ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವು 70 ಮಂದಿಯನ್ನು ಕಳುಹಿಸುತ್ತಾನೆ

ಯೇಸುವು 70 ಮಂದಿಯನ್ನು ಕಳುಹಿಸುತ್ತಾನೆ

ಅಧ್ಯಾಯ 72

ಯೇಸುವು 70 ಮಂದಿಯನ್ನು ಕಳುಹಿಸುತ್ತಾನೆ

ಅದು ಸಾ.ಶ. 32ರ ಮಾಗಿಕಾಲವಾಗಿತ್ತು, ಯೇಸುವಿನ ದೀಕ್ಷಾಸ್ನಾನವಾಗಿ ಪೂರ್ಣ ಮೂರು ವರ್ಷಗಳಾಗಿದ್ದವು. ಯೆರೂಸಲೇಮಿನಲ್ಲಿ ನಡೆದ ಪರ್ಣಶಾಲೆಗಳ ಜಾತ್ರೆಗೆ ಅವನೂ, ಶಿಷ್ಯರೂ ಇತ್ತೀಚೆಗೆ ಹಾಜರಾಗಿದ್ದರು, ಮತ್ತು ಅವರು ಅಲ್ಲೀಯೇ ಎಲ್ಲಿಯೋ ಸಮೀಪದಲ್ಲಿ ಇದ್ದರು. ವಾಸ್ತವದಲ್ಲಿ, ಯೇಸುವು ಅವನ ಶುಶ್ರೂಷೆಯಲ್ಲಿ ಉಳಿದ ಆರು ತಿಂಗಳುಗಳಲ್ಲಿ ಹೆಚ್ಚಿನ ಸಮಯವನ್ನು ಹೆಚ್ಚು ಕಡಿಮೆ ಒಂದೇ ಯೂದಾಯದಲ್ಲಿ ಇಲ್ಲವೇ ಯೊರ್ದನ್‌ ಹೊಳೆಯ ಆಚೇ ಪಕ್ಕದಲ್ಲಿರುವ ಪೆರಿಯ ಪ್ರಾಂತ್ಯದಲ್ಲಿ ಕಳೆಯುತ್ತಾನೆ. ಈ ಕ್ಷೇತ್ರವು ಕೂಡಾ ಆವರಿಸಲ್ಪಡಲಿಕ್ಕಿತ್ತು.

ಸಾ.ಶ. 30ರ ಪಸ್ಕಹಬ್ಬದ ನಂತರ, ಯೇಸುವು ಸುಮಾರು ಎಂಟು ತಿಂಗಳುಗಳನ್ನು ಯೂದಾಯದಲ್ಲಿ ಸಾರಲು ವ್ಯಯಿಸಿದ್ದನೆಂಬುದು ಸತ್ಯ. ಆದರೆ ಸಾ.ಶ. 31ರ ಪಸ್ಕಹಬ್ಬದ ಸಮಯದಲ್ಲಿ ಯೆಹೂದ್ಯರು ಯೇಸುವನ್ನು ಕೊಲ್ಲಲು ಪ್ರಯತ್ನಿಸಿದ ನಂತರ, ಅವನು ಉಳಿದ ಸುಮಾರು ಒಂದೂವರೆ ವರ್ಷಗಳನ್ನು ಹೆಚ್ಚುಕಡಿಮೆ ಪೂರ್ಣವಾಗಿ ಗಲಿಲಾಯದಲ್ಲಿ ಕಳೆದನು. ಆ ಸಮಯದಲ್ಲಿ, ಅವನು ಒಂದು ದೊಡ್ಡ, ಒಳ್ಳೆಯ ತರಬೇತು ಪಡೆದ ಸಾರುವವರ ಸಂಸ್ಥಾಪನೆಯನ್ನು ವ್ಯವಸ್ಥಾಪಿಸಿದನು. ಇಂಥಾದೊಂದು ಮೊದಲು ಇರಲಿಲ್ಲ. ಹೀಗೆ, ಅವನು ಯೂದಾಯದಲ್ಲಿ ಒಂದು ಕೊನೆಯ ಹಾಗೂ ತೀವ್ರತೆಯುಳ್ಳ ಸಾರುವ ಒಂದು ಕಾರ್ಯಚಟುವಟಿಕೆಯನ್ನು ಆರಂಭಿಸುತ್ತಾನೆ.

