ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಬ್ಬತ್‌ನಲ್ಲಿ ಧಾನ್ಯವನ್ನು ಕೀಳುವದು

ಸಬ್ಬತ್‌ನಲ್ಲಿ ಧಾನ್ಯವನ್ನು ಕೀಳುವದು

ಅಧ್ಯಾಯ 31

ಸಬ್ಬತ್‌ನಲ್ಲಿ ಧಾನ್ಯವನ್ನು ಕೀಳುವದು

ಶೀಘ್ರದಲ್ಲಿ ಯೇಸುವು ಮತ್ತು ಅವನ ಶಿಷ್ಯರು ಯೆರೂಸಲೇಮನ್ನು ಬಿಟ್ಟು, ಗಲಿಲಾಯಕ್ಕೆ ಹಿಂದಿರುಗಲಿದ್ದರು. ಅದು ವಸಂತಕಾಲವಾಗಿತ್ತು, ಮತ್ತು ಗದ್ದೆಗಳಲ್ಲಿ ಪೈರಿನ ತೆನೆಗಳು ಧಾನ್ಯದಿಂದ ತುಂಬಿದ್ದವು. ಶಿಷ್ಯರು ಹಸಿದಿದ್ದರು. ಆದುದರಿಂದ ಅವರು ತೆನೆಗಳನ್ನು ಕೊಯ್ದು ತಿಂದರು. ಆದರೆ ಅಂದು ಸಬ್ಬತ್‌ ಆದುದರಿಂದ, ಅವರ ಕೃತ್ಯವು ಅವಲೋಕಿಸಲ್ಪಡದೇ ಹೋಗಲಿಲ್ಲ.

ಯೆರೂಸಲೇಮಿನಲ್ಲಿದ ಧಾರ್ಮಿಕ ಮುಖಂಡರು, ಸಬ್ಬತ್‌ನ ನಿಯಮಭಂಗತೆಯ ಆರೋಪಕ್ಕಾಗಿ ಯೇಸುವನ್ನು ಕೊಲ್ಲಲು ಪ್ರಯತ್ನಿಸಿದ್ದರು. ಈಗ ಫರಿಸಾಯರು ಒಂದು ದೂರನ್ನು ತರುತ್ತಾರೆ. “ನೋಡು! ನಿನ್ನ ಶಿಷ್ಯರು ಸಬ್ಬತ್‌ ದಿನದಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಾರೆ,” ಎಂದವರು ಆಪಾದಿಸುತ್ತಾರೆ.

ತಿನ್ನಲು ತೆನೆಗಳನ್ನು ಮುರಿಯುವದು ಮತ್ತು ಅದನ್ನು ಕೈಯಲ್ಲಿ ತಿಕ್ಕುವದು, ಪೈರು ಕೊಯ್ಯುವದು ಮತ್ತು ತೆನೆ ಬಡಿಯುವದು ಆಗಿದೆ ಎಂದು ಫರಿಸಾಯರು ವಾದಿಸುತ್ತಿದ್ದರು. ಆದರೆ ಒಂದು ಸಂತೋಷದ, ಆತ್ಮಿಕವಾಗಿ ಕಟ್ಟುವ ಸಮಯವಾಗಿರಬೇಕಾಗಿದ್ದ ಸಬ್ಬತನ್ನು, ಕೆಲಸವೆಂದರೆ ಏನೆಂಬ ಅವರ ಅರ್ಥ ವಿವರಣೆಯು ಒಂದು ಭಾರದ ಹೊರೆಯಾಗಿ ಮಾಡಿತ್ತು. ಆದ್ದರಿಂದ ಯೇಸು, ಯೆಹೋವ ದೇವರು ತನ್ನ ಸಬ್ಬತ್‌ ನಿಯಮಕ್ಕೆ ಅಂಥ ಅಯುಕ್ತ ಕಟ್ಟುನಿಟ್ಟಿನ ಅನ್ವಯವನ್ನು ಎಂದೂ ಉದ್ದೇಶಿಸಿರಲಿಲ್ಲವೆಂದು ತೋರಿಸಲು ಶಾಸ್ತ್ರೀಯ ಉದಾಹರಣೆಗಳನ್ನು ಎದುರಿಗೆ ತರುತ್ತಾನೆ.

ಹಸಿದಿದ್ದಾಗ, ದಾವೀದನೂ, ಅವನ ಜನರೂ ದೇವ ಮಂದಿರದಲ್ಲಿ ನಿಂತು, ನೈವೇದ್ಯದ ರೊಟ್ಟಿಗಳನ್ನು ತಿಂದರು ಎಂದು ಯೇಸುವಂದನು. ಯೆಹೋವನ ಮುಂದೆ ಇಟ್ಟಿರುವದನ್ನು ತೆಗೆದು, ಹೊಸತನ್ನು ಅಲ್ಲಿಟ್ಟಿರುವುದಾದರೂ, ಸಾಮಾನ್ಯವಾಗಿ ಅವುಗಳನ್ನು ಯಾಜಕರು ತಿನ್ನಲಿಕ್ಕೆ ಮೀಸಲಾಗಿಡಲ್ಪಡುತ್ತಿತ್ತು. ಆದರೂ, ಅಂತಹ ಪರಿಸ್ಥಿತಿಗಳಲ್ಲಿ ದಾವೀದನೂ, ಅವನ ಜನರೂ ಅದನ್ನು ತಿಂದದಕ್ಕಾಗಿ ಖಂಡಿಸಲ್ಪಡಲಿಲ್ಲ.

