ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ದ್ವೇಷಿಸುವ ಆಚರಣೆಗಳು

ದೇವರು ದ್ವೇಷಿಸುವ ಆಚರಣೆಗಳು

ಪಾಠ 10

ದೇವರು ದ್ವೇಷಿಸುವ ಆಚರಣೆಗಳು

ಕೆಟ್ಟದಾಗಿವೆ ಎಂದು ದೇವರು ಹೇಳುವ ವಿಷಯಗಳ ಕುರಿತು ನಿಮಗೆ ಹೇಗೆ ಅನಿಸಬೇಕು? (1)

ಯಾವ ವಿಧಗಳ ಲೈಂಗಿಕ ನಡತೆಯು ತಪ್ಪಾಗಿವೆ? (2)

ಕ್ರೈಸ್ತನೊಬ್ಬನು ಸುಳ್ಳಾಡುವಿಕೆ (3) ಜೂಜಾಟ (3) ಕಳ್ಳತನ (3) ಹಿಂಸಾಕೃತ್ಯ (4) ಪ್ರೇತವ್ಯವಹಾರವಾದ (5) ಕುಡಿಕತನ—ಇವುಗಳನ್ನು ಹೇಗೆ ವೀಕ್ಷಿಸಬೇಕು? (6)

ಕೆಟ್ಟ ಆಚರಣೆಗಳಿಂದ ವ್ಯಕ್ತಿಯೊಬ್ಬನು ಹೇಗೆ ಮುಕ್ತನಾಗಬಲ್ಲನು? (7)

1. ದೇವರ ಸೇವಕರು ಒಳ್ಳೆಯದನ್ನು ಪ್ರೀತಿಸುತ್ತಾರೆ. ಆದರೆ ಕೆಟ್ಟದಾಗಿರುವುದನ್ನು ಅವರು ದ್ವೇಷಿಸಲೂ ಕಲಿಯಬೇಕು. (ಕೀರ್ತನೆ 97:10) ಅದರ ಅರ್ಥ, ದೇವರು ದ್ವೇಷಿಸುವ ಕೆಲವೊಂದು ಆಚರಣೆಗಳನ್ನು ತೊರೆಯುವುದಾಗಿದೆ. ಆ ಆಚರಣೆಗಳಲ್ಲಿ ಕೆಲವು ಯಾವುವು?

2. ಹಾದರ: ವಿವಾಹದ ಮೊದಲು ಕಾಮ, ವ್ಯಭಿಚಾರ, ಪಶುಗಮನ, ಅಗಮ್ಯಗಮನ, ಮತ್ತು ಸಲಿಂಗಿ ಕಾಮ—ಇವೆಲ್ಲವು ದೇವರ ವಿರುದ್ಧ ಗಂಭೀರವಾದ ಪಾಪಗಳಾಗಿವೆ. (ಯಾಜಕಕಾಂಡ 18:6; ರೋಮಾಪುರ 1:26, 27; 1 ಕೊರಿಂಥ 6:9, 10) ಒಬ್ಬ ದಂಪತಿಗಳು ವಿವಾಹವಾಗದೆ ಒಟ್ಟಿಗೆ ಜೀವಿಸುತ್ತಿರುವಲ್ಲಿ, ಅವರು ಪ್ರತ್ಯೇಕವಾಗಿ ವಾಸಮಾಡಬೇಕು ಅಥವಾ ಕಾನೂನುಬದ್ಧವಾಗಿ ವಿವಾಹವಾಗಬೇಕು.—ಇಬ್ರಿಯ 13:4.

