ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಕಷ್ಟಾನುಭವವನ್ನು ಅನುಮತಿಸಿರುವುದರ ಕಾರಣ

ದೇವರು ಕಷ್ಟಾನುಭವವನ್ನು ಅನುಮತಿಸಿರುವುದರ ಕಾರಣ

ಭಾಗ 6

ದೇವರು ಕಷ್ಟಾನುಭವವನ್ನು ಅನುಮತಿಸಿರುವುದರ ಕಾರಣ

1, 2. ದೇವರು ಅವರಿಗೆ ನೀಡಿದ ಉತ್ತಮ ಆರಂಭವನ್ನು ನಮ್ಮ ಮೊದಲ ಹೆತ್ತವರು ಹೇಗೆ ಹಾಳುಮಾಡಿಕೊಂಡರು?

ಆದ ತಪ್ಪಾದರೂ ಏನು? ಏದೆನ್‌ ಪ್ರಮೋದವನದಲ್ಲಿ ನಮ್ಮ ಮೊದಲ ಹೆತ್ತವರಿಗೆ ದೇವರು ನೀಡಿದ ಉತ್ತಮ ಆರಂಭವನ್ನು ಹಾಳುಗೆಡವಿದ ಯಾವುದು ಸಂಭವಿಸಿತು? ಪ್ರಮೋದ ವನದ ಶಾಂತಿ ಮತ್ತು ಸಾಮರಸ್ಯದ ಬದಲಾಗಿ, ಸಾವಿರಾರು ವರ್ಷಗಳಿಂದ ದುಷ್ಟತನ ಮತ್ತು ಕಷ್ಟಾನುಭವವು ಸಲುವಳಿಯಲ್ಲಿರುವುದು ಯಾಕೆ?

2 ಕಾರಣವೇನಂದರೆ ಆದಾಮ, ಹವ್ವರು ಅವರ ಇಚ್ಛಾ ಸ್ವಾತಂತ್ರ್ಯವನ್ನು ದುರುಪಯೋಗಿಸಿದರು. ದೇವರ ಮತ್ತು ಅವನ ನಿಯಮಗಳ ಹೊರತಾಗಿ ಸಫಲವಾಗಲು ಅವರು ಸೃಷ್ಟಿಸಲ್ಪಟ್ಟಿರಲ್ಲಿಲ ಎಂಬ ವಾಸ್ತವಾಂಶದ ನೋಟವನ್ನು ಅವರು ಕಳೆದು ಕೊಂಡರು. ಇದು ಅವರ ಜೀವಿತ​ಗಳನ್ನು ಅಭಿವೃದ್ಧಿಗೊಳಿಸುವುದೆಂದು ಯೋಚಿಸಿ, ಅವರು ದೇವರಿಂದ ಸ್ವತಂತ್ರರಾಗಲು ನಿರ್ಣಯಿಸಿದರು. ಈ ರೀತಿಯಲ್ಲಿ ಇಚ್ಛಾ ಸ್ವಾತಂತ್ರ್ಯದ ದೇವ-ನೇಮಿತ ಮಿತಿಗಳ ಹೊರಗೆ ಅವರು ಹೆಜ್ಜೆಯನ್ನಿಟ್ಟರು.—ಆದಿಕಾಂಡ, ಅಧ್ಯಾಯ 3.

ವಿಶ್ವ ಸಾರ್ವಭೌಮತೆಯ ವಿವಾದಾಂಶ

3-5. ಆದಾಮ, ಹವ್ವರನ್ನು ದೇವರು ಕೇವಲ ನಾಶಮಾಡಿ, ಪುನಃ ಯಾಕೆ ​ಆರಂಭಿಸಲಿಲ್ಲ?

3 ದೇವರು ಆದಾಮ, ಹವ್ವರನ್ನು ಕೇವಲ ನಾಶಮಾಡಿ, ಇನ್ನೊಂದು ಮಾನವ ಜೋಡಿಯೊಂದಿಗೆ ಪುನಃ ಯಾಕೆ ಆರಂಭಿಸಲಿಲ್ಲ? ಯಾಕಂದರೆ ಅವನ ವಿಶ್ವ ಸಾರ್ವಭೌಮತೆ, ಅವನ ಪರಭಾರೆ ಮಾಡಲಾಗದ ಆಳುವ ಹಕ್ಕು, ಪಂಥಾಹ್ವಾನಕ್ಕೊಡ್ಡಲ್ಪಟ್ಟಿತ್ತು.

