ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫರಿಸಾಯನೊಬ್ಬನಿಂದ ಉಪಚರಿಸಲ್ಪಟ್ಟನು

ಫರಿಸಾಯನೊಬ್ಬನಿಂದ ಉಪಚರಿಸಲ್ಪಟ್ಟನು

ಅಧ್ಯಾಯ 83

ಫರಿಸಾಯನೊಬ್ಬನಿಂದ ಉಪಚರಿಸಲ್ಪಟ್ಟನು

ಯೇಸುವು ಇನ್ನೂ ಆ ಪ್ರಮುಖ ಫರಿಸಾಯನ ಮನೆಯಲ್ಲಿ ಇದ್ದಾನೆ ಮತ್ತು ಜಲೋದರ ರೋಗದಿಂದ ನರಳುತ್ತಿದ್ದ ಒಬ್ಬ ಮನುಷ್ಯನನ್ನು ಈಗಾಗಲೇ ಗುಣಪಡಿಸಲಾಗಿತ್ತು. ಊಟಕ್ಕೆ ಕರಿಸಿಕೊಂಡ ಜತೆ ಅತಿಥಿಗಳು ಪಙ್ತಿಯ ಮೊದಲನೆಯ ಸ್ಥಾನವನ್ನು ಆರಿಸಿಕೊಳ್ಳುವದನ್ನು ಅವಲೋಕಿಸುತ್ತಾ, ಯೇಸುವು ಅವರಿಗೆ ಒಂದು ನಮ್ರತೆಯ ಪಾಠವನ್ನು ಕಲಿಸುತ್ತಾನೆ.

“ಯಾವನಾದರೂ ನಿನ್ನನ್ನು ಮದುವೇ ಊಟಕ್ಕೆ ಕರೆದರೆ,” ಯೇಸುವು ತದನಂತರ ವಿವರಿಸುವದು, “ಪಙ್ತಿಯೊಳಗೆ ಮೊದಲನೆಯ ಸ್ಥಾನದಲ್ಲಿ ಕೂತುಕೊಳ್ಳಬೇಡ; ಒಂದು ವೇಳೆ ನಿನಗಿಂತ ಮಾನವುಳ್ಳವನನ್ನು ಅವನು ಕರೆದಿರಬಹುದು, ಮತ್ತು ನಿನ್ನನ್ನೂ ಅವನನ್ನೂ ಕರೆದವನು ಬಂದು—ಇವನಿಗೆ ಸ್ಥಳಬಿಡು ಎಂದು ನಿನಗೆ ಹೇಳುವಾಗ ನೀನು ನಾಚಿಕೊಂಡು ಕಡೆಯ ಸ್ಥಾನದಲ್ಲಿ ಕೂತುಕೊಳ್ಳುವದಕ್ಕೆ ಹೋಗುವಿ.”

ಆದುದರಿಂದ ಯೇಸುವು ಸಲಹೆ ಕೊಡುವದು: “ಆದರೆ ಯಾವನಾದರೂ ನಿನ್ನನ್ನು ಕರೆದಾಗ ನೀನು ಹೋಗಿ ಕಡೆಯ ಸ್ಥಾನದಲ್ಲಿ ಕೂತುಕೋ; ಹೀಗೆ ಮಾಡಿದರೆ ನಿನ್ನನ್ನು ಕರೆದವನು ಬಂದು ನಿನ್ನನ್ನು ನೋಡಿ—ಸ್ನೇಹಿತನೇ, ಇನ್ನೂ ಮೇಲಕ್ಕೆ ಬಾ ಅನ್ನುವನು. ಆಗ ನಿನ್ನ ಸಂಗಡ ಕೂತಿರುವವರೆಲ್ಲರ ಮುಂದೆ ನಿನಗೆ ಮಾನ ಬರುವದು.” ಸಮಾಪ್ತಿಗೊಳಿಸುತ್ತಾ ಯೇಸುವು ಹೇಳುವದು: “ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”