3. ಸುಳ್ಳಾಡುವಿಕೆ, ಜೂಜಾಟ, ಕಳ್ಳತನ: ಯೆಹೋವ ದೇವರು ಸುಳ್ಳಾಡಸಾಧ್ಯವಿಲ್ಲ. (ತೀತ 1:2) ಆತನ ಸಮ್ಮತಿಯನ್ನು ಬಯಸುವ ಜನರು ಸುಳ್ಳಾಡುವುದನ್ನು ತೊರೆಯಬೇಕು. (ಜ್ಞಾನೋಕ್ತಿ 6:16-19; ಕೊಲೊಸ್ಸೆ 3:9, 10) ಪ್ರತಿಯೊಂದು ರೀತಿಯ ಜೂಜಾಟವು ಲೋಭದಿಂದ ಕಳಂಕಿತವಾಗಿದೆ. ಆದುದರಿಂದ ಕ್ರೈಸ್ತರು, ಲಾಟರಿಗಳು, ಕುದುರೆಯ ಜೂಜಿನ ಜಾಡು, ಮತ್ತು ಇಸ್ಪೀಟು ಜೂಜುಗಳಂತಹ ಯಾವುದೇ ರೀತಿಯ ಜೂಜಾಟದಲ್ಲಿ ಭಾಗ ತೆಗೆದುಕೊಳ್ಳುವುದಿಲ್ಲ. (ಎಫೆಸ 5:3-5) ಮತ್ತು ಕ್ರೈಸ್ತರು ಕದಿಯುವುದಿಲ್ಲ. ಅವರು ಬುದ್ಧಿಪೂರ್ವಕವಾಗಿ ಕಳವು ಮಾಡಲ್ಪಟ್ಟ ಸ್ವತ್ತನ್ನು ಖರೀದಿಸುವುದಿಲ್ಲ ಅಥವಾ ಅನುಮತಿಯಿಲ್ಲದೆ ವಸ್ತುಗಳನ್ನು ತೆಗೆದುಕೊಳ್ಳುವುದಿಲ್ಲ.—ವಿಮೋಚನಕಾಂಡ 20:15; ಎಫೆಸ 4:28.

4. ಕೋಪದ ಕೆರಳು, ಹಿಂಸಾಕೃತ್ಯ: ಅನಿಯಂತ್ರಿತ ಕೋಪವು ಹಿಂಸಾಕೃತ್ಯಗಳಿಗೆ ನಡೆಸಬಲ್ಲದು. (ಆದಿಕಾಂಡ 4:5-8) ಒಬ್ಬ ಹಿಂಸಾತ್ಮಕ ವ್ಯಕ್ತಿಯು ದೇವರ ಸ್ನೇಹಿತನಾಗಿರಸಾಧ್ಯವಿಲ್ಲ. (ಕೀರ್ತನೆ 11:5; ಜ್ಞಾನೋಕ್ತಿ 22:24, 25) ಇತರರು ನಮಗೆ ಮಾಡಬಹುದಾದ ಕೆಟ್ಟ ವಿಷಯಗಳಿಗಾಗಿ ಸೇಡು ತೀರಿಸಿಕೊಳ್ಳುವುದು ಅಥವಾ ಕೇಡನ್ನು ಹಿಂದಿರುಗಿಸುವುದು ತಪ್ಪಾಗಿದೆ.—ಜ್ಞಾನೋಕ್ತಿ 24:29; ರೋಮಾಪುರ 12:17-21.

5. ವಶೀಕರಣ ಮಂತ್ರಗಳು ಮತ್ತು ಪ್ರೇತವ್ಯವಹಾರವಾದ: ಕೆಲವು ಜನರು ಅಸ್ವಸ್ಥತೆಗಳನ್ನು ಗುಣಪಡಿಸಲು ಪ್ರಯತ್ನಿಸಲಿಕ್ಕಾಗಿ ಆತ್ಮಗಳ ಶಕ್ತಿಗಾಗಿ ಶ್ರದ್ಧಾಪೂರ್ವಕವಾಗಿ ವಿನಂತಿಸಿಕೊಳ್ಳುತ್ತಾರೆ. ಇತರರು ತಮ್ಮ ವೈರಿಗಳನ್ನು ಅಸ್ವಸ್ಥರನ್ನಾಗಿ ಮಾಡಲು ಅಥವಾ ಅವರನ್ನು ಕೊಲ್ಲಲು ಸಹ ಮಂತ್ರ ಮಾಡುತ್ತಾರೆ. ಈ ಎಲ್ಲ ಆಚರಣೆಗಳ ಮರೆಯಲ್ಲಿರುವ ಶಕ್ತಿಯು ಸೈತಾನನಾಗಿದ್ದಾನೆ. ಆದುದರಿಂದ ಕ್ರೈಸ್ತರು ಇವುಗಳಲ್ಲೊಂದರಲ್ಲಿಯೂ ಭಾಗವಹಿಸಬಾರದು. (ಧರ್ಮೋಪದೇಶಕಾಂಡ 18:9-13) ಇತರರಿಂದ ನಮ್ಮ ಮೇಲೆ ಹಾಕಲ್ಪಡಬಹುದಾದ ಮಂತ್ರಗಳಿಂದ ಅತ್ಯುತ್ತಮವಾದ ಸಂರಕ್ಷಣೆಯು, ಯೆಹೋವನಿಗೆ ನಿಕಟವಾಗಿರುವುದೇ.—ಜ್ಞಾನೋಕ್ತಿ 18:10.

