಚು ದೊರೆಯುವದೆಂದು ನೆನಸಿದರು; ಆದರೆ ಇವರಿಗೆ ಸಹ ಒಂದೊಂದು ಪಾವಲಿಯೇ ಸಿಕ್ಕಿತು. ಅದನ್ನು ತೆಗೆದು ಕೊಂಡು ಮನೆಯ ಯಜಮಾನನ ಮೇಲೆ ಗುಣುಗುಟ್ಟಿ—ಕಡೆಗೆ ಬಂದ ಇವರು ಒಂದು ತಾಸು ಹೊತ್ತು ಮಾತ್ರ ಕೆಲಸ ಮಾಡಿದ್ದಾರೆ; ನಾವು ದಿನವೆಲ್ಲಾ ಬಿಸಿಲಿನಲ್ಲಿ ಕೆಲಸ ಮಾಡಿ ಕಷ್ಟ ಪಟ್ಟಿದ್ದೇವೆ; ಇವರನ್ನು ನಮಗೆ ಸಮಮಾಡಿದ್ದೀಯೇ ಅಂದರು. ಅದಕ್ಕೆ ಅವನು ಅವರಲ್ಲಿ ಒಬ್ಬನಿಗೆ—ಏನಪ್ಪಾ, ನಾನು ನಿನಗೆ ಅನ್ಯಾಯ ಮಾಡಲಿಲ್ಲ; ನೀನು ನನ್ನ ಸಂಗಡ ಒಂದು ಪಾವಲಿಗೆ ಒಡಂಬಟ್ಟಿಯಲ್ಲಾ; ನಿನ್ನ ಕೂಲಿ ತಕ್ಕೊಂಡು ಹೋಗು; ನಿನಗೆ ಕೊಟ್ಟಂತೆ ಕಡೆಗೆ ಬಂದ ಇವನಿಗೂ ಕೊಡುವದಕ್ಕೆ ನನಗೆ ಮನಸ್ಸುಂಟು. ನನ್ನ ಬದುಕನ್ನು ನಾನು ಬೇಕಾದ ಹಾಗೆ ಮಾಡಬಹುದಲ್ಲವೋ? ನಾನು ಒಳ್ಳೆಯವನಾಗಿರುವದು ನಿನ್ನ ಕಣ್ಣನ್ನು ಒತ್ತುತ್ತದೋ ಎಂದು ಹೇಳಿದನು.” ಸಮಾಪ್ತಿಯಲ್ಲಿ ಯೇಸುವು ಆರಂಭದಲ್ಲಿ ಹೇಳಿದ ವಿಷಯವನ್ನು ಪುನರಾವರ್ತಿಸಿ, ಹೀಗೆ ಹೇಳಿದನು: “ಈ ಪ್ರಕಾರ ಕಡೆಯವರು ಮೊದಲಿನವರಾಗುವರು, ಮೊದಲಿನವರು ಕಡೆಯವರಾಗುವರು.”

ಪಾವಲಿಯನ್ನು ಪಡೆಯುವದು ಯೇಸುವಿನ ಮರಣದಲ್ಲಿ ಅಲ್ಲ, ಬದಲು ಸಾ.ಶ. 33ರ ಪಂಚಾಶತ್ತಮದಲ್ಲಿ ಸಂಭವಿಸುತ್ತದೆ, ಆಗ “ಪಾರುಪತ್ಯ ಗಾರನಾದ” ಕ್ರಿಸ್ತನು ತನ್ನ ಶಿಷ್ಯರ ಮೇಲೆ ಪವಿತ್ರಾತ್ಮವನ್ನು ಸುರಿಸುತ್ತಾನೆ. ಯೇಸುವಿನ ಈ ಶಿಷ್ಯರು “ಕಡೆಯವರೋಪಾದಿ” ಇಲ್ಲವೇ 11-ನೆಯ ತಾಸಿನ ಕೆಲಸಗಾರರೋಪಾದಿ ಇರುತ್ತಾರೆ. ಪಾವಲಿಯು ತಾನೇ ಪವಿತ್ರಾತ್ಮದ ವರದಾನವನ್ನು ಮಾತ್ರ ಪ್ರತಿನಿಧಿಸುವದಿಲ್ಲ. ಪಾವಲಿಯು ಶಿಷ್ಯರು ಈ ಭೂಮಿಯ ಮೇಲೆ ಉಪಯೋಗಿಸಬೇಕಾದ ಯಾವುದೋ ಒಂದು ಸಂಗತಿಯಾಗಿತ್ತು. ಅದು ಅವರ ಜೀವನೋದ್ಯೋಗದ, ಅವರ ನಿತ್ಯಜೀವದ ಅರ್ಥದಲ್ಲಿರುವ ಒಂದು ಸಂಗತಿಯಾಗಿತ್ತು. ಒಬ್ಬ ಆತ್ಮಿಕ ಇಸ್ರಾಯೇಲನಾಗಿರುವ, ದೇವರ ರಾಜ್ಯವನ್ನು ಸಾರಲು ಅಭಿಷಿಕ್ತನಾಗಿರುವ ಒಂದು ಸುಯೋಗವದಾಗಿತ್ತು.

