ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವು ಭೂಮಿಗೆ ಬಂದ ಕಾರಣ

ಯೇಸುವು ಭೂಮಿಗೆ ಬಂದ ಕಾರಣ

ಅಧ್ಯಾಯ 24

ಯೇಸುವು ಭೂಮಿಗೆ ಬಂದ ಕಾರಣ

ಕಪೆರ್ನೌಮಿನಲ್ಲಿ, ತನ್ನ ನಾಲ್ವರು ಶಿಷ್ಯರೊಂದಿಗಿನ ಯೇಸುವಿನ ದಿನವು ಕಾರ್ಯಮಗ್ನತೆಯದ್ದಾಗಿತ್ತು. ಕಪೆರ್ನೌಮಿನ ಜನರು ತಂದ ಎಲ್ಲಾ ರೋಗಿಗಳನ್ನು ಗುಣಪಡಿಸುವದರೊಂದಿಗೆ ಸಾಯಂಕಾಲ ಸಮಾಪ್ತಿಗೊಂಡಿತು. ಅಲ್ಲಿ ಏಕಾಂತತೆಗೆ ಸಮಯವೇ ಇರಲಿಲ್ಲ.

ಈಗ ಮರುದಿನ ಬೆಳಿಗ್ಗೆ ಬೇಗ, ಇನ್ನೂ ಕತ್ತಲಿರುವಾಗಲೇ ಯೇಸುವು ಎದ್ದುಕೊಂಡು, ಒಬ್ಬನಾಗಿಯೇ ಹೊರಗೆ ಹೋಗುತ್ತಾನೆ. ತನ್ನ ತಂದೆಯೊಂದಿಗೆ ಖಾಸಗಿಯಾಗಿ ಪ್ರಾರ್ಥಿಸಲು ಶಕ್ತನಾಗುವಂತೆ ಅವನು ಏಕಾಂತ ಸ್ಥಳವೊಂದಕ್ಕೆ ಹೋಗುತ್ತಾನೆ. ಆದರೆ ಯೇಸುವಿನ ಏಕಾಂತತೆಯು ಕೊಂಚ ಸಮಯದ್ದಾಗಿತ್ತು, ಯಾಕಂದರೆ ಯೇಸುವು ಇಲ್ಲದಿರುವದನ್ನು ಪೇತ್ರನು ಮತ್ತು ಇನ್ನಿತರರು ಕಂಡುಕೊಂಡು, ಅವನನ್ನು ಹುಡುಕಲು ಅವರು ಹೊರಡುತ್ತಾರೆ.

ಅವರು ಅವನನ್ನು ಕಂಡುಕೊಂಡಾಗ, ಪೇತ್ರನನ್ನುವದು: “ಎಲ್ಲರೂ ನಿನ್ನನ್ನು ಹುಡುಕುತ್ತಾರೆ.” ಕಪೆರ್ನೌಮಿನ ಜನರು ಅವರೊಂದಿಗೆ ಯೇಸು ತಂಗಬೇಕೆಂದು ಬಯಸುತ್ತಾರೆ. ಅವರಿಗೋಸ್ಕರ ಅವನು ಏನು ಮಾಡಿದನೋ, ಅದನ್ನು ಅವರು ನಿಜವಾಗಿಯೂ ಗಣ್ಯಮಾಡುತ್ತಾರೆ! ಆದರೆ ಯೇಸುವು ಅದ್ಭುತವಾಗಿ ವಾಸಿಮಾಡಲಿಕ್ಕೋಸ್ಕರ ಮಾತ್ರವೇ ಮುಖ್ಯವಾಗಿ ಈ ಭೂಮಿಗೆ ಬಂದನೋ? ಇದರ ಕುರಿತು ಅವನೇನು ಹೇಳುತ್ತಾನೆ?

ಒಂದು ಬೈಬಲ್‌ ದಾಖಲೆಗನುಸಾರ, ಯೇಸುವು ತನ್ನ ಶಿಷ್ಯರಿಗೆ ಉತ್ತರಿಸುವದು: “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ. ಅಲಿಯ್ಲೂ ನಾನು ಸುವಾರ್ತೆಯನ್ನು ಸಾರಬೇಕು. ಇದಕ್ಕಾಗಿಯೇ ನಾನು ಹೊರಟು ಬಂದಿದ್ದೀನೆ.” ಯೇಸುವು ನಿಲ್ಲುವಂತೆ ಜನರು ಒತ್ತಾಯಿಸಿದಾಗ ಕೂಡಾ ಅವರಿಗೆ ಅವನಂದದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಸಾರಿ ಹೇಳಬೇಕಾಗಿದೆ; ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.”

