ಜೀವ ಮತ್ತು ರಕ್ತಕ್ಕಾಗಿ ಗೌರವವನ್ನು ತೋರಿಸುವುದು
ಪಾಠ 12
ಜೀವ ಮತ್ತು ರಕ್ತಕ್ಕಾಗಿ ಗೌರವವನ್ನು ತೋರಿಸುವುದು
ನಾವು ಜೀವವನ್ನು, (1) ಗರ್ಭಪಾತವನ್ನು ಹೇಗೆ ವೀಕ್ಷಿಸಬೇಕು? (1)
ತಾವು ಸುರಕ್ಷಾ ಪ್ರಜ್ಞೆಯುಳ್ಳವರೆಂದು ಕ್ರೈಸ್ತರು ಹೇಗೆ ತೋರಿಸುತ್ತಾರೆ? (2)
ಪ್ರಾಣಿಗಳನ್ನು ಕೊಲ್ಲುವುದು ತಪ್ಪೊ? (3)
ಜೀವಕ್ಕಾಗಿ ಗೌರವವನ್ನು ತೋರಿಸದಂತಹ ಕೆಲವು ಆಚರಣೆಗಳಾವುವು? (4)
ರಕ್ತದ ಕುರಿತಾದ ದೇವರ ನಿಯಮವು ಏನು? (5)
ಇದು ರಕ್ತ ಪೂರಣಗಳನ್ನು ಒಳಗೊಳ್ಳುತ್ತದೊ? (6)
1. ಯೆಹೋವನು ಜೀವದ ಮೂಲನಾಗಿದ್ದಾನೆ. ಜೀವಿಸುವ ಎಲ್ಲ ವಿಷಯಗಳು ತಮ್ಮ ಜೀವಕ್ಕಾಗಿ ದೇವರಿಗೆ ಋಣಿಗಳಾಗಿವೆ. (ಕೀರ್ತನೆ 36:9) ದೇವರಿಗೆ ಜೀವವು ಪವಿತ್ರವಾಗಿದೆ. ತನ್ನ ತಾಯಿಯೊಳಗಿರುವ ಅಜಾತ ಮಗುವಿನ ಜೀವವೂ ಯೆಹೋವನಿಗೆ ಅಮೂಲ್ಯವಾಗಿದೆ. ವಿಕಾಸಹೊಂದುತ್ತಿರುವ ಅಂತಹ ಒಂದು ಶಿಶುವನ್ನು ಉದ್ದೇಶಪೂರ್ವಕವಾಗಿ ಕೊಲ್ಲುವುದು, ದೇವರ ದೃಷ್ಟಿಯಲ್ಲಿ ತಪ್ಪಾಗಿದೆ.—ವಿಮೋಚನಕಾಂಡ 21:22, 23; ಕೀರ್ತನೆ 127:3.
2. ಸತ್ಯ ಕ್ರೈಸ್ತರು ಸುರಕ್ಷಾ ಪ್ರಜ್ಞೆಯುಳ್ಳವರು. ತಮ್ಮ ಕಾರುಗಳು ಹಾಗೂ ತಮ್ಮ ಮನೆಗಳು ಸುರಕ್ಷಿತವಾಗಿವೆ ಎಂಬುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ. (ಧರ್ಮೋಪದೇಶಕಾಂಡ 22:8) ಕೇವಲ ಸುಖಾನುಭವ ಅಥವಾ ಉದ್ರೇಕಕ್ಕಾಗಿ ದೇವರ ಸೇವಕರು ತಮ್ಮ ಜೀವಗಳನ್ನು ಅನಾವಶ್ಯಕ ಗಂಡಾಂತರಗಳಿಗೆ ಈಡುಮಾಡುವುದಿಲ್ಲ. ಆದುದರಿಂದ ಅವರು ಇತರ ಜನರನ್ನು ಉದ್ದೇಶಪೂರ್ವಕವಾಗಿ ಗಾಯಗೊಳಿಸುವ ಹಿಂಸಾತ್ಮಕ ಕ್ರೀಡೆಗಳಲ್ಲಿ ಭಾಗವಹಿಸುವುದಿಲ್ಲ. ಹಿಂಸಾಕೃತ್ಯವನ್ನು ಉತ್ತೇಜಿಸುವ ಮನೋರಂಜನೆಯನ್ನು ಅವರು ತೊರೆಯುತ್ತಾರೆ.—ಕೀರ್ತನೆ 11:5; ಯೋಹಾನ 13:35.
