ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೊಹರಿಗಳ ಸಾಮ್ಯ

ಮೊಹರಿಗಳ ಸಾಮ್ಯ

ಅಧ್ಯಾಯ 100

ಮೊಹರಿಗಳ ಸಾಮ್ಯ

ಯೇಸುವು ಇನ್ನೂ ಪ್ರಾಯಶಃ ಜಕ್ಕಾಯನ ಮನೆಯಲ್ಲಿ ಇದ್ದನು, ಯೆರೂಸಲೇಮಿಗೆ ಹೋಗುವ ದಾರಿಯಲ್ಲಿ ಅವನು ಅಲ್ಲಿ ತಂಗಿದ್ದನು. ಅವರು ಯೆರೂಸಲೇಮಿಗೆ ಬಂದಾಗ, ಯೇಸುವು ತಾನು ಮೆಸ್ಸೀಯನೆಂದು ಘೋಷಿಸುವನೆಂದೂ, ಅವನ ರಾಜ್ಯವನ್ನು ಸ್ಥಾಪಿಸುವನೆಂದೂ ಅವನ ಶಿಷ್ಯರು ನಂಬಿದ್ದರು. ಈ ಯೋಚನೆಯನ್ನು ಸರಿ ಪಡಿಸಲು ಮತ್ತು ರಾಜ್ಯವು ಇನ್ನೂ ಬಹುದೂರದಲ್ಲಿದೆ ಎಂದು ತೋರಿಸಲು ಯೇಸುವು ಒಂದು ಸಾಮ್ಯವನ್ನು ಕೊಡುತ್ತಾನೆ.

“ಶ್ರೀಮಂತನಾದ [ಕುಲೀನ ಮನೆತನದ, NW] ಒಬ್ಬಾನೊಬ್ಬ ಮನುಷ್ಯನು” ಅವನು ವರ್ಣಿಸುವದು, “ತಾನು ರಾಜ್ಯಾಧಿಕಾರವನ್ನು ಪಡೆದುಕೊಂಡು ಹಿಂತಿರುಗಿ ಬರಬೇಕೆಂದು ದೂರದೇಶಕ್ಕೆ ಹೊರಟನು.” ಯೇಸುವು ಆ “ಶ್ರೀಮಂತನಾದ ಒಬ್ಬಾನೊಬ್ಬ ಮನುಷ್ಯನು” ಮತ್ತು ಪರಲೋಕವು “ದೂರದೇಶ”ವಾಗಿರುತ್ತದೆ. ಅಲ್ಲಿ ಯೇಸು ಆಗಮಿಸಿದಾಗ, ಅವನ ತಂದೆಯು ಅವನಿಗೆ ರಾಜ್ಯಾಧಿಕಾರವನ್ನು ಕೊಡುವನು.

ಆದಾಗ್ಯೂ, ಶ್ರೀಮಂತ ಮನುಷ್ಯನು ಹೊರಟುಹೋಗುವ ಮೊದಲು, ತನ್ನ ಹತ್ತು ಮಂದಿ ಆಳುಗಳನ್ನು ಕರೆದು ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಬೆಳ್ಳಿಯ ಮೊಹರಿಯನ್ನು ಕೊಟ್ಟು ಹೇಳುವದು: “ನಾನು ಬರುವ ತನಕ ವ್ಯಾಪಾರ ಮಾಡಿಕೊಂಡಿರ್ರಿ.” ಆರಂಭಿಕ ನೆರವೇರಿಕೆಯಲ್ಲಿ ಹತ್ತು ಆಳುಗಳು ಯೇಸುವಿನ ಆರಂಭದ ಶಿಷ್ಯರನ್ನು ಪ್ರತಿನಿಧಿಸುತ್ತಾರೆ. ವಿಸ್ತರಿತ ಅನ್ವಯಿಸುವಿಕೆಯಲ್ಲಿ, ಪರಲೋಕ ರಾಜ್ಯದಲ್ಲಿ ಅವನೊಂದಿಗಿರುವ ಎಲ್ಲಾ ಭಾವೀ ಬಾಧ್ಯಸ್ಥರನ್ನು ಅವರು ಸೂಚಿಸುತ್ತಾರೆ.

