ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಷ್ಟಾನುಭವದಿಂದ ಮುಕ್ತವಾಗಿರುವ ಒಂದು ಭೂಮಿ

ಕಷ್ಟಾನುಭವದಿಂದ ಮುಕ್ತವಾಗಿರುವ ಒಂದು ಭೂಮಿ

ಭಾಗ 2

ಕಷ್ಟಾನುಭವದಿಂದ ಮುಕ್ತವಾಗಿರುವ ಒಂದು ಭೂಮಿ

1, 2. ಯಾವ ಭಿನ್ನವಾದ ನೋಟ ಅನೇಕರಿಗೆ ಇದೆ?

ಆದಾಗ್ಯೂ, ಲೋಕಾದ್ಯಂತವಿರುವ ಲಕ್ಷಾಂತರ ಜನರಿಗೆ ಸಂಪೂರ್ಣವಾಗಿ ಭಿನ್ನವಾದ ನೋಟವೊಂದಿರುತ್ತದೆ. ಮಾನವಕುಲಕ್ಕೆ ಒಂದು ಭವ್ಯವಾದ ಭವಿಷ್ಯವನ್ನು ಅವರು ಮುನ್ನೋಡುತ್ತಾರೆ. ದುಷ್ಟತನ ಮತ್ತು ಕಷ್ಟಾನುಭವದಿಂದ ಸಮಗ್ರವಾಗಿ ಮುಕ್ತವಾಗಿರುವ ಲೋಕವೊಂದು ಶೀಘ್ರವೇ ಇಲ್ಲಿ, ಇದೇ ಭೂಮಿಯ ಮೇಲೆ ಇರುವದು ಎಂದು ಅವರು ಹೇಳುತ್ತಾರೆ. ಕೆಟ್ಟದ್ದಾಗಿರುವದನ್ನು ಬೇಗನೇ ತೆಗೆದು ಹಾಕಲಾಗುವುದು ಮತ್ತು ಪೂರ್ಣ ನೂತನ ಲೋಕವೊಂದು ಸ್ಥಾಪಿಸಲ್ಪಡುವುದು ಎಂಬುದರ ಕುರಿತು ಅವರಿಗೆ ದೃಢಭರವಸೆ ಇದೆ. ಈ ನೂತನ ಲೋಕದ ಬುನಾದಿಯು ಈಗಾಗಲೇ ಹಾಕಲ್ಪಡುತ್ತಿದೆ ಎಂದು ಕೂಡ ಅವರು ಹೇಳುತ್ತಾರೆ!

2 ನೂತನ ಲೋಕವು ಯುದ್ಧ, ಕ್ರೌರ್ಯ, ಪಾತಕ, ಅನ್ಯಾಯ, ಮತ್ತು ದಾರಿದ್ರ್ಯದಿಂದ ಮುಕ್ತವಾಗಿರುವದೆಂದು ಈ ಜನರು ನಂಬುತ್ತಾರೆ. ರೋಗ, ದುಃಖ, ಕಣ್ಣೀರು, ಮತ್ತು ಮರಣವೂ ಕೂಡ ಇಲ್ಲದ ಒಂದು ಲೋಕ ಅದಾಗಿರುವುದು. ಆ ಸಮಯದಲ್ಲಿ ಜನರು ಪರಿಪೂರ್ಣತೆಗೆ ಬೆಳೆಯುವರು ಮತ್ತು ಐಹಿಕ ಪ್ರಮೋದವನವೊಂದರಲ್ಲಿ ಅವರು ಸಂತೋಷದಿಂದ ಸದಾಕಾಲವೂ ಜೀವಿಸುವರು. ಹೌದು, ಸತ್ತವರು ಪುನರುತ್ಥಾನವನ್ನು ಕೂಡ ಹೊಂದುವರು ಮತ್ತು ಸದಾಕಾಲ ಜೀವಿಸುವ ಅವಕಾಶವನ್ನು ಪಡೆಯುವರು!

