ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸನ್ಹೇದ್ರಿನ್‌ನ ಮುಂದೆ, ನಂತರ ಪಿಲಾತನ ಬಳಿಗೆ

ಸನ್ಹೇದ್ರಿನ್‌ನ ಮುಂದೆ, ನಂತರ ಪಿಲಾತನ ಬಳಿಗೆ

ಅಧ್ಯಾಯ 121

ಸನ್ಹೇದ್ರಿನ್‌ನ ಮುಂದೆ, ನಂತರ ಪಿಲಾತನ ಬಳಿಗೆ

ರಾತ್ರಿಯು ಮುಗಿಯುತ್ತಾ ಬರುತ್ತಿತ್ತು. ಮೂರನೆಯ ಬಾರಿಗೆ ಯೇಸುವನ್ನು ಪೇತ್ರನು ನಿರಾಕರಿಸಿದ್ದನು ಮತ್ತು ಸನ್ಹೇದ್ರಿನ್‌ನ ಸದಸ್ಯರು ಅವರ ಅಣಕದ ವಿಚಾರಣೆಯನ್ನು ಮುಗಿಸಿ, ಚದರಿದ್ದರು. ಆದಾಗ್ಯೂ, ಶುಕ್ರವಾರ ಬೆಳಿಗ್ಗೆ ಅರುಣೋದಯವಾದ ಕೂಡಲೇ ಅವರು ಪುನಃ ಒಂದು ಸಾರಿ ಒಟ್ಟುಗೂಡುತ್ತಾರೆ, ಈ ಸಮಯ ಅವರ ಸನ್ಹೇದ್ರಿನ್‌ ಸಭಾಂಗಣದಲ್ಲಿ. ರಾತ್ರಿಯ ವಿಚಾರಣೆಗೆ ಒಂದು ರೀತಿಯ ಕಾನೂನುಬದ್ಧತೆಯ ತೋರಿಕೆಯನ್ನು ಕೊಡುವದೇ ಅವರ ಉದ್ದೇಶವಾಗಿದ್ದಿರಬೇಕು. ಅವರ ಮುಂದೆ ಯೇಸುವನ್ನು ತಂದಾಗ, ಅವರು ರಾತ್ರಿಯಲ್ಲಿ ಮಾಡಿದಂತೆ, ಅವರನ್ನುವದು: “ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು.”

“ನಾನು ನಿಮಗೆ ಹೇಳಿದರೆ ನೀವು ನಂಬುವದಿಲ್ಲ,” ಯೇಸುವು ಉತ್ತರಿಸುವದು. “ನಾನು ನಿಮ್ಮನ್ನು ಏನಾದರೂ ಕೇಳಿದರೆ ನೀವು ಉತ್ತರಕೊಡುವದಲ್ಲ.” ಆದರೂ ಯೇಸುವು ಅವನ ಗುರುತಿನ ವಿಷಯದಲ್ಲಿ ನಿರ್ದೇಶಿಸುತ್ತಾ ಧೈರ್ಯದಿಂದ ಹೇಳಿದ್ದು: “ಆದರೆ ಇಂದಿನಿಂದ ಮನುಷ್ಯ ಕುಮಾರನು ಸರ್ವಶಕ್ತನಾದ ದೇವರ ಬಲಗಡೆಯಲ್ಲಿ ಆಸೀನನಾಗಿರುವನು.”

“ಹಾಗಾದರೆ ನೀನು ದೇವರ ಕುಮಾರನೋ?” ಅವರೆಲ್ಲರೂ ತಿಳಿಯಲು ಬಯಸಿದರು.

“ನನ್ನನ್ನು ಅವನೇ ಎಂದು ನೀವೇ ಹೇಳುತ್ತೀರಿ,” ಯೇಸುವು ಉತ್ತರಿಸುತ್ತಾನೆ.

ಕೊಲೆಮಾಡಬೇಕೆಂದು ಉದ್ದೇಶವಿದ್ದ ಈ ಜನರಿಗೆ ಈ ಉತ್ತರವು ಸಾಕಾಗಿತ್ತು. ಅವರು ಅದನ್ನು ದೇವದೂಷಣೆ ಎಂದು ಪರಿಗಣಿಸುತ್ತಿದ್ದರು. “ನಮಗೆ ಸಾಕ್ಷಿ ಇನ್ನು ಯಾತಕ್ಕೆ ಬೇಕು?” ಅವರು ಕೇಳುತ್ತಾರೆ. “ನಾವೇ ಇವನ ಬಾಯಿಂದ ಕೇಳಿದೆವಲ್ಲಾ.” ಆದುದರಿಂದ ಅವರು ಯೇಸುವನ್ನು ಕಟ್ಟಿಸಿ, ಕೊಂಡೊಯ್ಯುತ್ತಾರೆ ಮತ್ತು ರೋಮನ್‌ ದೇಶಾಧಿಪತಿಯಾದ ಪೊಂತ್ಯ ಪಿಲಾತನಿಗೆ ಒಪ್ಪಿಸುತ್ತಾರೆ.