ಬೆಳ್ಳಿಯ ಮೊಹರಿಗಳು ಬೆಲೆಯುಳ್ಳ ಹಣವಾಗಿದ್ದು, ಒಬ್ಬ ವ್ಯವಸಾಯದ ಕೆಲಸಗಾರನ ಮೂರು ತಿಂಗಳುಗಳ ಸಂಬಳದ ಮೊತ್ತವಾಗುತ್ತಿತ್ತು. ಆದರೆ ಮೊಹರಿಗಳು ಏನನ್ನು ಪ್ರತಿನಿಧಿಸಿದವು? ಮತ್ತು ಸೇವಕರು ಅವುಗಳಿಂದ ಯಾವ ರೀತಿಯ ವ್ಯಾಪಾರ ಮಾಡಬೇಕಿತ್ತು?

ವಾಗ್ದಾನಿತ ರಾಜ್ಯದಲ್ಲಿ ಯೇಸುವು ರಾಜನಾಗಿ ಬರುವ ತನಕ, ಆತ್ಮ-ಜನಿತ ಶಿಷ್ಯರು ಸ್ವರ್ಗೀಯ ರಾಜ್ಯಕ್ಕೆ ಇನ್ನಷ್ಟು ಹೆಚ್ಚು ಬಾಧ್ಯಸ್ಥರನ್ನು ಉತ್ಪಾದಿಸುವದರಲ್ಲಿ ಅವರು ಬಳಸ ಬಹುದಾದ ಮೂಲಧನವನ್ನು ಮೊಹರಿಗಳು ಪ್ರತಿನಿಧಿಸುತ್ತವೆ. ಅವನ ಪುನರುತ್ಥಾನ ಮತ್ತು ಶಿಷ್ಯರಿಗೆ ಕಾಣಿಸಿಕೊಳ್ಳುವಿಕೆಯ ನಂತರ, ಇನ್ನಷ್ಟು ಹೆಚ್ಚು ಶಿಷ್ಯರನ್ನು ಮಾಡುವಂತೆ ಅವನು ಅವರಿಗೆ ಸಾಂಕೇತಿಕ ಮೊಹರಿಗಳನ್ನು ಕೊಡುತ್ತಾನೆ, ಈ ಮೂಲಕ ಪರಲೋಕ-ರಾಜ್ಯದ ವರ್ಗಕ್ಕೆ ಇನ್ನಷ್ಟು ಕೂಡಿಸಲು ಆಗುತ್ತದೆ.

“ಆದರೆ,” ಯೇಸುವು ಮುಂದರಿಸುವದು, “ಅವನ ಪಟ್ಟಣದ ನಿವಾಸಿಗಳು ಅವನನ್ನು ದ್ವೇಷಿಸಿ ಅವನ ಹಿಂದೆ ರಾಯಭಾರಿಗಳನ್ನು ಕಳುಹಿಸಿ ಇವನು ನಮ್ಮ ಮೇಲೆ ದೊರೆತನಮಾಡುವದು ನಮಗೆ ಇಷ್ಟವಿಲ್ಲ ಎಂದು ಹೇಳಿಸಿದರು.” ಪಟ್ಟಣದ ನಿವಾಸಿಗಳು ಇಸ್ರಾಯೇಲ್ಯರು ಯಾ ಯೆಹೂದ್ಯರಾಗಿದ್ದರು, ಇದರಲ್ಲಿ ಅವನ ಶಿಷ್ಯರು ಸೇರಿರಲಿಲ್ಲ. ಯೇಸುವು ಪರಲೋಕಕ್ಕೆ ಹೋಗಿಯಾದ ನಂತರ, ಈ ಯೆಹೂದ್ಯರು ಅವನ ಶಿಷ್ಯರನ್ನು ಹಿಂಸಿಸುವ ಮೂಲಕ, ಅವನು ತಮ್ಮ ರಾಜನಾಗುವುದು ಬೇಡ ಎಂದು ತೋರಿಸಿದರು. ಈ ರೀತಿಯಲ್ಲಿ ರಾಯಭಾರಿಗಳನ್ನು ಕಳುಹಿಸಿದ ಪಟ್ಟಣದ ನಿವಾಸಿಗಳಂತೆ ಅವರು ವರ್ತಿಸಿದರು.

