ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಿಶಾಚನು ಯಾರು?

ಪಿಶಾಚನು ಯಾರು?

ಪಾಠ 4

ಪಿಶಾಚನು ಯಾರು?

ಪಿಶಾಚನಾದ ಸೈತಾನನು—ಅವನು ಎಲ್ಲಿಂದ ಬಂದನು? (1, 2)

ಸೈತಾನನು ಜನರನ್ನು ತಪ್ಪು ದಾರಿಗೆ ಎಳೆಯುವುದು ಹೇಗೆ? (3-7)

ನೀವು ಪಿಶಾಚನನ್ನು ಏಕೆ ಪ್ರತಿಭಟಿಸಬೇಕು? (7)

1. “ಪಿಶಾಚ” ಎಂಬ ಶಬ್ದದ ಅರ್ಥವು, ಇನ್ನೊಬ್ಬ ವ್ಯಕ್ತಿಯ ಕುರಿತು ದುಷ್ಟ ಸುಳ್ಳುಗಳನ್ನು ಹೇಳುವವನೆಂಬುದಾಗಿದೆ. “ಸೈತಾನ” ಎಂದರೆ ಒಬ್ಬ ವೈರಿ ಅಥವಾ ಒಬ್ಬ ವಿರೋಧಿ ಎಂದಾಗಿದೆ. ಇವು ದೇವರ ಪ್ರಧಾನ ವೈರಿಗೆ ಕೊಡಲ್ಪಟ್ಟಿರುವ ಹೆಸರುಗಳಾಗಿವೆ. ಆದಿಯಲ್ಲಿ, ಅವನು ದೇವರೊಂದಿಗೆ ಸ್ವರ್ಗದಲ್ಲಿ ಒಬ್ಬ ಪರಿಪೂರ್ಣ ದೇವದೂತನಾಗಿದ್ದನು. ಆದರೆ ತದನಂತರ ಅವನು ತನ್ನ ಕುರಿತು ಬಹಳವಾಗಿ ಹೆಚ್ಚಳಪಟ್ಟನು ಮತ್ತು ದೇವರಿಗೆ ಯೋಗ್ಯವಾಗಿ ಸೇರುವ ಆರಾಧನೆಯನ್ನು ಬಯಸಿದನು.—ಮತ್ತಾಯ 4:8-10.

2. ಈ ದೇವದೂತನಾದ ಸೈತಾನನು, ಒಂದು ಹಾವಿನ ಮೂಲಕ ಹವ್ವಳೊಂದಿಗೆ ಮಾತಾಡಿದನು. ಆಕೆಗೆ ಸುಳ್ಳುಗಳನ್ನು ಹೇಳುವ ಮೂಲಕ, ದೇವರಿಗೆ ಆಕೆ ಅವಿಧೇಯಳಾಗುವಂತೆ ಅವನು ಮಾಡಿದನು. ಹೀಗೆ ಸೈತಾನನು, ದೇವರ “ಪರಮಾಧಿಕಾರ”ವೆಂದು ಕರೆಯಲ್ಪಡುವ ವಿಷಯವನ್ನು ಅಥವಾ ಮಹೋನ್ನತನೋಪಾದಿ ಆತನ ಸ್ಥಾನವನ್ನು ಆಕ್ರಮಿಸಿದನು. ದೇವರು ಯೋಗ್ಯವಾದ ವಿಧದಲ್ಲಿ ಮತ್ತು ಆತನ ಪ್ರಜೆಗಳ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟವನಾಗಿ ಆಳುತ್ತಾನೊ ಇಲ್ಲವೊ ಎಂದು ಸೈತಾನನು ಪ್ರಶ್ನಿಸಿದನು. ಯಾವನೇ ಮಾನವನು ದೇವರಿಗೆ ನಿಷ್ಠಾವಂತನಾಗಿ ಉಳಿಯುವನೊ ಎಂಬ ವಿಷಯದಲ್ಲಿಯೂ ಸೈತಾನನು ಸಂದೇಹಗಳನ್ನು ಎಬ್ಬಿಸಿದನು. ಇದನ್ನು ಮಾಡುವ ಮೂಲಕ, ಸೈತಾನನು ತನ್ನನ್ನು ದೇವರ ವೈರಿಯನ್ನಾಗಿ ಮಾಡಿಕೊಂಡನು. ಆದುದರಿಂದಲೇ ಅವನು ಪಿಶಾಚನಾದ ಸೈತಾನನು ಎಂಬುದಾಗಿ ಕರೆಯಲ್ಪಡುವವನಾದನು.—ಆದಿಕಾಂಡ 3:1-5; ಯೋಬ 1:8-11; ಪ್ರಕಟನೆ 12:9.

