ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರೊಬ್ಬನಿದ್ದಾನೆಂದು ನಾವು ತಿಳಿಯಬಲ್ಲ ವಿಧ

ದೇವರೊಬ್ಬನಿದ್ದಾನೆಂದು ನಾವು ತಿಳಿಯಬಲ್ಲ ವಿಧ

ಭಾಗ 3

ದೇವರೊಬ್ಬನಿದ್ದಾನೆಂದು ನಾವು ತಿಳಿಯಬಲ್ಲ ವಿಧ

1, 2. ದೇವರೊಬ್ಬನು ಇದ್ದಾನೋ ಎಂಬುದನ್ನು ನಿರ್ಧರಿಸಲು ಯಾವ ಸೂತ್ರವು ನಮಗೆ ಸಹಾಯಮಾಡುತ್ತದೆ?

ದೇವರೊಬ್ಬನು ಇದ್ದಾನೊ ಎಂಬುದನ್ನು ನಿರ್ಧರಿಸುವ ಒಂದು ಮಾರ್ಗವೆಂದರೆ, ಸುಸ್ಥಾಪಿತವಾಗಿರುವ ಈ ಸೂತ್ರವನ್ನು ಅನ್ವಯಿಸುವುದರ ಮೂಲಕ: ಏನು ಉಂಟುಮಾಡಲ್ಪಟ್ಟಿದೆಯೋ ಅದನ್ನು ರಚಿಸುವವನ ಆವಶ್ಯಕತೆಯಿದೆ. ಹೆಚ್ಚು ಜಟಿಲತೆಯದ್ದಾಗಿ ಮಾಡಲ್ಪಟ್ಟಿರುವುದಾದರೆ, ಅದನ್ನು ರಚಿಸುವವನು ಹೆಚ್ಚು ಸಾಮರ್ಥ್ಯವುಳ್ಳವನಾಗಿರತಕ್ಕದ್ದು.

2 ಉದಾಹರಣೆಗೆ, ನಿಮ್ಮ ಮನೆಯ ಸುತ್ತ ನೋಡಿರಿ. ಮೇಜುಗಳು, ಕುರ್ಚಿಗಳು, ಡೆಸ್ಕುಗಳು, ಹಾಸಿಗೆಗಳು, ಮಡಕೆಗಳು, ಬಾಣಲೆಗಳು, ಬಟ್ಟಲುಗಳು, ಮತ್ತು ಇತರ ಊಟದ ಪಾತ್ರೆಗಳು, ಇವೆಲ್ಲವನ್ನು ರಚಿಸುವವನ ಆವಶ್ಯಕತೆಯಿದೆ, ಹಾಗೆಯೇ, ಗೋಡೆಗಳಿಗೆ, ನೆಲಹಾಸುಗಳಿಗೆ, ಮತ್ತು ಒಳಚಾವಣಿಗಳಿಗೆ ಕೂಡ. ಆದರೂ, ತುಲನಾತ್ಮಕವಾಗಿ ಈ ವಸ್ತುಗಳನ್ನು ಮಾಡುವುದು ಸರಳವಾಗಿರುತ್ತದೆ. ಅಂತಹ ಸರಳ ವಸ್ತುಗಳು ರಚಿಸುವವನೊಬ್ಬನನ್ನು ಆವಶ್ಯಪಡಿಸುವುದಾದರೆ, ಜಟಿಲತೆಯ ಸಂಗತಿಗಳು ಕೂಡ ಒಬ್ಬ ಇನ್ನೂ ಹೆಚ್ಚು ಚುರುಕುಬುದ್ಧಿಯ ರಚಿಸುವವನನ್ನು ಆವಶ್ಯಪಡಿಸುತ್ತವೆ ಎಂಬುದು ಸಮಂಜಸವಲ್ಲವೇ?

ಭಯಚಕಿತಗೊಳಿಸುವ ನಮ್ಮ ವಿಶ್ವ

3, 4. ದೇವರು ಅಸ್ತಿತ್ವದಲ್ಲಿದ್ದಾನೆ ಎಂದು ತಿಳಿಯಲು ನಮಗೆ ವಿಶ್ವವು ಹೇಗೆ ಸಹಾಯ ಮಾಡುತ್ತದೆ?

3 ಒಂದು ಗಡಿಯಾರಕ್ಕೆ ಒಬ್ಬ ಗಡಿಯಾರಗಾರನ ಆವಶ್ಯಕತೆಯಿದೆ. ಸೂರ್ಯನು ಮತ್ತು ಅದರ ಸುತ್ತಲೂ ಕಕ್ಷೆಯಲ್ಲಿ ಶತಮಾನ ಶತಮಾನಗಳ ನಂತರವೂ ನಿಖರತೆಯಿಂದ ತಿರುಗುತ್ತಿರುವ ಇನ್ನೂ ಅಧಿಕ ಅಪಾರ ಜಟಿಲತೆಯ ನಮ್ಮ ಸೌರ ವ್ಯೂಹದ ಕುರಿತೇನು? ನಾವು ಜೀವಿಸುತ್ತಿರುವ, ಅದರೊಂದಿಗೆ ಹತ್ತು ಸಾವಿರ ಕೋಟಿಗಳಿಗಿಂತಲೂ ಅಧಿಕ ನಕ್ಷತ್ರಗಳಿರುವ ಕ್ಷೀರಪಥವೆಂದು ಕರೆಯಲ್ಪಡುವ ಭಯಚಕಿತಗೊಳಿಸುವ ಆಕಾಶಗಂಗೆಯ ಕುರಿತೇನು? ಕ್ಷೀರಪಥವನ್ನು ವೀಕ್ಷಿಸಲು ರಾತ್ರಿಯ ಸಮಯದಲ್ಲಿ ಎಂದಾದರೂ ನೀವು ನಿಂತಿದ್ದೀರೋ? ನೀವು ಪ್ರಭಾವಿಸಲ್ಪಟ್ಟಿದ್ದಿರೋ? ಹಾಗಿದ್ದರೆ, ನಮ್ಮ ಕ್ಷೀರಪಥದಂತಹ ಅಗಣಿತ ಕೋಟಿಗಟ್ಟಲೆ ಆಕಾಶಗಂಗೆಗಳಿಂದ ತುಂಬಿರುವ ನಂಬಲಾಗದ ಬೃಹತ್‌ಪ್ರಮಾಣದ ವಿಶ್ವದ ಕುರಿತು ಯೋಚಿಸಿರಿ! ಅಲ್ಲದೆ, ಶತಮಾನ ಶತಮಾನಗಳ ನಂತರವೂ ಅವುಗಳ ಚಲನೆಗಳಲ್ಲಿ ಈ ಆಕಾಶಸ್ಥ ಕಾಯಗಳು ಎಷ್ಟು ನಂಬಲರ್ಹವಾಗಿವೆಯೆಂದರೆ, ಅವುಗಳನ್ನು ನಿಷ್ಕೃಷ್ಟತೆಯ ಗಡಿಯಾರಗಳಿಗೆ ಹೋಲಿಸಿಲಾಗಿವೆ.

4 ಸಂಬಂಧಿತ ರೀತಿಯಲ್ಲಿ ಸರಳವಾಗಿರುವ ಗಡಿಯಾರವೊಂದು, ಗಡಿಯಾರಗಾರನ ಅಸ್ತಿತ್ವವನ್ನು ಸೂಚಿಸುವುದಾದರೆ, ಅಪಾರವಾಗಿ ಅಧಿಕ ಜಟಿಲತೆಯ ಮತ್ತು ಭಯಚಕಿತಗೊಳಿಸುವ ವಿಶ್ವವು ನಕ್ಷೆಗಾರನ ಮತ್ತು ರಚಿಸುವವನ ಅಸ್ತಿತ್ವವನ್ನು ಖಂಡಿತವಾಗಿಯೂ ಸೂಚಿಸುತ್ತದೆ. ಆದುದರಿಂದಲೇ ‘ನಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಕೊಂಡು ನೋಡಲು’ ನಮ್ಮನ್ನು ಬೈಬಲ್‌ ಆಮಂತ್ರಿಸುತ್ತದೆ, ಮತ್ತು ಅನಂತರ ಅದು ಕೇಳುವುದು: “ಈ ನಕ್ಷತ್ರಗಳನ್ನು ಸೃಪ್ಟಿಸಿದಾತನು ಯಾರು?” ಉತ್ತರ: “ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ [ದೇವರು] ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.” (ಯೆಶಾಯ 40:26) ಹೀಗೆ, ವಿಶ್ವವು ಅದರ ಅಸ್ತಿತ್ವಕ್ಕೆ ಒಬ್ಬ ಅಗೋಚರವಾದ, ನಿಯಂತ್ರಿಸುವ, ಚುರುಕುಬುದ್ಧಿಯ ಶಕ್ತಿಗೆ—ದೇವರಿಗೆ ಋಣಿಯಾಗಿದೆ.