ಆ ಎಪ್ಪತ್ತು ಮಂದಿ ಶಿಷ್ಯರನ್ನು ಆರಿಸಿ, ಅವರನ್ನು ಇಬ್ಬಿಬ್ಬರಾಗಿ ಕಳುಹಿಸುವದರ ಮೂಲಕ, ಯೇಸುವು ಈ ಕಾರ್ಯಚಟುವಟಿಕೆಯನ್ನು ಜ್ಯಾರಿಗೊಳಿಸಿದನು. ಹೀಗೆ, ಕ್ಷೇತ್ರದಲ್ಲಿ ಕೆಲಸ ನಡಿಸಲು ಒಟ್ಟಿಗೆ 35 ಜೋಡಿ ರಾಜ್ಯಘೋಷಕರು ಅಲ್ಲಿದ್ದರು. ಇವರು ಪ್ರತಿಯೊಂದು ನಗರ ಮತ್ತು ಸ್ಥಳಗಳಿಗೆ ಮೊದಲು ಹೋಗುತ್ತಿದ್ದರು, ಆ ನಂತರ ತನ್ನ ಅಪೊಸ್ತಲರನ್ನೊಡಗೂಡಿ ಯೇಸುವು ಅಲ್ಲಿಗೆ ಹೋಗಲು ಯೋಜಿಸುತ್ತಿದ್ದನು.

ಆ ಎಪ್ಪತ್ತು ಮಂದಿಯನ್ನು ಸಭಾಮಂದಿರಗಳಿಗೆ ಕಳುಹಿಸುವದರ ಬದಲು, ಅವರು ಜನರ ಮನೆಗಳಿಗೆ ಹೋಗುವಂತೆ ಯೇಸುವು ಹೇಳುತ್ತಾ, ವಿವರಿಸುವದು: “ಇದಲ್ಲದೆ ನೀವು ಯಾವ ಮನೆಯೊಳಗೆ ಹೋದರೂ—ಈ ಮನೆಗೆ ಸಮಾಧಾನವಾಗಲಿ ಎಂದು ಮೊದಲು ಹೇಳಿರಿ. ಸಮಾಧಾನದ ಮಿತ್ರನು ಅಲ್ಲಿದ್ದರೆ ನಿಮ್ಮ ಸಮಾಧಾನವು ಅವನ ಮೇಲೆ ನಿಲ್ಲುವದು.” (NW) ಅವರ ಸಂದೇಶವೇನಾಗಿರಬೇಕಿತ್ತು? “ದೇವರು ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ ಎಂದು ಹೇಳಿರಿ” ಎಂದು ಯೇಸುವು ಹೇಳುತ್ತಾನೆ. 70 ಮಂದಿಯ ಚಟುವಟಿಕೆಯ ಕುರಿತು ಮ್ಯಾಥ್ಯೂ ಹೆನ್ರಿಸ್‌ ಕಾಮೆಂಟ್ರಿ ಹೇಳುವದು: “ಅವರ ಗುರುವಿನಂತೆ, ಎಲ್ಲಿಲ್ಲಾ ಅವರು ಭೇಟಿಯನ್ನಿತ್ತರೋ ಅಲ್ಲಿ, ಅವರು ಮನೆಯಿಂದ ಮನೆಗೆ ಸಾರಿದರು.