6. ಕುಡಿಕತನ: ಒಂದಿಷ್ಟು ದ್ರಾಕ್ಷಾಮದ್ಯ, ಬಿಯರ್‌, ಅಥವಾ ಇತರ ಮದ್ಯವಿರುವ ಪಾನೀಯವನ್ನು ಕುಡಿಯುವುದು ತಪ್ಪಲ್ಲ. (ಕೀರ್ತನೆ 104:15; 1 ತಿಮೊಥೆಯ 5:23) ಆದರೆ ಅತಿರೇಕದ ಕುಡಿಯುವಿಕೆ ಹಾಗೂ ಕುಡಿಕತನವು ದೇವರ ದೃಷ್ಟಿಯಲ್ಲಿ ತಪ್ಪಾಗಿದೆ. (1 ಕೊರಿಂಥ 5:11-13; 1 ತಿಮೊಥೆಯ 3:8) ಮಿತಿಮೀರಿ ಕುಡಿಯುವುದು ನಿಮ್ಮ ಆರೋಗ್ಯವನ್ನು ಕೆಡಿಸಬಲ್ಲದು ಮತ್ತು ನಿಮ್ಮ ಕುಟುಂಬವನ್ನು ಛಿದ್ರಗೊಳಿಸಬಲ್ಲದು. ಇತರ ಪ್ರಲೋಭನೆಗಳಿಗೆ ನೀವು ಬಹಳ ಬೇಗನೆ ವಶವಾಗುವಂತೆಯೂ ಅದು ಮಾಡಬಲ್ಲದು.—ಜ್ಞಾನೋಕ್ತಿ 23:20, 21, 29-35.

7. ಕೆಟ್ಟದಾಗಿವೆ ಎಂದು ದೇವರು ಹೇಳುವ ವಿಷಯಗಳನ್ನು ಆಚರಿಸುವ ವ್ಯಕ್ತಿಗಳು “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (ಗಲಾತ್ಯ 5:19-21) ನೀವು ನಿಜವಾಗಿಯೂ ದೇವರನ್ನು ಪ್ರೀತಿಸುವುದಾದರೆ ಮತ್ತು ಆತನನ್ನು ಮೆಚ್ಚಿಸಲು ಬಯಸಿದರೆ, ಈ ಆಚರಣೆಗಳಿಂದ ನೀವು ಮುಕ್ತರಾಗಬಲ್ಲಿರಿ. (1 ಯೋಹಾನ 5:3) ಕೆಟ್ಟದಾಗಿದೆ ಎಂದು ದೇವರು ಹೇಳುವಂತಹದ್ದನ್ನು ದ್ವೇಷಿಸಲು ಕಲಿಯಿರಿ. (ರೋಮಾಪುರ 12:9) ದೈವಿಕ ಹವ್ಯಾಸಗಳಿರುವ ಜನರೊಂದಿಗೆ ಸಹವಸಿಸಿರಿ. (ಜ್ಞಾನೋಕ್ತಿ 13:20) ಪಕ್ವತೆಯುಳ್ಳ ಕ್ರೈಸ್ತ ಸಂಗಾತಿಗಳು ಸಹಾಯದ ಮೂಲವಾಗಿ ಪರಿಣಮಿಸಬಹುದು. (ಯಾಕೋಬ 5:14) ಎಲ್ಲಕ್ಕಿಂತ ಹೆಚ್ಚಾಗಿ, ಪ್ರಾರ್ಥನೆಯ ಮುಖಾಂತರ ದೇವರ ಸಹಾಯದ ಮೇಲೆ ಆತುಕೊಳ್ಳಿರಿ.—ಫಿಲಿಪ್ಪಿ 4:6, 7, 13.

[ಪುಟ 20, 21ರಲ್ಲಿರುವ ಚಿತ್ರ]

ದೇವರು ಕುಡಿಕತನ, ಕಳ್ಳತನ, ಜೂಜಾಟ, ಮತ್ತು ಹಿಂಸಾಕೃತ್ಯಗಳನ್ನು ದ್ವೇಷಿಸುತ್ತಾನೆ