ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೊಟ್ಟಿಗಳು ಮತ್ತು ಹುಳಿಹಿಟ್ಟು

ರೊಟ್ಟಿಗಳು ಮತ್ತು ಹುಳಿಹಿಟ್ಟು

ಅಧ್ಯಾಯ 58

ರೊಟ್ಟಿಗಳು ಮತ್ತು ಹುಳಿಹಿಟ್ಟು

ಯೇಸುವಿನ ಸುತ್ತಲೂ ಒಂದು ದೊಡ್ಡ ಸಮೂಹವು ದೆಕಪೊಲಿಯಲ್ಲಿ ನೆರೆದಿತ್ತು. ಅನೇಕರು ಅವನನ್ನು ಆಲಿಸಲು ಮತ್ತು ಅವರು ಅಸ್ವಸ್ಥತೆಗಳ ವಾಸಿಹೊಂದುವಿಕೆಗಾಗಿ ಈ ಅಧಿಕ ಸಂಖ್ಯಾತ ವಿಧರ್ಮಿ-ಜನರಿರುವ ಪ್ರದೇಶಕ್ಕೆ ಬಹುದೂರದಿಂದ ಬಂದಿದ್ದರು. ಅವರು ತಮ್ಮೊಂದಿಗೆ ದೊಡ್ಡ ಪುಟ್ಟಿಗಳನ್ನು ಇಲ್ಲವೇ ಸರಂಜಾಮುಗಳನ್ನು ತಂದಿದ್ದರು, ಸಾಮಾನ್ಯವಾಗಿ ಅವರು ಅನ್ಯ ಜನರ ಪ್ರದೇಶಗಳ ಮೂಲಕ ಹಾದುಹೋಗುವಾಗ ತಮ್ಮ ಆಹಾರವಸ್ತುಗಳನ್ನು ಕೊಂಡೊಯ್ಯುವುದು ವಾಡಿಕೆಯಾಗಿತ್ತು.

ಆದಾಗ್ಯೂ, ಕೊನೆಗೆ ಯೇಸುವು ತನ್ನ ಶಿಷ್ಯರನ್ನು ಕರೆದು, ಅಂದದ್ದು: “ಈ ಜನರನ್ನು ನೋಡಿ ನಾನು ಕನಿಕರ ಪಡುತ್ತೇನೆ; ಇವರು ನನ್ನ ಬಳಿಗೆ ಬಂದು ಈಗ ಮೂರು ದಿನವಾಯಿತು; ಇವರಿಗೆ ಊಟಕ್ಕೆ ಏನೂ ಇಲ್ಲ; ಅವರನ್ನು ಉಪವಾಸವಾಗಿ ಮನೆಗೆ ಕಳುಹಿಸಿ ಬಿಟ್ಟರೆ ದಾರಿಯಲ್ಲಿ ಬಳಲಿಹೋಗುವರು; ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರಲ್ಲಾ.”

“ಈ ಅಡವಿಯಲ್ಲಿ ಎಲ್ಲಿಂದ ರೊಟ್ಟಿಯನ್ನು ತಂದು ಈ ಜನರನ್ನು ತೃಪ್ತಿಪಡಿಸುವದಕ್ಕಾದೀತು?” ಎಂದು ಶಿಷ್ಯರು ಕೇಳುತ್ತಾರೆ.

ಯೇಸುವು ವಿಚಾರಿಸುತ್ತಾನೆ: “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?”

“ಏಳು ಅವೆ” ಎಂದವರು ಉತ್ತರಿಸುತ್ತಾರೆ, “ಮತ್ತು ಕೆಲವು ಮೀನುಗಳಿವೆ.”

