ದೇವರ ಉದ್ದೇಶವು ನೆರವೇರಿಕೆಯೆಡೆಗೆ ಸಾಗುತ್ತದೆ
ಭಾಗ 8
ದೇವರ ಉದ್ದೇಶವು ನೆರವೇರಿಕೆಯೆಡೆಗೆ ಸಾಗುತ್ತದೆ
1, 2. ಕಷ್ಟಾನುಭವವನ್ನು ತೆಗೆದುಹಾಕಲು ದೇವರು ಹೇಗೆ ಮುನ್ನೇರ್ಪಾಡನ್ನು ಮಾಡುತ್ತಾ ಇದ್ದನು?
ಹಲವು ಶತಮಾನಗಳಿಂದಲೂ ದಂಗೆಕೋರ ಮನುಷ್ಯರ ಮತ್ತು ದೆವ್ವಗಳ ಆಡಳಿತೆಯು ಮಾನವ ಕುಟುಂಬವನ್ನು ಅಧೋಗತಿಗೆ ಎಳೆಯುತ್ತಾ ಇದೆ. ಆದರೂ, ದೇವರು ನಮ್ಮ ಕಷ್ಟಾನುಭವಗಳನ್ನು ಅಲಕ್ಷಿಸಿರುವುದಿಲ್ಲ. ಬದಲಾಗಿ, ಎಲ್ಲಾ ಶತಕಗಳಲ್ಲಿಯೂ, ದುಷ್ಟತನ ಮತ್ತು ಕಷ್ಟಾನುಭವದ ಹಿಡಿತದಿಂದ ಮಾನವರನ್ನು ವಿಮೋಚಿಸಲು ಅವನು ಮುನ್ನೇರ್ಪಾಡುಗಳನ್ನು ಮಾಡುತ್ತಾ ಇದ್ದನು.
2 ಏದೆನಿನಲ್ಲಿ ದಂಗೆಯ ಸಮಯದಲ್ಲಿ, ಈ ಭೂಮಿಯನ್ನು ಜನರಿಗಾಗಿ ಒಂದು ಪ್ರಮೋದವನವನ್ನಾಗಿ ಮಾಡುವ ಸರಕಾರವೊಂದನ್ನು ರಚಿಸುವ ತನ್ನ ಉದ್ದೇಶವನ್ನು ದೇವರು ಪ್ರಕಟಿಸಲು ಆರಂಭಿಸಿದನು. (ಆದಿಕಾಂಡ 3:15) ಅನಂತರ, ದೇವರ ಮುಖ್ಯ ವದನಕನೋಪಾದಿ, ಯೇಸುವು ಬರಲಿರುವ ಈ ದೇವರ ಸರಕಾರವನ್ನು ತನ್ನ ಬೋಧನೆಯ ಮುಖ್ಯಪ್ರಸಂಗವನ್ನಾಗಿ ಮಾಡಿದನು. ಮಾನವ ಕುಲಕ್ಕೆ ಅದೊಂದೇ ನಿರೀಕ್ಷೆಯಾಗಿರುವುದು ಎಂದು ಅವನು ಹೇಳಿದನು.—ದಾನಿಯೇಲ 2:44; ಮತ್ತಾಯ 6:9, 10; 12:21.
3. ಭೂಮಿಗಾಗಿ ಆಗಮಿಸಲಿರುವ ಸರಕಾರವನ್ನು ಯೇಸುವು ಏನೆಂದು ಕರೆದನು, ಮತ್ತು ಯಾಕೆ?
3 ಆಗಮಿಸಲಿರುವ ಆ ದೇವರ ಸರಕಾರವನ್ನು ಯೇಸುವು “ಪರಲೋಕ ರಾಜ್ಯ” ಎಂದು ಕರೆದನು, ಯಾಕಂದರೆ ಅದು ಪರಲೋಕದಿಂದ ಆಳಲಿರುವುದು. (ಮತ್ತಾಯ 4:17) ಅದನ್ನು ಅವನು “ದೇವರ ರಾಜ್ಯ” ಎಂದೂ ಕರೆದನು, ಯಾಕಂದರೆ ದೇವರು ಅದರ ಕರ್ತೃವು ಆಗಿರುವನು. (ಲೂಕ 17:20) ಶತಮಾನಗಳಿಂದ ಆ ಸರಕಾರದಲ್ಲಿರುವವರು ಯಾರು ಮತ್ತು ಅದು ಏನನ್ನು ಪೂರೈಸಲಿರುವುದು ಎನ್ನುವ ಕುರಿತು ಪ್ರವಾದನೆಗಳನ್ನು ಬರೆಯುವಂತೆ ತನ್ನ ಬರಹಗಾರರಿಗೆ ದೇವರು ಪ್ರೇರಿಸಿದನು.