ಭೂಮಿಯು ಅಸದೃಶವಾಗಿ ರೂಪಿಸಲ್ಪಟ್ಟಿದೆ

5-7. ಭೂಮಿಗೊಬ್ಬ ವಿನ್ಯಾಸಗಾರನು ಇದ್ದನು ಎಂದು ಅದರ ಕುರಿತಾದ ಯಾವ ವಾಸ್ತವಾಂಶಗಳು ತೋರಿಸುತ್ತವೆ?

5 ಭೂಮಿಯನ್ನು ವಿಜ್ಞಾನಿಗಳು ಹೆಚ್ಚೆಚ್ಚು ಅಧ್ಯಯನಿಸಿದಷ್ಟಕ್ಕೆ, ಮಾನವ ನಿವಾಸಕ್ಕಾಗಿ ಅದು ಅಸದೃಶವಾಗಿ ರೂಪಿಸಲ್ಪಟ್ಟಿರುವುದನ್ನು ಅಧಿಕಾಧಿಕವಾಗಿ ಅವರು ತಿಳಿದುಕೊಳ್ಳುತ್ತಿದ್ದಾರೆ. ಸೂರ್ಯನಿಂದ ಯೋಗ್ಯ ಪ್ರಮಾಣದ ಬೆಳಕು ಮತ್ತು ಉಷ್ಣವನ್ನು ಪಡೆಯಲಿಕ್ಕಾಗಿ ಎಷ್ಟು ಬೇಕೊ ಅಷ್ಟೇ ದೂರದಲ್ಲಿ ಅದು ಇದೆ. ಸೂರ್ಯನ ಸುತ್ತಲೂ ಅದು ವರ್ಷಕ್ಕೊಮ್ಮೆ ಆವರ್ತಿಸುತ್ತದೆ, ಸರಿಯಾದ ಕೋನದಲ್ಲಿ ಓಲಿರುತ್ತದೆ, ಆ ಮೂಲಕ ಭೂಮಿಯ ಅನೇಕ ಭಾಗಗಳಲ್ಲಿ ಋತುಗಳನ್ನುಂಟು​ಮಾಡುತ್ತದೆ. ಪ್ರತಿ 24 ತಾಸುಗಳಿಗೆ ಭೂಮಿಯು ತನ್ನ ಸ್ವಂತ ಅಕ್ಷದ ಮೇಲೆ ಕೂಡ ತಿರುಗುತ್ತದೆ, ಇದರಿಂದ ಕ್ರಮವಾಗಿ ಬೆಳಕು ಮತ್ತು ಕತ್ತಲೆಯನ್ನು ಒದಗಿಸುತ್ತದೆ. ನಾವು ಉಸಿರಾಡಲು ಮತ್ತು ಅಂತರಾಳದ ಹಾನಿಕರ ವಿಕಿರಣದಿಂದ ಸಂರಕ್ಷಿಸಲ್ಪಡಲು ಸಾಧ್ಯವಾಗುವಂತೆ ಅನಿಲಗಳ ಯೋಗ್ಯ ಪ್ರಮಾಣದ ಮಿಶ್ರಣಗಳಿರುವ ವಾತಾವರಣ ಅದಕ್ಕಿರುತ್ತದೆ. ಆಹಾರವನ್ನು ಬೆಳೆಸಲು ಅತ್ಯಾವಶ್ಯಕವಾದ ನೀರು ಮತ್ತು ಮಣ್ಣು ಕೂಡ ಅದರಲ್ಲಿದೆ.

6 ಈ ಮೇಲಿನ ಮತ್ತು ಇತರ ವಾಸ್ತವಾಂಶಗಳು, ಒಟ್ಟಿಗೆ ಕೆಲಸ ಮಾಡದಿದ್ದರೆ, ಜೀವಿತ ಅಸಾಧ್ಯವೇ ಸರಿ. ಅವೆಲ್ಲವೂ ಒಂದು ಆಕಸ್ಮಿಕ ಘಟನೆಯೊ? ಸೈಎನ್ಸ್‌ ನ್ಯೂಸ್‌ ಹೇಳುವುದು: “ನಿರ್ದಿಷ್ಟವಾದ ಮತ್ತು ನಿಷ್ಕೃಷ್ಟವಾದ ಅಂತಹ ಪರಿಸ್ಥಿತಿಗಳು ಗೊತ್ತುಗುರಿಯಿಲ್ಲದೆ ಎದ್ದು​ಬರಲು ಸಾಧ್ಯವಿದೆ ಎಂಬುದು ಅಪೂರ್ವವೇ ಎಂದು ಭಾಸವಾಗುತ್ತದೆ.” ಇಲ್ಲ, ಅವು ಸಾಧ್ಯವಿಲ್ಲ. ಅವುಗಳಲ್ಲಿ ಒಬ್ಬ ಶ್ರೇಷ್ಠತಮ ನಕ್ಷೆಗಾರನ ಒಂದು ಉದ್ದೇಶಭರಿತ ವಿನ್ಯಾಸವು ಒಳಗೂಡಿತ್ತು.

7 ನೀವೊಂದು ಉತ್ತಮ ಮನೆಯೊಳಗೆ ಹೋಗಿರುವಲ್ಲಿ ಮತ್ತು ಅದರಲ್ಲಿ ಆಹಾರವು ಪುಷ್ಕಳವಾಗಿ ದಾಸ್ತಾನುಮಾಡಲ್ಪಟ್ಟಿರುವದನ್ನು ಕಾಣುವಿರಿ, ಅದರಲ್ಲಿ ಅತ್ಯುತ್ಕೃಷ್ಟ ಶಾಖ ಮತ್ತು ಹವಾ-ನಿಯಂತ್ರಣ ವ್ಯವಸ್ಥೆಯೊಂದಿದೆ, ಮತ್ತು ನೀರನ್ನು ಸರಬರಾಜು ಮಾಡಲು ಉತ್ತಮ ಕೊಳಾಯಿ ಏರ್ಪಾಡು ಇದೆ, ಎಂದು ನೋಡುವಲ್ಲಿ, ನೀವು ಯಾವ ಸಮಾಪ್ತಿಗೆ ಬರುವಿರಿ? ಅದೆಲ್ಲವು ಕೇವಲ ತನ್ನಿಂದ ತಾನೇ ಬಂತೆಂಬದಾಗಿಯೋ? ಇಲ್ಲ, ಒಬ್ಬ ಚುರುಕುಬುದ್ಧಿಯ ವ್ಯಕ್ತಿಯೊಬ್ಬನು ಅದನ್ನು ವಿನ್ಯಾಸಿಸಿದ್ದಾನೆ ಮತ್ತು ಬಹಳ ಜಾಗ್ರತೆಯಿಂದ ರಚಿಸಿದ್ದಾನೆ ಎಂಬ ಸಮಾಪ್ತಿಗೆ ನೀವು ಖಂಡಿತವಾಗಿ ಬರುವಿರಿ. ಭೂಮಿಯು ಕೂಡ ವಿನ್ಯಾಸಿಸಲ್ಪಟ್ಟಿದೆ ಮತ್ತು ಅದರ ನಿವಾಸಿಗಳಿಗೆ ಏನು ಬೇಕೋ ಅದನ್ನು ಒದಗಿಸಲು ಬಹಳ ಜಾಗ್ರತೆಯಿಂದ ಉಂಟುಮಾಡಲಾಗಿದೆ, ಮತ್ತು ಅದು ಯಾವುದೇ ಒಂದು ಮನೆಗಿಂತಲೂ ಎಷ್ಟೋ ಹೆಚ್ಚು ಜಟಿಲತೆಯದ್ದೂ, ಉತ್ತಮವಾಗಿ ಒದಗಿಸಲ್ಪಟ್ಟದ್ದೂ ಆಗಿದೆ.

