ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಆರಂಭಿಕ ಕುಟುಂಬ ಜೀವನ

ಯೇಸುವಿನ ಆರಂಭಿಕ ಕುಟುಂಬ ಜೀವನ

ಅಧ್ಯಾಯ 9

ಯೇಸುವಿನ ಆರಂಭಿಕ ಕುಟುಂಬ ಜೀವನ

ಯೇಸುವು ಬೆಳೆಯುತ್ತಾ ಇದ್ದಾಗ ನಜರೇತು ಒಂದು ಚಿಕ್ಕ, ಅಪ್ರಾಮುಖ್ಯ ನಗರವಾಗಿತ್ತು. ಅದು ಗಲಿಲಾಯವೆಂದು ಕರೆಯಲ್ಪಡುವ ಒಂದು ಗುಡ್ಡ ಪ್ರದೇಶದಲ್ಲಿ ನೆಲೆಸಿದ್ದು ಅಂದವಾದ ಇಜ್ರೇಲ್‌ ಕಣಿವೆಯಿಂದ ಅನತಿದೂರದಲ್ಲಿತ್ತು.

ಯೇಸುವು ಸುಮಾರು ಎರಡು ವಯಸ್ಸಿನಲ್ಲಿ, ಐಗುಪ್ತದಿಂದ ಯೋಸೇಪ ಮತ್ತು ಮರಿಯಳಿಂದ ಇಲ್ಲಿಗೆ ತರಲ್ಪಟ್ಟಾಗ, ಪ್ರಾಯಶಃ ಅವನು ಮರಿಯಳ ಒಬ್ಬನೇ ಮಗನು. ಆದರೆ ಬಹಳ ಕಾಲಕ್ಕಲ್ಲ. ಸಮಯಾನಂತರ ಯಾಕೋಬ, ಯೋಸೇಫ, ಸೀಮೋನ ಮತ್ತು ಯೂದರೆಂಬವರು ಹುಟ್ಟಿದರು ಹಾಗೂ ಹೆಣ್ಮಕ್ಕಳಿಗೂ ಮರಿಯ ಮತ್ತು ಯೋಸೇಫರು ಹೆತ್ತವರಾದರು. ಹೀಗೆ, ಕ್ರಮೇಣ ಯೇಸುವಿಗೆ ಕಡಿಮೆ ಪಕ್ಷ ಆರು ಜನ ಕಿರಿಯ ಸಹೋದರ ಮತ್ತು ಸಹೋದರಿಯರಾದರು.

ಯೇಸುವಿಗೆ ಇತರ ಸಂಬಂಧಿಕರೂ ಇದ್ದರು. ಅವನ ಸೋದರನಂಟನಾದ ಯೋಹಾನನ ಕುರಿತು ನಾವೀಗಲೇ ತಿಳಿದಿದ್ದೇವೆ, ಅವರು ಬಹಳಷ್ಟು ಕಿಲೊಮೀಟರ್‌ ದೂರದಲ್ಲಿರುವ ಯೂದಾಯದಲ್ಲಿ ಜೀವಿಸುತ್ತಿದ್ದನು. ಸಮೀಪದ ಗಲಿಲಾಯದಲ್ಲಿ, ಪ್ರಾಯಶಃ ಮರಿಯಳ ಸಹೋದರಿಯಾದ ಸಲೋಮಿಯು ಜೀವಿಸುತ್ತಿದ್ದಳು. ಸಲೋಮಿಯು ಜೆಬೆದ್ಯನೊಡನೆ ವಿವಾಹವಾಗಿದ್ದಳು, ಅವರ ಇಬ್ಬರು ಪುತ್ರರಾದ ಯಾಕೋಬ ಮತ್ತು ಯೋಹಾನರು ಯೇಸುವಿನ ಸೋದರನಂಟರಾಗಿದ್ದರು. ಬೆಳೆಯುತ್ತಾ ಇರುವಾಗ, ಈ ಹುಡುಗರೊಂದಿಗೆ ಯೇಸುವು ಹೆಚ್ಚಿನ ಸಮಯ ವ್ಯಯಿಸಿದನೋ ಇಲ್ಲವೋ ಎಂದು ನಮಗೆ ತಿಳಿದಿಲ್ಲವಾದರೂ, ತದನಂತರ ಅವರು ಅವನ ನಿಕಟ ಸಂಗಾತಿಗಳಾದರು.

