ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?
ಭಾಗ 1
ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?
1, 2. ದೇವರ ಕುರಿತಾಗಿ ಜನರು ಯಾವ ಪ್ರಶ್ನೆಯನ್ನು ಕೇಳುತ್ತಾರೆ, ಮತ್ತು ಯಾಕೆ?
ನಿಮ್ಮ ಜೀವಿತದಲ್ಲಿ ಯಾವಾಗಲಾದರೊಮ್ಮೆ, ನೀವು ಹೀಗೆ ಪ್ರಶ್ನಿಸಿಕೊಂಡಿರಬಹುದು: ‘ನಮ್ಮ ಕುರಿತಾಗಿ ನಿಜವಾಗಿಯೂ ಚಿಂತಿಸುವ ದೇವರೊಬ್ಬನಿರುವುದಾದರೆ, ಅವನು ಇಷ್ಟೊಂದು ಕಷ್ಟಾನುಭವವನ್ನು ಯಾಕೆ ಅನುಮತಿಸಿರುತ್ತಾನೆ?’ ನಾವೆಲ್ಲರೂ ಕಷ್ಟಾನುಭವವನ್ನು ಅನುಭವಿಸಿರುತ್ತೇವೆ ಯಾ ಹಾಗೆ ಅನುಭವಿಸಿರುವ ಯಾರಾದರೊಬ್ಬರ ಪರಿಚಯ ನಮಗಿದೆ.
2 ಖಂಡಿತವಾಗಿಯೂ, ಇತಿಹಾಸದಲ್ಲೆಲ್ಲಾ ಜನರು ಯುದ್ಧ, ಕ್ರೌರ್ಯ, ಪಾತಕ, ಅನ್ಯಾಯ, ದಾರಿದ್ರ್ಯ, ಅನಾರೋಗ್ಯ, ಮತ್ತು ಪ್ರಿಯರ ಮರಣದ ನೋವು ಮತ್ತು ಹೃದಯ ಬೇನೆಯಿಂದ ನರಳಿರುತ್ತಾರೆ. ನಮ್ಮ ಇಪ್ಪತ್ತನೆಯ ಶತಮಾನವೊಂದರಲ್ಲಿಯೇ, ಯುದ್ಧಗಳು ಹತ್ತು ಕೋಟಿಗಳಿಗಿಂತಲೂ ಅಧಿಕ ಜನರನ್ನು ಕೊಂದಿವೆ. ಇತರ ಕೋಟಿಗಟ್ಟಲೆ ಜನರು ಘಾಸಿಗೊಂಡಿದ್ದಾರೆ ಯಾ ತಮ್ಮ ಮನೆ ಮತ್ತು ಸೊತ್ತುಗಳನ್ನು ಕಳೆದು ಕೊಂಡಿರುತ್ತಾರೆ. ನಮ್ಮ ಸಮಯದಲ್ಲಿ ಅಷ್ಟೊಂದು ಬಹಳ ಘೋರವಾದ ಸಂಗತಿಗಳು ಸಂಭವಿಸಿದ್ದು, ಜನರಲ್ಲಿ ಅಗಣಿತ ಸಂಖ್ಯಾತರಿಗೆ ಮಹಾ ದುಃಖ, ಹೆಚ್ಚಿನ ಕಣ್ಣೀರು, ಮತ್ತು ಆಶಾರಾಹಿತ್ಯದ ಭಾವನೆಯನ್ನು ಫಲಿಸಿದೆ.
3, 4. ಕಷ್ಟಾನುಭವದ ದೇವರ ಅನುಮತಿಸುವಿಕೆಯ ಕುರಿತಾಗಿ ಅನೇಕರು ಏನು ಎಣಿಸುತ್ತಾರೆ?