ಸುಮಾರು ಒಂದು ವರ್ಷದ ಮೊದಲು ಸಾರುವ ಕಾರ್ಯಚಟುವಟಿಕೆಗಾಗಿ 12 ಮಂದಿಯನ್ನು ಕಳುಹಿಸಿದಾಗ ಯೇಸುವು ಕೊಟ್ಟ ತದ್ರೀತಿಯ ಉಪದೇಶವನ್ನು ಈ 70 ಮಂದಿಗೂ ಕೊಡಲಾಯಿತು. ಮನೆಯವರಿಗೆ ಸಂದೇಶವನ್ನು ಸಾದರಪಡಿಸಲು ಅವರನ್ನು ಸಿದ್ಧಗೊಳಿಸಿ, ಅವರು ಎದುರಿಸಲಿರುವ ವಿರೋಧದ ಕುರಿತು ಆ 70 ಮಂದಿಯನ್ನು ಎಚ್ಚರಿಸಿದ್ದು ಮಾತ್ರವಲ್ಲ, ರೋಗಿಗಳನ್ನು ವಾಸಿಮಾಡುವ ಶಕ್ತಿಯನ್ನೂ ಅವನು ಕೊಟ್ಟನು. ಈ ರೀತಿ ಸ್ವಲ್ಪ ಸಮಯದ ನಂತರ ಯೇಸುವು ಅಲ್ಲಿ ಆಗಮಿಸುವಾಗ, ಅದ್ಭುತ ಸಂಗತಿಗಳನ್ನು ಮಾಡಲು ಶಕ್ಯವಾದ ಆ ಶಿಷ್ಯರ ಗುರುವನ್ನು ನೋಡಲು ಅನೇಕರು ತವಕಪಡುತ್ತಿದ್ದರು.

ಆ 70 ಮಂದಿಯ ಸಾರುವಿಕೆ ಮತ್ತು ಯೇಸುವು ಹಿಂಬಾಲಿಸಿ ಅನಂತರ ಮಾಡಿದ ಕಾರ್ಯ ಕೊಂಚಕಾಲವೇ ನಡೆಯಿತು. ಬಲುಬೇಗನೆ ರಾಜ್ಯ ಘೋಷಕರ ಆ 35 ತಂಡಗಳು ಯೇಸುವಿನ ಬಳಿಗೆ ಹಿಂತೆರಳಿ ಬಂದವು. “ಸ್ವಾಮೀ,” ಅವರು ಸಂತೋಷದಿಂದ ಹೇಳಿದ್ದು, “ದೆವ್ವಗಳು ಕೂಡಾ ನಿನ್ನ ಹೆಸರನ್ನು ಕೇಳಿ ನಮಗೆ ಅಧೀನವಾಗುತ್ತವೆ.” ಅಂಥ ಉತ್ತಮ ಸೇವಾ ವರದಿಯು ಯೇಸುವನ್ನು ಖಂಡಿತವಾಗಿ ರೋಮಾಂಚಗೊಳಿಸುತ್ತದೆ, ಏಕಂದರೆ ಅವನು ಪ್ರತಿವರ್ತಿಸಿದ್ದು: “ಸೈತಾನನು ಸಿಡಿಲಿನಂತೆ ಆಕಾಶದಿಂದ ಬೀಳುವದನ್ನು ಕಂಡೆನು. ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ತುಳಿಯುವದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ.”