ಆದಿಕಾಂಡ 3:21; 9:3; ವಿಮೋಚನಕಾಂಡ 21:28) ಆದರೆ ಪ್ರಾಣಿಗಳನ್ನು ದುರುಪಚರಿಸುವುದು ಅಥವಾ ಕೇವಲ ಕ್ರೀಡೆ ಇಲ್ಲವೆ ಸುಖಾನುಭವಕ್ಕಾಗಿ ಅವುಗಳನ್ನು ಕೊಲ್ಲುವುದು ತಪ್ಪಾಗಿದೆ.—ಜ್ಞಾನೋಕ್ತಿ 12:10.
3. ಪ್ರಾಣಿ ಜೀವವೂ ಸೃಷ್ಟಿಕರ್ತನಿಗೆ ಪವಿತ್ರವಾಗಿದೆ. ಆಹಾರ ಮತ್ತು ಉಡುಗೆ ತೊಡುಗೆಯನ್ನು ಒದಗಿಸಲು ಅಥವಾ ತನ್ನನ್ನು ಅಸ್ವಸ್ಥತೆ ಹಾಗೂ ಅಪಾಯದಿಂದ ಸಂರಕ್ಷಿಸಲು ಕ್ರೈಸ್ತನೊಬ್ಬನು ಪ್ರಾಣಿಗಳನ್ನು ಕೊಲ್ಲಬಹುದು. (4. ಧೂಮಪಾನ ಮಾಡುವುದು, ಎಲೆ ಅಡಕೆಯನ್ನು ಅಗಿಯುವುದು, ಮತ್ತು ಸುಖಾನುಭವಕ್ಕಾಗಿ ಅಮಲೌಷಧಗಳನ್ನು ಸೇವಿಸುವುದು, ಕ್ರೈಸ್ತರಿಗಾಗಿರುವ ಸಂಗತಿಗಳಲ್ಲ. ಈ ರೂಢಿಗಳು ತಪ್ಪಾಗಿವೆ ಏಕೆಂದರೆ (1) ಅವು ನಮ್ಮನ್ನು ಅವುಗಳ ದಾಸರನ್ನಾಗಿ ಮಾಡುತ್ತವೆ, (2) ನಮ್ಮ ದೇಹಗಳನ್ನು ಅವು ಹಾನಿಪಡಿಸುತ್ತವೆ, ಮತ್ತು (3) ಅವು ಅಶುದ್ಧವಾಗಿವೆ. (ರೋಮಾಪುರ 6:19; 12:1; 2 ಕೊರಿಂಥ 7:1) ಈ ಹವ್ಯಾಸಗಳನ್ನು ಬಿಟ್ಟುಬಿಡುವುದು ಬಹಳ ಕಷ್ಟಕರವಾಗಿರಬಲ್ಲದು. ಆದರೆ ಯೆಹೋವನನ್ನು ಮೆಚ್ಚಿಸುವ ಸಲುವಾಗಿ ನಾವು ಹಾಗೆ ಮಾಡಬೇಕು.