4 ಪ್ರಶ್ನೆಯೇನಾಗಿತ್ತೆಂದರೆ: ಆಳಲು ಹಕ್ಕು ಯಾರಿಗೆ ಇದೆ, ಮತ್ತು ಯಾರ ಆಳಿಕೆಯು ಯೋಗ್ಯವಾದದ್ದು? ದೇವರು ಸರ್ವಶಕ್ತನೂ, ಎಲ್ಲಾ ಜೀವಿಗಳ ನಿರ್ಮಾಣಿಕನೂ ಆಗಿದುದ್ದರಿಂದ, ಅವರ ಮೇಲೆ ಆಳಿಕೆ ನಡಿಸಲು ಅವನಿಗೆ ಹಕ್ಕು ಇತ್ತು. ಅವನು ಸರ್ವ-ವಿವೇಕಿಯಾಗಿದುದ್ದರಿಂದ, ಅವನ ಪ್ರಭುತ್ವವು ಎಲ್ಲಾ ಜೀವಿಗಳಿಗೆ ಅತ್ಯುತ್ತಮವಾಗಿದೆ. ಆದರೆ ಈಗ ದೇವರ ಆಳಿಕೆಯು ಪಂಥಾಹ್ವಾನಕ್ಕೊಡ್ಡಲ್ಪಟ್ಟಿತ್ತು. ಅಲ್ಲದೆ, ಅವನ ಸೃಷ್ಟಿಯಾದ ಮಾನವನಲ್ಲಿ ಏನಾದರೊಂದು ದೋಷ ಇತ್ತೋ? ಮಾನವ ಸಮಗ್ರತೆಯ ಪ್ರಶ್ನೆಯು ಹೇಗೆ ಒಳಗೂಡಿತ್ತು ಎಂಬುದನ್ನು ನಾವು ​ಅನಂತರ ಪರೀಕ್ಷಿಸುವೆವು.

5 ದೇವರಿಂದ ಮನುಷ್ಯನು ಸ್ವತಂತ್ರನಾಗುವುದರ ಮೂಲಕ, ಇನ್ನೊಂದು ಪ್ರಶ್ನೆಯು ಧ್ವನಿತವಾಯಿತು: ದೇವರಿಂದ ಆಳಲ್ಪಡದಿದ್ದರೆ, ಮಾನವರು ಹೆಚ್ಚು ಉತ್ತಮವಾಗಿರುವುದನ್ನು ಸಾಧಿಸಬಲ್ಲರೋ? ನಿರ್ಮಾಣಿಕನಿಗೆ ಖಂಡಿತವಾಗಿಯೂ ಉತ್ತರ ತಿಳಿದಿತ್ತು, ಆದರೆ ಮಾನವರು ಇದನ್ನು ಕಂಡುಕೊಳ್ಳುವ ನಿಶ್ಚಿತ ಮಾರ್ಗವು, ಅವರು ಬಯಸಿದ್ದ ಪೂರ್ಣಮೊತ್ತದ ಸ್ವಾತಂತ್ರ್ಯವನ್ನು ಅವರಿಗೆ ಅನುಮತಿಸುವುದೇ ಆಗಿತ್ತು. ಅವರ ಸ್ವಂತ ಇಚ್ಛಾ ಸ್ವಾತಂತ್ರ್ಯದಿಂದ ಆ ಪಥವನ್ನು ಅವರು ಆರಿಸಿದರು, ಆದುದರಿಂದ ದೇವರು ಅದನ್ನು ಅನುಮತಿಸಿದನು.

6, 7. ಇಷ್ಟು ದೀರ್ಘಕಾಲದ ತನಕ ದೇವರು ಮಾನವರಿಗೆ ಪೂರ್ಣಮೊತ್ತದ ಸ್ವಾತಂತ್ರ್ಯವನ್ನು ಯಾಕೆ ಅನುಮತಿಸಿದ್ದಾನೆ?

