ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುನರುತ್ಥಾನದ ನಿರೀಕ್ಷೆ

ಪುನರುತ್ಥಾನದ ನಿರೀಕ್ಷೆ

ಅಧ್ಯಾಯ 90

ಪುನರುತ್ಥಾನದ ನಿರೀಕ್ಷೆ

ಯೇಸುವು ಬೇಥಾನ್ಯದ ಹೊರವಲಯದಲ್ಲಿ, ಯೆರೂಸಲೇಮಿನಿಂದ ಸುಮಾರು ಮೂರು ಕಿಲೊಮೀಟರುಗಳು ದೂರದ ಹಳ್ಳಿಗೆ ಕೊನೆಗೂ ಬಂದು ತಲುಪುತ್ತಾನೆ. ಲಾಜರನ ಮರಣ ಮತ್ತು ಸಮಾಧಿಯಾಗಿ ಕೇವಲ ಕೆಲವು ದಿನಗಳಾಗಿದ್ದವು. ಅವನ ಸಹೋದರಿಯರಾದ ಮರಿಯ ಮತ್ತು ಮಾರ್ಥಳು ಇನ್ನೂ ಶೋಕಿಸುತ್ತಾ ಇದ್ದರು, ಮತ್ತು ಅನೇಕರು ಅವರನ್ನು ಸಂತೈಸಲು ಅವರ ಮನೆಗೆ ಬಂದಿದ್ದರು.

ಅವರು ಇನ್ನೂ ಶೋಕಿಸುತ್ತಿರುವಾಗ, ಯಾರೋ ಒಬ್ಬರು ಯೇಸುವು ದಾರಿಯಲ್ಲಿ ಬರುತ್ತಾ ಇದ್ದಾನೆ ಎಂದು ಮಾರ್ಥಳಿಗೆ ತಿಳಿಸಿದರು. ಆದುದರಿಂದ, ಅವನನ್ನು ಭೇಟಿಯಾಗಲು ಅವಳು ಅವಸರದಿಂದ, ಪ್ರಾಯಶಃ ಅವಳ ತಂಗಿಗೆ ತಿಳಿಸದೆ ಹೊರಡುತ್ತಾಳೆ. ಯೇಸುವಿನ ಬಳಿಗೆ ಬಂದು, ಕಳೆದ ನಾಲ್ಕು ದಿನಗಳಲ್ಲಿ ಅವಳೂ, ಅವಳ ತಂಗಿಯೂ ಪುನಃ ಪುನಃ ಅನೇಕ ಬಾರಿ ಹೇಳಿರಬಹುದಾದ ಮಾತುಗಳನ್ನು ಮಾರ್ಥಳು ಪುನರಾವರ್ತಿಸುತ್ತಾಳೆ: “ನೀನು ಇಲ್ಲಿ ಇರುತ್ತಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ.”

ಆದಾಗ್ಯೂ, ಮಾರ್ಥಳು ಅವಳ ಸಹೋದರನಿಗಾಗಿ ಯೇಸುವು ಏನಾದರೂ ಇನ್ನೂ ಮಾಡಬಹುದು ಎಂದು ಸೂಚಿಸುತ್ತಾ, ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಾಳೆ. “ಈಗಲಾದರೂ ದೇವರನ್ನು ಏನು ಬೇಡಿಕೊಳ್ಳುತ್ತೀಯೋ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ಬಲ್ಲೆನು,” ಅವಳನ್ನುತ್ತಾಳೆ.

“ನಿನ್ನ ತಮ್ಮನು ಎದ್ದು ಬರುವನು,” ಯೇಸುವು ವಾಗ್ದಾನಿಸುತ್ತಾನೆ.

ಭಾವೀ ಐಹಿಕ ಪುನರುತ್ಥಾನವೊಂದರ ಕುರಿತು ಯೇಸುವು ಮಾತಾಡುತ್ತಾನೆ ಎಂದು ಮಾರ್ಥಳು ತಿಳಿಯುತ್ತಾಳೆ. ಇದನ್ನು ಅಬ್ರಹಾಮನೂ, ದೇವರ ಇತರ ಸೇವಕರೂ ಮುನ್ನೋಡುತ್ತಾ ಇದ್ದರು. ಆದುದರಿಂದ ಅವಳು ಉತ್ತರಿಸುವದು: “ಸತ್ತವರಿಗೆ ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದುಬರುವನೆಂದು ನಾನು ಬಲ್ಲೆನು.”

