ದೇವರು ಉಂಟುಮಾಡುವ ಅದ್ಭುತಕರ ನೂತನ ಲೋಕ
ಭಾಗ 10
ದೇವರು ಉಂಟುಮಾಡುವ ಅದ್ಭುತಕರ ನೂತನ ಲೋಕ
1, 2. ಅರ್ಮಗೆದೋನಿನ ಶುದ್ಧೀಕರಿಸುವ ಯುದ್ಧಾನಂತರ, ಏನು ಸಂಭವಿಸಲಿರುವುದು?
ಅರ್ಮಗೆದ್ದೋನಿ ದೇವರ ಶುದ್ಧೀಕರಣದ ಯುದ್ಧದ ಅನಂತರ, ಮತ್ತೇನು? ಅನಂತರ ಒಂದು ವೈಭವಾತಿಶಯದ ಶಕವು ಆರಂಭಗೊಳ್ಳುವುದು. ಅರ್ಮಗೆದ್ದೋನಿನಲ್ಲಿ ಪಾರಾಗುವವರು, ದೇವರ ಆಳಿಕೆಗೆ ಈಗಾಗಲೇ ಅವರ ನಿಷ್ಠೆಯನ್ನು ರುಜುಪಡಿಸಿರುವುದರಿಂದ, ನೂತನ ಲೋಕದೊಳಗೆ ಪ್ರವೇಶಮಾಡಿಸಲ್ಪಡುವರು. ಮಾನವ ಕುಟುಂಬಕ್ಕೆ ದೇವರಿಂದ ಅದ್ಭುತಕರ ಪ್ರಯೋಜನಗಳು ನಿರರ್ಗಳವಾಗಿ ಹರಿಯುವಾಗ, ಇತಿಹಾಸದ ಎಂತಹ ರೋಮಾಂಚಗೊಳಿಸುವ ಒಂದು ಹೊಸ ಸಮಯಾವಧಿಯಾಗಲಿರುವುದು!
2 ದೇವರ ರಾಜ್ಯದ ಮಾರ್ಗದರ್ಶನದ ಕೆಳಗೆ, ಪ್ರಮೋದವನವೊಂದನ್ನು ವಿಕಸಿಸಲು ಪಾರಾದವರು ಆರಂಭಿಸುವರು. ಆಗ ಅವರು, ಜೀವಿಸುವವರೆಲ್ಲರಿಗೂ ಪ್ರಯೋಜನದಾಯಕವಾಗಲಿರುವ ನಿಸ್ವಾರ್ಥದ ಬೆನ್ನಟ್ಟುವಿಕೆಗಳಲ್ಲಿ ಅವರ ಶಕ್ತಿಗಳನ್ನು ಉಪಯೋಗಿಸುವರು. ಭೂಮಿಯು ಮಾನವರಿಗಾಗಿ ಒಂದು ಸೌಂದರ್ಯಮಯ, ಶಾಂತಿಭರಿತ, ಸಂತೃಪ್ತಿದಾಯಕ ಬೀಡಾಗಿ ಪರಿವರ್ತಿಸಲ್ಪಡಲು ಆರಂಭಗೊಳ್ಳುವುದು.
ನೀತಿಯು ದುಷ್ಟತನವನ್ನು ಸ್ಥಾನಪಲ್ಲಟಗೊಳಿಸುವುದು
3. ಅರ್ಮಗೆದೋನಿನ ನಂತರ ಬಲುಬೇಗನೇ ಯಾವ ಪರಿಹಾರ ಅನುಭವಿಸಲ್ಪಡುವುದು?
3 ಸೈತಾನನ ಲೋಕದ ನಾಶನದಿಂದ ಇದೆಲ್ಲವೂ ಸಾಧ್ಯವಾಗಿ ಮಾಡಲಾಗುವುದು. ವಿಭಾಜಿತ ಸುಳ್ಳು ಧರ್ಮಗಳು, ಸಾಮಾಜಿಕ ವ್ಯವಸ್ಥೆಗಳು, ಯಾ ಸರಕಾರಗಳು ಅಲ್ಲಿ ಇನ್ನಿರವು. ಜನರನ್ನು ವಂಚಿಸುವ ಸೈತಾನಿಕ ಪ್ರಚಾರ ಕಾರ್ಯ ಇನ್ನು ಮುಂದೆ ಇರುವುದಿಲ್ಲ; ಅದನ್ನು ಉತ್ಪಾದಿಸುವ ಎಲ್ಲಾ ಕಾರ್ಯಭಾರಗಳು ಸೈತಾನನ ವ್ಯವಸ್ಥೆಯೊಂದಿಗೆ ಇಲ್ಲದೆ ಹೋಗುವುವು. ಯೋಚಿಸಿರಿ: ಸೈತಾನನ ಲೋಕದ ಸಮಗ್ರ ವಿಷಮಯ ವಾತಾವರಣವು ಶುದ್ಧೀಕರಿಸಲ್ಪಡುವುದು! ಅದು ಎಂತಹ ಪರಿಹಾರವಾಗಿರುವುದು!
4. ಬೋಧನೆಯಲ್ಲಾಗುವ ಬದಲಾವಣೆಯನ್ನು ವರ್ಣಿಸಿರಿ.
