ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಶಾಯನ ಪ್ರವಾದನೆಯನ್ನು ನೆರವೇರಿಸುವದು

ಯೆಶಾಯನ ಪ್ರವಾದನೆಯನ್ನು ನೆರವೇರಿಸುವದು

ಅಧ್ಯಾಯ 33

ಯೆಶಾಯನ ಪ್ರವಾದನೆಯನ್ನು ನೆರವೇರಿಸುವದು

ಫರಿಸಾಯರು ಮತ್ತು ಹೆರೋದನ ಪಕ್ಷದ ಅನುಯಾಯಿಗಳು ತನ್ನನ್ನು ಕೊಲ್ಲಲು ಹಂಚಿಕೆ ಹೂಡಿದ್ದಾರೆಂದು ಯೇಸುವು ತಿಳಿದುಕೊಂಡ ನಂತರ, ಅವನೂ, ಅವನ ಶಿಷ್ಯರೂ ಗಲಿಲಾಯ ಸಮುದ್ರದ ಬಳಿಗೆ ಹೋದರು. ಇಲ್ಲಿ ಪಲೇಸ್ತಿನ್‌ನಿಂದಲೂ ಮತ್ತು ಅದರ ಗಡಿಪ್ರದೇಶಗಳಿಂದಲೂ ಬಹುಜನರು ಗುಂಪುಗುಂಪಾಗಿ ಅವನೆಡೆಗೆ ಬಂದರು. ಅನೇಕರನ್ನು ಅವನು ವಾಸಿ ಮಾಡಿದ್ದರಿಂದ, ಕಠಿಣ ರೋಗಪೀಡಿತರಾಗಿದ್ದವರು ಅವನನ್ನು ಮುಟ್ಟಲು ಮೇಲೆ ಬೀಳುತ್ತಿದ್ದರು.

ಗುಂಪುಗಳು ದೊಡ್ಡದಾಗಿದ್ದುದರಿಂದ, ಅವನಿಗಾಗಿ ಒಂದು ದೋಣಿಯನ್ನು ಸದಾ ಸಿದ್ಧವಾಗಿಡುವಂತೆ ಯೇಸುವು ತನ್ನ ಶಿಷ್ಯರಿಗೆ ಹೇಳುತ್ತಾನೆ. ದಡದಿಂದಾಚೆ ಎಳೆದು ಕೊಂಡ ಮೂಲಕ ಜನಸಂದಣಿ ತನ್ನ ಮೇಲೆ ಮುನ್ನುಗ್ಗದಂತೆ ಅವನು ತಡೆಯ ಬಹುದಿತ್ತು. ಅವನು ದೋಣಿಯಿಂದಲೇ ಅವರಿಗೆ ಉಪದೇಶಿಸಬಹುದಿತ್ತು ಯಾ ತೀರದಿಂದಲೇ ಇನ್ನೊಂದು ಪ್ರದೇಶಕ್ಕೆ ಪಯಣಿಸಿ ಅಲ್ಲಿಯ ಜನರಿಗೆ ಸಹಾಯ ಮಾಡಬಹುದಿತ್ತು.

ಯೇಸುವಿನ ಕಾರ್ಯ ಚಟುವಟಿಕೆಯು “ಯೆಶಾಯನೆಂಬ ಪ್ರವಾದಿಯ ಮೂಲಕ ಹೇಳಿಸಿರುವ ಮಾತನ್ನು” ನೆರವೇರಿಸಿತೆಂದು ಶಿಷ್ಯನಾದ ಮತ್ತಾಯನು ಗಮನಿಸುತ್ತಾನೆ. ಅನಂತರ ಮತ್ತಾಯನು, ಯೇಸುವು ನೆರವೇರಿಸಿದ ಪ್ರವಾದನೆಯನ್ನು ಉಲ್ಲೇಖಿಸುತ್ತಾನೆ:

“ಇಗೋ! ನನ್ನ ಸೇವಕನು; ಈತನನ್ನು ಆರಿಸಿಕೊಂಡೆನು; ಈತನು ನನಗೆ ಇಷ್ಟನು; ನನ್ನ ಪ್ರಿಯನು. ಈತನಲ್ಲಿ ನನ್ನ ಆತ್ಮವನ್ನು ಇರಿಸುವೆನು; ಈತನು ಅನ್ಯ ಜನಗಳಿಗೂ ನ್ಯಾಯವಿಧಿಯನ್ನು ಸಾರುವನು. ಈತನು ಜಗಳಾಡುವದಿಲ್ಲ, ಕೂಗಾಡುವದಿಲ್ಲ; ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವದಿಲ್ಲ. ಜಜ್ಜಿದ ದಂಟನ್ನು ಮುರಿದು ಹಾಕದೆಯೂ ಆರಿ ಹೋಗುತ್ತಿರುವ ದೀಪವನ್ನು ನಂದಿಸದೆಯೂ ನ್ಯಾಯವನ್ನು ದ್ವಿಗಿಜಯಕ್ಕಾಗಿ ಕಳುಹಿಸಿಕೊಡುವನು. ಅನ್ಯ ಜನರು ಈತನ ಹೆಸರನ್ನು ಕೇಳಿ ನಿರೀಕ್ಷೆಯಿಂದಿರುವರು.”