ಹತ್ತು ಮಂದಿ ಆಳುಗಳು ಅವರ ಮೊಹರಿಗಳನ್ನು ಹೇಗೆ ಉಪಯೋಗಿಸಿದರು? ಯೇಸುವು ವಿವರಿಸುವದು: “ಆ ಮೇಲೆ ಅವನು ರಾಜ್ಯಾಧಿಕಾರವನ್ನು ಪಡಕೊಂಡು ಹಿಂತಿರುಗಿ ಬಂದು ತಾನು ಹಣವನ್ನು ಕೊಟ್ಟಿದ್ದ ಆಳುಗಳು ವ್ಯಾಪಾರದಿಂದ ಎಷ್ಟೆಷ್ಟು ಲಾಭ ಸಂಪಾದಿಸಿ ಕೊಂಡಿದ್ದಾರೆಂದು ತಿಳುಕೊಳ್ಳುವದಕ್ಕಾಗಿ ಅವರನ್ನು ತನ್ನ ಬಳಿಗೆ ಕರಿಸಿದನು. ಮೊದಲನೆಯವನು ಆತನ ಮುಂದೆ ಬಂದು—ದೊರೆಯೇ, ನೀನು ಕೊಟ್ಟ ಮೊಹರಿಯಿಂದ ಹತ್ತು ಮೊಹರಿಗಳು ಸಂಪಾದನೆಯಾದವು ಅನ್ನಲು ಅವನು ಅವನಿಗೆ—ಭಲಾ! ನೀನು ಒಳ್ಳೇ ಆಳು; ನೀನು ಬಹು ಸ್ವಲ್ಪವಾದದ್ದರಲ್ಲಿ ನಂಬಿಕೆಯುಳ್ಳವನಾಗಿದ್ದದರಿಂದ ಹತ್ತು ಗ್ರಾಮಗಳ ಮೇಲೆ ಅಧಿಕಾರಿಯಾಗಿರು ಎಂದು ಹೇಳಿದನು. ಎರಡನೆಯವನು ಬಂದು—ದೊರೆಯೇ, ನೀನು ಕೊಟ್ಟ ಮೊಹರಿಯಿಂದ ಐದು ಮೊಹರಿಗಳು ದೊರಕಿದವು ಅನ್ನಲು ಅವನು ಅವನಿಗೆ—ನೀನು ಸಹ ಐದು ಗ್ರಾಮಗಳ ಮೇಲಿರು ಎಂದು ಹೇಳಿದನು.”