4 ಅನಂತರ, ಮಾನವಾಳಿಕೆಯ ವಿನಾಶಕಾರೀ ಕಲ್ಪನೆಗಳು ದೇವರಿಂದ ಬರುವ ಭಕ್ತಿವರ್ಧಕ ಬೋಧನೆಗಳಿಂದ ಸ್ಥಾನಪಲ್ಲಟಗೊಳ್ಳುವುವು. “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು.” (ಯೆಶಾಯ 54:13) ವರ್ಷವರ್ಷವೂ ಬರುವ ಈ ಹಿತಕರ ಉಪದೇಶದಿಂದಾಗಿ “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯ ಮೇಲೆ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:9) ಜನರು ಇನ್ನು ಮುಂದೆ ಕೆಟ್ಟದ್ದನ್ನು ಕಲಿಯರು, ಬದಲಿಗೆ, “ಭೂನಿವಾಸಿಗಳು ಧರ್ಮಜ್ಞಾನವನ್ನು ಪಡೆದುಕೊಳ್ಳುವರು.” (ಯೆಶಾಯ 26:9) ಭಕ್ತಿವದ್ಧಿಯ ಯೋಚನೆಗಳು ಮತ್ತು ಕ್ರಿಯೆಗಳು ದಿನನಿತ್ಯದ ಕಾರ್ಯಕ್ರಮಗಳಾಗಿರುವುವು.—ಅ. ಕೃತ್ಯಗಳು 17:31; ಫಿಲಿಪ್ಪಿ 4:8.
5. ಎಲ್ಲಾ ದುಷ್ಟತನಕ್ಕೆ ಮತ್ತು ದುಷ್ಟಜನರಿಗೆ ಏನು ಸಂಭವಿಸುವುದು?
5 ಹೀಗೆ, ಅಲ್ಲಿ ಇನ್ನು ಮುಂದೆ ಕೊಲೆ, ಹಿಂಸಾಚಾರ, ಬಲಾತ್ಕಾರ ಸಂಭೋಗ, ಕಳ್ಳತನ, ಯಾ ಇನ್ನಿತರ ಪಾತಕಗಳು ಇರವು. ಇತರರ ಕೆಟ್ಟ ಕಾರ್ಯಗಳಿಂದಾಗಿ, ಯಾರೊಬ್ಬನೂ ಕಷ್ಟಾನುಭವಿಸಲಿಕ್ಕೆ ಇರುವುದಿಲ್ಲ. ಜ್ಞಾನೋಕ್ತಿ 10:30 ಹೇಳುವುದು: “ಶಿಷ್ಟರು ಎಂದಿಗೂ ಕದಲರು; ದುಷ್ಟರು ದೇಶದಲ್ಲಿ ನಿಲ್ಲರು.”
ಪರಿಪೂರ್ಣ ಆರೋಗ್ಯವು ಪುನಃ ಸ್ಥಾಪಿಸಲ್ಪಡುವುದು
6, 7. (ಎ) ರಾಜ್ಯಾದಾಳಿಕೆಯು ಯಾವ ಕಠಿಣ ನೈಜತೆಯ ಅಂತ್ಯವನ್ನು ತರಲಿರುವುದು? (ಬಿ) ಯೇಸುವು ಭೂಮಿಯ ಮೇಲಿರುವಾಗ ಇದನ್ನು ಹೇಗೆ ಪ್ರದರ್ಶಿಸಿದನು?
6 ನೂತನ ಲೋಕದಲ್ಲಿ, ಮೂಲ ದಂಗೆಯ ಎಲ್ಲಾ ಕೆಟ್ಟ ಪರಿಣಾಮಗಳ ಹಿಮ್ಮುಖ ಸುತ್ತುವಿಕೆಯೊಂದು ಇರುವುದು. ಉದಾಹರಣೆಗೆ, ರಾಜ್ಯಾದಾಳಿಕೆಯು ರೋಗ ಮತ್ತು ವೃದ್ಧಾಪ್ಯವನ್ನು ಅಳಿಸಿಬಿಡುವುದು. ಇಂದು ನೀವು ಸ್ವಲ್ಪ ಪ್ರಮಾಣದ ಒಳ್ಳೆಯ ಆರೋಗ್ಯದಲ್ಲಿ ಆನಂದಿಸುವುದಾದರೂ, ನಿಮಗೆ ವಯಸ್ಸಾದಂತೆಯೇ, ನಿಮ್ಮ ಕಣ್ಣುಗಳು ಮೊಬ್ಬಾಗುವುದು, ಹಲ್ಲುಗಳು ಕೆಟ್ಟುಹೋಗುವುದು, ನಿಮ್ಮ ಆಲಿಸುವಿಕೆ ಕುಂಠಿತಗೊಳ್ಳುವುದು, ನಿಮ್ಮ ಚರ್ಮ ಸುಕ್ಕುಗಟ್ಟುವುದು, ನಿಮ್ಮ ಆಂತರಿಕ ಅಂಗಾಂಶಗಳು ಮುರಿಯುವುದು, ಕೊನೆಗೆ ನೀವು ಸಾಯುವುದು, ಒಂದು ಅಪ್ರಿಯ ವಾಸ್ತವಿಕತೆಯಾಗಿದೆ.
7 ಆದಾಗ್ಯೂ, ನಮ್ಮ ಮೊದಲ ಹೆತ್ತವರಿಂದ ಬಾಧ್ಯತೆಯಾಗಿ ನಾವು ಪಡೆದ ಮತ್ತಾಯ 15:30, 31.