ಅನಂತರ, ಯೇಸುವು ತನ್ನನ್ನು ಆಮಂತ್ರಿಸಿದ ಫರಿಸಾಯನನ್ನು ಸಂಬೋಧಿಸಿ, ದೇವರ ಮುಂದೆ ನಿಜವಾದ ಶ್ಲಾಘನಾರ್ಹವಾದ ಊಟವೊಂದನ್ನು ಕೊಡುವದು ಹೇಗೆ ಎಂದು ವರ್ಣಿಸುತ್ತಾನೆ: “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಊಟಕ್ಕೆ ನಿನ್ನ ಸ್ನೇಹಿತರನ್ನಾಗಲಿ, ನಿನ್ನ ಅಣ್ಣತಮ್ಮಂದಿರನ್ನಾಗಲಿ, ನಿನ್ನ ಬಂಧುಬಾಂಧವರನ್ನಾಗಲಿ ಐಶ್ವರ್ಯವಂತರಾದ ನೆರೆಯವನನ್ನಾಗಲಿ ಕರೆಯಬೇಡ. ಒಂದುವೇಳೆ ಅವರು ಸಹ ಪ್ರತಿಯಾಗಿ ನಿನ್ನನ್ನು ಕರೆದಾರು, ಮತ್ತು ನಿನಗೆ ಮುಯ್ಯಿಗೆ ಮುಯ್ಯಿಯಾಗುವದು. ಆದರೆ ನೀನು ಔತಣಮಾಡಿಸುವಾಗ ಬಡವರು, ಊನವಾದವರು, ಕುಂಟರು, ಕುರುಡರು, ಇಂಥವರನ್ನು ಕರೆ; ಅವರು ನಿನಗೆ ಪ್ರತಿಯಾಗಿ ಸಲ್ಲಿಸುವದಕ್ಕೆ ಏನೂ ಇಲ್ಲದವರಾಗಿರುವದರಿಂದ ನೀನು ಧನ್ಯನಾಗುವಿ.” (NW)

ದೌರ್ಭಾಗ್ಯಶಾಲಿಗಳಾದವರಿಗೆ ಅಂಥ ಊಟವೊಂದನ್ನು ಒದಗಿಸುವದರಿಂದ ಒದಗಿಸಿದವನಿಗೆ ಸಂತೋಷವು ಲಭಿಸುವದು ಯಾಕಂದರೆ ಯೇಸುವು ಅವನ ಆತಿಥೇಯನಿಗೆ ವಿವರಿಸುವಂತೆ, “ನೀತಿವಂತರು ಜೀವಿತರಾಗಿ ಎದ್ದುಬರುವಲ್ಲಿ ನಿನಗೆ ಪ್ರತಿಫಲವಿರುವದು.” (NW) ಈ ಪ್ರಶಂಸನೀಯ ಔತಣದ ಯೇಸುವಿನ ವಿವರಣೆಯು ಇನ್ನೊಂದು ವಿಧದ ಔತಣದ ನೆನಪನ್ನು ಸಹ ಅತಿಥಿಯ ಮನಸ್ಸಿಗೆ ಬರುತ್ತದೆ. “ದೇವರ ರಾಜ್ಯದಲ್ಲಿ ಊಟಮಾಡುವವನೇ ಧನ್ಯನು,” ಎಂದು ಈ ಅತಿಥಿಯು ಹೇಳುತ್ತಾನೆ. ಆದರೂ, ಇಂಥಾ ಸಂತೋಷದ ಪ್ರತೀಕ್ಷೆಯನ್ನು ಎಲ್ಲರೂ ಯೋಗ್ಯವಾಗಿ ಬಹುಮಾನದ ನೋಟದಲ್ಲಿ ನೋಡುವದಿಲ್ಲ, ಅದನ್ನು ಒಂದು ಸಾಮ್ಯದ ಮೂಲಕ ತೋರಿಸುತ್ತಾ, ಯೇಸು ಹೇಳುವದು:

“ಒಬ್ಬಾನೊಬ್ಬ ಮನುಷ್ಯನು ದೊಡ್ಡ ಅಡಿಗೆ ಮಾಡಿಸಿ, ಅನೇಕರಿಗೆ ಊಟಕ್ಕೆ ಹೇಳಿಸಿದನು. ಆ ಮೇಲೆ . . . ಅವನು ಊಟಕ್ಕೆ ಹೇಳಿಸಿಕೊಂಡವರ ಬಳಿಗೆ—ಈಗ ಸಿದ್ಧವಾಗಿದೆ, ಬರಬೇಕು ಎಂದು ಕರೆಯುವದಕ್ಕೆ ತನ್ನ ಆಳನ್ನು ಕಳುಹಿಸಿದನು. ಆದರೆ ಅವರೆಲ್ಲರೂ ಕ್ಷಮಿಸಬೇಕೆಂದು ಒಂದೇ ಮನಸ್ಸಿನಿಂದ ಹೇಳುವದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ—ಹೊಲವನ್ನು ಕ್ರಯಕ್ಕೆ ತಕ್ಕೊಂಡಿದ್ದೇನೆ, ಅದನ್ನು ಹೋಗಿ ನೋಡುವದಕ್ಕೆ ನನಗೆ ಅಗತ್ಯವಿದೆ, ನನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು. ಮತ್ತೊಬ್ಬನು—ನಾನು ಐದು ಜೋಡಿ ಎತ್ತುಗಳನ್ನು ತಕ್ಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸುವದಕ್ಕೆ ಹೋಗುತ್ತೇನೆ, ನನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು. ಇನ್ನೊಬ್ಬನು—ನಾನು ಮದುವೆ ಮಾಡಿಕೊಂಡಿದ್ದೇನೆ, ಆದ್ದರಿಂದ ನಾನು ಬರುವದಕ್ಕಾಗುವದಿಲ್ಲ ಅಂದನು.”