8. ನಮಗಾಗಿ ದೇವರ ಪ್ರೀತಿಯ ಚಿಂತನೆಯನ್ನು ತೋರಿಸುವ ಇನ್ಯಾವುದು ಭೂಮಿಯಲ್ಲಿ ಇದೆ?

8 ಜೀವಿತಕ್ಕೆ ಆಹ್ಲಾದವನ್ನು ಕೂಡಿಸುವ ಅಧಿಕ ಸಂಖ್ಯಾತ ವಸ್ತುಗಳನ್ನು ಕೂಡ ಪರಿಗಣಿಸಿರಿ. ಮಾನವರು ಆನಂದಿಸುವ, ಅವುಗಳ ಹಿತವಾದ ಸುಗಂಧಗಳ ಸಹಿತವಾಗಿ ಅಪಾರ ವಿವಿಧತೆಯ ಸುಂದರವಾದ ವರ್ಣಮಯ ಹೂವುಗಳನ್ನು ನೋಡಿರಿ. ಅಲ್ಲದೆ, ನಮ್ಮ ರುಚಿಗಳಿಗೆ ಸ್ವಾರಸ್ಯವನ್ನು ಕೊಡುವ ಮಹಾ ವಿವಿಧತೆಯ ಆಹಾರಗಳು ಇಲ್ಲವೆ. ನೋಡಲು ಮನೋಹರವಾಗಿರುವ ಕಾಡುಗಳು, ಪರ್ವತಗಳು, ಸರೋವರಗಳು, ಮತ್ತು ಇತರ ಸೃಷ್ಟಿಗಳು ಕೂಡ ಅಲ್ಲಿವೆ. ನಮ್ಮ ಜೀವಿತದ ಅನುಭೋಗವನ್ನು ಹೆಚ್ಚಿಸುವ ಸುಂದರವಾದ ಸೂರ್ಯಾಸ್ತಮಾನಗಳ ಕುರಿತಾಗಿಯೂ ಏನು? ಮತ್ತು ಪ್ರಾಣಿ ರಾಜ್ಯದಲ್ಲಿ, ನಾಯಿಮರಿಗಳ, ಬೆಕ್ಕಿನ ಮರಿಗಳ, ಮತ್ತು ಇತರ ಎಳೇ ಪ್ರಾಣಿಗಳ ನಲಿದಾಡುವ ಕೋಡಂಗಿ ಚೇಷ್ಟೆಗಳಿಂದ ಮತ್ತು ಪ್ರೀತಿಯೋಗ್ಯ ನಿಸರ್ಗದಿಂದ ನಾವು ಆನಂದಿಸುವದಿಲ್ಲವೇ? ಹೀಗೆ, ಭೂಮಿಯು ಜೀವವನ್ನು ಪೋಷಿಸಲು ನಿಶ್ಚಯವಾಗಿಯೂ ಆವಶ್ಯಕವಾಗಿರದ ಅನೇಕ ಆಹ್ಲಾದಕರ ಆಶ್ಚರ್ಯಗಳನ್ನು ಒದಗಿಸುತ್ತದೆ. ಮಾನವರನ್ನು ಮನಸ್ಸಿನಲ್ಲಿಟ್ಟು ಪ್ರೀತಿಯ ಲಕ್ಷ್ಯದೊಂದಿಗೆ ಭೂಮಿಯು ವಿನ್ಯಾಸಿಸಲ್ಪಟ್ಟಿದೆಂಬುದನ್ನು ಇವುಗಳು ತೋರಿಸುತ್ತವೆ, ಆ ಮೂಲಕ ನಾವು ಕೇವಲ ಅಸ್ತಿತ್ವದಲ್ಲಿ ಇರಬಹುದು ಮಾತ್ರವಲ್ಲ, ಜೀವಿತದಲ್ಲಿ ಆನಂದಿಸಲೂಬಹುದು.

9. ಭೂಮಿಯನ್ನು ಯಾರು ಉಂಟುಮಾಡಿದನು, ಮತ್ತು ಅವನು ಅದನ್ನು ಮಾಡಿದ್ದು ಯಾಕೆ?

9 ಆದಕಾರಣ, ಈ ಎಲ್ಲಾ ವಸ್ತುಗಳ ದಾತನನ್ನು ಮಾನ್ಯಮಾಡುವುದು ಒಂದು ಸಮಂಜಸತೆಯ ತೀರ್ಮಾನವಾಗಿರುತ್ತದೆ, ಅದು ಯೆಹೋವ ದೇವರ ಕುರಿತು ಬೈಬಲ್‌ ಲೇಖಕನು ಹೇಳಿದಂತೆ ಇದೆ: “ಪರಲೋಕ ಭೂಲೋಕಗಳನ್ನು ಉಂಟುಮಾಡಿದವನು ನೀನೇ.” ಯಾವ ಉದ್ದೇಶಕ್ಕಾಗಿ? ದೇವರನ್ನು ಹೀಗೆಂದು ವರ್ಣಿಸುವುದರ ಮೂಲಕ ಅವನು ಉತ್ತರಿಸುತ್ತಾನೆ: “ಆತನೇ ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.”—ಯೆಶಾಯ 37:16; 45:18.

ಬೆರಗುಗೊಳಿಸುವ ಜೀವ ಕಣ

10, 11. ಜೀವಂತ ಕಣವು ಅಷ್ಟೊಂದು ಬೆರಗುಗೊಳಿಸುವಂತಹದ್ದು ಯಾಕೆ?

10 ಜೀವಂತ ವಸ್ತುಗಳ ಕುರಿತೇನು? ಅವುಗಳಿಗೆ ಒಬ್ಬ ರಚಿಸುವವನ ಆವಶ್ಯಕತೆಯಿಲ್ಲವೇ? ಉದಾಹರಣೆಗೆ, ಒಂದು ಜೀವಂತ ಕಣದ ಬೆರಗುಗೊಳಿಸುವ ವೈಶಿಷ್ಟಗಳಲ್ಲಿ ಕೆಲವೊಂದನ್ನು ಪರಿಗಣಿಸಿರಿ. ಎವೊಲ್ಯೂಶನ್‌: ಎ ತೀಯೊರಿ ಇನ್‌ ಕ್ರೈಸಿಸ್‌ ಎಂಬ ತನ್ನ ಪುಸ್ತಕದಲ್ಲಿ ಅಣು ಜೀವವಿಜ್ಞಾನಿ ಮೈಕಲ್‌ ಡೆಂಟನ್‌ ಹೇಳುವುದು: “ಇಂದು ಭೂಮಿಯ ಮೇಲಿನ ಎಲ್ಲಾ ಜೀವಂತ ವ್ಯವಸ್ಥೆಗಳಲ್ಲಿ ಅತಿ ಸರಳವಾಗಿರುವ, ​ಏಕಾಣುಜೀವಿಗಳ ಕಣಗಳು ಸಹ ಅತಿ ವಿಶೇಷವಾಗಿ ಜಟಿಲತೆಯ ವಸ್ತುಗಳಾಗಿವೆ. ಅತಿ ಚಿಕ್ಕ ಏಕಾಣುಜೀವಿ ಕಣಗಳು ಕೂಡ ನಂಬಲರ್ಹವಾಗಿ ಅತಿ ಚಿಕ್ಕದಾಗಿರುವುದಾದರೂ, . . . ಪ್ರತಿಯೊಂದು ಕಾರ್ಯತಃ ಸಾಕ್ಷಾತ್ತಾದ ಸೂಕ್ಷ್ಮ ಸೂಕ್ಷ್ಮೀಕರಣ ಯಂತ್ರಾಗಾರವಾಗಿದ್ದು, ಹೆಣೆದುಕೊಂಡಿರುವ ಏಕಾಣು ಯಂತ್ರದ ಅತ್ಯಂತ ಉತ್ಕೃಷ್ಟವಾಗಿ ವಿನ್ಯಾಸಿಸಲ್ಪಟ್ಟ ಸಾವಿರಾರು ಸಣ್ಣ ಚೂರುಗಳನ್ನು ಒಳಗೊಂಡಿರುತ್ತವೆ. . . . ಮನುಷ್ಯನಿಂದ ಕಟ್ಟಲ್ಪಟ್ಟ ಯಾವುದೇ ಯಂತ್ರಕ್ಕಿಂತ ಎಷ್ಟೋ ಹೆಚ್ಚು ಸಂಕೀರ್ಣತೆಯದ್ದೂ ಮತ್ತು ನಿರ್ಜೀವ ಲೋಕದಲ್ಲಿ ಅದಕ್ಕೆ ಸಮಗ್ರವಾಗಿ ಯಾವುದೇ ಸಮಾನಾಂತರವಿಲ್ಲದ್ದೂ ಆಗಿದೆ.”