ಆ ಸಂಕಟಕರ ಪರಿಣಾಮಗಳು, ಬಲುಬೇಗನೇ ಗತಕಾಲದ ಒಂದು ವಿಷಯವಾಗಲಿರುವುದು. ಭೂಮಿಯ ಮೇಲೆ ಇದ್ದಾಗ, ಆರೋಗ್ಯದ ಕುರಿತಾಗಿ ಯೇಸುವು ಏನು ಮಾಡಿತೋರಿಸಿದ್ದನು ಎಂದು ನಿಮಗೆ ನೆನಪಿದೆಯೇ? ಬೈಬಲ್ ನಮಗೆ ವರ್ಣಿಸುವುದು: “ಆಗ ಜನರು ಗುಂಪುಗುಂಪಾಗಿ ಆತನ ಬಳಿಗೆ ಬಂದು ಕುಂಟರು ಕುರುಡರು ಮೂಕರು ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ಕರತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು; ಆತನು ಅವರನ್ನು ವಾಸಿಮಾಡಿದನು. ಮೂಕರಾಗಿದ್ದವರು ಮಾತಾಡಿದ್ದನ್ನೂ ಕುರುಡರಿಗೆ ಕಣ್ಣುಬಂದದ್ದನ್ನೂ ಜನರು ಕಂಡು ಆಶ್ಚರ್ಯಪಟ್ಟರು.”—8, 9. ಪರಿಪೂರ್ಣ ಆರೋಗ್ಯವು ಪುನಃ ಸ್ಥಾಪಿಸಲ್ಪಟ್ಟಾಗ ನೂತನ ಲೋಕದಲ್ಲಿ ಬರಲಿರುವ ಆನಂದವನ್ನು ವರ್ಣಿಸಿರಿ.
8 ನಮ್ಮ ಎಲ್ಲಾ ಅಸ್ವಸ್ಥತೆಗಳು ನಿರ್ಮೂಲಮಾಡಲ್ಪಟ್ಟಾಗ, ನೂತನ ಲೋಕದಲ್ಲಿ ಎಂತಹ ಮಹಾ ಸಂತೋಷವು ಬರಲಿರುವುದು! ನ್ಯೂನ ಆರೋಗ್ಯದ ಫಲಿತಾಂಶವಾಗಿ ಬರುವ ಕಷ್ಟಾನುಭವಗಳು ಇನ್ನೆಂದಿಗೂ ನಮ್ಮನ್ನು ಪೀಡಿಸವು. “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.”—ಯೆಶಾಯ 33:24; 35:5, 6.
9 ನೀವು ಪ್ರತಿ ಪ್ರಾತಃಕಾಲ ಎಚ್ಚತ್ತುಕೊಳ್ಳುವಾಗ, ಹಿಂದಿನ ದಿನದಲ್ಲಿದದ್ದಕ್ಕಿಂತಲೂ ಹೆಚ್ಚು ಆರೋಗ್ಯವಂತರಾಗಿದ್ದೀರಿ ಎಂದು ತಿಳಿಯುವುದು ನಿಮ್ಮನ್ನು ಪುಳಕಿತಗೊಳಿಸಲಾರದೋ? ಪ್ರತಿ ದಿನ ಗತಿಸಿದಂತೆ, ವೃದ್ಧರು ತಾರುಣ್ಯಭರಿತರಾಗುತ್ತಾ, ಮೂಲದಲ್ಲಿ ಆದಾಮ, ಹವ್ವರು ಆನಂದಿಸಿದಂತಹ ದೇಹ ಮತ್ತು ಮನಸ್ಸಿನ ಪರಿಪೂರ್ಣತೆಗೆ ಕ್ರಮೇಣ ಮುಟ್ಟುತ್ತಿದ್ದಾರೆ ಎಂಬುದಾಗಿ ತಿಳಿಯುವುದು ಅವರಿಗೆ ಸುಖಾನುಭವದ್ದಾಗಿರಲಾರದೋ? ಬೈಬಲಿನ ವಾಗ್ದಾನವು ಇದಾಗಿದೆ: “ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವದು, ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು.” (ಯೋಬ 33:25) ಎಲ್ಲಾ ಕನ್ನಡಕಗಳನ್ನು, ಆಲಿಸುವ ಸಾಧನಗಳನ್ನು, ಕಂಕುಳುಗೋಲುಗಳನ್ನು, ಗಾಲಿ ಕುರ್ಚಿಗಳನ್ನು, ಮತ್ತು ಔಷಧಿಗಳನ್ನು ಕಿತ್ತೆಸೆಯುವುದು ಎಂತಹ ಒಂದು ಪರಮಾನಂದ! ಆಸ್ಪತ್ರೆಗಳು, ವೈದ್ಯರುಗಳು, ಮತ್ತು ಹಲ್ಲು ಚಿಕಿತ್ಸಕರು ಇನ್ನೆಂದಿಗೂ ಬೇಕಾಗಿರರು.
10. ಮರಣಕ್ಕೆ ಏನು ಸಂಭವಿಸಲಿರುವುದು?