ಎಂಥಾ ಕುಂಟು ನೆವನಗಳು! ಯಾವುದೇ ಹೊಲ ಇಲ್ಲವೇ ಪ್ರಾಣಿಗಳನ್ನು ಕ್ರಯಕ್ಕೆ ತೆಗೆದು ಕೊಳ್ಳುವ ಮೊದಲೇ ಪರೀಕ್ಷಿಸಲಾಗುತ್ತವೆ, ಆದುದರಿಂದ ಅದನ್ನು ಅನಂತರ ನೋಡುವ ಅಷ್ಟೇನೂ ತುರ್ತು ಪರಿಸ್ಥಿತಿ ಅಲ್ಲಿ ಇರುವದಿಲ್ಲ. ತದ್ರೀತಿಯಲ್ಲಿ, ವ್ಯಕ್ತಿಯೊಬ್ಬನ ಮದುವೆಯು ಅಂಥಾ ಒಂದು ಪ್ರಾಮುಖ್ಯ ಆಮಂತ್ರಣವನ್ನು ಸ್ವೀಕರಿಸುವದರಲ್ಲಿ ಅವನನ್ನು ತಡೆಯಬಾರದಿತ್ತು. ಆದುದರಿಂದ ಇವೆಲ್ಲಾ ನೆವನಗಳನ್ನು ಕೇಳಿದ ನಂತರ, ಯಜಮಾನನು ಸಿಟ್ಟುಗೊಂಡು, ಆಳಿಗೆ ಹೀಗೆಂದು ಆಜ್ಞಾಪಿಸುತ್ತಾನೆ:

“ನೀನು ತಟ್ಟನೆ ಈ ಊರಿನ ಬೀದಿಬೀದಿಗೂ ಸಂದುಸಂದಿಗೂ ಹೋಗಿ ಬಡವರು ಊನವಾದವರು ಕುರುಡರು ಕುಂಟರು ಇಂಥವರನ್ನು ಇಲ್ಲಿಗೆ ಕರಕೊಂಡು ಬಾ ಎಂದು ಹೇಳಿದನು. ಬಳಿಕ ಆ ಅಳು—ಅಯ್ಯಾ, ನೀನು ಅಪ್ಪಣೆಕೊಟ್ಟಂತೆ ಮಾಡಿದ್ದಾಯಿತು; ಆದರೂ ಇನ್ನೂ ಸ್ಥಳವದೆ ಅಂದನು. ಆಗ ಆ ಯಜಮಾನನು ತನ್ನ ಆಳಿಗೆ ಹೇಳಿದ್ದು—ನೀನು ಹಾದಿಗಳಿಗೂ ಬೇಲಿಗಳ ಬಳಿಗೂ ಹೋಗಿ ಅಲ್ಲಿ ಸಿಕ್ಕಿದವರನ್ನು ಬಲವಂತಮಾಡಿ ಒಳಕ್ಕೆ ಕರಕೊಂಡು ಬಾ, ನನ್ನ ಮನೆ ತುಂಬಲಿ. . . . ಆದರೆ ಊಟಕ್ಕೆ ಹೇಳಿಸಿಕೊಂಡವರಲ್ಲಿ ಒಬ್ಬನಾದರೂ ನಾನು ಮಾಡಿಸಿದ ಅಡಿಗೆಯ ಸವಿಯನ್ನು ನೋಡಬಾರದು.”