ಭೂಮಿಯ ಹೊಸ ರಾಜನು
4, 5. ಯೇಸುವು ತನ್ನ ಒಪ್ಪಲ್ಪಟ್ಟ ಅರಸನೆಂದು ದೇವರು ಹೇಗೆ ತೋರಿಸಿದನು?
4 ದೇವರ ರಾಜ್ಯದ ರಾಜನಾಗಲಿರುವವನ ಕುರಿತಾದ ಅನೇಕ ಪ್ರವಾದನೆಗಳನ್ನು, ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ನೆರವೇರಿಸಿದವನು ಯೇಸುವಾಗಿದ್ದನು. ಮಾನವ ಕುಲದ ಮೇಲಿನ ಪರಲೋಕ ಸರಕಾರದ ಅಧಿಪತಿಯಾಗಿರಲು, ಅವನು ದೇವರ ಆಯ್ಕೆಯಾಗಿ ಪರಿಣಮಿಸಿದನು. ಮತ್ತು ಅವನ ಮರಣಾನಂತರ, ಒಬ್ಬ ಬಲಾಢ್ಯ, ಅಮರ ಆತ್ಮ ಜೀವಿಯಾಗಿ ಯೇಸುವನ್ನು ಪರಲೋಕದ ಜೀವಿತಕ್ಕೆ ದೇವರು ಪುನರುತ್ಥಾನಗೊಳಿಸಿದನು. ಅವನ ಪುನರುತ್ಥಾನಕ್ಕೆ ಅನೇಕ ಸಾಕ್ಷಿಗಳಿದ್ದರು.—ಅ. ಕೃತ್ಯಗಳು 4:10; 9:1-9; ರೋಮಾಪುರ 1:1-4; 1 ಕೊರಿಂಥ 15:3-8.
5 ಯೇಸುವು, ಅನಂತರ “ದೇವರ ಬಲಗಡೆಯಲ್ಲಿ ಕೂತುಕೊಂಡನು.” (ಇಬ್ರಿಯ 10:12) ಅಲ್ಲಿ ಅವನು ದೇವರ ಸ್ವರ್ಗೀಯ ರಾಜ್ಯದ ಅರಸನೋಪಾದಿ ಕ್ರಿಯೆಗೈಯಲು ದೇವರು ಅವನಿಗೆ ಅಧಿಕಾರ ಕೊಡುವ ಸಮಯವನ್ನು ಕಾದುಕೊಂಡಿದ್ದನು. ಇದು ಕೀರ್ತನೆ 110:1 ರಲ್ಲಿರುವ ಪ್ರವಾದನೆಯನ್ನು ನೆರವೇರಿಸಿತು, ಅಲ್ಲಿ ದೇವರು ಅವನಿಗೆ ಹೇಳಿದ್ದು: “ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗಿ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು.”
6. ತಾನು ದೇವರ ರಾಜ್ಯದ ಅರಸನಾಗಲು ಅರ್ಹನಾಗಿದ್ದೇನೆಂದು ಯೇಸುವು ಹೇಗೆ ತೋರಿಸಿದನು?
6 ಭೂಮಿಯ ಮೇಲಿರುವಾಗ, ಅಂತಹ ಪದವಿಗೆ ಆತನು ಅರ್ಹನಾಗಿದ್ದನು ಎಂದು ಯೇಸುವು ತೋರಿಸಿದನು. ಹಿಂಸೆಯ ನಡುವೆಯೂ, ದೇವರಿಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅವನು ಆರಿಸಿಕೊಂಡನು. ಹೀಗೆ ಮಾಡುವುದರ ಮೂಲಕ, ಪರೀಕ್ಷೆಯ ಕೆಳಗೆ ಯಾವನೇ ಮಾನವನು ದೇವರಿಗೆ ನಂಬಿಗಸ್ತನಾಗಿ ಉಳಿಯುವುದಿಲ್ಲ ಎಂದು ವಾದಿಸಿದಾಗ, ಸೈತಾನನು ಸುಳ್ಳು ಹೇಳಿದ್ದನು ಎಂದು ಅವನು ತೋರಿಸಿದನು. ಪರಿಪೂರ್ಣ ಮನುಷ್ಯನೂ, ‘ಎರಡನೆಯ ಆದಾಮನೂ,’ ಆದ ಯೇಸುವು, ಪರಿಪೂರ್ಣ ಮಾನವರನ್ನು ಸೃಷ್ಟಿಸುವುದರಲ್ಲಿ ದೇವರು ತಪ್ಪಿತಸ್ಥನಾಗಿರಲಿಲ್ಲ ಎಂದು ತೋರಿಸಿದನು.—1 ಕೊರಿಂಥ 15:22, 45; ಮತ್ತಾಯ 4:1-11.