10 ಅಂತಹ ತುಡಿಯುತ್ತಿರುವ ಆರೋಗ್ಯದಲ್ಲಿ ಆನಂದಿಸುವ ವ್ಯಕ್ತಿಗಳು ಸಾಯಲು ಬಯಸಲಿಕ್ಕಿಲ್ಲ. ಮತ್ತು ಅವರು ಸಾಯಬೇಕಾಗಿಯೂ ಇರುವುದಿಲ್ಲ, ಏಕೆಂದರೆ ಇನ್ನು ಮುಂದೆ ಅಪರಿಪೂರ್ಣತೆ ಮತ್ತು ಮರಣದ ಹಿಡಿತದೊಳಗೆ ಮಾನವರು ಇರಬೇಕಾಗಿರುವುದಿಲ್ಲ. ಕ್ರಿಸ್ತನು “ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವದು ಅವಶ್ಯ. ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.” “ದೇವರ ಉಚಿತಾರ್ಥ ವರವು . . . ನಿತ್ಯಜೀವ.”—1 ಕೊರಿಂಥ 15:25, 26; ರೋಮಾಪುರ 6:23; ಇದನ್ನೂ ನೋಡಿರಿ ಯೆಶಾಯ 25:8.
11. ನೂತನ ಲೋಕದ ಪ್ರಯೋಜನಗಳನ್ನು ಪ್ರಕಟನೆಯು ಹೇಗೆ ಸಾರಾಂಶಿಸುತ್ತದೆ?
11 ಚಿಂತನೆಯಿರುವ ದೇವರಿಂದ ಪ್ರಮೋದವನದಲ್ಲಿ ಮಾನವ ಕುಟುಂಬಕ್ಕೆ ಹರಿಯುವ ಪ್ರಯೋಜನಗಳನ್ನು ಸಾರಾಂಶಿಸುತ್ತಾ, ಬೈಬಲಿನ ಕೊನೆಯ ಪುಸ್ತಕವು ಹೇಳುವುದು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4.
ಮೃತರು ಹಿಂದಿರುಗುವರು
12. ಪುನರುತ್ಥಾನದ ತನ್ನ ದೇವದತ್ತ ಶಕ್ತಿಯನ್ನು ಯೇಸುವು ಹೇಗೆ ಪ್ರದರ್ಶಿಸಿದನು?
12 ರೋಗಿಗಳನ್ನು ಗುಣಪಡಿಸುವುದಕ್ಕಿಂತ ಮತ್ತು ಕುಂಟರನ್ನು ವಾಸಿಮಾಡುವುದಕ್ಕಿಂತ ಹೆಚ್ಚನ್ನು ಯೇಸುವು ಮಾಡಿದನು. ಅವನು ಸಮಾಧಿಯಿಂದ ಸತ್ತವರನ್ನೂ ಕೂಡ ಹೊರಗೆ ತಂದನು. ಈ ರೀತಿಯಲ್ಲಿ, ದೇವರು ಅವನಿಗೆ ಕೊಟ್ಟ ಪುನರುತ್ಥಾನದ ಆಶ್ಚರ್ಯಕರ ಶಕ್ತಿಯನ್ನು ಅವನು ಪ್ರದರ್ಶಿಸಿದನು. ಯಾರ ಮಗಳು ಸತ್ತು ಹೋಗಿದ್ದಳೋ, ಆ ಮನುಷ್ಯನ ಮನೆಗೆ ಯೇಸುವು ಬಂದ ಸಂದರ್ಭದಲ್ಲಿ ಏನು ಸಂಭವಿಸಿತೆಂದು ನಿಮಗೆ ನೆನಪಿಗೆ ಬರುತ್ತದೋ? ಯೇಸುವು ಮೃತ ಹುಡುಗಿಗೆ ಅಂದದ್ದು: ಮಾರ್ಕ 5:41, 42; ಇದನ್ನೂ ನೋಡಿರಿ ಲೂಕ 7:11-16; ಯೋಹಾನ 11:1-45.
“ಅಮ್ಮಣ್ಣೀ, ಏಳನ್ನುತ್ತೇನೆ.” ಯಾವ ಫಲಿತಾಂಶದೊಂದಿಗೆ? “ಕೂಡಲೆ ಆ ಹುಡುಗಿ ಎದ್ದು ನಡೆದಾಡಿದಳು.” ಅದನ್ನು ನೋಡಿ, ಅಲ್ಲಿ ಜನರು “ಅತ್ಯಾನಂದಪರವಶರಾದರು.” (NW) ಅವರ ಸಂತೋಷವನ್ನು ಅವರು ತಡೆಯಲಾರದೆ ಹೋದರು!—13. ಯಾವ ವಿಧಗಳ ಜನರು ಪುನರುತ್ಥಾನಗೊಳಿಸಲ್ಪಡಲಿರುವರು?
13 ನೂತನ ಲೋಕದಲ್ಲಿ, “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.” (ಅ. ಕೃತ್ಯಗಳು 24:15) ಆ ಸಮಯದಲ್ಲಿ ಸತ್ತವರನ್ನು ಎಬ್ಬಿಸುವ ತನ್ನ ದೇವದತ್ತ ಶಕ್ತಿಯನ್ನು ಯೇಸುವು ಬಳಸುವನು, ಯಾಕಂದರೆ ಅವನಂದಿರುವಂತೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.” (ಯೋಹಾನ 11:25) ಅವನು ಇದನ್ನೂ ಹೇಳಿದನು: “ಸ್ಮರಣೆಯ ಸಮಾಧಿಗಳಲ್ಲಿರುವವರೆಲ್ಲರು [ದೇವರ ಸ್ಮರಣೆಯಲ್ಲಿರುವವರು] ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”—ಯೋಹಾನ 5:28, 29, NW.