ಜನರಿಗೆ ನೆಲದ ಮೇಲೆ ಕುಳಿತುಕೊಳ್ಳಲು ಹೇಳಿ, ಯೇಸು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು, ದೇವರಿಗೆ ಸ್ತೋತ್ರ ಸಲ್ಲಿಸಿದ ನಂತರ, ಅವುಗಳನ್ನು ಮುರಿದು, ತನ್ನ ಶಿಷ್ಯರಿಗೆ ಕೊಡಲು ಆರಂಭಿಸುತ್ತಾನೆ. ಅವರು ಜನರಿಗೆ ಅದನ್ನು ಹಂಚಲಾಗಿ, ಎಲ್ಲರೂ ಊಟ ಮಾಡಿ ತೃಪ್ತರಾದರು. ಹೆಂಗಸರು, ಮಕ್ಕಳು ಅಲ್ಲದೆ, ಸುಮಾರು 4,000 ಗಂಡಸರು ಊಟಮಾಡಿದ ನಂತರ ಮಿಕ್ಕ ತುಂಡುಗಳನ್ನು ಕೂಡಿಸಲಾಗಿ, ಏಳು ಹೆಡಿಗೆ ತುಂಬಿದವು!

ಯೇಸುವು ಜನಸಮೂಹವನ್ನು ಕಳುಹಿಸಿದ ನಂತರ, ತನ್ನ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿ ಗಲಿಲಾಯ ಸಮುದ್ರದ ಪಶ್ಚಿಮ ತೀರಕ್ಕೆ ದಾಟುತ್ತಾನೆ. ಇಲ್ಲಿ ಫರಿಸಾಯರು, ಈ ಸಾರಿ ಸದ್ದುಕಾಯರೆಂಬ ಧಾರ್ಮಿಕ ಗುಂಪಿನ ಸದಸ್ಯರುಗಳೊಂದಿಗೆ ಸೇರಿಕೊಂಡು, ಆಕಾಶದಲ್ಲಿ ಒಂದು ಸೂಚಕಕಾರ್ಯವನ್ನು ತೋರಿಸಲು ಹೇಳಿ ಯೇಸುವನ್ನು ಪರೀಕ್ಷಿಸಲು ಪ್ರಯತ್ನಿಸುತ್ತಾರೆ.

ತನ್ನನ್ನು ಪರೀಕ್ಷಿಸುವ ಅವರ ಪ್ರಯತ್ನಗಳನ್ನು ಮನಗಂಡವನಾಗಿ, ಯೇಸು ಉತ್ತರಿಸುವುದು: “ಸಂಜೇವೇಳೆಯಲ್ಲಿ ನೀವು—ಆಕಾಶವು ಕೆಂಪಾಗಿದೆ, ನಿರ್ಮಲ ದಿನ ಬರುವದು ಅನ್ನುತ್ತೀರಿ; ಬೆಳಿಗ್ಗೆ—ಆಕಾಶವು ಮೋಡಮುಚ್ಚಿಕೊಂಡು ಕೆಂಪಾಗಿದೆ, ಈ ಹೊತ್ತು ಗಾಳಿ ಮಳೆ ಅನ್ನುತ್ತೀರಿ ಅಲ್ಲವೇ. ಆಕಾಶದ ಸ್ಥಿತಿಯನ್ನು ನೋಡಿ ಇದು ಹೀಗೆ ಅದು ಹಾಗೆ ಅನ್ನುವದಕ್ಕೆ ಬಲ್ಲಿರಿ; ಆದರೆ ಈ ಕಾಲದ ಸೂಚನೆಗಳನ್ನು ತಿಳುಕೊಳ್ಳಲಾರಿರಿ.”