ಬೆಳೆಯುತ್ತಿರುವ ತನ್ನ ಕುಟುಂಬವನ್ನು ಪೋಷಿಸಲು, ಯೋಸೇಫನು ಕಷ್ಟ ಪಟ್ಟು ದುಡಿಯಬೇಕಿತ್ತು. ಅವನು ಬಡಗಿಯಾಗಿದ್ದನು. ಯೇಸುವನ್ನು ತನ್ನ ಸ್ವಂತ ಮಗನೋಪಾದಿ ಯೋಸೇಫನು ಬೆಳೆಸಿದ್ದ ಕಾರಣ, ಯೇಸುವು “ಬಡಗಿಯ ಮಗ” ನೆಂದು ಕರೆಯಲ್ಪಟ್ಟನು. ಯೇಸುವೂ ಬಡಗಿಯಾಗುವಂತೆ ಯೋಸೇಫನು ಕಲಿಸಿದನು ಮತ್ತು ಅವನು ಚೆನ್ನಾಗಿ ಕಲಿತನು. ಆದುದರಿಂದ ಜನರು ಸಮಯಾನಂತರ “ಅವನು ಬಡಗಿಯಲ್ಲವೇ,” ಎಂದು ಹೇಳಿದರು.

ಯೋಸೇಫನ ಕುಟುಂಬ ಜೀವಿತವು ಯೆಹೋವ ದೇವರ ಆರಾಧನೆಯ ಸುತ್ತಲೂ ಹೆಣೆಯಲ್ಪಟ್ಟಿತ್ತು. ದೇವರ ನಿಯಮಗಳನ್ನು ಪರಿಪಾಲಿಸುವದರಲ್ಲಿ ಯೋಸೇಪನೂ, ಮರಿಯಳೂ ಮಕ್ಕಳಿಗೆ ‘ಅವರ ಮನೆಯಲ್ಲಿ ಕೂತಿರುವಾಗಲೂ, ದಾರಿ ನಡೆಯುವಾಗಲೂ, ಮಲಗುವಾಗಲೂ ಮತ್ತು ಏಳುವಾಗಲೂ’ ಆತ್ಮಿಕ ಉಪದೇಶವನ್ನು ಕೊಡುತ್ತಿದ್ದರು. ನಜರೇತಿನಲ್ಲಿ ಒಂದು ಸಭಾಮಂದಿರವಿತ್ತು ಮತ್ತು ಅಲ್ಲಿ ಆರಾಧಿಸಲು ಯೋಸೇಫನು ತನ್ನ ಪರಿವಾರವನ್ನು ಕ್ರಮಾನುಗತವಾಗಿ ಕೊಂಡೊಯ್ದಿರಬೇಕು ಎಂಬದು ನಿಶ್ಚಯ. ಆದರೆ ಯೆರೂಸಲೇಮಿನಲ್ಲಿರುವ ಯೆಹೋವನ ದೇವಾಲಯಕ್ಕೆ ಅವರು ಮಾಡುವ ಕ್ರಮಭರಿತ ಪ್ರಯಾಣಗಳಿಂದ ಅವರಿಗೆ ಅತ್ಯಂತ ಅಧಿಕ ಸಂತೋಷ ದೊರಕುತ್ತಿತ್ತು ಎಂಬದು ನಿಸ್ಸಂಶಯ. ಮತ್ತಾಯ 13:55, 56; 27:56; ಮಾರ್ಕ 15:40; 6:3: ಧರ್ಮೋಪದೇಶಕಾಂಡ 6:6-9.

▪ ಕಡಿಮೆ ಪಕ್ಷ ಯೇಸುವಿಗೆ ಎಷ್ಟು ಮಂದಿ ಕಿರಿಯ ಸಹೋದರ, ಸಹೋದರಿಯರು ಇದ್ದರು, ಮತ್ತು ಅವರಲ್ಲಿ ಕೆಲವರ ಹೆಸರುಗಳೇನು?

▪ ಯೇಸುವಿನ ಪ್ರಖ್ಯಾತರಾದ ಮೂವರು ಸೋದರನಂಟರು ಯಾರು?

▪ ಯೇಸುವು ಕ್ರಮೇಣ ಯಾವ ಐಹಿಕ ಉದ್ಯೋಗವನ್ನು ಮಾಡಿದನು, ಮತ್ತು ಯಾಕೆ?

▪ ಯೋಸೇಫನು ತನ್ನ ಕುಟುಂಬಕ್ಕೆ ಯಾವ ಅತಿ ಮುಖ್ಯ ಉಪದೇಶವನ್ನು ಒದಗಿಸಿದನು?