ಹತ್ತು ಮೊಹರಿಗಳಿರುವ ಆಳು, ಸಾ.ಶ. 33ರ ಪಂಚಾಶತ್ತಮದಿಂದ ಅಪೊಸ್ತಲರ ಸಹಿತ ಹಿಡಿದು, ನಮ್ಮ ದಿನಗಳ ತನಕದ ಶಿಷ್ಯರುಗಳ ಒಂದು ವರ್ಗ ಅಥವಾ ಗುಂಪನ್ನು ಚಿತ್ರಿಸುತ್ತದೆ. ಐದು ಮೊಹರಿಗಳನ್ನು ಸಂಪಾದಿಸಿದ ಆಳು, ಅದೇ ಸಮಯಾವಧಿಯಲ್ಲಿ, ಅವರ ಅವಕಾಶ ಮತ್ತು ಸಾಮರ್ಥ್ಯಗಳಿಗನುಸಾರ ಅವರ ರಾಜನ ಮೂಲಸಂಪತ್ತನ್ನು ವೃದ್ಧಿಗೊಳಿಸಿದ ಗುಂಪೊಂದನ್ನು ಪ್ರತಿನಿಧಿಸುತ್ತದೆ. ಎರಡೂ ಗುಂಪುಗಳು ಉತ್ಸುಕತೆಯಿಂದ ಸುವಾರ್ತೆಯನ್ನು ಸಾರುತ್ತವೆ ಮತ್ತು ಇದರ ಫಲಿತಾಂಶವಾಗಿ ಅನೇಕ ಯೋಗ್ಯ ಹೃದಯಿ ವ್ಯಕ್ತಿಗಳು ಕ್ರೈಸ್ತರಾದರು. ಆಳುಗಳಲ್ಲಿ ಒಂಬತ್ತು ಮಂದಿ ಯಶ್ವಸೀ ರೀತಿಯಲ್ಲಿ ವ್ಯಾಪಾರ ಮಾಡಿದರು ಮತ್ತು ಅವರ ಸಂಪತ್ತನ್ನು ಹೆಚ್ಚಿಸಿದರು.

“ಆದರೆ,” ಯೇಸುವು ಮುಂದರಿಸುವದು, “ಮತ್ತೊಬ್ಬನು ಬಂದು—ದೊರೆಯೇ, ಇಗೋ ನೀನು ಕೊಟ್ಟ ಮೊಹರಿ. ನೀನು ಇಡದೆಯಿರುವದನ್ನು ಎತ್ತಿಕೊಂಡು ಹೋಗುವ, ಬಿತ್ತದೆಯಿರುವದನ್ನು ಕೊಯ್ಯುವ ಕಠಿಣ ಮನುಷ್ಯನು ಎಂದು ನಿನಗೆ ಹೆದರಿಕೊಂಡು ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು ಅಂದನು. ಅದಕ್ಕೆ ಅವನು—ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ತೀರ್ಪುಮಾಡುತ್ತೇನೆ. ನಾನು ಇಡದೆಯಿರುವದನ್ನು ಎತ್ತಿಕೊಂಡು ಹೋಗುವ, ಬಿತ್ತದೆಯಿರುವದನ್ನು ಕೊಯ್ಯುವ ಕಠಿಣ ಮನುಷ್ಯನು ಎಂದು ತಿಳಿದಿಯಾ? ಹಾಗಾದರೆ ನೀನು ನನ್ನ ಹಣವನ್ನು ಸಾಹುಕಾರನ ಕೈಯಲ್ಲಿ ಯಾಕೆ ಕೊಡಲಿಲ್ಲ? ಆ ಮೇಲೆ ನಾನು ಬಂದು ಅದನ್ನು ಬಡ್ಡಿ ಸಹಿತ ತೆಗೆದುಕೊಳ್ಳುತ್ತಿದ್ದೆನು ಎಂದು ಹೇಳಿ ಹತ್ತಿರ ನಿಂತಿದ್ದವರಿಗೆ—ಆ ಮೊಹರಿಯನ್ನು ಇವನಿಂದ ತೆಗೆದುಕೊಂಡು ಹತ್ತು ಮೊಹರಿಗಳುಳ್ಳವನಿಗೆ ಕೊಡಿರಿ ಎಂದು ಹೇಳಿದನು.”