11 ಪ್ರತಿಯೊಂದು ಕಣದ ತಳಿಸಂಬಂಧೀ ನಿಬಂಧನೆಗಳ ಕುರಿತು ಅವರು ಹೇಳುವುದು: “ಜ್ಞಾತವಾಗಿರುವ ಇತರ ಯಾವುದೇ ವ್ಯವಸ್ಥೆಗಿಂತ, ಸಮಾಚಾರಗಳನ್ನು ಸಂಗ್ರಹಿಸಿಡಲು ಡಿಎನ್‌ಎಗೆ ಇರುವ ಸಾಮರ್ಥ್ಯವು ಅಪಾರವಾಗಿ ಮೀರಿ ಇರುತ್ತದೆ; ಅದು ಎಷ್ಟೊಂದು ಕಾರ್ಯಸಾಧಕವಾಗಿ ಇರುತ್ತದೆಂದರೆ ಮನುಷ್ಯನಷ್ಟು ಜಟಿಲವಾಗಿರುವ ಶರೀರಿಯನ್ನು ನಿರ್ದೇಶಿಸಲು ಬೇಕಾಗುವ ಸಕಲ ಸಮಾಚಾರವು, ಒಂದು ಗ್ರ್ಯಾಮ್‌ನ ಅನೇಕ ಶತಕೋಟಿ ಭಾಗಗಳಲ್ಲಿ ಒಂದಂಶಕ್ಕೂ ಕಡಮೆ ತೂಕದ್ದಾಗಿರುತ್ತದೆ. . . . ಜೀವದ ಏಕಾಣುಜೀವಿಯ ಯಂತ್ರಾಗಾರದಿಂದ ಪ್ರದರ್ಶಿಸಲ್ಪಟ್ಟ ಕಲ್ಪನಾ ಚಾತುರ್ಯ ಮತ್ತು ಸಂಕೀರ್ಣತೆಯ ಮಟ್ಟದೊಂದಿಗೆ, ನಮ್ಮ ಅತಿ ಪ್ರವರ್ಧಮಾನದ [ಉತ್ಪಾದನೆಗಳು] ಕೂಡ ಒಡ್ಡೊಡ್ಡಾಗಿ ಕಾಣುತ್ತವೆ. ವಿನೀತರಾಗಿ ಮಾಡಲ್ಪಟ್ಟಿದ್ದೇವೆಂಬ ಅನುಭವ ನಮಗಾಗುತ್ತದೆ.”

12. ಜೀವ ಕಣದ ಉಗಮದ ಕುರಿತಾಗಿ ವಿಜ್ಞಾನಿಯೊಬ್ಬನು ಅಂದದ್ದೇನು?

12 ಡೆಂಟನ್‌ ಕೂಡಿಸುವುದು: “ಅತಿ ಸರಳ ಜೀವ ಕಣದ ಜ್ಞಾತ ವಿಧದ ಜಟಿಲತೆಯು ಎಷ್ಟೊಂದು ಮಹತ್ತಾಗಿದೆಯೆಂದರೆ, ಅಂತಹ ಒಂದು ವಸ್ತುವನ್ನು ಯಾವುದೋ ಒಂದು ವಿಚಿತ್ರ ವರ್ತನೆಯ, ಮಹತ್ತರ​ವಾಗಿ ಅಸಂಭವವಾದ, ಘಟನೆಯಿಂದ ಫಕ್ಕನೆ ಒಟ್ಟುಸೇರಿಸಲ್ಪಟ್ಟಿದೆ ಎಂದು ಸ್ವೀಕರಿಸುವುದು ಅಸಾಧ್ಯ.” ಅದಕ್ಕೆ ಒಬ್ಬ ವಿನ್ಯಾಸಗಾರನು ಮತ್ತು ರಚಿಸುವವನು ಇರಲೇಬೇಕಾಗಿತ್ತು.

ನಮ್ಮ ಆಶ್ಚರ್ಯಕರ ಮಿದುಳು

13, 14. ಜೀವಂತ ಕಣಕ್ಕಿಂತಲೂ ಮಿದುಳು ಅಧಿಕ ಹೆಚ್ಚು ಬೆರಗುಗೊಳಿಸುವಂತಹದ್ದು ಯಾಕೆ?

13 ಈ ವಿಜ್ಞಾನಿಯು ಅನಂತರ ಹೇಳುವುದು: “ಜಟಿಲತೆಯ ಪದಗಳಲ್ಲಿ, ಸಸ್ತನಿ ಪ್ರಾಣಿಯ ಮಿದುಳಿನಂತಹ ವ್ಯವಸ್ಥೆಯೊಂದಿಗೆ ಹೋಲಿಸಿದಾಗ ಒಂದು ಜೀವಕಣವು ಏನೂ ಅಲ್ಲ. ಮಾನವ ಮಿದುಳಿನಲ್ಲಿ ಸುಮಾರು ಒಂದು ಸಾವಿರ ಕೋಟಿ ನರ ಕೋಶಗಳು ಸೇರಿವೆ. ಪ್ರತಿಯೊಂದು ನರ ಕೋಶವು ಸುಮಾರು ಹತ್ತು ಸಾವಿರ ಮತ್ತು ಒಂದು ಲಕ್ಷಗಳ ನಡುವೆ ಕೂಡು ತಂತುಗಳನ್ನು ಹೂಡುತ್ತದೆ, ಇವುಗಳ ಮೂಲಕ ಅದು ಮಿದುಳಿನಲ್ಲಿರುವ ಇತರ ನರ ಕೋಶಗಳೊಂದಿಗೆ ಸಂಪರ್ಕವನ್ನಿಡುತ್ತದೆ. ಎಲ್ಲವೂ ಒಟ್ಟಿಗೆ, ಮಾನವ ಮಿದುಳಿನಲ್ಲಿರುವ ಕೂಡಿಸಿಕೆಗಳ ಜುಮ್ಲಾ ಮೊತ್ತವು ಸುಮಾರು . . . ಹತ್ತು ಕೋಟಿ ಕೋಟಿಗಳು.”