3, 4. ಅವರ ನೋಟದ ಕುರಿತಾಗಿ ಅಂಥ ವ್ಯಕ್ತಿಗಳು ದೃಢಭರವಸೆಯಿಂದಿರುವುದು ಯಾಕೆ?

3 ಭವಿಷ್ಯದ ಈ ನೋಟವು ಕೇವಲ ಒಂದು ಸ್ವಪ್ನ, ಕೇವಲ ಹಾರೈಕೆಯನ್ನು ಅವಲಂಬಿಸಿದ ವಿಶ್ವಾಸವಾಗಿದೆಯೊ? ಇಲ್ಲ, ಎಷ್ಟು ಮಾತ್ರಕ್ಕೂ ಅಲ್ಲ. ಈ ಪ್ರಮೋದವನದ ಬರೋಣವು ಅನಿವಾರ್ಯವಾಗಿದೆ ಎಂಬ ಒಂದು ದೃಢವಾದ ನಂಬಿಕೆಯ ಮೇಲೆ ಅದು ಆಧಾರಿತವಾಗಿದೆ. (ಇಬ್ರಿಯ 11:1) ಅವರು ಅಷ್ಟೊಂದು ಖಚಿತವಾಗಿರುವುದು ಯಾಕೆ? ಯಾಕಂದರೆ ವಿಶ್ವದ ಸರ್ವಶಕ್ತ ಸೃಷ್ಟಿಕರ್ತನು ಅದನ್ನು ವಾಗ್ದಾನಿಸಿದ್ದಾನೆ.

4 ದೇವರ ವಾಗ್ದಾನಗಳ ಕುರಿತು, ಬೈಬಲು ಹೇಳುವುದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.” “ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; . . . ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತುಕೊಟ್ಟನಂತರ ನೆರವೇರಿಸುವದಿಲ್ಲವೋ.” “ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವದೇನಂದರೆ—ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು.”—ಯೆಹೋಶುವ 23:14; ಅರಣ್ಯಕಾಂಡ 23:19; ಯೆಶಾಯ 14:24.

5. ಯಾವ ಪ್ರಶ್ನೆಗಳು ಉತ್ತರಿಸಲ್ಪಡಬೇಕಾಗಿವೆ?

5 ಆದಾಗ್ಯೂ, ಕಷ್ಟಾನುಭವರಹಿತವಾದ ಐಹಿಕ ಪ್ರಮೋದವನ​ವೊಂದನ್ನು ಸ್ಥಾಪಿಸುವುದು ದೇವರ ಉದ್ದೇಶವಾಗಿತ್ತಾದರೆ, ಆರಂಭದಲ್ಲಿಯೇ ಕೆಟ್ಟ ಸಂಗತಿಗಳು ಸಂಭವಿಸುವಂತೆ ಅವನು ಅನುಮತಿಸಿದ್ದು ಯಾಕೆ? ತಪ್ಪಾಗಿರುವದನ್ನು ಸರಿಪಡಿಸಲು ಇಂದಿನ ವರೆಗೆ, ಆರು ಸಾವಿರ ವರ್ಷಗಳ ತನಕ ಅವನು ಕಾದುಕೊಂಡಿರುವುದೇತಕ್ಕೆ? ನಮ್ಮ ಕುರಿತು ದೇವರು ನಿಜವಾಗಿಯೂ ಚಿಂತಿಸುವುದಿಲ್ಲ, ಯಾ ಅವನು ಅಸ್ತಿತ್ವದಲ್ಲಿ ಕೂಡ ಇಲ್ಲ ಎಂದು ಶತಮಾನಗಳ ಕಷ್ಟಾನುಭವಗಳೆಲ್ಲವೂ ಸೂಚಿಸಬಹುದೆ?

[ಅಧ್ಯಯನ ಪ್ರಶ್ನೆಗಳು]