ಅದರೊಂದಿಗೆ ಯೇಸುವು ಅವರನ್ನು ಒಂದು ಕೆಟ್ಟ ಮತ್ತು ವ್ಯಭಿಚಾರಿಣಿ ಸಂತತಿ ಎಂದು ಕರೆಯುತ್ತಾ, ಮೊದಲು ಫರಿಸಾಯರಿಗೆ ಅವನು ಹೇಳಿದಂತೆ, ಯೋನನ ಸೂಚಕಕಾರ್ಯದ ಹೊರತು ಬೇರೆ ಯಾವುದೂ ಅವರಿಗೆ ಕೊಡಲ್ಪಡುವದಿಲ್ಲ ಎಂದು ಎಚ್ಚರಿಸುತ್ತಾನೆ. ಅಲ್ಲಿಂದ ಬಿಟ್ಟುಹೋಗಿ, ಅವನು ಮತ್ತು ಶಿಷ್ಯರು ಒಂದು ದೋಣಿಯನ್ನು ಹತ್ತಿ ಗಲಿಲಾಯ ಸಮುದ್ರದ ಈಶಾನ್ಯ ತೀರದಲ್ಲಿರುವ ಬೇತ್ಸಾಯಿದಾಭಿಮುಖವಾಗಿ ಹೋಗುತ್ತಾರೆ. ದಾರಿಯಲ್ಲಿರುವಾಗ ಶಿಷ್ಯರು ರೊಟ್ಟೀಬುತ್ತಿ ಕಟ್ಟಿಕೊಳ್ಳಲು ಮರೆತದ್ದನ್ನು ನೆನಪಿಸುತ್ತಾರೆ, ಅಲ್ಲಿ ಕೇವಲ ಒಂದು ರೊಟ್ಟಿ ಮಾತ್ರ ಇತ್ತು.

ಫರಿಸಾಯರ ಮತ್ತು ಸದ್ದುಕಾಯರಲ್ಲಿನ ಹೆರೋದನ ಬೆಂಬಲಿಗರೊಂದಿಗೆ ಅವನಿಗಾದ ಮುಖಭೇಟಿಯನ್ನು ನೆನಪಿನಲ್ಲಿಟ್ಟುಕೊಂಡು, ಯೇಸು ಎಚ್ಚರಿಸಿದ್ದು: “ಎಚ್ಚರಿಕೆ, ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ನೋಡಿಕೊಳ್ಳಿರಿ.” ಆದರೆ ರೊಟ್ಟಿಯ ವಿಷಯ ಮನಸ್ಸಿನಲ್ಲಿಟ್ಟು ಯೇಸು ಹುಳಿಹಿಟ್ಟಿನ ಕುರಿತು, ಶಿಷ್ಯರು ರೊಟ್ಟೀ ತರಲು ಮರೆತು ಬಿಟ್ಟ ಕಾರಣ ಸೂಚಿಸುತ್ತಾನೆ ಎಂದು ತಮ್ಮೊಳಗೆ ವಾಗ್ವಾದ ಮಾಡಿ ಕೊಳ್ಳಲಾರಂಭಿಸಿದರು. ಅವರ ತಪ್ಪು ಗ್ರಹಿಕೆಯನ್ನು ತಿಳಿದುಕೊಂಡು, ಯೇಸು ಹೇಳುವುದು: “ರೊಟ್ಟಿಯಿಲ್ಲವಲ್ಲಾ ಎಂದು ವಾಗ್ವಾದ ಮಾಡುವುದೇಕೆ?”

ಈಗಾಗಲೇ ಯೇಸು ಈ ಕೊನೆಯ ಅದ್ಭುತವನ್ನು ಕೇವಲ ಎರಡು ಮೂರು ದಿನಗಳ ಹಿಂದೆ ಮಾಡಿ, ಸಾವಿರಾರು ಜನರಿಗೆ ಅದ್ಭುತಕರವಾಗಿ ರೊಟ್ಟಿಗಳನ್ನು ಒದಗಿಸಿದ್ದನು. ನೈಜವಾದ ರೊಟ್ಟಿಗಳು ಇಲ್ಲದಿರುವ ಬಗ್ಗೆ ಅವನು ಚಿಂತಾಗ್ರಸ್ತನಾಗಿರಲಿಲ್ಲವೆಂದು ಅವರಿಗೆ ತಿಳಿದಿರಬೇಕಿತ್ತು. “ನಿಮಗೆ ನೆನಪಿಲ್ಲವೋ? ನಾನು ಆ ಐದು ರೊಟ್ಟಿಗಳನ್ನು ಮುರಿದು ಐದು ಸಾವಿರ ಜನರಿಗೆ ಹಂಚಿಸಿದಾಗ ತುಂಡು ತುಂಬಿದ ಎಷ್ಟು ಪುಟ್ಟಿಗಳನ್ನು ತೆಗೆದು ಕೊಂಡು ಹೋದಿರಿ?”