ಯೇಸುವನ್ನು ಹಿಡುಕೊಟ್ಟ ಯೂದನು, ವಿಚಾರಣೆಯನ್ನು ಅವಲೋಕಿಸುತ್ತಾ ಇದ್ದನು. ಯೇಸುವಿಗೆ ಮರಣ ದಂಡನೆಯ ತೀರ್ಪಾಯಿತೆಂದು ಅವನು ನೋಡಿದಾಗ, ಪರಿತಾಪ ಪಟ್ಟನು. ಆದುದರಿಂದ ಅವನು 30 ಬೇಳ್ಳಿ ನಾಣ್ಯಗಳನ್ನು ಹಿಂತಿರುಗಿಸಲು ಮಹಾ ಯಾಜಕರ ಮತ್ತು ಹಿರಿಯರ ಬಳಿಗೆ ಹೋಗಿ, ಹೀಗನ್ನುತ್ತಾನೆ: “ತಪ್ಪಿಲ್ಲದವನನ್ನು ಮರಣಕ್ಕೆ ಒಪ್ಪಿಸಿಕೊಟ್ಟು ಪಾಪಮಾಡಿದೆನು.”

“ಅದು ನಮಗೇನು? ನೀನೇ ನೋಡಿಕೋ” ಅವರು ನಿರ್ದಯಿಗಳಾಗಿ ಉತ್ತರಿಸುತ್ತಾರೆ. ಆದುದರಿಂದ ಯೂದನು ಬೇಳ್ಳಿ ನಾಣ್ಯಗಳನ್ನು ದೇವಾಲಯದೊಳಗೆ ಬಿಸಾಟುಬಿಟ್ಟು, ಹೊರಟು ಹೋಗಿ ಉರ್ಲು ಹಾಕಿಕೊಳ್ಳಲು ಪ್ರಯತ್ನಿಸುತ್ತಾನೆ ಆದರೆ, ಯೂದನು ಮರದ ಕೊಂಬೆಗೆ ಕಟ್ಟಿದ ಹಗ್ಗವು ಬಹುಶಃ ತುಂಡಾಗಿ ಅವನ ದೇಹವು ಕೆಳಗಿರುವ ಬಂಡೆಕಲ್ಲುಗಳ ಮೇಲೆ ಬೀಳುತ್ತದೆ, ಅಲ್ಲಿ ಹೊಟ್ಟೆ ಒಡೆದು ಹೋಗುತ್ತದೆ.

ಆ ಬೇಳ್ಳಿ ನಾಣ್ಯಗಳನ್ನು ಏನು ಮಾಡುವದು ಎಂದು ಮಹಾ ಯಾಜಕರಿಗೆ ನಿಶ್ಚಯವಾಗಿ ತಿಳಿದಿರಲಿಲ್ಲ. “ಅದು ಜೀವಹತ್ಯಕ್ಕೆ ಕೊಡಲ್ಪಟ್ಟ ಕ್ರಯವಾದ್ದರಿಂದ,” ಅವರು ತೀರ್ಮಾನಿಸುವದು, “ಅದನ್ನು ಕಾಣಿಕೇ ಪೆಟ್ಟಿಗೆಯಲ್ಲಿ ಹಾಕಬಾರದು.” ಆದುದರಿಂದ ಅವರು ತಮ್ಮೊಳಗೆ ಆಲೋಚನೆ ಮಾಡಿ, ಪರದೇಶಿಗಳನ್ನು ಹೂಣಿಡುವದಕ್ಕೋಸ್ಕರ ಅದರಿಂದ ಕುಂಬಾರನ ಹೊಲವನ್ನು ಕೊಂಡುಕೊಂಡರು. ಆ ಹೊಲವು “ಜೀವಹತ್ಯದ ಹೊಲ” ಎಂದು ಕರೆಯಲ್ಪಟ್ಟಿತು.