ಸಾಮ್ಯದಿಂದ ಯಾವ ಸನ್ನಿವೇಶವು ವರ್ಣಿಸಲ್ಪಟ್ಟಿದೆ? ಒಳ್ಳೇದು, ಊಟವನ್ನು ಒದಗಿಸುವ “ಯಜಮಾನನು” ಯೆಹೋವ ದೇವರನ್ನು ಪ್ರತಿನಿಧಿಸುತ್ತಾನೆ; ಅಮಂತ್ರಣವನ್ನು ನೀಡುವ “ಆಳು” ಯೇಸು ಕ್ರಿಸ್ತನಾಗಿದ್ದಾನೆ; ಮತ್ತು “ದೊಡ್ಡ ಅಡಿಗೆಯ ಊಟವು” ಪರಲೋಕ ರಾಜ್ಯದ ಸಾಲಿನಲ್ಲಿರಲು ಇರುವ ಅವಕಾಶಗಳು ಆಗಿವೆ.

ರಾಜ್ಯದ ಸಾಲಿನಲ್ಲಿ ಬರಲು, ಬೇರೆಲ್ಲರಿಗಿಂತಲೂ ಮೊದಲು, ಪ್ರಥಮವಾಗಿ ಆಮಂತ್ರಣವು ಯೇಸುವಿನ ದಿನಗಳಲ್ಲಿದ್ದ ಯೆಹೂದಿ ಧಾರ್ಮಿಕ ಮುಖಂಡರುಗಳಿಗೆ ನೀಡಲ್ಪಟ್ಟಿತು. ಆದಾಗ್ಯೂ, ಆ ಆಮಂತ್ರಣವನ್ನು ಅವರು ನಿರಾಕರಿಸಿದರು. ಆದಕಾರಣ, ಸಾ.ಶ. 33ರ ಪಂಚಾಶತಮದಿಂದ ವಿಶೇಷವಾಗಿ ಎರಡನೆಯ ಕರೆಯು ಯೆಹೂದಿ ಜನಾಂಗದ ತುಚ್ಛೀಕರಿಸಲ್ಪಟ್ಟ ಮತ್ತು ದೀನರಾದ ಜನರಿಗೆ ಕೊಡಲಾಯಿತು. ದೇವರ ಪರಲೋಕ ರಾಜ್ಯದಲ್ಲಿರುವ 1,44,000 ಸ್ಥಾನಗಳಿಗೆ ಬೇಕಾಗುವಷ್ಟು ಜನರು ಪ್ರತಿವರ್ತನೆ ತೋರಿಸಲಿಲ್ಲ. ಆದುದರಿಂದ, ಸುಮಾರು ಮೂರೂವರೆ ವರ್ಷಗಳ ನಂತರ, ಸಾ.ಶ. 36ರಲ್ಲಿ ಮೂರನೆಯ ಹಾಗೂ ಕೊನೆಯ ಆಮಂತ್ರಣವು ಸುನ್ನತಿಯಿಲ್ಲದ ಯೆಹೂದ್ಯೇತರರಿಗೆ ವಿಸ್ತರಿಸಲಾಯಿತು, ಮತ್ತು ಅಂಥವರ ಒಟ್ಟುಗೂಡಿಸುವಿಕೆಯು ನಮ್ಮ ದಿನಗಳಿಗೂ ಮುಂದುವರಿದದೆ. ಲೂಕ 14:1-24.

▪ ಯೇಸುವು ನಮ್ರತೆಯ ಯಾವ ಪಾಠವನ್ನು ಕಲಿಸಿದನು?

▪ ದೇವರೊಂದಿಗೆ ಶ್ಲಾಘನೆ ಪಡೆಯಲು ಆತಿಥೇಯನು ಹೇಗೆ ಔತಣವನ್ನು ಒದಗಿಸ ಸಾಧ್ಯವಿದೆ, ಮತ್ತು ಇದು ಅವನಿಗೆ ಏಕೆ ಸಂತೋಷವನ್ನು ತರುತ್ತದೆ?

▪ ಆಮಂತ್ರಿತ ಅತಿಥಿಗಳು ನೀಡಿದ ಹೇಳಿಕೆಗಳು ಕುಂಟುನೆವನಗಳಾಗಿದ್ದವು ಹೇಗೆ?

▪ ಯೇಸುವಿನ “ದೊಡ್ಡ ಅಡಿಗೆಯ ಊಟದ” ಸಾಮ್ಯದಿಂದ ಏನು ಪ್ರತಿನಿಧಿಸಲ್ಪಟ್ಟಿದೆ?