14 ಡೆಂಟನ್‌ ಮುಂದುವರಿಸುವುದು: “ಮಿದುಳಿನ ಕೂಡಿಸುವಿಕೆಗಳ ಕೇವಲ ನೂರನೆಯ ಒಂದು ಭಾಗ ಮಾತ್ರವೇ ನಿರ್ದಿಷ್ಟವಾಗಿ ಸಂಸ್ಥಾಪಿಸಲ್ಪಟ್ಟರೂ ಕೂಡ, ಭೂಮಿಯ ಮೇಲಿರುವ ಸಮಗ್ರ ಸಂಪರ್ಕ ಜಾಲಬಂಧಕ್ಕಿಂತಲೂ ಎಷ್ಟೋ ಹೆಚ್ಚು ಸಂಖ್ಯೆಯನ್ನೊಳಗೂಡಿರುವ ನಿರ್ದಿಷ್ಟ ಕೂಡಿಸುವಿಕೆಗಳ ಒಂದು ವ್ಯವಸ್ಥೆಯನ್ನು ಅದು ಇನ್ನೂ ಪ್ರತಿನಿಧಿಸುವುದು.” ಅನಂತರ ಅವರು ಪ್ರಶ್ನಿಸುವುದು: “ಅಂತಹ ವ್ಯವಸ್ಥೆಗಳನ್ನು ಪೂರ್ತಿಯಾಗಿ ಸಿಕ್ಕಾಬಟ್ಟೆಯ ಯಾವುದೋ ಒಂದು ಕಾರ್ಯಗತಿಯಿಂದ ಒಟ್ಟುಜೋಡಿಸ ಸಾಧ್ಯವಿದೆಯೇ?” ವಿಶದ​ವಾಗಿ, ಉತ್ತರವು ಇಲ್ಲ ಎಂದೇ ಆಗಿರಬೇಕು. ಮಿದುಳಿಗೆ ಚಿಂತನೆಮಾಡುವ ಒಬ್ಬ ನಕ್ಷೆಗಾರನು ಮತ್ತು ರಚಿಸುವವನು ಇದ್ದಿರಲೇ ಬೇಕು.

15. ಮಿದುಳಿನ ಕುರಿತಾಗಿ ಇತರರು ಯಾವ ಹೇಳಿಕೆಗಳನ್ನು ಮಾಡುತ್ತಾರೆ?

15 ಮಾನವ ಮಿದುಳು ಅತಿ ಮುಂಬರಿದ ಕಂಪ್ಯೂಟರುಗಳನ್ನು ಕೂಡ ಹಳೆಯ ತರಹದ್ದಾಗಿ ಮಾಡುತ್ತದೆ. ವಿಜ್ಞಾನ ಲೇಖಕ ಮಾರ್ಟನ್‌ ಹಂಟ್‌ ಹೇಳಿದ್ದು: “ಒಂದು ಬೃಹತ್‌ ಪ್ರಮಾಣದ ಸಮಕಾಲೀನ ಸಂಶೋಧಕ ಕಂಪ್ಯೂಟರ್‌ಗಿಂತಲೂ ಅನೇಕ ಕೋಟಿ ಪಟ್ಟು ಹೆಚ್ಚಾದ ಸಮಾಚಾರವನ್ನು ನಮ್ಮ ಕ್ರಿಯಾತ್ಮಕ ನೆನಪುಗಳು ಇಟ್ಟುಕೊಳ್ಳುತ್ತವೆ.” ಹೀಗೆ, ಮಿದುಳು ಶಸ್ತ್ರವೈದ್ಯ ಡಾ. ರಾಬರ್ಟ್‌ ಜೆ. ವೈಟ್‌ ತೀರ್ಮಾನಿಸಿದ್ದು: “ಆಶ್ಚರ್ಯಕರವಾದ ಮಿದುಳು-ಮನಸ್ಸು ಸಂಬಂಧದ ವಿನ್ಯಾಸ ಮತ್ತು ಬೆಳೆವಣಿಗೆಗೆ—ತಿಳಿದು ಕೊಳ್ಳಲು ಮಾನವನ ಸಾಮರ್ಥ್ಯಕ್ಕೆ ಎಷ್ಟೋ ಮೀರಿರುವ ಒಂದು ವಿಷಯ—ಜವಾಬ್ದಾರನಾಗಿರುವ ಒಬ್ಬ ಶ್ರೇಷ್ಠತಮ ಪ್ರಜ್ಞಾಶಾಲಿಯೊಬ್ಬನ ಅಸ್ತಿತ್ವವನ್ನು ಅಂಗೀಕರಿಸುವದಲ್ಲದೆ ಬೇರೆ ಯಾವ ಆಯ್ಕೆಯೂ ನನಗೆ ಇಲ್ಲ. . . . ಇದಕ್ಕೆಲ್ಲಾ ಒಂದು ಬುದ್ಧಿಮತ್ತೆಯ ಆರಂಭವಿತ್ತು, ಯಾರೋ ಒಬ್ಬನು ಇದು ಸಂಭವಿಸುವಂತೆ ಮಾಡಿದನು ಎಂದು ನಾನು ನಂಬಲೇ ಬೇಕಾಗಿದೆ.” ಅವನು ಚಿಂತನೆಮಾಡುವ ಯಾರೋ ಒಬ್ಬನು ಕೂಡ ಆಗಿರಬೇಕಿತ್ತು.

ಅಸದೃಶ ರಕ್ತ ವ್ಯವಸ್ಥೆ

16-18. (ಎ) ಯಾವ ವಿಧಗಳಲ್ಲಿ ರಕ್ತ ವ್ಯವಸ್ಥೆಯು ಅಸದೃಶ್ಯವಾಗಿದೆ? (ಬಿ) ಅದು ನಮ್ಮನ್ನು ಯಾವ ತೀರ್ಮಾನಕ್ಕೆ ನಡಿಸತಕ್ಕದ್ದು?

16 ಪೋಷಕಾಂಶಗಳನ್ನು ಮತ್ತು ಆಮ್ಲಜನಕವನ್ನು ಸಾಗಿಸುವ ಮತ್ತು ಸೋಂಕುವಿನ ವಿರುದ್ಧ ಸಂರಕ್ಷಿಸುವ ಅಸದೃಶ ರಕ್ತ ವ್ಯವಸ್ಥೆಯನ್ನು ಕೂಡ ಪರಿಗಣಿಸಿರಿ. ಈ ವ್ಯವಸ್ಥೆಯ ಮುಖ್ಯ ಘಟಕವಾದ ಕೆಂಪು ರಕ್ತ ಕಣಗಳ ಕುರಿತು, ಎಬಿಸಿ’ಸ್‌ ಆಫ್‌ ದ ಹ್ಯೂಮನ್‌ ಬಾಡಿ ಪುಸ್ತಕ ಹೇಳುವುದು: “ಒಂದು ತೊಟ್ಟು ರಕ್ತದಲ್ಲಿ 25 ಕೋಟಿಗಳಿಗಿಂತಲೂ ಹೆಚ್ಚು, ಪ್ರತ್ಯೇಕವಾದ ರಕ್ತ ಕಣಗಳಿರುತ್ತವೆ. . . . ಶರೀರದಲ್ಲಿ ಪ್ರಾಯಶಃ ಅವುಗಳು 25 ಲಕ್ಷ ಕೋಟಿಗಳಷ್ಟು, ಹರಡುವಲ್ಲಿ ನಾಲ್ಕು ಟೆನ್ನಿಸ್‌ ಕೋರ್ಟುಗಳನ್ನು ಆವರಿಸಲು ಸಾಕಾಗುವಷ್ಟು ಇವೆ. . . . ಪ್ರತಿಯೊಂದು ಸೆಕಂಡಿಗೆ 30 ಲಕ್ಷ ಹೊಸ ಕಣಗಳ ಪ್ರಮಾಣಗತಿಯಲ್ಲಿ ಅವು ಸ್ಥಾನಭರ್ತಿ ಮಾಡಲ್ಪಡುತ್ತವೆ.”