7, 8. ಯೇಸುವು ಭೂಮಿಯ ಮೇಲಿರುವಾಗ, ಯಾವ ಒಳ್ಳೆಯ ವಿಷಯಗಳನ್ನು ಮಾಡಿದನು, ಮತ್ತು ಅವನೇನನ್ನು ಪ್ರದರ್ಶಿಸಿದನು?
7 ಯೇಸುವು, ಅವನ ಶುಶ್ರೂಷೆಯ ಕೆಲವೇ ವರ್ಷಗಳಲ್ಲಿ ಮಾಡಿದಷ್ಟು ಒಳಿತನ್ನು, ಬೇರೆ ಯಾವ ಅಧಿಪತಿಯು ಎಂದಾದರೂ ಮಾಡಿದ್ದಾನೆ? ದೇವರ ಪವಿತ್ರಾತ್ಮದಿಂದ ಶಕ್ತಿಭರಿತನಾಗಿ, ಯೇಸುವು ರೋಗಿಗಳನ್ನು, ಕುಂಟರನ್ನು, ಕುರುಡರನ್ನು, ಕಿವುಡರನ್ನು, ಮೂಕರನ್ನು ವಾಸಿಮಾಡಿದನು. ಅವನು ಸತ್ತವರನ್ನು ಸಹ ಎಬ್ಬಿಸಿದನು! ಅವನು ರಾಜ್ಯಾಧಿಕಾರದಲ್ಲಿ ಬರುವಾಗ, ಭೌಗೋಳಿಕ ಮಟ್ಟದಲ್ಲಿ ಮಾನವ ಕುಲಕ್ಕಾಗಿ ಏನು ಮಾಡಲಿರುವನು ಎಂದು ಚಿಕ್ಕ ಪ್ರಮಾಣದಲ್ಲಿ ಅವನು ಪ್ರದರ್ಶಿಸಿದನು.—ಮತ್ತಾಯ 15:30, 31; ಲೂಕ 7:11-16.
8 ಭೂಮಿಯಲ್ಲಿರುವಾಗ ಅವನು ಎಷ್ಟೊಂದು ಒಳಿತನ್ನು ಮಾಡಿದನೆಂದರೆ ಅವನ ಶಿಷ್ಯನಾದ ಯೋಹಾನನು ಅಂದದ್ದು: “ಇದಲ್ಲದೆ ಯೋಹಾನ 21:25. *
ಯೇಸು ಮಾಡಿದ್ದು ಇನ್ನೂ ಬಹಳವಿದೆ; ಅದನ್ನೆಲ್ಲಾ ಒಂದೊಂದಾಗಿ ಬರೆಯುವದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸದೆ ಹೋದೀತೆಂದು ನಾನು ನೆನಸುತ್ತೇನೆ.”—9. ಪ್ರಾಮಾಣಿಕ ಹೃದಯದ ವ್ಯಕ್ತಿಗಳು ಯೇಸುವಿನ ಬಳಿ ಗುಂಪಾಗಿ ಸೇರಿದ್ದು ಯಾಕೆ?
9 ಯೇಸುವು ದಯಾಮಯನೂ, ಕನಿಕರವುಳ್ಳವನೂ, ಜನರೆಡೆಗೆ ಅತಿ ಮಹತ್ತಾದ ಪ್ರೀತಿಯುಳ್ಳವನೂ ಆಗಿದ್ದನು. ಅವನು ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಿದನು, ಆದರೆ ಅವನು ಶ್ರೀಮಂತರ ಯಾ ದೊಡ್ಡ ಪದವಿಯಲ್ಲಿರುವವರ ವಿರುದ್ಧ ವ್ಯತ್ಯಾಸ ಮನೋಭಾವ ತೋರಿಸಲಿಲ್ಲ. ಯೇಸುವು ಹೀಗೆಂದು ಹೇಳಿದಾಗ, ಪ್ರಾಮಾಣಿಕ ಹೃದಯದ ಜನರು ಅವನ ಪ್ರೀತಿಯ ಆಮಂತ್ರಣಕ್ಕೆ ಪ್ರತಿವರ್ತನೆ ತೋರಿಸಿದರು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೋಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” (ಮತ್ತಾಯ 11:28-30) ದೇವ-ಭೀರು ವ್ಯಕ್ತಿಗಳು ಅವನ ಬಳಿ ಗುಂಪಾಗಿ ಸೇರಿದರು ಮತ್ತು ಅವನ ಆಧಿಪತ್ಯಕ್ಕಾಗಿ ಮುನ್ನೋಡಿದರು.—ಯೋಹಾನ 12:19.