14. ಮರಣವು ಇನ್ನು ಮುಂದೆ ಇಲ್ಲದಿರುವದರಿಂದ, ಯಾವ ವಿಷಯಗಳು ಇಲ್ಲದಂತೆ ಮಾಡಲ್ಪಡುವವು?
14 ಮೃತ ವ್ಯಕ್ತಿಗಳು ತಮ್ಮ ಪ್ರಿಯರನ್ನು ಸೇರಲು ಗುಂಪುಗುಂಪಾಗಿ ಬರುವಾಗ, ಭೂವ್ಯಾಪಕ ಸಂತೋಷವು ಮಹತ್ತಾದದ್ದಾಗಿರುವುದು! ಪಾರಾಗುವವರಿಗೆ ದುಃಖವನ್ನು ತರುವ ಮೃತಿ ಪ್ರಕಟನೆಗಳ ಅಂಕಣಗಳು ಇನ್ನು ಮುಂದೆ ಇರವು. ಬದಲಾಗಿ, ಇದಕ್ಕೆ ವಿರುದ್ಧವಾದದ್ದು ಪ್ರಾಯಶಃ ಅಲ್ಲಿರಬಹುದು: ಅವರನ್ನು ಪ್ರೀತಿಸುತ್ತಿದ್ದವರಿಗೆ ಸಂತಸವನ್ನು ತರುವ, ಹೊಸತಾಗಿ ಪುನರುತ್ಥಿತರಾದವರ ಪ್ರಕಟನೆಗಳು. ಹೀಗೆ ಶವಸಂಸ್ಕಾರಗಳು, ಶವಸಂಸ್ಕಾರದ ಚಿತೆಗಳು, ದಹನಭೂಮಿಗಳು, ಯಾ ಸಮಾಧಿಭೂಮಿ ಇನ್ನಿರವು!
ನಿಜವಾಗಿಯೂ ಒಂದು ಶಾಂತಿಭರಿತ ಲೋಕ
15. ಮೀಕನ ಪ್ರವಾದನೆಯು ಪೂರ್ಣಾರ್ಥದಲ್ಲಿ ಹೇಗೆ ನೆರವೇರಿಸಲ್ಪಡಲಿರುವುದು?
15 ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿ ನಿಜ ಶಾಂತಿಯು ದೊರಕಲಿರುವುದು. ಯುದ್ಧಗಳು, ಯುದ್ಧಗಳ ಪ್ರವರ್ಧಕರು, ಮತ್ತು ಶಸ್ತ್ರಾಸ್ತ್ರಗಳ ಉತ್ಪಾದಿಸುವಿಕೆಯು ಗತಕಾಲದ ಸಂಗತಿಗಳಾಗಿರುವುವು. ಯಾಕೆ? ಯಾಕಂದರೆ ವಿಭಾಜಿತ ರಾಷ್ಟ್ರೀಯ, ಗೋತ್ರದ, ಮತ್ತು ಕುಲವರ್ಣೀಯ ಆಸಕ್ತಿಗಳು ಕಾಣೆಯಾಗುವುವು. ಅನಂತರ, ಪೂರ್ಣಾರ್ಥದಲ್ಲಿ, “ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”—ಮೀಕ 4:3.
16. ಯುದ್ಧಗಳು ಅಸಾಧ್ಯವಾಗುವಂತೆ ದೇವರು ಹೇಗೆ ನೋಡಿಕೊಳ್ಳುವನು?
16 ನಿರಂತರ ಯುದ್ಧದ ಮಾನವನ ರಕ್ತ ದಾಹದ ಇತಿಹಾಸದ ನೋಟದಲ್ಲಿ ಇದು ಆಶ್ಚರ್ಯಕರವಾಗಿ ತೋರಬಹುದು. ಆದರೆ ಮಾನವ ಕುಲವು ಮಾನವ ಮತ್ತು ದೆವ್ವ ಆಳಿಕೆಯ ಕೆಳಗೆ ಇದ್ದ ಕಾರಣ ವಿಷಯವು ಹಾಗೆ ಆಗಿದೆ. ನೂತನ ಲೋಕದಲ್ಲಿ, ರಾಜ್ಯಾದಾಳಿಕೆಯ ಕೆಳಗೆ, ಇದು ತಾನೇ ಸಂಭವಿಸಲಿರುವುದು: “ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; . . . ಕೀರ್ತನೆ 46:8, 9.
ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; [ಯುದ್ಧ] ರಥಗಳನ್ನು ದಹಿಸಿಬಿಟ್ಟಿದ್ದಾನೆ.”—17, 18. ನೂತನ ಲೋಕದಲ್ಲಿ, ಮನುಷ್ಯನ ಮತ್ತು ಪ್ರಾಣಿಗಳ ನಡುವೆ ಯಾವ ಸಂಬಂಧವು ಅಸ್ತಿತ್ವದಲ್ಲಿರುವುದು?