“ಹನ್ನೆರಡು” ಅವರು ಉತ್ತರಿಸಿದರು.

“ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರಿಗೆ ಹಂಚಿಸಿದಾಗ ತುಂಡು ತುಂಬಿದ ಎಷ್ಟು ಹೆಡಿಗೆಗಳನ್ನು ತೆಗೆದು ಕೊಂಡು ಹೋದಿರಿ?”

“ಏಳು“ ಅವರು ಉತ್ತರಿಸಿದರು.

“ನಿಮಗೆ ಇನ್ನೂ ತಿಳುವಳಿಕೆ ಬರಲಿಲ್ಲವೇ?” ಎಂದು ಯೇಸು ಕೇಳುತ್ತಾನೆ. “ನಾನು ರೊಟ್ಟಿಯನ್ನು ಕುರಿತು ಮಾತಾಡಲಿಲ್ಲವೆಂಬದು ನಿಮಗೆ ತಿಳಿಯದೆ ಇರುವುದು ಹೇಗೆ? ಎಚ್ಚರಿಕೆ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ.”

ಕಟ್ಟಕಡೆಗೆ ಶಿಷ್ಯರಿಗೆ ವಿಷಯವು ತಿಳಿಯಿತು. ಹುಳಿಹಿಟ್ಟು, ಹುದುಗೆಬ್ಬಿಸುವ ಒಂದು ಪದಾರ್ಥವಾಗಿದ್ದು, ರೊಟ್ಟಿಯನ್ನು ಉಬ್ಬುವಂತೆ ಮಾಡುತ್ತದೆ, ಈ ಶಬ್ದವು ಆಗಾಗ್ಯೆ ಭ್ರಷ್ಟತೆಯನ್ನು ಸೂಚಿಸಲು ಬಳಸಲ್ಪಡುತ್ತದೆ. ಆದುದರಿಂದ ಯೇಸುವು ಒಂದು ಸಾಂಕೇತಿಕ ರೂಪವನ್ನು ಬಳಸಿ, “ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯನ್ನು” ಕುರಿತು ಎಚ್ಚರಿಕೆಯಾಗಿರಬೇಕೆಂದು ಅವರಿಗೆ ಜಾಗ್ರತೆಯನ್ನಿತ್ತಿದ್ದನು ಎಂದು ಈಗ ಶಿಷ್ಯರು ತಿಳಿದುಕೊಂಡರು. ಆ ಬೋಧನೆಯು ಭ್ರಷ್ಟಗೊಳಿಸುವ ಪರಿಣಾಮವುಳ್ಳದ್ದಾಗಿತ್ತು. ಮಾರ್ಕ 8:1-21; ಮತ್ತಾಯ 15:32–16:12.

▪ ಜನರು ತಮ್ಮೊಡನೆ ಆಹಾರದ ದೊಡ್ಡ ಪುಟ್ಟಿಗಳನ್ನು ಯಾಕೆ ಇಟ್ಟುಕೊಳ್ಳುತ್ತಿದ್ದರು?

▪ ದೆಕಪೊಲಿಯನ್ನು ಬಿಟ್ಟು ಬಂದ ನಂತರ ಯಾವ ದೋಣಿಪ್ರಯಾಣಗಳನ್ನು ಯೇಸುವು ಮಾಡಿದನು?

▪ ಹುಳಿಹಿಟ್ಟಿನ ಕುರಿತಾದ ಯೇಸುವಿನ ಹೇಳಿಕೆಯ ಕುರಿತು ಶಿಷ್ಯರಿಗೆ ಯಾವ ತಪ್ಪು ಗ್ರಹಿಕೆ ಇತ್ತು?

▪ “ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟು” ಎಂದು ಯೇಸುವಿನ ಹೇಳಿಕೆಯ ಅರ್ಥವೇನು?