17 ಅಸದೃಶ ರಕ್ತ ವ್ಯವಸ್ಥೆಯ ಇನ್ನೊಂದು ಅಂಶವಾದ ಬಿಳಿ ರಕ್ತ ಕಣಗಳ ಕುರಿತಾಗಿ, ಇದೇ ಮೂಲವು ನಮಗೆ ಹೇಳುವುದು: “ಒಂದೇ ತೆರನಾದ ಕೆಂಪು ರಕ್ತ ಕಣವು ಇರುವಾಗ, ಬಿಳಿ ರಕ್ತ ಕಣಗಳು ವೈವಿಧ್ಯದವುಗಳಾಗಿದ್ದು, ಪ್ರತಿಯೊಂದು ಭಿನ್ನವಾದ ರೀತಿಯಲ್ಲಿ ಶರೀರದ ಹೋರಾಟಗಳಲ್ಲಿ ಕಾದಾಡಲು ಸಾಮರ್ಥ್ಯವುಳ್ಳದ್ದಾಗಿರುತ್ತದೆ. ಉದಾಹರಣೆಗೆ, ಒಂದು ತೆರನಾದದ್ದು ಮೃತ ಕಣಗಳನ್ನು ನಾಶಗೊಳಿಸುತ್ತದೆ. ಇತರ ವಿಧಗಳು ಸಾಂಕ್ರಾಮಿಕ ವಿಷದ ವಿರುದ್ಧ ಪ್ರತಿವಿಷವಸ್ತುಗಳನ್ನು ಉತ್ಪಾದಿಸುತ್ತವೆ, ಪರಕೀಯ ಪದಾರ್ಥಗಳ ವಿಷನಿರ್ಮೂಲನವನ್ನು, ಯಾ ಏಕಾಣುವನ್ನು ಅಕ್ಷರಶಃ ತಿಂದುಬಿಡುವ ಮತ್ತು ಜೀರ್ಣಿಸುವ ಕೆಲಸವನ್ನು ಮಾಡುತ್ತವೆ.”

18 ಎಂತಹ ಬೆರಗುಗೊಳಿಸುವ ಮತ್ತು ಉಚ್ಚತಮವಾಗಿ ಸಂಸ್ಥಾಪಿಸಲ್ಪಟ್ಟ ಒಂದು ವ್ಯವಸ್ಥೆಯು! ಖಂಡಿತವಾಗಿಯೂ ಅಷ್ಟೊಂದು ಉತ್ತಮವಾಗಿ ಒಟ್ಟಾಗಿ ಇಡಲ್ಪಟ್ಟ ಮತ್ತು ಅಷ್ಟೊಂದು ಆಮೂಲಾಗ್ರವಾಗಿ ಸಂರಕ್ಷಿಸಲ್ಪಟ್ಟ ಯಾವುದೇ ಒಂದು ವಸ್ತುವಿಗೆ ಅತಿ ಬುದ್ಧಿವಂತನಾಗಿರುವ ಮತ್ತು ಚಿಂತನೆಯಿರುವ ಸಂಸ್ಥಾಪಕನು—ದೇವರು—ಇರಲೇಬೇಕು.

ಇತರ ಅದ್ಭುತಗಳು

19. ಮಾನವ-ನಿರ್ಮಿತ ಸಾಧನಗಳಿಗೆ ಕಣ್ಣು ಹೇಗೆ ತುಲನೆಯಾಗುತ್ತದೆ?

19 ಮಾನವ ಶರೀರದಲ್ಲಿ ಇತರ ಅನೇಕ ಅದ್ಭುತಗಳು ಇವೆ. ಒಂದು ಕಣ್ಣಾಗಿರುತ್ತದೆ, ಇದು ಎಷ್ಟೊಂದು ಸೊಗಸಾಗಿ ವಿನ್ಯಾಸಿಸಲ್ಪಟ್ಟಿದೆಯೆಂದರೆ ಅದನ್ನು ಯಾವುದೇ ಕ್ಯಾಮರವು ನಕಲು ಮಾಡಶಕ್ತವಾಗಿಲ್ಲ. ಖಗೋಲಶಾಸ್ತ್ರಜ್ಞ ರಾಬರ್ಟ್‌ ಜ್ಯಾಸ್ಟ್ರೊವ್‌ ಹೇಳಿದ್ದು: “ಕಣ್ಣು ವಿನ್ಯಾಸಿಸಲ್ಪಟ್ಟಿದೆ ಎಂದು ತೋರುತ್ತದೆ; ದುರ್ಬೀನುಗಳ ಯಾವನೇ ವಿನ್ಯಾಸಗಾರನು ಇದಕ್ಕಿಂತ ಉತ್ತಮವಾದುದನ್ನು ಮಾಡಶಕ್ತನಾಗಿಲ್ಲ.” ಮತ್ತು ಪಾಪ್ಯುಲರ್‌ ಫೊಟಾಗ್ರಫಿ ಪ್ರಕಾಶನವು ವರ್ಣಿಸುವುದು: “ಒಂದು ಫಿಲ್ಮ್‌ ನೋಡುವುದಕ್ಕಿಂತಲೂ ವಿವರಣೆಯ ಅಧಿಕ ವಿಸ್ತಾರ ವ್ಯಾಪ್ತಿಯಲ್ಲಿ ಮಾನವ ಕಣ್ಣು ಕಾಣಶಕ್ತವಾಗಿದೆ. ಅವು ತ್ರಿವಿಮಿತೀಯಗಳನ್ನು [three dimensions] ಅತಿ ಮಹತ್ತರವಾದ ಅಗಲ ಕೋನದಲ್ಲಿ, ಯಾವುದೇ ವಿಕೃತ ಸ್ಥಿತಿಯಿಲ್ಲದೆ, ನಿರಂತರ ಚಲನೆಯಲ್ಲಿ ನೋಡುತ್ತವೆ. . . . ಮಾನವ ಕಣ್ಣುಗಳಿಗೆ ಕ್ಯಾಮರವನ್ನು ಹೋಲಿಸುವುದು ಒಂದು ಯೋಗ್ಯ ಹೋಲಿಕೆಯಲ್ಲ. ಕೃತಕವಾದ ಬುದ್ಧಿಮತ್ತೆ, ಸಮಾಚಾರ-ಪರಿಷ್ಕರಣ ಸಾಮರ್ಥ್ಯಗಳು, ವೇಗಗಳು, ಮತ್ತು ಯಾವುದೇ ಮಾನವ-ನಿರ್ಮಿತ ಸಾಧನ, ಕಂಪ್ಯೂಟರ್‌ ಯಾ ಕ್ಯಾಮರವನ್ನು ಬಹಳವಾಗಿ ಮೀರಿಸುವ ಕಾರ್ಯನಿರ್ವಹಣದ ಕ್ರಮಗಳೊಂದಿಗೆ, ಮಾನವ ಕಣ್ಣು ಆಶ್ಚರ್ಯಕರವಾದ ಮುಂಬರಿದ ಸೂಪರ್‌ಕಂಪ್ಯೂಟರ್‌ಕ್ಕಿಂತಲೂ ಹೆಚ್ಚಿನದಾಗ್ದಿದೆ.”

20. ಮಾನವ ಶರೀರದ ಇತರ ಕೆಲವು ಸೋಜಿಗದ ಲಕ್ಷಣಗಳು ಯಾವುವು?