17 ಏದೆನಿನಲ್ಲಿದ್ದಂತೆ, ಮನುಷ್ಯನು ಮತ್ತು ಪ್ರಾಣಿಗಳು ಸಮಾಧಾನದಿಂದಿರುವುವು. (ಆದಿಕಾಂಡ 1:28; 2:19) ದೇವರು ಹೇಳುವುದು: “ಆ ಕಾಲದಲ್ಲಿ ನಾನು ನನ್ನ ಜನರಿಗಾಗಿ ಭೂಜಂತುಗಳಿಗೂ ಆಕಾಶಪಕ್ಷಿಗಳಿಗೂ ನೆಲದ ಕ್ರಿಮಿಕೀಟಗಳಿಗೂ ನಿಬಂಧನೆಮಾಡಿ ವಿಧಿಸಿ . . . ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.”—ಹೋಶೇಯ 2:18.
18 ಆ ಸಮಾಧಾನವು ಎಷ್ಟೊಂದು ವ್ಯಾಪಕವಾಗಿರುವುದು? “ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟ ಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡಿಸುವದು.” ಇನ್ನೆಂದಿಗೂ ಪ್ರಾಣಿಗಳು ಮಾನವರಿಗಾಗಲಿ, ಯಾ ಸ್ವತಃ ಅವುಗಳಿಗಾಗಲಿ, ಬೆದರಿಕೆಯವುಗಳಾಗಿರವು. “ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು” ಕೂಡ!—ಯೆಶಾಯ 11:6-9; 65:25.
ಭೂಮಿಯು ಒಂದು ಪ್ರಮೋದವನವಾಗಿ ಮಾರ್ಪಡುವುದು
19. ಭೂಮಿಯು ಏನಾಗಿ ಮಾರ್ಪಡಲ್ಪಡುವುದು?
19 ಇಡೀ ಭೂಮಿಯು ಮಾನವ ಕುಲಕ್ಕಾಗಿ ಒಂದು ಪ್ರಮೋದವನದ ಬೀಡಾಗಿ ಮಾರ್ಪಡಲಿರುವುದು. ಆದುದರಿಂದಲೇ ತನ್ನಲ್ಲಿ ನಂಬಿಕೆಯನ್ನಿಟ್ಟ ಮನುಷ್ಯನೊಬ್ಬನಿಗೆ ಯೇಸು ಹೀಗೆ ವಾಗ್ದಾನಿಸಶಕ್ತನಾದನು: “ನೀನು ನನ್ನ ಸಂಗಡ ಪ್ರಮೋದವನದಲ್ಲಿರುವಿ.” (NW) ಬೈಬಲ್ ಹೇಳುವುದು: “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು. . . . ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು.”—ಲೂಕ 23:43, NW; ಯೆಶಾಯ 35:1, 6.
20. ಮಾನವಕುಲಕ್ಕೆ ಹಸಿವು ಪುನಃ ಎಂದಿಗೂ ಯಾಕೆ ಬಾಧಿಸದು?
20 ದೇವರ ರಾಜ್ಯದ ಕೆಳಗೆ, ಲಕ್ಷಾಂತರ ಮಂದಿಗಳನ್ನು ಇನ್ನೆಂದೂ ಹಸಿವು ಬಾಧಿಸದು. “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ.” “ತೋಟದ ಮರಗಳು ಹಣ್ಣುಬಿಡುವವು; ಹೊಲಗಳು ಒಳ್ಳೆಯ ಬೆಳೆಕೊಡುವವು; ಜನರು ಸ್ವದೇಶದಲ್ಲಿ ನೆಮ್ಮದಿಯಾಗಿರುವರು.”—ಕೀರ್ತನೆ 72:16; ಯೆಹೆಜ್ಕೇಲ 34:27.
21. ಮನೆಯಿಲ್ಲದಿರುವಿಕೆ, ಕೊಳಚೆ ಪ್ರದೇಶಗಳು, ಮತ್ತು ಕೆಟ್ಟ ನೆರೆ ಹೊರೆಗಳಿಗೆ ಏನು ಸಂಭವಿಸಲಿರುವುದು?
21 ಇನ್ನು ಮುಂದೆ ದಾರಿದ್ರ್ಯವಾಗಲಿ, ಮನೆಯಿಲ್ಲದ ಜನರಾಗಲಿ, ಕೊಳಚೆಪ್ರದೇಶಗಳಾಗಲಿ, ಯಾ ಪಾತಕಗಳು ವಿಪರೀತವಾಗಿ ಹಬ್ಬಿರುವ ನೆರೆಹೊರೆಗಳಾಗಲಿ ಅಲ್ಲಿರವು. “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟದ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.” “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—22. ದೇವರಾಳಿಕೆಯ ಆಶೀರ್ವಾದಗಳನ್ನು ಬೈಬಲ್ ಹೇಗೆ ವರ್ಣಿಸುತ್ತದೆ?
22 ಮಾನವರು ಇವೆಲ್ಲಾ ಮತ್ತು ಇದಕ್ಕಿಂತಲೂ ಹೆಚ್ಚಿನ ವಿಷಯಗಳಿಂದ ಪ್ರಮೋದವನದಲ್ಲಿ ಆಶೀರ್ವದಿಸಲ್ಪಡುವರು. ಕೀರ್ತನೆ 145:16 ಹೇಳುವುದು: “ನೀನು [ದೇವರು] ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.” ಬೈಬಲ್ ಪ್ರವಾದನೆಯು ಹೀಗೆ ಘೋಷಿಸುವುದರಲ್ಲೇನೂ ಆಶ್ಚರ್ಯವಿಲ್ಲ: “ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು. . . . ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:11, 29.