ಅಂತ್ಯದ ಸಮಯದಲ್ಲಿ ದೇವರ ರಾಜ್ಯವು ಸ್ಥಾಪನೆಯಾದ ನಂತರ, ಸೈತಾನನು ಮತ್ತು ಅವನ ದೆವ್ವಗಳು ಪರಲೋಕದಿಂದ ದೊಬ್ಬಲ್ಪಡಲಿದ್ದವು ಎಂದು ಯೇಸು ತಿಳಿದಿದ್ದನು. ಆದರೆ ಕೇವಲ ಮನುಷ್ಯರು ಅದೃಶ್ಯ ದೆವ್ವಗಳನ್ನು ಬಿಡಿಸುವದು, ಬರಲಿರುವ ಆ ಘಟನೆಯ ಆಶ್ವಾಸನೆಗೆ ಇನ್ನಷ್ಟನ್ನು ಕೂಡಿಸಿತು. ಆದಕಾರಣ, ಪರಲೋಕದಿಂದ ಸೈತಾನನ ಭಾವೀ ಪತನವು ಒಂದು ಖಚಿತವಾದ ಘಟನೆಯೆಂಬಂತೆ ಯೇಸು ಮಾತಾಡುತ್ತಾನೆ. ಆದಕಾರಣ, ಹಾವುಗಳನ್ನೂ, ಚೇಳುಗಳನ್ನೂ ತುಳಿಯುವ ಅಧಿಕಾರ ಆ 70 ಮಂದಿಗಳಿಗೆ ಕೊಡಲ್ಪಡುವದು ಒಂದು ಸಾಂಕೇತಿಕ ಅರ್ಥದಲ್ಲಿದೆ. ಆದರೂ ಯೇಸುವು ಹೇಳುವದು: “ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆದಿರುತ್ತವೆ ಎಂದು ಸಂತೋಷಪಡಿರಿ.”

ಯೇಸುವು ಆನಂದತುಂದಿಲನಾಗುತ್ತಾನೆ ಮತ್ತು ಅಂಥಾ ಮಹತ್ತಾದ ರೀತಿಯಲ್ಲಿ ಅವನ ಈ ವಿನೀತ ಸೇವಕರನ್ನು ಉಪಯೋಗಿಸಿದಕ್ಕಾಗಿ ತನ್ನ ತಂದೆಯನ್ನು ಬಹಿರಂಗವಾಗಿ ಸ್ತುತಿಸುತ್ತಾನೆ. ಅವನ ಶಿಷ್ಯರ ಕಡೆಗೆ ತಿರುಗಿ, ಅವನಂದದ್ದು: “ನೀವು ನೋಡುತ್ತಿರುವ ಸಂಗತಿಗಳನ್ನು ನೋಡುವವರು ಧನ್ಯರು. ಬಹು ಮಂದಿ ಪ್ರವಾದಿಗಳೂ ಅರಸರೂ ನೀವು ನೋಡುತ್ತಿರುವ ಸಂಗತಿಗಳನ್ನು ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ, ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಿಲ್ಲ.” ಲೂಕ 10:1-24; ಮತ್ತಾಯ 10:1-42; ಪ್ರಕಟನೆ 12:7-12.

▪ ಅವನ ಶುಶ್ರೂಷೆಯ ಮೊದಲ ಮೂರು ವರ್ಷಗಳ ತನಕ ಯೇಸುವು ಎಲ್ಲಿ ಸಾರಿದನು, ಮತ್ತು ಅವನ ಕೊನೆಯ ಆರು ತಿಂಗಳಲ್ಲಿ ಅವನು ಯಾವ ಕ್ಷೇತ್ರವನ್ನು ಆವರಿಸಿದನು?

▪ ಜನರನ್ನು ಕಂಡುಕೊಳ್ಳಲು ಆ 70 ಮಂದಿಯನ್ನು ಯೇಸುವು ಎಲ್ಲಿಗೆ ಕಳುಹಿಸಿದನು?

▪ ಸೈತಾನನು ಈಗಾಗಲೇ ಪರಲೋಕದಿಂದ ಬಿದ್ದಿರುವದನ್ನು ಕಂಡೆನು ಎಂದು ಯೇಸುವು ಹೇಳಿದ್ದು ಯಾಕೆ?

▪ ಯಾವ ಅರ್ಥದಲ್ಲಿ ಆ 70 ಮಂದಿ ಹಾವುಗಳನ್ನೂ, ಚೇಳುಗಳನ್ನೂ ತುಳಿಯಶಕ್ತರು?