6 ಪೂರ್ಣಮೊತ್ತದ ಸ್ವಾತಂತ್ರ್ಯದ ಅನುಭವಪಡೆಯಲು ಮಾನವರಿಗೆ ಸಾಕಷ್ಟು ಸಮಯವನ್ನು ಅನುಮತಿಸುವ ಮೂಲಕ, ದೇವರು ಸಾರ್ವಕಾಲಿಕವಾಗಿ, ಮಾನವರು ದೇವರ ಆಳಿಕೆಯ ಕೆಳಗೆ ಹೆಚ್ಚು ಉತ್ತಮವಾಗಿರುವರೋ, ತಮ್ಮ ಸ್ವಂತದ್ದರ ಕೆಳಗೋ ಎಂದು ಸ್ಥಾಪಿಸಲಿದ್ದನು. ಮತ್ತು ಅನುಮತಿಸಲ್ಪಟ್ಟ ಸಮಯವು, ಮಾನವರು ಯಾವುದನ್ನು ತಮ್ಮ ರಾಜಕೀಯ, ಕೈಗಾರಿಕಾ, ವೈಜ್ಞಾನಿಕ, ಮತ್ತು ವೈದಕೀಯ ಸಾಧನೆಗಳ ಗರಿಷ್ಠತಮವೆಂದು ಎಣಿಸುತ್ತಾರೋ, ಅದಕ್ಕೆ ತಲುಪಲು ಅವರಿಗೆ ಸಾಧ್ಯವಾಗುವಷ್ಟು ದೀರ್ಘಕಾಲವಾಗಿರಬೇಕು.

7 ಆದಕಾರಣ, ದೇವರಿಂದ ಸ್ವತಂತ್ರವಾಗಿರುವ ಮಾನವನಾಳಿಕೆಯು ಜಯಪ್ರದವಾಗುವುದೋ ಇಲ್ಲವೋ ಎಂಬುದನ್ನು ಯಾವುದೇ ಸಂದೇಹವಿಲ್ಲದೆ ತೋರಿಸಲು, ದೇವರು ನಮ್ಮ ದಿನಗಳ ತನಕ ಮಾನವನಿಗೆ ಒಂದು ಸ್ವೇಚ್ಛಾ ಸ್ವಾತಂತ್ರ್ಯವನ್ನು ಅನುಮತಿಸಿದ್ದಾನೆ. ಹೀಗೆ ಮಾನವನು ದಯೆ ಮತ್ತು ಕ್ರೂರತನದ ನಡುವೆ, ಪ್ರೀತಿ ಮತ್ತು ದ್ವೇಷದ ನಡುವೆ, ನೀತಿ ಮತ್ತು ಅನೀತಿಯ ನಡುವೆ ಆರಿಸಲು ಶಕ್ತನಾಗಿದ್ದಾನೆ. ಆದರೆ ಆತನ ಆಯ್ಕೆಯ ಪರಿಣಾಮಗಳನ್ನು ಕೂಡ ಎದುರಿಸುವಂತೆ ಮಾಡಲ್ಪಟ್ಟಿದ್ದಾನೆ: ಒಳ್ಳೇತನ ಮತ್ತು ಶಾಂತಿ ಯಾ ದುಷ್ಟತನ ಮತ್ತು ಕಷ್ಟಾನುಭವ.

ಆತ್ಮ ಜೀವಿಗಳ ದಂಗೆ

8, 9. (ಎ) ಆತ್ಮ ಲೋಕದಲ್ಲಿ ದಂಗೆಯು ಹೇಗೆ ಸ್ಫೋಟಿಸಿತು? (ಬಿ) ಆದಾಮ, ಹವ್ವರ ಹೊರತಾಗಿ, ಸೈತಾನನು ಬೇರೆ ಯಾರನ್ನು ದಂಗೆಯೇಳುವಂತೆ ಪ್ರಭಾವಿಸಿದನು?

