ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಚಿತ್ತವನ್ನು ಮಾಡುವಂತೆ ಇತರರಿಗೆ ಸಹಾಯ ಮಾಡುವುದು

ದೇವರ ಚಿತ್ತವನ್ನು ಮಾಡುವಂತೆ ಇತರರಿಗೆ ಸಹಾಯ ಮಾಡುವುದು

ಪಾಠ 15

ದೇವರ ಚಿತ್ತವನ್ನು ಮಾಡುವಂತೆ ಇತರರಿಗೆ ಸಹಾಯ ಮಾಡುವುದು

ನೀವು ಕಲಿಯುತ್ತಿರುವ ವಿಷಯದ ಕುರಿತು ಇತರರಿಗೆ ಏಕೆ ಹೇಳಬೇಕು? (1)

ನೀವು ಯಾರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಬಲ್ಲಿರಿ? (2)

ನಿಮ್ಮ ನಡತೆಯು ಇತರರ ಮೇಲೆ ಯಾವ ಪರಿಣಾಮವನ್ನು ಬೀರಬಲ್ಲದು? (2)

ಸಭೆಯೊಂದಿಗೆ ನೀವು ಯಾವಾಗ ಸಾರಸಾಧ್ಯವಿದೆ? (3)

1. ಇಷ್ಟರೊಳಗೆ ನೀವು ಬೈಬಲಿನಿಂದ ಅನೇಕ ಒಳ್ಳೆಯ ವಿಷಯಗಳನ್ನು ಕಲಿತಿದ್ದೀರಿ. ಈ ಜ್ಞಾನವು ಒಂದು ಕ್ರೈಸ್ತ ವ್ಯಕ್ತಿತ್ವನ್ನು ನೀವು ಬೆಳಸಿಕೊಳ್ಳುವಂತೆ ನಡೆಸಬೇಕು. (ಎಫೆಸ 4:22-24) ಅನಂತ ಜೀವನವನ್ನು ನೀವು ಪಡೆಯುವ ಸಲುವಾಗಿ ಇಂತಹ ಜ್ಞಾನವು ಆವಶ್ಯಕ. (ಯೋಹಾನ 17:3) ಹಾಗಿದ್ದರೂ, ಇತರರು ಕೂಡ ಸುವಾರ್ತೆಯನ್ನು ಕೇಳಬೇಕಾಗಿದೆ, ಇದರಿಂದ ಅವರೂ ರಕ್ಷಿಸಲ್ಪಡಸಾಧ್ಯವಿದೆ. ಎಲ್ಲ ಸತ್ಯ ಕ್ರೈಸ್ತರು ಇತರರಿಗೆ ಸಾಕ್ಷಿನೀಡಬೇಕು. ಇದು ದೇವರ ಆಜ್ಞೆಯಾಗಿದೆ.—ರೋಮಾಪುರ 10:10; 1 ಕೊರಿಂಥ 9:16; 1 ತಿಮೊಥೆಯ 4:16.

2. ನೀವು ಕಲಿಯುತ್ತಿರುವ ಒಳ್ಳೆಯ ವಿಷಯಗಳನ್ನು ನೀವು ನಿಮ್ಮ ಹತ್ತಿರವಿರುವವರೊಂದಿಗೆ ಹಂಚಿಕೊಳ್ಳುವ ಮೂಲಕ ತೊಡಗಸಾಧ್ಯವಿದೆ. ಅವುಗಳನ್ನು ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ, ಶಾಲಾಸಂಗಾತಿಗಳಿಗೆ, ಹಾಗೂ ಜೊತೆಕೆಲಸಗಾರರಿಗೆ ಹೇಳಿರಿ. ನೀವು ಹಾಗೆ ಮಾಡುವಾಗ ದಯಾಪರರೂ ತಾಳ್ಮೆಯುಳ್ಳವರೂ ಆಗಿರಿ. (2 ತಿಮೊಥೆಯ 2:24, 25) ಜನರು ವ್ಯಕ್ತಿಯೊಬ್ಬನು ಹೇಳುವ ವಿಷಯಕ್ಕೆ ಕಿವಿಗೊಡುವುದಕ್ಕಿಂತಲೂ ಅವನ ನಡತೆಯನ್ನು ಅನೇಕ ವೇಳೆ ಹೆಚ್ಚು ಅವಲೋಕಿಸುತ್ತಾರೆಂಬುದನ್ನು ಜ್ಞಾಪಕದಲ್ಲಿಡಿ. ಆದುದರಿಂದ ನೀವು ಹೇಳುವ ಸಂದೇಶಕ್ಕೆ ಅವರು ಕಿವಿಗೊಡುವಂತೆ ನಿಮ್ಮ ಒಳ್ಳೆಯ ನಡತೆಯು ಇತರರನ್ನು ಆಕರ್ಷಿಸಬಹುದು.—ಮತ್ತಾಯ 5:16; 1 ಪೇತ್ರ 3:1, 2, 16.

3. ಸಕಾಲದಲ್ಲಿ, ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯೊಂದಿಗೆ ಸಾರುವುದನ್ನು ಆರಂಭಿಸಲು ನೀವು ಅರ್ಹರಾಗಬಹುದು. ನಿಮ್ಮ ಪ್ರಗತಿಯಲ್ಲಿ ಇದೊಂದು ಪ್ರಾಮುಖ್ಯವಾದ ಹೆಜ್ಜೆಯಾಗಿದೆ. (ಮತ್ತಾಯ 24:14) ಯೆಹೋವನ ಸೇವಕನಾಗಲು ಮತ್ತು ಅನಂತ ಜೀವನವನ್ನು ಪಡೆಯಲು, ನೀವು ಬೇರೆ ಯಾರಾದರೊಬ್ಬರಿಗೆ ಸಹಾಯ ಮಾಡಲು ಶಕ್ತರಾಗಿರುವಲ್ಲಿ, ಇದು ಎಂತಹ ಒಂದು ಆನಂದವಾಗಿರುವುದು!—1 ಥೆಸಲೊನೀಕ 2:19, 20.