20 ನಮ್ಮ ಪ್ರಜ್ಞಾವಂತ ಪ್ರಯತ್ನವಿಲ್ಲದೆ, ಜಟಿಲತೆಯ ಶರೀರಾಂಗಗಳೆಲ್ಲವೂ ಸಹಕರಿಸುವ ವಿಧವನ್ನು ಕೂಡ ಯೋಚಿಸಿರಿ. ಉದಾಹರಣೆಗೆ, ನಮ್ಮ ಹೊಟ್ಟೆಯೊಳಗೆ ನಾವು ವಿವಿಧ ರೀತಿಯ ಅನೇಕ ಆಹಾರ ಮತ್ತು ಪಾನೀಯಗಳನ್ನು ತುಂಬಿಸುತ್ತೇವೆ, ಆದರೂ ​ಶರೀರವು ಅವುಗಳನ್ನು ಪರಿಷ್ಕರಿಸುತ್ತದೆ ಮತ್ತು ಶಕ್ತಿಯನ್ನು ಉತ್ಪಾದಿಸುತ್ತದೆ. ಒಂದು ಮೋಟಾರು ಗಾಡಿಯ ಅನಿಲದ ಟ್ಯಾಂಕಿನೊಳಗೆ ಅಂಥ ವಿವಿಧ ವಸ್ತುಗಳನ್ನು ತುಂಬಿಸಲು ಪ್ರಯತ್ನಿಸಿರಿ ಮತ್ತು ಅದು ಎಷ್ಟು ದೂರದ ತನಕ ಹೋಗುತ್ತದೆ ನೋಡಿರಿ! ಇನ್ನೂ, ಪ್ರೀತ್ಯಾದರಗಳಿಗೆ ಪಾತ್ರವಾದ ಒಂದು ಮಗುವನ್ನು—ಅದರ ಹೆತ್ತವರ ನಕಲುಪ್ರತಿಯನ್ನು—ಕೇವಲ ಒಂಭತ್ತು ತಿಂಗಳುಗಳಲ್ಲಿ ಉತ್ಪಾದಿಸುವ ಜನನದ ಅದ್ಭುತವಿದೆ. ಮತ್ತು ಸಂಕ್ಲಿಷ್ಟಕರ ಭಾಷೆಯೊಂದನ್ನು ಮಾತಾಡುವುದು ಹೇಗೆ ಎಂದು ಕೆಲವೇ ವರ್ಷ ಪ್ರಾಯದ ಮಗುವಿಗೆ ಕಲಿಯಲು ಇರುವ ಸಾಮರ್ಥ್ಯದ ​ಕುರಿತಾಗಿ ಏನು?

21. ಶರೀರದ ಅದ್ಭುತಗಳನ್ನು ಪರಿಗಣಿಸುವಾಗ, ವಿವೇಚನೆಯುಳ್ಳ ವ್ಯಕ್ತಿಗಳು ಏನು ಹೇಳುತ್ತಾರೆ?

21 ಹೌದು, ಮಾನವ ಶರೀರದಲ್ಲಿರುವ ಅನೇಕ ಕೌತುಕಗೊಳಿಸುವ, ಅತಿ ತೊಡರಿನ ಸೃಷ್ಟಿಗಳು ನಮ್ಮನ್ನು ಭಯಭಕ್ತಿಯಿಂದ ತುಂಬಿಸುತ್ತವೆ. ಯಾವನೇ ಎಂಜಿನಿಯರ್‌ನು ಈ ವಸ್ತುಗಳ ಯಥಾಪ್ರತಿ ನಕಲುಗಳನ್ನು ಮಾಡಶಕ್ತನಲ್ಲ. ಅವೆಲ್ಲಾ ಕೇವಲ ಕುರುಡು ಆಕಸ್ಮಿಕ ಘಟನೆಯ ಕಾರ್ಯರೀತಿಗಳಾಗಿರಬಹುದೇ? ನಿಶ್ಚಿತವಾಗಿಯೂ ಅಲ್ಲ. ಬದಲಿಗೆ, ಮಾನವ ಶರೀರದ ಅದ್ಭುತಕರ ರೂಪಗಳನ್ನು ಪರಿಗಣಿಸುವಾಗ, ವಿವೇಚನೆಯುಳ್ಳ ವ್ಯಕ್ತಿಗಳು, ಕೀರ್ತನೆಗಾರನು ಅಂದಂತೆ ಹೇಳುತ್ತಾರೆ: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು [ದೇವರನ್ನು] ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆ.”—ಕೀರ್ತನೆ 139:14.

ಅತಿ ಶ್ರೇಷ್ಠ ನಿರ್ಮಾಪಕನು

22, 23. (ಎ) ನಿರ್ಮಾಣಿಕನ ಅಸ್ತಿತ್ವವನ್ನು ನಾವು ಯಾಕೆ ಅಂಗೀಕರಿಸತಕ್ಕದ್ದು? (ಬಿ) ದೇವರ ಕುರಿತಾಗಿ ಬೈಬಲ್‌ ಯುಕ್ತವಾಗಿಯೇ ಏನು ಹೇಳುತ್ತದೆ?

22 ಬೈಬಲ್‌ ತಿಳಿಸುವುದು: “ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು, ನಿಸ್ಸಂದೇಹವಾಗಿ; ಅಸ್ತಿತ್ವದಲ್ಲಿರುವ ಸಮಸ್ತವನ್ನು ಕಟ್ಟಿದಾತನು ದೇವರು.” (ಇಬ್ರಿಯ 3:4, ದ ಜೆರೂಸಲೇಮ್‌ ಬೈಬಲ್‌) ಯಾವುದೇ ಒಂದು ಮನೆಗೆ, ಅದು ಎಷ್ಟೇ ಸರಳವಾಗಿರಲಿ, ಒಬ್ಬ ನಿರ್ಮಾಪಕನು ಇರಲೇಬೇಕು, ಹಾಗಾದರೆ ಭೂಮಿಯ ಮೇಲಿನ ಅಪಾರ ವೈವಿಧ್ಯದ ಜೀವಗಳೊಂದಿಗೆ ಈ ಅತಿ ಹೆಚ್ಚು ಜಟಿಲತೆಯ ವಿಶ್ವಕ್ಕೂ ಕೂಡ ಒಬ್ಬ ನಿರ್ಮಾಪಕನು ಇರಲೇ ಬೇಕು. ಮತ್ತು ವಿಮಾನಗಳು, ಟೆಲಿವಿಶನ್‌ಗಳು, ಮತ್ತು ಕಂಪ್ಯೂಟರುಗಳು ಮುಂತಾದ ಸಾಧನಗಳನ್ನು ಅನ್ವೇಷಣೆಮಾಡಿದ ಮಾನವರ ಅಸ್ತಿತ್ವವನ್ನು ನಾವು ಅಂಗೀಕರಿಸುತ್ತೇವಾದ್ದರಿಂದ, ಅಂತಹ ವಸ್ತುಗಳನ್ನು ಮಾಡಲು ಮಾನವರಿಗೆ ಮಿದುಳನ್ನು ನೀಡಿದಾತನ ಅಸ್ತಿತ್ವವನ್ನು ಕೂಡ ನಾವು ಅಂಗೀಕರಿಸ​ಕೂಡದೋ?

23 ಬೈಬಲ್‌ ಅವನನ್ನು ಹಾಗೆ ಅಂಗೀಕರಿಸುತ್ತಾ, ಹೀಗೆ ಕರೆಯುತ್ತದೆ: “ಸತ್ಯ ದೇವರಾದ ಯೆಹೋವನು . . . ಆಕಾಶಮಂಡಲವನ್ನು ಉಂಟುಮಾಡಿದಾತನು ಮತ್ತು ಅವುಗಳನ್ನು ಹರವಿದ್ದ ಮಹಾನ್‌ ವ್ಯಕ್ತಿಯು; ಭೂಮಂಡಲವನ್ನೂ ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿದಾತನು, ಲೋಕದ ಜನರಿಗೆ ಪ್ರಾಣವನ್ನು ದಯಪಾಲಿಸುವಾತನು.” (ಯೆಶಾಯ 42:5, NW) ಬೈಬಲ್‌ ಯೋಗ್ಯವಾಗಿಯೇ ಘೋಷಿಸುವುದು: “ಕರ್ತನೇ, [ಯೆಹೋವನೇ, NW] ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತ​ವಾದವು.”—ಪ್ರಕಟನೆ 4:11.

24. ದೇವರೊಬ್ಬನು ಇದ್ದಾನೆ ಎಂದು ನಾವು ಹೇಗೆ ತಿಳಿಯಸಾಧ್ಯವಿದೆ?

24 ಹೌದು, ಅವನು ಮಾಡಿದ ಸಂಗತಿಗಳ ಮೂಲಕ ದೇವರೊಬ್ಬನು ಇದ್ದಾನೆ ಎಂದು ನಾವು ತಿಳಿಯಸಾಧ್ಯವಿದೆ. “ಹೇಗಂದರೆ ಕಣ್ಣಿಗೆ ಕಾಣದಿರುವ ಆತನ [ದೇವರ] ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು [ದೇವರು] ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.”—ರೋಮಾಪುರ 1:20.