ಗತವಿಷಯಗಳನ್ನು ತೊಡೆದುಹಾಕುವುದು
23. ನಾವು ಅನುಭವಿಸಿದ್ದ ಸಂಕಟಗಳೆಲ್ಲವನ್ನು ದೇವರ ರಾಜ್ಯವು ಹೇಗೆ ಇಲ್ಲದಂತೆ ಮಾಡುವುದು?
23 ಗತ ಆರು ಸಾವಿರ ವರ್ಷಗಳಲ್ಲಿ ಮಾನವ ಕುಟುಂಬಕ್ಕೆ ಮಾಡಿದಂತಹ ಎಲ್ಲಾ ಹಾನಿಯನ್ನು ದೇವರ ರಾಜ್ಯದಾಳಿಕೆಯು ತೊಡೆದು ಹಾಕುವುದು. ಆ ಸಮಯದ ಸಂತಸಗಳು ಮಾನವರು ಅನುಭವಿಸಿರುವ ಯಾವುದೇ ಕಷ್ಟಾನುಭವವನ್ನು ಎಷ್ಟೋ ಹೆಚ್ಚಾಗಿ ಮೀರಿಸುವುವು. ಹಿಂದಿನ ಕಷ್ಟಾನುಭವದ ಯಾವುದೇ ಕೆಟ್ಟ ನೆನಪುಗಳು ಜೀವಿತವನ್ನು ಕ್ಷೋಭೆಗೊಳಿಸವು. ಮನುಷ್ಯರ ಪ್ರತಿದಿನದ ಭಕ್ತಿವರ್ಧಕ ಯೋಚನೆಗಳು ಮತ್ತು ಚಟುವಟಿಕೆಗಳು ಕ್ರಮೇಣ ವೇದನಾಮಯ ಜ್ಞಾಪಕಗಳನ್ನು ಅಳಿಸಿಬಿಡಲಿರುವುದು.
24, 25. (ಎ) ಏನು ಸಂಭವಿಸಲಿದೆ ಎಂದು ಯೆಶಾಯನು ಮುನ್ನುಡಿದನು? (ಬಿ) ಗತಕಾಲದ ಕಷ್ಟಾನುಭವಗಳ ಜ್ಞಾಪಕಗಳು ಮಾಜಲ್ಪಡುವುವು ಎಂದು ನಾವು ಯಾಕೆ ನಿಶ್ಚಯದಿಂದಿರಸಾಧ್ಯವಿದೆ?
24 ಚಿಂತನೆಯಿರುವ ದೇವರು ಘೋಷಿಸುವುದು: “ಇಗೋ, ನೂತನಾಕಾಶಮಂಡಲವನ್ನೂ [ಮಾನವಕುಲದ ಮೇಲೆ ಒಂದು ಯೆಶಾಯ 14:7; 65:17, 18.
ನೂತನ ಸ್ವರ್ಗೀಯ ಸರಕಾರ] ನೂತನ ಭೂಮಂಡಲವನ್ನೂ [ನೀತಿಯ ಒಂದು ಮಾನವ ಸಮಾಜ] ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು. ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ.” “ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ, ಹರ್ಷಧ್ವನಿಗೈಯುತ್ತಾರೆ.”—25 ಹೀಗೆ, ಅವನ ರಾಜ್ಯದ ಮೂಲಕ ದೇವರು ಇಷ್ಟು ದೀರ್ಘಕಾಲದ ತನಕ ಬಾಳಿರುವ ಕೆಟ್ಟ ಪರಿಸ್ಥಿತಿಯನ್ನು ಪೂರ್ಣವಾಗಿ ವಿಪರ್ಯಸ್ತಗೊಳಿಸುವನು. ನಮಗಾಗಿ ಅವನು ತೋರಿಸುವ ಮಹಾ ಆಸಕ್ತಿಯಿಂದಾಗಿ ನಿತ್ಯ ನಿರಂತರಕ್ಕೂ ಸುರಿಸಲ್ಪಡುವ ಆಶೀರ್ವಾದಗಳು, ನಮ್ಮ ಗತಕಾಲದಲ್ಲಿ ನಾವು ಪಡೆದಿರುವ ಯಾವುದೇ ಹಾನಿಯ ಪರಿಹಾರಕ್ಕಿಂತ ಬಹಳ ಅಧಿಕ ಪ್ರಮಾಣದ್ದಾಗಿರುವುವು. ನಾವು ಅನುಭವಿಸಿದಂತಹ ಹಿಂದಿನ ತೊಂದರೆಗಳು ಆಗ, ನಾವು ಅದನ್ನು ಎಂದಾದರೂ ನೆನಪಿಸಲು ಯೋಚಿಸಿದಾಗ್ಯೂ, ಮಂದ ಜ್ಞಾಪಕದೊಳಗೆ ಮಾಸಿಹೋಗುವುವು.
26. ಗತಕಾಲದ ಯಾವುದೇ ಕಷ್ಟಾನುಭವಕ್ಕಾಗಿ ಪರಿಹಾರವನ್ನು ದೇವರು ಯಾಕೆ ಒದಗಿಸುವನು?