ಯೇಸುವು, ನಿಜವಾಗಿಯೂ ದೇವರು ಮೆಚ್ಚುವ ಪ್ರಿಯ ಸೇವಕನಾಗಿದ್ದನು. ಸುಳ್ಳು ಧಾರ್ಮಿಕ ಸಂಪ್ರದಾಯಗಳಿಂದ ಯಾವ ನಿಜ ನ್ಯಾಯವು ಮುಚ್ಚಿ ಹೋಗಿತ್ತೋ, ಅದನ್ನು ಯೇಸುವು ತೆರೆದು ಸ್ಪಷ್ಟಗೊಳಿಸಿದನು. ದೇವರ ನಿಯಮಗಳ ಅವರ ಅನ್ಯಾಯದ ಅನ್ವಯಿಸುವಿಕೆಯ ಕಾರಣದಿಂದಾಗಿ, ಫರಿಸಾಯರು ಸಬ್ಬತ್‌ನಲ್ಲಿ ಒಬ್ಬ ರೋಗಪೀಡಿತನ ಸಹಾಯಕ್ಕೆ ಕೂಡಾ ಬರುತ್ತಿರಲಿಲ್ಲ! ದೇವರ ನ್ಯಾಯವಿಧಿಗಳನ್ನು ಸ್ಪಷ್ಟೀಕರಿಸುವ ಮೂಲಕ, ಅನ್ಯಾಯದ ಸಂಪ್ರದಾಯಗಳ ಹೊರೆಯಿಂದ ಯೇಸುವು ಜನರನ್ನು ವಿಮೋಚಿಸುತ್ತಾನೆ, ಮತ್ತು ಇದಕ್ಕಾಗಿ, ಧಾರ್ಮಿಕ ಮುಖಂಡರು ಅವನನ್ನು ಕೊಲ್ಲಲು ಪ್ರಯತ್ನಿಸುತ್ತಾರೆ.

‘ಈತನು ಜಗಳಾಡುವದಿಲ್ಲ, ಕೂಗಾಡುವದಿಲ್ಲ, ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವದಿಲ್ಲ’ ಎನ್ನುವುದರ ಅರ್ಥವೇನು? ಜನರನ್ನು ಸ್ವಸ್ಥಪಡಿಸಿದಾಗ ಯೇಸುವು ‘ತಾನು ಇಂಥವನೆಂದು ಯಾರಿಗೂ ಪ್ರಕಟಿಸಬಾರದೆಂದು ಅವರಿಗೆ ಖಂಡಿತವಾಗಿ ಹೇಳಿದನು.’ ಬೀದಿಗಳಲ್ಲಿ ಅವನ ಕುರಿತಾದ ಅಬ್ಬರದ ಪ್ರಚಾರ ಯಾ ಬಾಯಿಂದ ಬಾಯಿ ಮೂಲಕ ಉದ್ರೇಕಿತ ಹಾಗೂ ತಿರುಚಲ್ಪಟ್ಟ ವರದಿಗಳು ಪ್ರಸರಿಸಲ್ಪಡಲು ಅವನು ಬಯಸಲಿಲ್ಲ.

ಅಲ್ಲದೇ, ಸಾಂಕೇತಿಕವಾಗಿ ಜಜ್ಜಿದ ದಂಟನ್ನು ಬಗ್ಗಿಸಿ, ಕಾಲಿನ ಕೆಳಗೆ ತುಳಿತಕ್ಕೀಡಾಗಿದ್ದರೋ ಎಂಬಂತಿರುವ ವ್ಯಕ್ತಿಗಳಿಗೆ ತನ್ನ ಸಂತೈಸುವ ಸಂದೇಶವನ್ನು ಯೇಸುವು ಕೊಂಡೊಯ್ದನು. ಅವರು, ಈಗಾಗಲೇ ಆರಿಹೋಗುತ್ತಿರುವ ದೀಪದೋಪಾದಿ ಅವರ ಜೀವಿತದ ಕೊನೆಯ ಕಿಡಿಯು ನಂದಿ ಹೋಗುತ್ತದೋ ಎಂಬಂತಿದ್ದರು. ಯೇಸುವು ಜಜ್ಜಿದ ದಂಟನ್ನು ಆರಿಸುವದಿಲ್ಲ ಯಾ ಹೊಗೆಹತ್ತಿ ಆರುವ ದೀಪವನ್ನು ನಂದಿಸುವದಿಲ್ಲ. ಬದಲಾಗಿ, ಕೋಮಲತೆಯಿಂದ ಮತ್ತು ಪ್ರೀತಿಯಿಂದ ಅವನು ದೀನರನ್ನು ಕೌಶಲ್ಯತೆಯಿಂದ ಮೇಲಕ್ಕೆತ್ತುತ್ತಾನೆ. ನಿಜವಾಗಿಯೂ, ಯೇಸುವಿನ ಮೇಲೆ ಜನಾಂಗಗಳು ನಿರೀಕ್ಷೆಯಿಡ ಸಾಧ್ಯವಿತ್ತು. ಮತ್ತಾಯ 12:15-21; ಮಾರ್ಕ 3:7-12; ಯೆಶಾಯ 42:1-4.

▪ ಜಗಳವಾಡದೇ, ಕೂಗಾಡದೇ, ಬೀದಿಗಳಲ್ಲಿ ಧ್ವನಿ ಏರಿಸದೇ ಯೇಸುವು ನ್ಯಾಯವನ್ನು ಹೇಗೆ ಸ್ಪಷ್ಟಿಕರಿಸಿದನು?

▪ ಜಜ್ಜಿದ ದಂಟು, ಆರಿಹೋಗುತ್ತಿರುವ ದೀಪ ಯಾರಾಗಿದ್ದರು, ಮತ್ತು ಯೇಸುವು ಅವರನ್ನು ಹೇಗೆ ಉಪಚರಿಸಿದನು?