3. ತನ್ನನ್ನು ಆರಾಧಿಸುವಂತೆ ಸೈತಾನನು ಜನರನ್ನು ವಂಚಿಸಲು ಪ್ರಯತ್ನಿಸುತ್ತಾನೆ. (2 ಕೊರಿಂಥ 11:3, 14) ಜನರನ್ನು ಅವನು ತಪ್ಪು ದಾರಿಗೆ ಎಳೆಯುವ ಒಂದು ವಿಧವು, ಸುಳ್ಳು ಧರ್ಮದ ಮುಖಾಂತರವೇ. ಒಂದು ಧರ್ಮವು ದೇವರ ಕುರಿತು ಸುಳ್ಳುಗಳನ್ನು ಕಲಿಸುವುದಾದರೆ, ಅದು ನಿಜವಾಗಿಯೂ ಸೈತಾನನ ಉದ್ದೇಶವನ್ನು ಪೂರೈಸುತ್ತದೆ. (ಯೋಹಾನ 8:44) ಸುಳ್ಳು ಧರ್ಮಗಳ ಸದಸ್ಯರಾಗಿರುವ ಜನರು, ತಾವು ಸತ್ಯ ದೇವರನ್ನು ಆರಾಧಿಸುತ್ತಿದ್ದೇವೆಂದು ಪ್ರಾಮಾಣಿಕವಾಗಿ ನಂಬಬಹುದು. ಆದರೆ ಅವರು ನಿಜವಾಗಿಯೂ ಸೈತಾನನಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವನು “ಈ ಪ್ರಪಂಚದ ದೇವರು” ಆಗಿದ್ದಾನೆ.—2 ಕೊರಿಂಥ 4:4.

4. ಸೈತಾನನು ಜನರನ್ನು ತನ್ನ ಶಕ್ತಿಯ ಕೆಳಗೆ ತರುವ ಮತ್ತೊಂದು ವಿಧವು, ಪ್ರೇತವ್ಯವಹಾರವಾದವಾಗಿದೆ. ಅವರು ತಮ್ಮನ್ನು ಸಂರಕ್ಷಿಸಿಕೊಳ್ಳಲು, ಇತರರಿಗೆ ಹಾನಿ ತರಲು, ಭವಿಷ್ಯತ್ತನ್ನು ಮುಂತಿಳಿಸಲು, ಅಥವಾ ಅದ್ಭುತಕಾರ್ಯಗಳನ್ನು ನಡೆಸಲು ಪ್ರೇತಗಳನ್ನು ಕರೆಯಬಹುದು. ಈ ಎಲ್ಲ ಆಚರಣೆಗಳ ಮರೆಯಲ್ಲಿರುವ ದುಷ್ಟ ಶಕ್ತಿಯು ಸೈತಾನನಾಗಿದ್ದಾನೆ. ದೇವರನ್ನು ಮೆಚ್ಚಿಸಲು, ನಮಗೆ ಪ್ರೇತವ್ಯವಹಾರವಾದದೊಂದಿಗೆ ಯಾವ ಸಂಬಂಧವೂ ಇರಬಾರದು.—ಧರ್ಮೋಪದೇಶಕಾಂಡ 18:10-12; ಅ. ಕೃತ್ಯಗಳು 19:18, 19.

5. ಸೈತಾನನು ಜನರನ್ನು ವಿಪರೀತವಾದ ಕುಲಾಭಿಮಾನ ಮತ್ತು ರಾಜಕೀಯ ಸಂಘಟನೆಗಳ ಆರಾಧನೆಯ ಮುಖಾಂತರ ಕೂಡ ತಪ್ಪು ದಾರಿಗೆ ಎಳೆಯುತ್ತಾನೆ. ತಮ್ಮ ರಾಷ್ಟ್ರ ಅಥವಾ ಕುಲವು ಇತರರ ರಾಷ್ಟ್ರ ಅಥವಾ ಕುಲಕ್ಕಿಂತ ಉತ್ತಮವಾಗಿದೆಯೆಂದು ಕೆಲವರಿಗೆ ಅನಿಸುತ್ತದೆ. ಆದರೆ ಇದು ನಿಜವಾಗಿರುವುದಿಲ್ಲ. (ಅ. ಕೃತ್ಯಗಳು 10:34, 35) ಮನುಷ್ಯನ ಸಮಸ್ಯೆಗಳನ್ನು ಬಗೆಹರಿಸಲು, ಇತರ ಜನರು ರಾಜಕೀಯ ಸಂಘಟನೆಗಳ ಕಡೆಗೆ ನೋಡುತ್ತಾರೆ. ಇದನ್ನು ಮಾಡುವ ಮೂಲಕ, ಅವರು ದೇವರ ರಾಜ್ಯವನ್ನು ತಿರಸ್ಕರಿಸುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗಾಗಿರುವ ಏಕೈಕ ಪರಿಹಾರವು ಅದೇ ಆಗಿದೆ.—ದಾನಿಯೇಲ 2:44.

