ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋಹಾನನು ದಾರಿಯನ್ನು ಸಿದ್ಧಮಾಡುತ್ತಾನೆ

ಯೋಹಾನನು ದಾರಿಯನ್ನು ಸಿದ್ಧಮಾಡುತ್ತಾನೆ

ಅಧ್ಯಾಯ 11

ಯೋಹಾನನು ದಾರಿಯನ್ನು ಸಿದ್ಧಮಾಡುತ್ತಾನೆ

ದೇವಾಲಯದಲ್ಲಿ ಬೋಧಕರನ್ನು 12 ವರ್ಷದ ಬಾಲಕನಾದ ಯೇಸುವು ಪ್ರಶ್ನಿಸಿದಂದಿನಿಂದ ಹದಿನೇಳು ವರ್ಷಗಳು ಗತಿಸಿವೆ. ಇದ ಸಾ. ಶ. 29ರ ವಸಂತಕಾಲ ಮತ್ತು ಯೊರ್ದನ್‌ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಾರುತ್ತಿರುವ, ಯೇಸುವಿನ ಸಂಬಂಧಿಯಾದ ಯೋಹಾನನ ಕುರಿತಾಗಿ ಎಲ್ಲರೂ ಮಾತಾಡುತ್ತಿರುವಂತೆ ಕಾಣುತ್ತದೆ.

ಯೋಹಾನನು ದೈಹಿಕ ತೋರಿಕೆಯಲ್ಲಿಯೂ ಮತ್ತು ಮಾತುಗಳಲ್ಲಿಯೂ ಖಂಡಿತವಾಗಿ ಪ್ರಭಾವ ಹಾಕಶಕ್ತನು. ಅವನ ಉಡುಪುಗಳು ಒಂಟೇ ಕೂದಲಿನಿಂದ ಮಾಡಲ್ಪಟ್ಟಿದ್ದು, ಸೊಂಟದಲ್ಲಿ ತೊಗಲಿನ ನಡುಕಟ್ಟು ಇತ್ತು. ಅವನಿಗೆ ಮಿಡಿತೆ ಮತ್ತು ಕಾಡಜೇನು ಆಹಾರವಾಗಿದ್ದವು. ಮತ್ತು ಅವನ ಸಂದೇಶ? “ಮಾನಸಾಂತರ ಪಡಿರಿ, ಪರಲೋಕ ರಾಜ್ಯವು ಸಮೀಪಿಸಿದೆ.”

ಈ ಸಂದೇಶವು ಆಲಿಸುವವರನ್ನು ಉದ್ರೇಕಿಸುತ್ತದೆ. ಅನೇಕರು ಪಶ್ಚಾತ್ತಾಪ ಪಡುವ ಅಂದರೆ ಅವರ ಮನೋಭಾವ ಬದಲಾಯಿಸುವ ಮತ್ತು ಅನಪೇಕ್ಷಿತವಾದ ತಮ್ಮ ಗತಕಾಲದ ಜೀವನ ಪದ್ಧತಿಯನ್ನು ತ್ಯಜಿಸುವ ಆವಶ್ಯಕತೆಯನ್ನು ಕಂಡುಕೊಂಡರು. ಆದುದರಿಂದ ಯೊರ್ದನಿನ ಸುತ್ತಮುತ್ತಲ ಪ್ರದೇಶಗಳಿಂದಲೂ, ಯೆರೂಸಲೇಮಿನಿಂದಲೂ ಕೂಡಾ ಅಧಿಕ ಸಂಖ್ಯೆಯಲ್ಲಿ ಜನರು ಯೋಹಾನನ ಬಳಿಗೆ ಬರಲು ಆರಂಭಿಸಿದರು ಮತ್ತು ಅವನು ಅವರನ್ನು ಯೊರ್ದನಿನ ನೀರಿನೊಳಗೆ ಮುಳುಗಿಸುವುದರ ಮೂಲಕ ದೀಕ್ಷಾಸ್ನಾನ ಮಾಡಿಸಿದನು. ಯಾಕೆ?

ದೇವರ ನಿಯಮದೊಡಂಬಡಿಕೆಯ ವಿರುದ್ಧವಾಗಿ ಗೈದ ಪಾಪಗಳ ಹೃದಯಪೂರ್ವಕ ಪಶ್ಚಾತ್ತಾಪದ ಸಂಕೇತವಾಗಿ ಯಾ ಅಂಗೀಕಾರವಾಗಿ, ಯೋಹಾನನು ಜನರ ದೀಕ್ಷಾಸ್ನಾನ ಮಾಡಿಸಿದನು. ಈ ರೀತಿ, ಕೆಲವು ಫರಿಸಾಯರು ಮತ್ತು ಸದ್ದುಕಾಯರು ಯೊರ್ದನ್‌ ಬಳಿಗೆ ಬಂದಾಗ, ಯೋಹಾನನು ಅವರನ್ನು ಖಂಡಿಸುತ್ತಾನೆ. “ಎಲೈ ಸರ್ಪಜಾತಿಯವರೇ,” ಎಂದನವನು. “ಪಶ್ಚಾತ್ತಾಪಕ್ಕೆ ತಕ್ಕದಾದ್ದ ಫಲಗಳನ್ನು ಉತ್ಪಾದಿಸಿರಿ; ‘ಅಬ್ರಹಾಮನು ನಮಗೆ ಮೂಲಪುರುಷನಲ್ಲವೇ’ ಎಂದು ನಿಮ್ಮೊಳಗೆ ಅಂದುಕೊಳ್ಳುವವರಾಗಬೇಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ. ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಒಳ್ಳೇ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು.”