ಹೌದು, ಯೇಸುವು ತನ್ನ ತಂದೆಯ ಹೆಸರನ್ನು ಸಮರ್ಥಿಸುವ ಮತ್ತು ಮಾನವ ಅಸ್ವಸ್ಥತೆಗಳನ್ನು ಶಾಶ್ವತವಾಗಿ ಪರಿಹರಿಸುವ ದೇವರ ರಾಜ್ಯದ ಕುರಿತು ಸಾರಲು ವಿಶೇಷವಾಗಿ ಈ ಭೂಮಿಗೆ ಬಂದಿದ್ದನು. ಆದಾಗ್ಯೂ, ತಾನು ದೇವರಿಂದ ಕಳುಹಿಸಲ್ಪಟ್ಟವನು ಎಂಬ ರುಜುವಾತನ್ನು ನೀಡಲು ಯೇಸುವು ಅದ್ಭುತಕರ ವಾಸಿ ಮಾಡುವಿಕೆಗಳನ್ನು ನಡಿಸುತ್ತಾನೆ. ಶತಮಾನಗಳ ಹಿಂದೆ ಮೋಶೆಯು ತದ್ರೀತಿಯಲ್ಲಿ, ದೇವರ ಸೇವಕನೆಂಬ ತನ್ನ ಅರ್ಹತೆಯನ್ನು ಸ್ಥಾಪಿಸಲು ಅದ್ಭುತಗಳನ್ನು ನಡಿಸಿದ್ದನು.

ಈಗ, ಬೇರೆ ಊರುಗಳಲ್ಲಿ ಸಾರಲು ಯೇಸುವು ಕಪೆರ್ನೌಮನ್ನು ಬಿಟ್ಟಾಗ, ಅವನೊಂದಿಗೆ ಅವನ ನಾಲ್ವರು ಶಿಷ್ಯರು ಹೊರಡುತ್ತಾರೆ. ಪೇತ್ರ, ಅವನ ತಮ್ಮ ಅಂದ್ರೆಯ ಮತ್ತು ಯೋಹಾನ ಮತ್ತು ಅವನ ತಮ್ಮ ಯಾಕೋಬ ಈ ನಾಲ್ವರಾಗಿದ್ದರು. ಕೇವಲ ಒಂದು ವಾರದ ಹಿಂದೆ, ತನ್ನ ಮೊದಲ ಸಂಚಾರದ ಸಹ-ಕೆಲಸಗಾರರನ್ನಾಗಿ ಯೇಸುವು ಅವರನ್ನು ಆಮಂತ್ರಿಸಿದ್ದನೆಂಬುದನ್ನು ನೀವು ನೆನಪಿಸಬಹುದು.

ಗಲಿಲಾಯದ ಸಂಚಾರದಲ್ಲಿ, ನಾಲ್ವರು ಶಿಷ್ಯರೊಂದಿಗಿನ ಯೇಸುವಿನ ಸಾರುವಿಕೆಯು ಬೆರಗುಗೊಳಿಸುವ ಸಾಫಲ್ಯದ್ದಾಗಿತ್ತು! ವಾಸ್ತವದಲ್ಲಿ ಅವನ ಕಾರ್ಯ ಚಟುವಟಿಕೆಯ ವರದಿಯು ಸಿರಿಯಾ ದೇಶದಲ್ಲೆಲ್ಲಾ ಕೂಡಾ ಹಬ್ಬುತ್ತದೆ. ಗಲಿಲಾಯ, ಯೂದಾಯ ಮತ್ತು ಯೊರ್ದನ್‌ ಹೊಳೆಯ ಆಚೇ ಕಡೆಯಿಂದಲೂ ಗುಂಪುಗುಂಪಾಗಿ ಜನರು ಯೇಸುವನ್ನೂ, ಅವನ ಶಿಷ್ಯರನ್ನೂ ಹಿಂಬಾಲಿಸುತ್ತಾರೆ. ಮಾರ್ಕ 1:35-39; ಲೂಕ 4:42, 43; ಮತ್ತಾಯ 4:23-25; ವಿಮೋಚನಕಾಂಡ 4:1-9, 30, 31.

▪ ಕಪೆರ್ನೌಮಿನಲ್ಲಿ ಯೇಸುವಿನ ಕಾರ್ಯಮಗ್ನ ದಿನದ ನಂತರದ ಬೆಳಿಗ್ಗೆ ಏನು ಸಂಭವಿಸುತ್ತದೆ?

▪ ಯೇಸುವನ್ನು ಭೂಮಿಗೆ ಕಳುಹಿಸಿದ್ದು ಯಾಕೆ, ಮತ್ತು ಅವನ ಅದ್ಭುತಗಳು ಯಾವ ಉದ್ದೇಶವನ್ನು ಪೂರೈಸಿದವು?

▪ ಯೇಸುವಿನ ಗಲಿಲಾಯದ ಸಾರುವಿಕೆಯ ಸಂಚಾರದಲ್ಲಿ ಅವನೊಟ್ಟಿಗೆ ಯಾರು ಹೋದರು, ಮತ್ತು ಯೇಸುವಿನ ಕಾರ್ಯ ಚಟುವಟಿಕೆಗಳಿಗೆ ಪ್ರತಿಕ್ರಿಯೆ ಏನಾಗಿತ್ತು?