3 ಕೆಲವರು ಕಹಿ ಮನೋಭಾವದವರಾಗುತ್ತಾರೆ ಮತ್ತು ದೇವರೊಬ್ಬನು ಇರುವುದಾದರೆ, ಅವನು ನಿಜವಾಗಿಯೂ ನಮ್ಮ ಕುರಿತಾಗಿ ಚಿಂತಿಸುವುದಿಲ್ಲವೆಂದು ಎಣಿಸುತ್ತಾರೆ. ಯಾ ದೇವರೊಬ್ಬನು ಇಲ್ಲವೆಂಬುದಾಗಿಯೂ ಕೂಡ ಅವರು ಭಾವಿಸಬಹುದು. ಉದಾಹರಣೆಗೆ, ಮೊದಲನೆಯ ಲೋಕ ಯುದ್ಧದಲ್ಲಿ ಕುಲವರ್ಣೀಯ ಹಿಂಸಾಚಾರದಿಂದಾಗಿ ಮಿತ್ರರ ಮತ್ತು ಕುಟುಂಬದ ಮರಣದಿಂದ ಕಷ್ಟಾನುಭವಿಸಿದ ಮನುಷ್ಯನೊಬ್ಬನು ಪ್ರಶ್ನಿಸಿದ್ದು: “ನಮಗೆ ಅವನ ಆವಶ್ಯಕತೆ ಇದ್ದಾಗ, ದೇವರು ಎಲಿದ್ದನು?” ಎರಡನೆಯ ಲೋಕ ಯುದ್ಧದಲ್ಲಿ ಹಿಟ್ಲರನ ಅನುಯಾಯಿ [ನಾಟ್ಸೀ] ಗಳಿಂದ ಮಾಡಲ್ಪಟ್ಟ ಲಕ್ಷಗಟ್ಟಲೆ ಕೊಲೆಗಳಿಂದ ಪಾರಾದ ಇನ್ನೊಬ್ಬನು, ಅವನು ನೋಡಿದ ಕಷ್ಟಾನುಭವದಿಂದ ಎಷ್ಟೊಂದು ದುಃಖಿತನಾಗಿದ್ದನೆಂದರೆ, ಅವನಂದದ್ದು: “ನೀವು ನನ್ನ ಎದೆಗುಂಡಿಗೆಯನ್ನು ನೆಕ್ಕುವುದಾದರೆ, ಅದು ನಿಮಗೆ ವಿಷಕಾರಿಯಾಗಬಲ್ಲದು.”
4 ಹೀಗೆ, ಒಬ್ಬ ಒಳ್ಳೆಯ ದೇವರು ಕೆಟ್ಟ ಸಂಗತಿಗಳು ಸಂಭವಿಸುವಂತೆ ಯಾಕೆ ಅನುಮತಿಸುತ್ತಾನೆ ಎಂದು ಅನೇಕ ಜನರು ಅರ್ಥೈಸಿಕೊಳ್ಳಲಾರರು. ನಮ್ಮ ವಿಷಯವಾಗಿ ಅವನು ನಿಜವಾಗಿಯೂ ಚಿಂತಿಸುತ್ತಾನೋ ಯಾ ಅವನು ಅಸ್ತಿತ್ವದಲ್ಲಿಯೇ ಇದ್ದಾನೋ ಎಂದವರು ಪ್ರಶ್ನಿಸುತ್ತಾರೆ. ಮತ್ತು ಕಷ್ಟಾನುಭವವು ಮಾನವ ಅಸ್ತಿತ್ವದ ಭಾಗವಾಗಿ ಯಾವಾಗಲೂ ಇರುವುದು ಎಂದು ಅವರಲ್ಲಿ ಅನೇಕರು ಎಣಿಸುತ್ತಾರೆ.
ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್ ಭಾಷಾಂತರವು ‘ಇಂಡಿಯಾ ಸಿಲೋನ್ ದೇಶಗಳ ಸತ್ಯವೇದ ಸಂಘದ ಕನ್ನಡ ಬೈಬಲ್’ ಆಗಿದೆ
[ಅಧ್ಯಯನ ಪ್ರಶ್ನೆಗಳು]
[ಪುಟ 2, 3ರಲ್ಲಿರುವ ಚಿತ್ರ]
ಕಷ್ಟಾನುಭವದಿಂದ ಮುಕ್ತವಾಗಿರುವ ಒಂದು ನೂತನ ಲೋಕ ಹತ್ತಿರದಲ್ಲಿದೆಯೋ?