8 ಗಮನಿಸಬೇಕಾದ ಇನ್ನೊಂದು ಅಂಶ ಅಲ್ಲಿದೆ. ದೇವರ ಪ್ರಭುತ್ವದ ವಿರುದ್ಧವಾಗಿ ದಂಗೆಯೆದ್ದವರಲ್ಲಿ ಕೇವಲ ನಮ್ಮ ಮೂಲ ಹೆತ್ತವರು ಮಾತ್ರವೇ ಇದ್ದದ್ದಲ್ಲ. ಆದರೆ ಆ ಸಮಯದಲ್ಲಿ ಬೇರೆ ಯಾರು ಅಸ್ತಿತ್ವದಲ್ಲಿದ್ದರು? ಆತ್ಮ ಜೀವಿಗಳು. ದೇವರು ಮಾನವರನ್ನು ಸೃಷ್ಟಿಸುವ ಮೊದಲು, ಅವನು ಒಂದು ಉಚ್ಚಮಟ್ಟದ ಜೀವ ರೂಪವನ್ನು, ಪರಲೋಕ ಕ್ಷೇತ್ರದಲ್ಲಿ ಜೀವಿಸಲು ಬಹು ಸಂಖ್ಯಾತ ದೇವದೂತರುಗಳನ್ನು ಸೃಷ್ಟಿಸಿದನು. ಅವರು ಕೂಡ ಇಚ್ಛಾ ಸ್ವಾತಂತ್ರ್ಯದೊಂದಿಗೆ ಮತ್ತು ದೇವರ ಪ್ರಭುತ್ವಕ್ಕೆ ಅಧೀನರಾಗಿರುವ ಆವಶ್ಯಕತೆಯೊಂದಿಗೂ ಸೃಷ್ಟಿಸಲ್ಪಟ್ಟರು.—ಯೋಬ 38:7; ಕೀರ್ತನೆ 104:4; ಪ್ರಕಟನೆ 5:11.

9 ದಂಗೆಯು ಮೊದಲು ಆತ್ಮ ಕ್ಷೇತ್ರದಲ್ಲಿ ಸ್ಫೋಟಿಸಿತು ಎಂದು ಬೈಬಲ್‌ ತೋರಿಸುತ್ತದೆ. ಒಬ್ಬ ಆತ್ಮ ಜೀವಿಯು ಪೂರ್ಣಮೊತ್ತದ ಸ್ವಾತಂತ್ರ್ಯವನ್ನು ಬಯಸಿದನು. ಮಾನವರು ಅವನನ್ನು ಆರಾಧಿಸಲು ಕೂಡ ಅವನು ಬಯಸಿದನು. (ಮತ್ತಾಯ 4:8, 9) ಈ ದಂಗೆಕೋರ ಆತ್ಮ ಜೀವಿಯು ಆದಾಮ, ಹವ್ವರನ್ನು,—ಅವರಿಂದ ದೇವರು ಉತ್ತಮವಾದ ಯಾವುದೋ ಒಂದನ್ನು ತಡೆಹಿಡಿದಿದ್ದಾನೆ ಎಂದು ಸುಳ್ಳಾಗಿ ವಾದಿಸುತ್ತಾ—ದಂಗೆಯೇಳಲು ಪ್ರಭಾವಿಸುವ ಒಂದು ಅಂಶವಾದನು. (ಆದಿಕಾಂಡ 3:1-5) ಆದುದರಿಂದ, ಅವನು ಪಿಶಾಚ (ಅಪವಾದಕನು) ಮತ್ತು ಸೈತಾನ (ಪ್ರತಿಭಟಿಸುವವನು) ಎಂದು ಕರೆಯಲ್ಪಟ್ಟನು. ತದನಂತರ, ಇತರ ಆತ್ಮ ಜೀವಿಗಳು ದಂಗೆಯೇಳುವಂತೆ ಅವನು ಪ್ರೇರಿಸಿದನು. ಅವರು ದೆವ್ವಗಳೆಂದು ಪ್ರಸಿದ್ಧರಾದರು.—ಧರ್ಮೋಪದೇಶಕಾಂಡ 32:17; ಪ್ರಕಟನೆ 12:9; 16:14.

10. ಮಾನವರ ಮತ್ತು ಆತ್ಮ ಜೀವಿಗಳ ದಂಗೆಯಿಂದ ಏನು ಫಲಿಸಿತು?