ಆದಾಗ್ಯೂ, ಯೇಸುವು ಒಂದು ತಕ್ಷಣದ ಪರಿಹಾರದ ನಿರೀಕ್ಷೆಯನ್ನು ಕೊಡುತ್ತಾ, ಅನ್ನುವದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ.” ಮರಣದ ಮೇಲೆ ದೇವರು ತನಗೆ ಶಕ್ತಿಯನ್ನು ಕೊಟ್ಟಿರುತ್ತಾನೆ ಎಂಬುದನ್ನು ಮಾರ್ಥಳಿಗೆ ಅವನು ನೆನಪಿಸುತ್ತಾ, ಹೇಳುವದು: “ನನ್ನನ್ನು ನಂಬುವವನು ಸತ್ತರೂ ಬದುಕುವನು; ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ.”

ಅಂದು ಬದುಕಿರುವ ನಂಬಿಗಸ್ತರು ಎಂದಿಗೂ ಸಾಯುವದಿಲ್ಲ ಎಂದು ಯೇಸುವು ಮಾರ್ಥಳಿಗೆ ಸೂಚಿಸುವದಿಲ್ಲ. ಇಲ್ಲ, ಬದಲು ಅವನ ಮೇಲೆ ನಂಬಿಕೆಯನ್ನು ಪ್ರದರ್ಶಿಸುವಿಕೆಯು ನಿತ್ಯ ಜೀವಕ್ಕೆ ನಡಿಸಬಲ್ಲದು ಎಂಬ ವಿಷಯವನ್ನು ಅವನು ತೋರಿಸುತ್ತಿದ್ದನು. ಕಡೇ ದಿನದಲ್ಲಿ ಪುನರುತ್ಥಾನಗೊಳಿಸಲ್ಪಡುವ ಫಲಿತಾಂಶವಾಗಿ ಅಧಿಕಾಂಶ ಜನರು ಅಂಥ ಜೀವಿತವೊಂದರಲ್ಲಿ ಆನಂದಿಸಲಿದ್ದರು. ಆದರೆ ಇತರ ನಂಬಿಗಸ್ತರು ಈ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾಗಲಿರುವರು ಮತ್ತು ಇಂಥವರಿಗೆ ಯೇಸುವಿನ ಮಾತುಗಳು ಅಕ್ಷರಶಃ ನೈಜವಾಗಿರಲಿರುವವು. ಅವರು ಎಂದೆಂದಿಗೂ ಸಾಯುವದೇ ಇಲ್ಲ! ಈ ವೈಶಿಷ್ಟಕರ ಹೇಳಿಕೆಯನ್ನು ಮಾಡಿದ ನಂತರ, ಯೇಸುವು ಮಾರ್ಥಳನ್ನು ಕೇಳುವದು, “ನೀನು ಇದನ್ನು ನಂಬುತ್ತೀಯೋ?”

“ಹೌದು, ಸ್ವಾಮೀ,” ಅವಳು ಉತ್ತರಿಸಿದ್ದು, “ಲೋಕಕ್ಕೆ ಬರಬೇಕಾದ ದೇವ ಕುಮಾರನಾದ ಕ್ರಿಸ್ತನು ನೀನೇ ಎಂದು ನಂಬಿದ್ದೇನೆ.”