ಯೇಸುವನ್ನು ದೇಶಾಧಿಪತಿಯ ಅರಮನೆಗೆ ಕೊಂಡೊಯ್ದಾಗ, ಇನ್ನೂ ಮುಂಜಾನೆ ಆಗಿತ್ತು. ಆದರೆ ಅವನೊಂದಿಗೆ ಹೋದ ಯೆಹೂದ್ಯರು ಒಳಗೆ ಹೋಗಲಿಲ್ಲ, ಯಾಕಂದರೆ ಅನ್ಯರೊಂದಿಗೆ ಅಷ್ಟು ಹತ್ತಿರದ ನಿಕಟ ಸಂಪರ್ಕವು ತಮ್ಮನ್ನು ಮೈಲಿಗೆ ಮಾಡುತ್ತದೆ ಎಂದು ನಂಬುತ್ತಿದ್ದರು. ಆದುದರಿಂದ ಅವರೊಂದಿಗೆ ಹೊಂದಿಸಿಕೊಳ್ಳಲು, ಪಿಲಾತನು ಹೊರಗೆ ಬರುತ್ತಾನೆ. “ಈ ಮನುಷ್ಯನ ವಿರುದ್ಧ ಏನು ದೂರು ತರುತ್ತೀರಿ?” ಅವನು ಕೇಳುತ್ತಾನೆ.

“ಇವನು ದುಷ್ಕರ್ಮಿಯಲ್ಲದಿದ್ದರೆ ಇವನನ್ನು ನಿನಗೆ ಒಪ್ಪಿಸಿಕೊಡುತ್ತಿದ್ದಿಲ್ಲ,” ಎಂದವರು ಉತ್ತರಿಸುತ್ತಾರೆ.

ಒಳಗೂಡುವದನ್ನು ಹೋಗಲಾಡಿಸಲು, ಪಿಲಾತನು ಪ್ರತಿಯಾಗಿ ಹೇಳುವದು: “ನೀವೇ ಅವನನ್ನು ತಕ್ಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಅವನಿಗೆ ತೀರ್ಪು ಮಾಡಿರಿ.”

ಕೊಲೆಮಾಡುವ ತಮ್ಮ ಹೇತುವನ್ನು ಪ್ರಕಟಿಸುತ್ತಾ, ಯೆಹೂದ್ಯರು ವಾದಿಸುವದು: “ಮರಣ ದಂಡನೆ ವಿಧಿಸುವ ಅಧಿಕಾರವು ನಮಗಿಲ್ಲ.” ಪಸ್ಕ ಹಬ್ಬದ ಸಮಯದಲ್ಲಿ ಅವರು ಯೇಸುವನ್ನು ಕೊಂದರೆ, ಸಾರ್ವಜನಿಕ ಗಲಭೆ ಖಂಡಿತವಾಗಿಯೂ ಆಗುವ ಒಂದು ಸಂದರ್ಭವಿತ್ತು, ಯಾಕಂದರೆ ಅನೇಕರು ಯೇಸುವನ್ನು ಉನ್ನತ ದೃಷ್ಟಿಯಿಂದ ವೀಕ್ಷಿಸುತ್ತಿದ್ದರು. ಆದರೆ, ರಾಜಕೀಯ ಆಪಾದನೆಯ ಮೇಲೆ ರೋಮನರು ಅವನನ್ನು ಕೊಂದರೆ, ಜನರ ಮುಂದೆ ಅವರ ಜವಾಬ್ದಾರಿಯನ್ನು ಜಾರಿಸಿಕೊಳ್ಳುವ ಸಾಧ್ಯತೆಗಳಿದ್ದವು.

ಆದುದರಿಂದ, ಧಾರ್ಮಿಕ ಮುಖಂಡರು, ದೇವ ದೂಷಣೆಗಾಗಿ ಅವನು ಮರಣ ದಂಡನೆಗೆ ಅರ್ಹನು ಎಂಬ ಅವರ ಈ ಮೊದಲಿನ ವಿಚಾರಣೆಯನ್ನು ತಿಳಿಸದೆ, ಭಿನ್ನವಾದ ಕೃತಕ ಆರೋಪವನ್ನು ಈಗ ಹೊರಿಸುತ್ತಾರೆ. ಅವರು ಮೂರು ಭಾಗದ ಅಪವಾದವನ್ನು ಮಾಡುತ್ತಾರೆ: “ಇವನು [1] ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದು ಹೇಳುತ್ತಾ, [2] ಕೈಸರನಿಗೆ ತೆರಿಗೆ ಕೊಡಬಾರದೆಂದು ಬೋಧಿಸುತ್ತಾ, [3] ನಮ್ಮ ದೇಶದವರ ಮನಸ್ಸು ಕೆಡಿಸುವದನ್ನು ನಾವು ಕಂಡೆವು.”