10 ದೇವರ ವಿರುದ್ಧ ದಂಗೆಯೇಳುವುದರ ಮೂಲಕ, ಮಾನವರು ತಮ್ಮನ್ನು ಸೈತಾನನ ಮತ್ತು ಅವನ ದೆವ್ವಗಳ ಪ್ರಭಾವದೊಳಗೆ ಅರ್ಪಿಸಿದರು. ಆದುದರಿಂದಲೇ ಬೈಬಲ್‌ ಸೈತಾನನನ್ನು “ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದ” “ಈ ಪ್ರಪಂಚದ ದೇವರು” ಎಂದು ಕರೆಯುತ್ತದೆ. ಆದಕಾರಣ, ದೇವರ ವಾಕ್ಯವು ಹೇಳುವು​ದೇನಂದರೆ “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ.” ಯೇಸುವು ಸ್ವತಃ ಸೈತಾನನನ್ನು“ಇಹಲೋಕಾಧಿಪತಿ” ಎಂದು ಕರೆದಿದ್ದಾನೆ.—2 ಕೊರಿಂಥ 4:4; 1 ಯೋಹಾನ 5:19; ಯೋಹಾನ 12:31.

ಎರಡು ವಿವಾದಾಂಶಗಳು

11. ಯಾವ ಇನ್ನೊಂದು ವಿವಾದಾಂಶದ ಕುರಿತು ಸೈತಾನನು ದೇವರನ್ನು ಪಣಕ್ಕೊಡ್ಡಿದನು?

11 ದೇವರನ್ನು ಪಣಕ್ಕೊಡ್ಡಿದ ಇನ್ನೊಂದು ವಿವಾದಾಂಶವನ್ನು ಸೈತಾನನು ಎಬ್ಬಿಸಿದನು. ಮಾನವನನ್ನು ಸೃಷ್ಟಿಸಿದ ರೀತಿಯಲ್ಲಿ ದೇವರು ದೋಷಿಯಾಗಿದ್ದಾನೆ ಮತ್ತು ಒತ್ತಡದ ಕೆಳಗೆ ಹಾಕಲ್ಪಟ್ಟಾಗ ಯಾವನೂ ಯೋಗ್ಯವಾದುದದ್ದನ್ನು ಮಾಡಲು ಆಶಿಸುವುದಿಲ್ಲ ಎಂದು ಅವನು ಕಾರ್ಯತಃ ದೇವರನ್ನು ಆಪಾದಿಸಿದನು. ವಾಸ್ತವದಲ್ಲಿ, ಪರೀಕ್ಷೆಯ ಕೆಳಗೆ ಅವರು ಅವನನ್ನು ಶಪಿಸುವರು ಸಹ ಎಂದು ಅವನು ವಾದಿಸಿದನು. (ಯೋಬ 2:1-5) ಈ ರೀತಿಯಲ್ಲಿ, ಸೈತಾನನು ಮಾನವ ಸೃಷ್ಟಿಯ ಸಮಗ್ರತೆಯ ಪ್ರಶ್ನೆಯನ್ನೆಬ್ಬಿಸಿದನು.

12-14. ಸೈತಾನನು ಎಬ್ಬಿಸಿದ ಎರಡು ವಿವಾದಾಂಶಗಳ ಕುರಿತಾದ ಸತ್ಯತೆಯನ್ನು ಸಮಯವು ಹೇಗೆ ಪ್ರಕಟಿಸಲಿರುವುದು?

12 ಆದಕಾರಣ, ಈ ವಿವಾದಾಂಶ ಹಾಗೂ ದೇವರ ಸಾರ್ವಭೌಮತೆಯ ವಿವಾದಾಂಶವು ಹೇಗೆ ಬಗೆಹರಿಸಲ್ಪಡುತ್ತದೆ ಎಂದು ನೋಡಲು ಬುದ್ಧಿಶಕ್ತಿಯ ಎಲ್ಲಾ ಜೀವಿಗಳಿಗೆ ಬೇಕಾಗುವಷ್ಟು ಸಮಯವನ್ನು ದೇವರು ಅನುಮತಿಸಿದ್ದಾನೆ. (ಹೋಲಿಸಿರಿ ವಿಮೋಚನಕಾಂಡ 9:16.) ಮಾನವ ಇತಿಹಾಸದ ಸಂಭಾವ್ಯ ಅನುಭವವು ಈ ಎರಡು ವಿವಾದಾಂಶ​ಗಳ ಕುರಿತಾದ ಸತ್ಯತೆಯನ್ನು ಪ್ರಕಟಿಸಲಿರುವುದು.