ಜೊತೆ ಅಧಿಪತಿಗಳು
10, 11. ಭೂಮಿಯ ಮೇಲೆ ಆಡಳಿತ ನಡಿಸಲು ಯೇಸುವಿನೊಂದಿಗೆ ಯಾರು ಪಾಲಿಗರಾಗುವರು?
10 ಮಾನವ ಸರಕಾರಗಳಿಗೆ ಜೊತೆ ಆಡಳಿತಗಾರರು ಇರುವಂತೆ, ದೇವರ ಸ್ವರ್ಗೀಯ ಸರಕಾರಕ್ಕೂ ಇದೆ. ಭೂಮಿಯನ್ನು ಆಳುವದರಲ್ಲಿ ಯೇಸುವಲ್ಲದೆ ಇತರರು ಭಾಗವಹಿಸಲಿದ್ದಾರೆ, ಯಾಕಂದರೆ ಮಾನವ ಕುಲದ ಮೇಲೆ ಅರಸರುಗಳಾಗಿ ಅವನೊಂದಿಗೆ ಆಳಲಿರುವರು ಎಂದು ಯೇಸುವು ತನ್ನ ನಿಕಟ ಸಹವಾಸಿಗಳಿಗೆ ವಾಗ್ದಾನಿಸಿದನು.—ಯೋಹಾನ 14:2, 3; ಪ್ರಕಟನೆ 5:10; 20:6.
11 ಆದಕಾರಣ, ಯೇಸುವಿನ ಜೊತೆಯಲ್ಲಿ, ಮಾನವರ ಒಂದು ಸೀಮಿತ ಸಂಖ್ಯೆಯ ಜನರು ಕೂಡ ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವರು. ಮಾನವ ಸಂತತಿಗೆ ನಿತ್ಯ ಆಶೀರ್ವಾದಗಳನ್ನು ತರಲಿರುವ ದೇವರ ರಾಜ್ಯವಾಗುವಂತೆ ಅವರು ಏರ್ಪಡಿಸಲ್ಪಡುವರು. (2 ಕೊರಿಂಥ 4:14; ಪ್ರಕಟನೆ 14:1-3) ಆದುದರಿಂದ ಯುಗಗಳಿಂದಲೂ, ಮಾನವ ಕುಟುಂಬಕ್ಕೆ ನಿತ್ಯವಾದ ಆಶೀರ್ವಾದಗಳನ್ನು ತರುವ ಒಂದು ಆಡಳಿತಕ್ಕಾಗಿ ನೆಲಗಟ್ಟನ್ನು ಯೆಹೋವನು ಹಾಕಿದ್ದಾನೆ.
ಸ್ವತಂತ್ರ ಆಳಿಕೆಯು ಅಂತ್ಯಗೊಳ್ಳುವುದು
12, 13. ಏನು ಮಾಡಲು ದೇವರ ರಾಜ್ಯವು ಈಗ ಸಿದ್ಧವಾಗಿ ನಿಂತಿದೆ?
12 ಈ ಶತಕದಲ್ಲಿ ದೇವರು ಭೂಮಿಯ ವ್ಯವಹಾರಗಳಲ್ಲಿ ನೇರವಾಗಿ ಕೈಹಾಕಿದ್ದಾನೆ. ಈ ಬ್ರೊಷರ್‌ನ 9 ನೆಯ ಭಾಗವು ಚರ್ಚಿಸುವಂತೆ, ಕ್ರಿಸ್ತನ ಕೆಳಗಿನ ದೇವರ ರಾಜ್ಯವು 1914 ರಲ್ಲಿ ಸ್ಥಾಪಿತವಾಯಿತು ಮತ್ತು ಈಗ ಸೈತಾನನ ಸಂಪೂರ್ಣ ವ್ಯವಸ್ಥೆಯನ್ನು ನಜ್ಜುಗುಜ್ಜುಗೊಳಿಸಲು ಸಿದ್ಧವಾಗಿದೆಯೆಂದು ಬೈಬಲ್ ಪ್ರವಾದನೆ ತೋರಿಸುತ್ತದೆ. ಆ ರಾಜ್ಯವು “[ಕ್ರಿಸ್ತನ] ವೈರಿಗಳ ಮಧ್ಯದಲ್ಲಿ ದೊರೆತನ ಮಾಡಲು” ಅಣಿಯಾಗಿದೆ.—ಕೀರ್ತನೆ 110:2.