26 ಈ ಲೋಕದಲ್ಲಿ ನಾವು ಸಹಿಸಿಕೊಂಡಿರಬಹುದಾದ ಕಷ್ಟಾನುಭವಕ್ಕಾಗಿ ದೇವರು ನಮಗೆ ಪರಿಹಾರವನ್ನೊದಗಿಸುವ ರೀತಿ ಆ ವಿಧದ್ದಾಗಿದೆ. ನಾವು ಅಪರಿಪೂರ್ಣರಾಗಿ ಜನಿಸಿದ್ದು ನಮ್ಮ ತಪ್ಪಲ್ಲ ಎಂದು ಅವನಿಗೆ ತಿಳಿದಿದೆ, ಯಾಕಂದರೆ ನಮ್ಮ ಮೊದಲ ಹೆತ್ತವರಿಂದ ನಾವು ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. ಸೈತಾನಿಕ ಲೋಕದಲ್ಲಿ ನಾವು ಹುಟ್ಟಿದ್ದು ನಮ್ಮ ತಪ್ಪಲ್ಲ, ಯಾಕಂದರೆ ಆದಾಮ, ಹವ್ವರು ನಂಬಿಗಸ್ತರಾಗಿರುತ್ತಿದ್ದಲ್ಲಿ, ಅದಕ್ಕೆ ಬದಲಾಗಿ ಪ್ರಮೋದವನವೊಂದರಲ್ಲಿ ನಾವು ಜನಿಸುತ್ತಿದ್ದೆವು. ಆದುದರಿಂದ, ನಮ್ಮನ್ನು ಬಾಧಿಸಿದಂತಹ ಕೆಟ್ಟ ಗತಕಾಲವನ್ನು ದೇವರು ಮಹತ್ತಾದ ಕನಿಕರದಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಸರಿಪಡಿಸಲಿರುವನು.
27. ನೂತನ ಲೋಕದಲ್ಲಿ ಯಾವ ಪ್ರವಾದನೆಗಳು ಅವುಗಳ ಅದ್ಭುತಕರ ನೆರವೇರಿಕೆಯನ್ನು ಕಾಣಲಿರುವುವು?
27 ನೂತನ ಲೋಕದಲ್ಲಿ, ಮಾನವ ಕುಲವು ರೋಮಾಪುರ 8:21, 22 ರಲ್ಲಿ ಮುಂತಿಳಿಸಿದಂತಹ ವಿಮೋಚನೆಯನ್ನು ಅನುಭವಿಸುವುದು: “ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ. ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆಂದು ನಾವು ಬಲ್ಲೆವು.” ಆಗ ಜನರು ಈ ಪ್ರಾರ್ಥನೆಯ ಪೂರ್ಣ ನೆರವೇರಿಕೆಯನ್ನು ಕಾಣಲಿರುವರು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10) ಪ್ರಮೋದವನವಾದ ಭೂಮಿಯ ಅದ್ಭುತಕರ ಪರಿಸ್ಥಿತಿಗಳು ಪರಲೋಕದಲ್ಲಿನ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುವುವು.
[ಅಧ್ಯಯನ ಪ್ರಶ್ನೆಗಳು]
[ಪುಟ 23ರಲ್ಲಿರುವ ಚಿತ್ರಗಳು]
ನೂತನ ಲೋಕದಲ್ಲಿ, ವಯಸ್ಸಾದವರು ತಾರುಣ್ಯದ ಚೈತನ್ಯಕ್ಕೆ ಹಿಂದಿರುಗುವರು
[ಪುಟ 24ರಲ್ಲಿರುವ ಚಿತ್ರ]
ಎಲ್ಲಾ ರೋಗಗಳು ಮತ್ತು ಅಸಾಮರ್ಥ್ಯಗಳು ನೂತನ ಲೋಕದಲ್ಲಿ ಅಳಿಸಲ್ಪಡುವುವು
[ಪುಟ 25ರಲ್ಲಿರುವ ಚಿತ್ರ]
ನೂತನ ಲೋಕದಲ್ಲಿ, ಮೃತರು ಜೀವಕ್ಕೆ ಪುನರುತ್ಥಾನಗೊಳಿಸಲ್ಪಡುವರು
[ಪುಟ 26ರಲ್ಲಿರುವ ಚಿತ್ರ]
‘ಅವರು ಯುದ್ಧವನ್ನು ಇನ್ನು ಮುಂದೆ ಕಲಿಯರು’
[ಪುಟ 27ರಲ್ಲಿರುವ ಚಿತ್ರಗಳು]
ಮಾನವರು ಮತ್ತು ಪ್ರಾಣಿಗಳ ಮಧ್ಯೆ ಪ್ರಮೋದವನದಲ್ಲಿ ಪೂರ್ಣ ಸಮಾಧಾನವಿರುವುದು
[ಪುಟ 27ರಲ್ಲಿರುವ ಚಿತ್ರ]
‘ದೇವರು ತನ್ನ ಕೈದೆರೆದು ಜೀವಿಸುವವರೆಲ್ಲರ ಇಷ್ಟವನ್ನು ತೃಪ್ತಿಗೊಳಿಸುವನು’
[ಪುಟ 28ರಲ್ಲಿರುವ ಚಿತ್ರ]
ದೇವರ ರಾಜ್ಯವು ನಾವು ಸಹಿಸಿಕೊಂಡಂತಹ ಎಲ್ಲಾ ಕಷ್ಟಾನುಭವಗಳಿಗಿಂತ ಅಧಿಕ ಪ್ರಮಾಣದ ಪರಿಹಾರವನ್ನು ಒದಗಿಸಲಿರುವುದು