ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿಗೆ ಸೇವೆ ಸಲ್ಲಿಸುವ ನಿಮ್ಮ ನಿರ್ಧಾರ

ದೇವರಿಗೆ ಸೇವೆ ಸಲ್ಲಿಸುವ ನಿಮ್ಮ ನಿರ್ಧಾರ

ಪಾಠ 16

ದೇವರಿಗೆ ಸೇವೆ ಸಲ್ಲಿಸುವ ನಿಮ್ಮ ನಿರ್ಧಾರ

ದೇವರ ಸ್ನೇಹಿತರಾಗಲು ನೀವು ಏನು ಮಾಡಬೇಕು? (1, 2)

ದೇವರಿಗೆ ನಿಮ್ಮ ಸಮರ್ಪಣೆಯನ್ನು ನೀವು ಹೇಗೆ ಮಾಡುತ್ತೀರಿ? (1)

ನೀವು ಯಾವಾಗ ದೀಕ್ಷಾಸ್ನಾನ ಪಡೆಯಬೇಕು? (2)

ದೇವರಿಗೆ ನಂಬಿಗಸ್ತರಾಗಿ ಉಳಿಯಲು, ನೀವು ಬಲವನ್ನು ಹೇಗೆ ಪಡೆಯಬಲ್ಲಿರಿ? (3)

1. ದೇವರ ಸ್ನೇಹಿತರಾಗಲು, ನೀವು ಬೈಬಲ್‌ ಸತ್ಯದ ಒಂದು ಒಳ್ಳೆಯ ಜ್ಞಾನವನ್ನು ಪಡೆದುಕೊಳ್ಳಬೇಕು (1 ತಿಮೊಥೆಯ 2:3, 4), ನೀವು ಕಲಿತಿರುವ ವಿಷಯಗಳಲ್ಲಿ ನಂಬಿಕೆಯನ್ನಿಡಬೇಕು (ಇಬ್ರಿಯ 11:6), ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡಬೇಕು (ಅ. ಕೃತ್ಯಗಳು 17:30, 31), ಮತ್ತು ನಿಮ್ಮ ಜೀವನ ಕ್ರಮದಲ್ಲಿ ಬದಲಾವಣೆ ಮಾಡಬೇಕು. (ಅ. ಕೃತ್ಯಗಳು 3:19) ಆಮೇಲೆ ದೇವರಿಗಾಗಿರುವ ನಿಮ್ಮ ಪ್ರೀತಿಯು ನಿಮ್ಮನ್ನು ಆತನಿಗೆ ಸಮರ್ಪಿಸಿಕೊಳ್ಳುವಂತೆ ಪ್ರೇರಿಸಬೇಕು. ಇದರ ಅರ್ಥವೇನೆಂದರೆ, ಒಂದು ವೈಯಕ್ತಿಕ, ಖಾಸಗಿ ಪ್ರಾರ್ಥನೆಯಲ್ಲಿ, ಆತನ ಚಿತ್ತವನ್ನು ಮಾಡಲು ನಿಮ್ಮನ್ನು ಆತನಿಗೆ ಕೊಟ್ಟುಕೊಳ್ಳುತ್ತಿದ್ದೀರೆಂದು ನೀವು ಹೇಳುತ್ತೀರಿ.—ಮತ್ತಾಯ 16:24; 22:37.

2. ದೇವರಿಗೆ ನಿಮ್ಮ ಸಮರ್ಪಣೆಯನ್ನು ನೀವು ಮಾಡಿದ ಅನಂತರ, ನೀವು ದೀಕ್ಷಾಸ್ನಾನ ಪಡೆಯತಕ್ಕದ್ದು. (ಮತ್ತಾಯ 28:19, 20) ನೀವು ನಿಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡಿದ್ದೀರೆಂದು ದೀಕ್ಷಾಸ್ನಾನವು ಎಲ್ಲರಿಗೆ ತಿಳಿಯಪಡಿಸುತ್ತದೆ. ಆದುದರಿಂದ ದೀಕ್ಷಾಸ್ನಾನವು, ದೇವರಿಗೆ ಸೇವೆ ಸಲ್ಲಿಸುವ ಒಂದು ನಿರ್ಧಾರವನ್ನು ಮಾಡುವಷ್ಟು ಪ್ರಾಯ ಆದವರಿಗೆ ಮಾತ್ರ ಇರುತ್ತದೆ. ವ್ಯಕ್ತಿಯೊಬ್ಬನು ದೀಕ್ಷಾಸ್ನಾನ ಪಡೆದಾಗ, ಕ್ಷಣಿಕವಾಗಿ ಅವನ ಇಡೀ ದೇಹವು ನೀರಿನಲ್ಲಿ ಮುಳುಗಿಸಲ್ಪಡಬೇಕು. *ಮಾರ್ಕ 1:9, 10; ಅ. ಕೃತ್ಯಗಳು 8:36.

3. ನೀವು ಒಂದು ಸಮರ್ಪಣೆಯನ್ನು ಮಾಡಿಯಾದ ಅನಂತರ, ನಿಮ್ಮ ವಚನಕ್ಕನುಸಾರ ಜೀವಿಸುವಂತೆ ಯೆಹೋವನು ನಿಮ್ಮಿಂದ ನಿರೀಕ್ಷಿಸುವನು. (ಕೀರ್ತನೆ 50:14; ಪ್ರಸಂಗಿ 5:4, 5) ಯೆಹೋವನಿಗೆ ಸೇವೆ ಸಲ್ಲಿಸುವುದರಿಂದ ನಿಮ್ಮನ್ನು ತಡೆಯಲು ಪಿಶಾಚನು ಪ್ರಯತ್ನಿಸುವನು. (1 ಪೇತ್ರ 5:8) ಆದರೆ ಪ್ರಾರ್ಥನೆಯಲ್ಲಿ ದೇವರ ಸಮೀಪಕ್ಕೆ ಬನ್ನಿರಿ. (ಫಿಲಿಪ್ಪಿ 4:6, 7) ಪ್ರತಿ ದಿನ ಆತನ ವಾಕ್ಯವನ್ನು ಅಭ್ಯಸಿಸಿರಿ. (ಕೀರ್ತನೆ 1:1-3) ಸಭೆಗೆ ನಿಕಟವಾಗಿ ಅಂಟಿಕೊಳ್ಳಿರಿ. (ಇಬ್ರಿಯ 13:17) ಇದೆಲ್ಲವನ್ನು ಮಾಡುವ ಮೂಲಕ, ದೇವರಿಗೆ ನಂಬಿಗಸ್ತರಾಗಿ ಉಳಿಯುವ ಬಲವನ್ನು ನೀವು ಪಡೆಯುವಿರಿ. ಹೀಗೆ, ಎಲ್ಲ ನಿತ್ಯತೆಗೆ ನೀವು ದೇವರು ನಿಮ್ಮಿಂದ ಅಪೇಕ್ಷಿಸುವ ವಿಷಯಗಳನ್ನು ಮಾಡಬಲ್ಲಿರಿ!

[ಪಾದಟಿಪ್ಪಣಿ]

^ ಪ್ಯಾರ. 2 ನಿತ್ಯಜೀವಕ್ಕೆ ನಡೆಸುವ ಜ್ಞಾನ, ಅಥವಾ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ತದ್ರೀತಿಯ ಪುಸ್ತಕವು ದೀಕ್ಷಾಸ್ನಾನಕ್ಕಾಗಿ ತಯಾರಿ ಮಾಡುವುದರಲ್ಲಿ ಶಿಫಾರಸ್ಸು ಮಾಡಲ್ಪಟ್ಟಿದೆ.