ಯೇಸುವು ತಾನೇ ಅರಸನೆಂದು ಹೇಳಿಕೊಳ್ಳುವ ಆರೋಪವು ಪಿಲಾತನಿಗೆ ಸಂಬಂಧಿಸಿದ್ದಾಗಿದೆ. ಆದಕಾರಣ ಅವನು ಪುನಃ ಅರಮನೆಯನ್ನು ಪ್ರವೇಶಿಸುತ್ತಾನೆ, ಯೇಸುವನ್ನು ಕರೆದು, ಅವನಿಗೆ ವಿಚಾರಿಸುವದು: “ನೀನು ಯೆಹೂದ್ಯರ ಅರಸನು ಹೌದೋ?” ಇನ್ನೊಂದು ಮಾತಿನಲ್ಲಿ, ಕೈಸರನಿಗೆ ವಿರುದ್ಧವಾಗಿ ನಿನ್ನನ್ನೇ ಒಬ್ಬ ಅರಸನನ್ನಾಗಿ ನೀನು ಘೋಷಿಸಿಕೊಳ್ಳುವದರ ಮೂಲಕ ನಿಯಮವನ್ನು ಮುರಿದಿದ್ದಿಯೋ?

ತನ್ನ ಕುರಿತು ಪಿಲಾತನು ಈಗಾಗಲೇ ಎಷ್ಟು ತಿಳಿದು ಕೊಂಡಿದ್ದಾನೆಂದು ಯೇಸುವು ತಿಳಿಯಲು ಬಯಸಿದನು. ಆದುದರಿಂದ ಅವನು ಕೇಳುವದು: “ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಮತ್ತೊಬ್ಬರು ನನ್ನ ವಿಷಯದಲ್ಲಿ ನಿನಗೆ ಹೇಳಿದ್ದಾರೋ?”

ಅವನ ಕುರಿತು ತನಗೇನೂ ತಿಳಿದಿಲ್ಲ ಮತ್ತು ವಾಸ್ತವಾಂಶಗಳನ್ನು ಕಲಿಯಲು ಬಯಸುತ್ತಾನೆಂಬಂತೆ ವರ್ತಿಸುತ್ತಾನೆ ಪಿಲಾತನು. “ನಾನೇನು ಯೆಹೂದ್ಯನೇ? ನಿನ್ನ ಸ್ವಂತ ಜನವೂ ಮಹಾ ಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ; ನೀನು ಏನು ಮಾಡಿದ್ದೀ?”

ರಾಜ್ಯತ್ವದ ಕುರಿತಾಗಿರುವ ವಾದಾಂಶವನ್ನು ಜಾರಿಸಿಬಿಡಲು ಯೇಸು ಯಾವುದೇ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಲಿಲ್ಲ. ಯೇಸು ಈಗ ಕೊಡುವ ಉತ್ತರವು ನಿಸ್ಸಂದೇಹವಾಗಿ ಪಿಲಾತನನ್ನು ಆಶ್ಚರ್ಯಗೊಳಿಸುತ್ತದೆ. ಲೂಕ 22:66—23:3; ಮತ್ತಾಯ 27:1-11; ಮಾರ್ಕ 15:1; ಯೋಹಾನ 18:28-35; ಅ.ಕೃತ್ಯಗಳು 1:16-20.

▪ ಬೆಳಗಾತ ಪುನಃ ಸನ್ಹೇದ್ರಿನ್‌ ಒಟ್ಟಾಗಿ ಸೇರಿದ್ದು ಯಾಕೆ?

▪ ಯೂದನು ಸತ್ತದ್ದು ಹೇಗೆ, ಮತ್ತು 30 ಬೇಳ್ಳಿ ನಾಣ್ಯಗಳನ್ನು ಏನು ಮಾಡಲಾಯಿತು?

▪ ಅವರಾಗಿಯೇ ಯೇಸುವನ್ನು ಕೊಲ್ಲುವ ಬದಲು, ಅವನನ್ನು ರೋಮನರು ಕೊಲ್ಲುವಂತೆ ಯೆಹೂದ್ಯರು ಯಾಕೆ ಬಯಸಿದರು?

▪ ಯೆಹೂದ್ಯರು ಯೇಸುವಿನ ಮೇಲೆ ಯಾವ ಆರೋಪವನ್ನು ಹೊರಿಸಿದರು?