6. ಸೈತಾನನು ಜನರನ್ನು ತಪ್ಪು ದಾರಿಗೆ ಎಳೆಯುವ ಇನ್ನೊಂದು ವಿಧವು, ಅವರನ್ನು ಪಾಪಮಯ ಬಯಕೆಗಳ ಮೂಲಕ ಶೋಧಿಸುವ ಮುಖಾಂತರವೇ. ಪಾಪಮಯ ಆಚರಣೆಗಳನ್ನು ತೊರೆಯುವಂತೆ ಯೆಹೋವನು ನಮಗೆ ಹೇಳುತ್ತಾನೆ, ಏಕೆಂದರೆ ಅವು ನಮಗೆ ಹಾನಿ ತರುವವೆಂದು ಆತನಿಗೆ ಗೊತ್ತಿದೆ. (ಗಲಾತ್ಯ 6:7, 8) ಇಂತಹ ಆಚರಣೆಗಳಲ್ಲಿ ನೀವು ಅವರನ್ನು ಸೇರುವಂತೆ ಕೆಲವು ಜನರು ಬಯಸಬಹುದು. ಆದರೆ, ನೀವು ಈ ವಿಷಯಗಳನ್ನು ಮಾಡುವಂತೆ ನಿಜವಾಗಿಯೂ ಬಯಸುವವನು ಸೈತಾನನು ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ.—1 ಕೊರಿಂಥ 6:9, 10; 15:33.

7. ನೀವು ಯೆಹೋವನನ್ನು ಬಿಟ್ಟುಬಿಡುವಂತೆ ಮಾಡಲು ಸೈತಾನನು ಹಿಂಸೆ ಅಥವಾ ವಿರೋಧವನ್ನು ಉಪಯೋಗಿಸಬಹುದು. ನೀವು ಬೈಬಲನ್ನು ಅಭ್ಯಸಿಸುತ್ತಿರುವುದರಿಂದ, ನಿಮ್ಮ ಪ್ರಿಯರಲ್ಲಿ ಕೆಲವರು ಬಹಳ ಕೋಪಗೊಳ್ಳಬಹುದು. ಇತರರು ನಿಮಗೆ ಅಪಹಾಸ್ಯ ಮಾಡಬಹುದು. ಆದರೆ ನಿಮ್ಮ ಜೀವಕ್ಕೆ ನೀವು ಯಾರಿಗೆ ಋಣಿಯಾಗಿದ್ದೀರಿ? ನೀವು ಯೆಹೋವನ ಕುರಿತು ಕಲಿಯುವುದನ್ನು ನಿಲ್ಲಿಸುವುದಕ್ಕಾಗಿ, ಸೈತಾನನು ನಿಮ್ಮನ್ನು ಹೆದರಿಸಲು ಬಯಸುತ್ತಾನೆ. ಸೈತಾನನು ಜಯಹೊಂದುವಂತೆ ಬಿಡಬೇಡಿರಿ! (ಮತ್ತಾಯ 10:34-39; 1 ಪೇತ್ರ 5:8, 9) ಪಿಶಾಚನನ್ನು ಪ್ರತಿಭಟಿಸುವ ಮೂಲಕ, ನೀವು ಯೆಹೋವನನ್ನು ಸಂತೋಷಪಡಿಸಸಾಧ್ಯವಿದೆ ಮತ್ತು ನೀವು ಆತನ ಪರಮಾಧಿಕಾರವನ್ನು ಎತ್ತಿಹಿಡಿಯುತ್ತೀರಿ ಎಂಬುದನ್ನು ತೋರಿಸಸಾಧ್ಯವಿದೆ.—ಜ್ಞಾನೋಕ್ತಿ 27:11.

[ಪುಟ 9ರಲ್ಲಿರುವ ಚಿತ್ರ]

ಸುಳ್ಳು ಧರ್ಮ, ಪ್ರೇತವ್ಯವಹಾರವಾದ, ಮತ್ತು ರಾಷ್ಟ್ರೀಯತೆಯು ಜನರನ್ನು ತಪ್ಪು ದಾರಿಗೆ ಎಳೆಯುತ್ತವೆ

[ಪುಟ 0 ರಲ್ಲಿರುವ ಚಿತ್ರ]

ಯೆಹೋವನ ಕುರಿತು ಕಲಿಯುವುದನ್ನು ಮುಂದುವರಿಸುವ ಮೂಲಕ ಸೈತಾನನನ್ನು ಪ್ರತಿಭಟಿಸಿರಿ