ಎಲ್ಲಾ ಗಮನವನ್ನು ಯೋಹಾನನು ಪಡೆಯುವದರ ಕಾರಣ, ಯೆಹೂದ್ಯರು ಯಾಜಕರನ್ನೂ ಲೇವಿಯರನ್ನೂ ಅವನ ಬಳಿ ಕಳುಹಿಸುತ್ತಾರೆ. ಅವರು ಕೇಳುವದು: “ನೀನು ಯಾರು?”

“ನಾನು ಕ್ರಿಸ್ತನಲ್ಲ,” ಎಂದು ಯೋಹಾನನು ಒಪ್ಪುತ್ತಾನೆ.

“ಹಾಗಾದರೆ, ನೀನು ಎಲೀಯನೋ?” ಎಂದವರು ವಿಚಾರಿಸುತ್ತಾರೆ.

“ನಾನಲ್ಲ,” ಎಂದವನ ಉತ್ತರ.

“ನೀನೊಬ್ಬ ಪ್ರವಾದಿಯೋ?”

“ಅಲ್ಲ!”

ಅವರು ಪಟ್ಟು ಹಿಡಿಯುತ್ತಾರೆ: “ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಹೇಳಬೇಕಲ್ಲಾ; ನಿನ್ನ ವಿಷಯವಾಗಿ ಏನು ಹೇಳುತ್ತೀ?”

ಯೋಹಾನನು ವಿವರಿಸುವದು: “ಯೆಹೋವನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ ಎಂಬದಾಗಿ ಯೆಶಾಯ ಪ್ರವಾದಿಯು ಹೇಳಿದನಷ್ಟೆ. ಆ ಶಬ್ದವೇ ನಾನು.”

“ನೀನು ಕ್ರಿಸ್ತನೂ ಎಲೀಯನೂ ಆ ಪ್ರವಾದಿಯೂ ಅಲ್ಲವಾದರೆ ದೀಕ್ಷಾಸ್ನಾನ ಮಾಡಿಸುವದೇನು?” ಎಂದು ಅವರು ಕೇಳುತ್ತಾರೆ.

“ನಾನು ನೀರಿನಿಂದ ದೀಕ್ಷಾಸ್ನಾನಮಾಡಿಸುವವನು; ಆದರೆ ನೀವು ಅರಿಯದೆ ಇರುವ ಒಬ್ಬಾತನು ನಿಮ್ಮ ಮಧ್ಯದಲ್ಲಿ ನಿಂತಿದ್ದಾನೆ; ಅವನು ನನ್ನ ಹಿಂದೆ ಬರತಕ್ಕವನು,” ಎಂದು ಅವನು ಉತ್ತರಿಸುತ್ತಾನೆ.

ರಾಜನಾಗಲಿರುವವನನ್ನು ಮೆಸ್ಸೀಯನಾಗಿ ಸ್ವೀಕರಿಸಲು ಜನರು ಯೋಗ್ಯ ಹೃದಯ ಪರಿಸ್ಥಿತಿಯವರಾಗುವಂತೆ ಯೋಹಾನನು ದಾರಿಯನ್ನು ಸಿದ್ಧ ಮಾಡುತ್ತಿದ್ದನು. ಈತನ ಕುರಿತು ಯೋಹಾನನು ಹೇಳುವದು: “ಆದರೆ ನನ್ನ ಹಿಂದೆ ಬರುವವನು ನನಗಿಂತಲೂ ಶಕ್ತನು; ಆತನ ಕೆರಗಳ ಬಾರನ್ನು ಬಿಚ್ಚಲಿಕ್ಕೂ ನಾನು ಯೋಗ್ಯನಲ್ಲ.” ವಾಸ್ತವದಲ್ಲಿ ಯೋಹಾನನು ಇದನ್ನೂ ಹೇಳುತ್ತಾನೆ: “ನನ್ನ ಹಿಂದೆ ಬರುವವನು ನನಗಿಂತ ಮೊದಲೇ ಇದ್ದದರಿಂದ ನನಗೆ ಮುಂದಿನವನಾದನು.”

ಯೆಹೋವನ ಅಭಿಷಿಕ್ತ ಅರಸನಾದ ಯೇಸು ಕ್ರಿಸ್ತನ ಶುಶ್ರೂಪಷೆ ಸೇವೆಯು ಆರಂಭಿಸಲಿದೆ ಎಂಬ ಬಹಿರಂಗ ಪ್ರಕಟನೆ ನೀಡುವಂತಹ ರೀತಿಯಲ್ಲಿ ಯೋಹಾನನ “ಪರಲೋಕ ರಾಜ್ಯವು ಸಮೀಪಿಸಿದೆ,” ಎಂಬ ಸಂದೇಶವು ಕಾರ್ಯ ನಡಿಸಿತು. ಯೋಹಾನ 1:6-8, 15-28; ಮತ್ತಾಯ 3:1-12; ಲೂಕ 3:1-18; ಅ. ಕೃತ್ಯಗಳು 19:4.

▪ ಯೋಹಾನನು ಎಂಥಹ ಪುರುಷನಾಗಿದ್ದನು?

▪ ಯೋಹಾನನು ಏಕೆ ಜನರ ದೀಕ್ಷಾಸ್ನಾನ ಮಾಡುತ್ತಿದ್ದನು?

▪ ರಾಜ್ಯವು ಸಮೀಪಿಸಿದೆ ಎಂದು ಯೋಹಾನನು ಹೇಳಶಕ್ತನಾದದ್ದು ಯಾಕೆ?