25, 26. ಯಾವುದೋ ಒಂದರ ದುರುಪಯೋಗವು, ಅದಕ್ಕೆ ರಚಿಸುವವನೊಬ್ಬನು ಇದ್ದಾನೆ ಎಂಬುದರ ವಿರುದ್ಧವಾಗಿ ಒಂದು ವಾದವಾಗಿರುವುದಿಲ್ಲ ಯಾಕೆ?

25 ಮಾಡಿದ ಯಾವುದೋ ಒಂದು ವಸ್ತುವನ್ನು ದುರುಪಯೋಗಿಸಲಾಗಿದೆ ಎಂಬ ವಾಸ್ತವಾಂಶವು ತಾನೇ, ಅದಕ್ಕೊಬ್ಬ ರಚಿಸುವವನು ಇರಲಿಲ್ಲವೆಂದರ್ಥವಲ್ಲ. ಒಂದು ವಿಮಾನವನ್ನು ಶಾಂತಿಯ ಉದ್ದೇಶಗಳಿಗೆ, ಒಂದು ಯಾನ ವಿಮಾನದೋಪಾದಿ ಬಳಸಸಾಧ್ಯವಿದೆ. ಆದರೆ ಅದನ್ನು ನಾಶನಕ್ಕಾಗಿಯೂ, ಒಂದು ಬಾಂಬ್‌ದಾಳಿ ವಿಮಾನದೋಪಾದಿ ಬಳಸಲೂ ಕೂಡ ಸಾಧ್ಯವಿದೆ. ಅದನ್ನು ಮಾರಕ ರೀತಿಯಲ್ಲಿ ಬಳಸಲಾಗಿದೆ ಎಂಬುದರಿಂದ ಅದಕ್ಕೊಬ್ಬ ರಚಿಸುವವನು ಇರಲಿಲ್ಲವೆಂದರ್ಥವಲ್ಲ.

26 ತದ್ರೀತಿಯಲ್ಲಿ, ಅನೇಕ ವೇಳೆ ಮಾನವರು ಕೆಟ್ಟವರಾಗಿ ಪರಿಣಮಿಸಿರುವ ವಾಸ್ತವತೆಯ ಕಾರಣ, ಅವರಿಗೆ ರಚಿಸುವವನೊಬ್ಬನಿರಲಿಲ್ಲ, ದೇವರೊಬ್ಬನು ಇಲ್ಲ ಎಂದರ್ಥವಲ್ಲ. ಆದಕಾರಣ, ಬೈಬಲ್‌ ಯುಕ್ತವಾಗಿಯೇ ಅವಲೋಕಿಸುವುದು: “ಅಯ್ಯೋ, ನೀವು ಎಂಥಾ ಮೂರ್ಖರು! ಕುಂಬಾರನು ಮಣ್ಣೆನಿಸಿಕೊಂಡಾನೇ? ಕಾರ್ಯವು ಕರ್ತೃವನ್ನು ಕುರಿತು ಅವನು ನನ್ನನ್ನು ಮಾಡಲಿಲ್ಲ ಎಂದುಕೊಂಡೀತೇ? ನಿರ್ಮಿತವಾದದ್ದು ನಿರ್ಮಿಸಿದವನ ವಿಷಯವಾಗಿ ಅವನಿಗೆ ವಿವೇಕವಿಲ್ಲ ಎಂದೀತೇ?”—ಯೆಶಾಯ 29:16.

27. ಕಷ್ಟಾನುಭವದ ಕುರಿತಾಗಿರುವ ನಮ್ಮ ಪ್ರಶ್ನೆಗಳಿಗೆ ದೇವರು ಉತ್ತರಿಸುವನೆಂದು ನಾವು ಯಾಕೆ ನಿರೀಕ್ಷಿಸಬಲ್ಲೆವು?

27 ಅವನೇನು ರಚಿಸಿದ್ದಾನೋ ಆ ಬೆರಗುಗೊಳಿಸುವ ಸಂಕೀರ್ಣತೆಯ ಮೂಲಕ ನಿರ್ಮಾಣಿಕನು ತನ್ನ ವಿವೇಕವನ್ನು ತೋರಿಸಿದ್ದಾನೆ. ಭೂಮಿಯನ್ನು ಜೀವಿಸಲಿಕ್ಕೆ ತಕ್ಕದಾಗಿ ಮಾಡಿರುವುದರಿಂದ, ನಮ್ಮ ಶರೀರ ಮತ್ತು ಮನಸ್ಸುಗಳನ್ನು ಅಷ್ಟೊಂದು ಸೋಜಿಗವಾಗಿ ರಚಿಸಿದ್ದರಿಂದ, ಮತ್ತು ಆನಂದಿಸಲು ಬಹಳಷ್ಟು ಉತ್ತಮ ಸಂಗತಿಗಳನ್ನು ಮಾಡಿರುವುದರ ಮೂಲಕ ಅವನು ನಮ್ಮ ಕುರಿತಾಗಿ ನಿಜವಾಗಿಯೂ ಚಿಂತಿಸುತ್ತಾನೆ ಎಂದು ತೋರಿಸಿದ್ದಾನೆ. ನಿಶ್ಚಯವಾಗಿಯೂ, ಇಂಥ ಮುಂದಿನ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯುವಂತೆ ಮಾಡುವುದರ ಮೂಲಕ ಅವನು ತದ್ರೀತಿಯ ವಿವೇಕ ಮತ್ತು ಚಿಂತನೆಯನ್ನು ತೋರಿಸಲಿರುವನು: ದೇವರು ಕಷ್ಟಾನುಭವವನ್ನು ಯಾಕೆ ಅನುಮತಿಸಿದ್ದಾನೆ? ಅವನು ಅದರ ಕುರಿತು ಏನು ಮಾಡಲಿರುವನು?

[ಅಧ್ಯಯನ ಪ್ರಶ್ನೆಗಳು]

[ಪುಟ 5ರಲ್ಲಿರುವ ಚಿತ್ರ]

ಸಂರಕ್ಷಿಸುವ ವಾತಾವರಣವಿರುವ ಭೂಮಿಯು, ನಮಗಾಗಿ ಚಿಂತಿಸುವ ದೇವರೊಬ್ಬನಿಂದ ವಿನ್ಯಾಸಿಸಲ್ಪಟ್ಟ ಒಂದು ಅಸದೃಶ ಮನೆಯಾಗಿದೆ

[ಪುಟ 6ರಲ್ಲಿರುವ ಚಿತ್ರ]

ನಾವು ಜೀವಿತದಲ್ಲಿ ಪೂರ್ಣವಾಗಿ ಆನಂದಿಸಲು ಶಕ್ತರಾಗುವಂತೆ ಭೂಮಿಯು ಪ್ರೀತಿಯ ಚಿಂತನೆಯಿಂದ ರಚಿಸಲ್ಪಟ್ಟಿತು

[ಪುಟ 7ರಲ್ಲಿರುವ ಚಿತ್ರ]

‘ಮಿದುಳೊಂದರಲ್ಲಿ ಭೂಮಿಯ ಮೇಲಿರುವ ಸಮಗ್ರ ಸಂಪರ್ಕ ಜಾಲಬಂಧಕ್ಕಿಂತಲೂ ಹೆಚ್ಚು ಕೂಡಿಸುವಿಕೆಗಳು ಇರುತ್ತವೆ.’—ಅಣು ಜೀವವಿಜ್ಞಾನಿ

[ಪುಟ 8ರಲ್ಲಿರುವ ಚಿತ್ರ]

“ಕಣ್ಣು ವಿನ್ಯಾಸಿಸಲ್ಪಟ್ಟಿದೆ ಎಂದು ತೋರುತ್ತದೆ; ದುರ್ಬೀನುಗಳ ಯಾವನೇ ವಿನ್ಯಾಸಗಾರನು ಇದಕ್ಕಿಂತ ಉತ್ತಮವಾದುದನ್ನು ಮಾಡಶಕ್ತನಾಗಿಲ್ಲ.”—ಖಗೋಲ ಶಾಸ್ತ್ರಜ್ಞ