ಯೇಸುವಿನ ಶಿಷ್ಯರಿಗೆ ಕೂಲಿ ಕೊಡಲ್ಪಟ್ಟದ್ದನ್ನು ಮತ್ತು ಅವರು ತಮ್ಮ ಸಾಂಕೇತಿಕ ಪಾವಲಿಯನ್ನು ಉಪಯೋಗಿಸುವದನ್ನು ಮೊದಲು ಕೂಲಿಗೆ ಹಿಡಿದವರು ಬಲುಬೇಗನೆ ಅವಲೋಕಿಸಿದರು. ಆದರೆ ಅವರು ಕೇವಲ ಪವಿತ್ರಾತ್ಮ ಮತ್ತು ಅದರೊಟ್ಟಿಗೆ ಸೇರಿರುವ ರಾಜ್ಯದ ಸುಯೋಗಗಳಿಗಿಂತ ಹೆಚ್ಚಿನದ್ದನ್ನು ಬಯಸಿದರು. ಅವರ ಗುಣುಗುಟ್ಟುವಿಕೆಯು ಮತ್ತು ಅಡ್ಡಿಗಳು, ದ್ರಾಕ್ಷೇತೋಟದಲ್ಲಿ “ಕಡೆಯ” ಕೆಲಸಗಾರರೋಪಾದಿ ಬಂದ ಕ್ರಿಸ್ತನ ಶಿಷ್ಯರನ್ನು ಹಿಂಸಿಸುವ ಪ್ರವೃತ್ತಿಯಾಗಿ ಪರಿವರ್ತನೆಗೊಂಡಿತು.

ಯೇಸುವಿನ ಸಾಮ್ಯದ ಆ ಮೊದಲನೆಯ ಶತಕದ ನೆರವೇರಿಕೆಯು ಅದೊಂದೇ ಆಗಿತ್ತೋ? ಅಲ್ಲ, ಈ 20-ನೆಯ ಶತಕದ ಕ್ರೈಸ್ತ ಧರ್ಮಪ್ರಪಂಚದ ವೈದಿಕರು, ಅವರ ಹುದ್ದೆಗಳ ಮತ್ತು ಜವಾಬ್ದಾರಿಕೆಗಳ ಕಾರಣ, ದೇವರ ಸಾಂಕೇತಿಕ ದ್ರಾಕ್ಷೇತೋಟದಲ್ಲಿ ಕೆಲಸಕ್ಕಾಗಿ “ಮೊದಲು” ಕೂಲಿಗೆ ಹಿಡಿಯಲ್ಪಟ್ಟಿದ್ದರು. ದೇವರ ಸೇವೆಯಲ್ಲಿ ಯಾವುದೇ ನ್ಯಾಯಸಮ್ಮತ ನೇಮಕವನ್ನು ಪಡೆಯಲು, ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರೇಕ್ಟ್‌ ಸೊಸೈಟಿಯೊಂದಿಗೆ ಜೊತೆಗೂಡಿರುವ ಸಮರ್ಪಿತ ಸಾರುವವರು “ಕಡೆಯವರು” ಎಂದವರು ಎಣಿಸಿದರು. ಆದರೆ, ವಾಸ್ತವದಲ್ಲಿ, ವೈದಿಕರಿಂದ ತುಚ್ಛೀಕರಿಸಲ್ಪಟ್ಟ ಇವರೇ, ಪಾವಲಿಯನ್ನು ಪಡೆದರು ಅಂದರೆ—ದೇವರ ಸ್ವರ್ಗೀಯ ರಾಜ್ಯದ ಅಭಿಷಿಕ್ತ ರಾಜದೂತರಾಗಿ ಸೇವೆ ಸಲ್ಲಿಸುವ ಗೌರವವು ಅವರದ್ದಾಗಿತ್ತು. ಮತ್ತಾಯ 19:30–20:16.

▪ ದ್ರಾಕ್ಷೇತೋಟದಿಂದ ಏನು ಪ್ರತಿನಿಧಿಸಲ್ಪಟ್ಟಿದೆ, ಮತ್ತು ದ್ರಾಕ್ಷೇತೋಟದ ಯಜಮಾನನು ಮತ್ತು 12-ತಾಸು ಮತ್ತು 1-ತಾಸು ಕೆಲಸಗಾರರು ಯಾರನ್ನು ಪ್ರತಿನಿಧಿಸುತ್ತಾರೆ?

▪ ಸಾಂಕೇತಿಕ ಕೆಲಸದ ದಿನವು ಯಾವಾಗ ಅಂತ್ಯಗೊಂಡಿತು, ಮತ್ತು ಕೂಲಿಯು ಯಾವಾಗ ಕೊಡಲ್ಪಟ್ಟಿತು?

▪ ಪಾವಲಿಯು ಕೊಡಲ್ಪಡುವದು ಏನನ್ನು ಪ್ರತಿನಿಧಿಸಲ್ಪಡುತ್ತದೆ?