ಕೆಟ್ಟ ಆಳಿಗೆ ಸಾಂಕೇತಿಕ ಮೊಹರಿಯನ್ನು ಕಳೆದುಕೊಳ್ಳುವದೆಂದರೆ ಸ್ವರ್ಗೀಯ ರಾಜ್ಯದಲ್ಲಿ ಸ್ಥಾನನಷ್ಟ ಹೊಂದುವದು ಎಂಬ ಅರ್ಥದಲ್ಲಿರುತ್ತದೆ. ಹೌದು, ಹತ್ತು ಯಾ ಐದು ಗ್ರಾಮಗಳ ಮೇಲೆ ಅಧಿಕಾರ ನಡಿಸುವ ಸುಯೋಗವನ್ನು ಅವನು ಕಳಕೊಳ್ಳುತ್ತಾನೆ ಎಂಬರ್ಥದಲ್ಲಿರುತ್ತದೆ. ಅವನನ್ನು ಕೆಟ್ಟವನೆಂದು ತೀರ್ಮಾನಿಸುವದು ಅವನು ಯಾವುದೇ ಕೆಟ್ಟದ್ದನ್ನು ಮಾಡಿದ್ದಕ್ಕಾಗಿ ಅಲ್ಲ, ಬದಲು ಅವನ ಯಜಮಾನನ ರಾಜ್ಯದ ಸಂಪತ್ತನ್ನು ವೃದ್ಧಿಪಡಿಸುವ ಕೆಲಸ ಮಾಡಲು ತಪ್ಪಿಹೋಗಿರುವದೇ ಆಗಿರುತ್ತದೆ ಎಂಬುದನ್ನು ಕೂಡ ಗಮನಿಸಿರಿ.

ಕೆಟ್ಟ ಆಳಿನ ಮೊಹರಿಯನ್ನು ಮೊದಲನೆಯ ಆಳಿಗೆ ಕೊಟ್ಟಾಗ, ಅಡಿಯ್ಡು ಎಬ್ಬಿಸಲ್ಪಟ್ಟಿತು: “ದೊರೆಯೇ, ಹತ್ತು ಮೊಹರಿಗಳು ಅವನಲ್ಲಿ ಅವೆಯಲ್ಲಾ!” ಆದರೂ, ಯೇಸುವು ಉತ್ತರಿಸುವದು: “ಇದ್ದವರಿಗೆಲ್ಲಾ ಕೊಡಲ್ಪಡುವದು, ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು. ಮತ್ತು ನಾನು ದೊರೆತನ ಮಾಡುವದು ಇಷ್ಟವಿಲ್ಲವೆಂದು ಹೇಳಿದ ಆ ನನ್ನ ವೈರಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಬೇಕು.” ಲೂಕ 19:11-27; ಮತ್ತಾಯ 28:19, 20.

▪ ಯೇಸುವಿನ ಮೊಹರಿಗಳ ಸಾಮ್ಯವನ್ನು ಪ್ರಚೋದಿಸಿದ್ದು ಯಾವುದು?

▪ ಶ್ರೀಮಂತ ಮನುಷ್ಯನು ಯಾರು, ಮತ್ತು ಅವನು ಹೋಗುವ ದೇಶವು ಯಾವುದು?

▪ ಆಳುಗಳು ಯಾರು, ಮತ್ತು ಮೊಹರಿಗಳಿಂದು ಏನು ಪ್ರತಿನಿಧಿಸಲ್ಪಟ್ಟಿದೆ?

▪ ಪಟ್ಟಣ ನಿವಾಸಿಗಳು ಯಾರು, ಮತ್ತು ಅವರು ತಮ್ಮ ದ್ವೇಷವನ್ನು ತೋರಿಸಿದ್ದು ಹೇಗೆ?

▪ ಒಬ್ಬ ಆಳನ್ನು ಕೆಟ್ಟವನೆಂದು ಕರೆದದ್ದು ಯಾಕೆ, ಮತ್ತು ಅವನ ಮೊಹರಿಯ ಕಳಕೊಳ್ಳುವಿಕೆಯು ಯಾವ ಅರ್ಥದಲ್ಲಿರುತ್ತದೆ?