13 ಮೊತ್ತಮೊದಲಾಗಿ, ವಿಶ್ವ ಸಾರ್ವಭೌಮತೆಯ ​ವಿವಾದಾಂಶದ, ದೇವರ ಆಳಿಕೆಯ ಯುಕ್ತತೆಯ, ಕುರಿತಾಗಿ ಸಮಯವು ಏನನ್ನು ಪ್ರಕಟಿಸಲಿರುವುದು? ದೇವರಿಗಿಂತಲೂ ಉತ್ತಮವಾಗಿ ಮಾನವರು ಸ್ವತಃ ತಾವಾಗಿಯೇ ಆಳಿಕೊಳ್ಳಶಕ್ತರೋ? ದೇವರ ಹೊರತಾಗಿರುವ ಯಾವುದೇ ಒಂದು ಮಾನವನಾಳಿಕೆಯ ವ್ಯವಸ್ಥೆಯು ಯುದ್ಧ, ಪಾತಕ, ಮತ್ತು ಅನ್ಯಾಯದಿಂದ ಮುಕ್ತವಾಗಿರುವ ಒಂದು ಸಂತೋಷದ ಲೋಕವನ್ನು ತರಲಿರುವುದೋ? ಯಾವುದೇ ಒಂದು ದಾರಿದ್ರ್ಯವನ್ನು ನಿರ್ಮೂಲಗೊಳಿಸಿ, ಎಲ್ಲರಿಗೂ ಏಳಿಗೆಯನ್ನು ಒದಗಿಸಲಿರುವುದೋ? ಯಾವುದೇ ಒಂದು ರೋಗ, ವೃದ್ಧಾಪ್ಯ, ಮತ್ತು ಮರಣವನ್ನು ಜಯಿಸಶಕ್ತವಾಗಿದೆಯೊ? ದೇವರ ಆಳಿಕೆಯು ಅದೆಲ್ಲವನ್ನೂ ಮಾಡಲು ರಚಿಸಲ್ಪಟ್ಟಿದೆ.—ಆದಿಕಾಂಡ 1:26-31.

14 ಎರಡನೆಯ ವಿವಾದಾಂಶದ ಸಂಬಂಧದಲ್ಲಿ, ಮಾನವ ಸೃಷ್ಟಿಯ ಮೂಲ್ಯತೆಯ ಕುರಿತು ಸಮಯ ಏನನ್ನು ತೋರಿಸಲಿರುವುದು? ಮಾನವರನ್ನು ಸೃಷ್ಟಿಸಿದಂತಹ ರೀತಿಯಲ್ಲಿ ದೇವರದ್ದೇನಾದರೂ ದೋಷವಿತ್ತೇ? ಪರೀಕ್ಷೆಯ ಕೆಳಗೆ ಅವರಲ್ಲಿ ಯಾವನಾದರೂ ಯೋಗ್ಯವಾದದ್ದನ್ನು ಮಾಡುವನೋ? ಸ್ವತಂತ್ರ ಮಾನವ ಆಳಿಕೆಗಿಂತ ಹೆಚ್ಚು ದೇವರ ಆಳಿಕೆಯನ್ನು ಅವರು ಆಶಿಸುತ್ತಾರೆ ಎಂದು ಯಾವ ಜನರಾದರೂ ತೋರಿಸುವರೊ?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ಸಾಧನೆಗಳ ಗರಿಷ್ಠ ಮಟ್ಟಕ್ಕೆ ಬರುವಂತೆ ಮಾನವರಿಗೆ ದೇವರು ಸಮಯವನ್ನು ಅನುಮತಿಸಿದ್ದಾನೆ

[ಕೃಪೆ]

Shuttle: Based on NASA photo