ಇನ್ನೊಂದು ಉದಾಹರಣೆಯನ್ನು ಒದಗಿಸುತ್ತಾ, ಯೇಸುವು ಹೇಳಿದ್ದು: “ಇದಲ್ಲದೇ ಸಬ್ಬತ್‌ ದಿನದಲ್ಲಿ ಯಾಜಕರು ಸಬ್ಬತ್‌ ದಿನವನ್ನು ಮಿಕ್ಕಾದ ದಿನಗಳಂತೆ ಮಾಡಿದ್ದಾಗ್ಯೂ ಅವರು ತಪ್ಪಿಗೆ ಗುರಿಯಾಗುವದಿಲ್ಲ, ಇದನ್ನು ನೀವು ಧರ್ಮಶಾಸ್ತ್ರದಲ್ಲಿ ಓದಲಿಲ್ಲವೇ?” ಹೌದು, ಪ್ರಾಣಿಗಳ ಯಜ್ಞಗಳನ್ನು ಸಿದ್ಧಪಡಿಸಲು ಯಾಜಕರು ಸಬ್ಬತ್‌ ದಿನದಲ್ಲಿ ಪ್ರಾಣಿಗಳನ್ನು ವಧಿಸುವ ಮತ್ತು ದೇವಾಲಯದ ಇತರ ಕೆಲಸಗಳನ್ನು ನಡಿಸುತ್ತಿದ್ದರು! “ಆದರೆ ಇಲ್ಲಿ ದೇವಾಲಯಕ್ಕಿಂತ ಹೆಚ್ಚಿನವನು ಇದ್ದಾನೆಂದು ನಿಮಗೆ ನಾನು ಹೇಳುತ್ತೇನೆ,” ಎಂದು ಯೇಸುವು ಹೇಳುತ್ತಾನೆ.

ಫರಿಸಾಯರನ್ನು ಗದರಿಸುತ್ತಾ, ಯೇಸುವು ಮುಂದುವರಿಸಿದ್ದು: “ನನಗೆ ಯಜ್ಞವು ಬೇಡ, ಕರುಣೆಯೇ ಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನೀವು ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪು ಮಾಡುತ್ತಿದ್ದಿಲ್ಲ.” ಅವನು ಕೊನೆಗೊಳಿಸುತ್ತಾ ಅಂದದ್ದು: “ಮನುಷ್ಯ ಕುಮಾರನು ಸಬ್ಬತ್‌ ದಿನಕ್ಕೆ ಒಡೆಯನಾಗಿದ್ದಾನೆ.” ಹಾಗೆ ಯೇಸುವು ಹೇಳಿದ್ದರ ಅರ್ಥವೇನು? ಒಂದು ಸಾವಿರ ವರ್ಷಗಳ ತನ್ನ ಶಾಂತಿದಾಯಕ ರಾಜ್ಯದಾಳಿಕೆಯನ್ನು ಯೇಸುವು ಸೂಚಿಸುತ್ತಿದ್ದನು.

ಹಿಂಸಾಚಾರ ಮತ್ತು ಯುದ್ಧವು ದೈನಂದಿನ ಸಂಗತಿಯಾಗಿರುವ ಪಿಶಾಚನಾದ ಸೈತಾನನ ಶ್ರಮದಾಯಕ ದಾಸತ್ವದ ಕೆಳಗೆ ಮಾನವಕುಲವು 6,000 ವರ್ಷಗಳಿಂದ ಬಾಧಿಸಲ್ಪಟ್ಟಿದೆ. ಇನ್ನೊಂದು ಕಡೆ, ಕ್ರಿಸ್ತನ ಮಹಾ ಸಬ್ಬತ್‌ ಆಳಿಕೆಯು ಅಂಥ ಎಲ್ಲಾ ಬಾಧೆಗಳಿಂದ ಮತ್ತು ದಬ್ಬಾಳಿಕೆಯಿಂದ ವಿಶ್ರಾಂತಿ ದೊರಕಿಸುವ ಸಮಯವಾಗಲಿದೆ. ಮತ್ತಾಯ 12:1-8; ಯಾಜಕಕಾಂಡ 24:5-9; 1 ಸಮುವೇಲ 21:1-6; ಅರಣ್ಯಕಾಂಡ 28:9; ಹೋಶೇಯ 6:6.

▪ ಯೇಸುವಿನ ಶಿಷ್ಯರ ವಿರುದ್ಧ ಯಾವ ಆಪಾದನೆಯನ್ನು ಮಾಡಲಾಯಿತು, ಮತ್ತು ಯೇಸುವು ಅದನ್ನು ಹೇಗೆ ಉತ್ತರಿಸಿದನು?

▪ ಫರಿಸಾಯರ ಯಾವ ತಪ್ಪನ್ನು ಯೇಸುವು ಗುರುತಿಸಿದನು?

▪ ಯಾವ ರೀತಿಯಲ್ಲಿ ಯೇಸುವು “ಸಬ್ಬತ್‌ನ ಒಡೆಯ” ನಾಗಿದ್ದಾನೆ?