5. ರಕ್ತವೂ ದೇವರ ದೃಷ್ಟಿಯಲ್ಲಿ ಪವಿತ್ರವಾಗಿದೆ. ಪ್ರಾಣ, ಅಥವಾ ಜೀವವು ರಕ್ತದಲ್ಲಿದೆ ಎಂದು ದೇವರು ಹೇಳುತ್ತಾನೆ. ಆದುದರಿಂದ ರಕ್ತವನ್ನು ತಿನ್ನುವುದು ತಪ್ಪಾಗಿದೆ. ಯೋಗ್ಯವಾಗಿ ರಕ್ತ ಸ್ರವಿಸಲ್ಪಟ್ಟಿರದ ಒಂದು ಪ್ರಾಣಿಯ ಮಾಂಸವನ್ನು ತಿನ್ನುವುದೂ ತಪ್ಪಾಗಿದೆ. ಒಂದು ಪ್ರಾಣಿಯು ಕತ್ತು ಹಿಸುಕಿ ಕೊಲ್ಲಲ್ಪಟ್ಟಲ್ಲಿ ಅಥವಾ ಬಲೆಯಲ್ಲಿ ಸತ್ತಲ್ಲಿ, ಅದನ್ನು ತಿನ್ನಬಾರದು. ಅದು ಈಟಿಯಿಂದ ತಿವಿಯಲ್ಪಟ್ಟಿದ್ದಲ್ಲಿ ಅಥವಾ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದಲ್ಲಿ, ಅದನ್ನು ತಿನ್ನಬೇಕಾದಲ್ಲಿ ಬೇಗನೆ ಅದರಿಂದ ರಕ್ತವು ಸ್ರವಿಸಲ್ಪಡಬೇಕು.—ಆದಿಕಾಂಡ 9:3, 4; ಯಾಜಕಕಾಂಡ 17:13, 14; ಅ. ಕೃತ್ಯಗಳು 15:28, 29.
6. ರಕ್ತ ಪೂರಣವೊಂದನ್ನು ಸ್ವೀಕರಿಸುವುದು ತಪ್ಪೊ? ನಾವು ರಕ್ತದಿಂದ ದೂರವಿರಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಇದರ ಅರ್ಥವೇನೆಂದರೆ, ನಾವು ನಮ್ಮ ದೇಹಗಳೊಳಗೆ ಯಾವುದೇ ವಿಧದಲ್ಲಿ ಬೇರೆ ಜನರ ರಕ್ತವನ್ನು ಅಥವಾ ಶೇಖರಿಸಿಡಲ್ಪಟ್ಟಿರುವ ನಮ್ಮ ಸ್ವಂತ ರಕ್ತವನ್ನು ಸಹ ತೆಗೆದುಕೊಳ್ಳಬಾರದು. (ಅ. ಕೃತ್ಯಗಳು 21:25) ಆದುದರಿಂದ ಸತ್ಯ ಕ್ರೈಸ್ತರು ರಕ್ತ ಪೂರಣವೊಂದನ್ನು ಸ್ವೀಕರಿಸರು. ಅವರು ರಕ್ತರಹಿತ ಉತ್ಪಾದನೆಗಳ ಪೂರಣಗಳಂತಹ ಇತರ ವಿಧಗಳ ವೈದ್ಯಕೀಯ ಚಿಕಿತ್ಸೆಯನ್ನು ಸ್ವೀಕರಿಸುವರು. ಅವರು ಜೀವಿಸಲು ಬಯಸುತ್ತಾರೆ, ಆದರೆ ದೇವರ ನಿಯಮಗಳನ್ನು ಮುರಿಯುವ ಮೂಲಕ ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಅವರು ಪ್ರಯತ್ನಿಸರು.—ಮತ್ತಾಯ 16:25.
[ಪುಟ 25ರಲ್ಲಿರುವ ಚಿತ್ರ]
ದೇವರನ್ನು ಮೆಚ್ಚಿಸಲು, ನಾವು ರಕ್ತ ಪೂರಣಗಳನ್ನು, ಅಶುದ್ಧ ಹವ್ಯಾಸಗಳನ್ನು, ಮತ್ತು ಅನಾವಶ್ಯಕವಾದ ಗಂಡಾಂತರಗಳನ್ನು ತೊರೆಯಬೇಕು