ಮಾರ್ಥಳು ಅನಂತರ ಅವಳ ಸಹೋದರಿಯನ್ನು ಕರತರಲು ಅವಸರದಿಂದ ಹೋಗಿ, ಅವಳಿಗೆ ಗುಪ್ತವಾಗಿ ಹೇಳುವದು: “ಗುರುವು ಬಂದಿದ್ದಾನೆ, ನಿನ್ನನ್ನು ಕರೆಯುತ್ತಾನೆ.” ತಟ್ಟನೆ ಮರಿಯಳು ಮನೆಬಿಟ್ಟು ತೆರಳುತ್ತಾಳೆ. ಅವಳು ಹೋಗುವದನ್ನು ಇತರರು ಕಂಡಾಗ, ಅವಳು ಸಮಾಧಿಯ ಬಳಿಗೆ ಹೋಗುತ್ತಿದ್ದಾಳೆಂದು ಎಣಿಸಿ, ಆಕೆಯನ್ನು ಹಿಂಬಾಲಿಸುತ್ತಾರೆ.

ಯೇಸುವಿನ ಬಳಿಗೆ ಬಂದು ಮರಿಯಳು ಆತನ ಪಾದಕ್ಕೆ ಬಿದ್ದು ಅಳುತ್ತಾಳೆ. “ಸ್ವಾಮೀ, ನೀನು ಇಲ್ಲಿ ಇರುತ್ತಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ,” ಎಂದು ಅವಳನ್ನುತ್ತಾಳೆ. ಮರಿಯಳೂ, ಅವಳನ್ನು ಹಿಂಬಾಲಿಸಿ ಬಂದ ಜನರ ಗುಂಪಿನವರೂ ಗೋಳಾಡುವದನ್ನು ಕಂಡಾಗ, ಯೇಸುವು ಬಹಳವಾಗಿ ಆತ್ಮದಲ್ಲಿ ನೊಂದುಕೊಳ್ಳುತ್ತಾನೆ. “ಆತನನ್ನು ಎಲ್ಲಿ ಇಟ್ಟಿದ್ದೀರಿ?” ಅವನು ವಿಚಾರಿಸುತ್ತಾನೆ.

“ಸ್ವಾಮೀ, ಬಂದು ನೋಡು,” ಎಂದವರು ಉತ್ತರಿಸುತ್ತಾರೆ.

ಯೇಸುವು ಕೂಡಾ ಕಣ್ಣೀರು ಸುರಿಸಿದನು, ಇದರಿಂದ ಯೆಹೂದ್ಯರು ಹೀಗೆ ಹೇಳಲು ಕಾರಣವಾಯಿತು: “ಆಹಾ, ಈತನು ಅವನ ಮೇಲೆ ಎಷ್ಟೋ ಮಮತೆ ಇಟ್ಟಿದ್ದನು!”

ಕೆಲವು ತಿಂಗಳುಗಳ ಹಿಂದೆ, ಪರ್ಣಶಾಲೆಗಳ ಹಬ್ಬದ ಸಮಯದಲ್ಲಿ ಹುಟ್ಟುಕುರುಡನಾದ ಯುವಕನನ್ನು ಯೇಸುವು ಗುಣಮಾಡಿದ್ದನ್ನು ಕೆಲವರು ನೆನಪಿಗೆ ತಂದುಕೊಂಡು, ಅವರು ಕೇಳುವದು: “ಈತನು ಆ ಕುರುಡನಿಗೆ ಕಣ್ಣು ಕೊಟ್ಟನಲ್ಲಾ; ಈ ಮನುಷ್ಯನನ್ನು ಸಾಯದ ಹಾಗೆ ಮಾಡಲಾರದೆ ಇದ್ದನೇ?” ಯೋಹಾನ 5:21; 6:40; 9:1-7; 11:17-37.

▪ ಕೊನೆಗೂ ಬೇಥಾನ್ಯದ ಸಮೀಪಕ್ಕೆ ಯೇಸುವು ಯಾವಾಗ ಬಂದು ತಲುಪಿದನು, ಮತ್ತು ಅಲ್ಲಿ ಎಂಥಹ ಸನ್ನಿವೇಶ ಇತ್ತು?

▪ ಪುನರುತ್ಥಾನವೊಂದರಲ್ಲಿ ನಂಬಿಕೆಯನ್ನಿಡಲು ಮಾರ್ಥಳಿಗೆ ಯಾವ ಆಧಾರವಿತ್ತು?

▪ ಲಾಜರನ ಮರಣದಿಂದ ಯೇಸುವು ಹೇಗೆ ಬಾಧಿತನಾದನು?