13 ಈ ವಿಷಯದಲ್ಲಿ ದಾನಿಯೇಲ 2:44ರ ಪ್ರವಾದನೆಯು ಹೇಳುವುದು: “ಆ [ಈಗ ಅಸ್ತಿತ್ವದಲ್ಲಿರುವ] ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು [ಪರಲೋಕದಲ್ಲಿ] ಸ್ಥಾಪಿಸುವನು, ಅದೂ ಎಂದಿಗೂ ಅಳಿಯದು, ಇಲ್ಲವೆ ಅದರ ಸಾರ್ವಭೌಮತ್ವವು ಬೇರೆ ಜನಾಂಗಕ್ಕೆ ಬಿಡಲ್ಪಡದು [ಮಾನವನಾಳಿಕೆಯು ಇನ್ನೆಂದಿಗೂ ಪುನಃ ಅನುಮತಿಸಲ್ಪಡದು] ಅದು [ದೇವರ ರಾಜ್ಯವು] ಈ ಎಲ್ಲಾ ರಾಜ್ಯಗಳನ್ನು ಚೂರುಚೂರು ಮಾಡಿ, ಅವುಗಳನ್ನು ಅಂತ್ಯಗೊಳಿಸುವುದು, ಮತ್ತು ಅದು ಸದಾಕಾಲಕ್ಕೂ ನಿಲ್ಲುವದು.”—ರಿವೈಸ್ಡ್ ಸ್ಟ್ಯಾಂಡರ್ಡ್ ವರ್ಷನ್.
14. ಮಾನವನ ಆಳಿಕೆಯನ್ನು ಅಂತ್ಯಗೊಳಿಸುವ ಫಲಿತಾಂಶವಾಗಿ ಬರುವ ಕೆಲವು ಪ್ರಯೋಜನಗಳು ಯಾವುವು?
14 ದೇವರಿಂದ ಸ್ವತಂತ್ರವಾಗಿರುವ ಎಲ್ಲಾ ಆಧಿಪತ್ಯವು ದಾರಿಯಿಂದ ತೆಗೆಯಲ್ಪಟ್ಟ ಅನಂತರ, ಭೂಮಿಯ ಮೇಲೆ ದೇವರ ರಾಜ್ಯದ ಆಡಳಿತವು ಪೂರ್ಣವಾಗಿರುವುದು. ಮತ್ತು ಪರಲೋಕದಿಂದ ರಾಜ್ಯವು ಆಳಲಿರುವುದರಿಂದ, ಮಾನವರಿಂದ ಅದು ಎಂದಿಗೂ ಭ್ರಷ್ಟಗೊಳಿಸಲ್ಪಡಸಾಧ್ಯವೇ ಇಲ್ಲ. ಆಡಳಿತದ ಶಕ್ತಿಯು ಮೊದಲು ಎಲ್ಲಿ ಇತ್ತೋ, ಅಲ್ಲಿ ಪರಲೋಕದಲ್ಲಿ ದೇವರೊಂದಿಗೆ ಇರುವುದು. ಮತ್ತು ದೇವರಾಳಿಕೆಯು ಇಡೀ ಭೂಮಿಯನ್ನು ನಿಯಂತ್ರಿಸಲಿರುವುದರಿಂದ, ಸುಳ್ಳು ಧರ್ಮಗಳಿಂದ ಯಾ ಅತೃಪ್ತಿಕರ ಮಾನವ ತತ್ವಜ್ಞಾನಗಳಿಂದ ಮತ್ತು ರಾಜಕೀಯ ಕಲ್ಪನೆಗಳಿಂದ ಇನ್ನು ಮುಂದೆ ಯಾರೊಬ್ಬನೂ ವಂಚಿಸಲ್ಪಡನು. ಇವೆಲ್ಲಾ ಸಂಗತಿಗಳಲ್ಲಿ ಯಾವುದನ್ನೂ ಅಸ್ತಿತ್ವದಲ್ಲಿರಲು ಅನುಮತಿಸಲಾಗುವುದಿಲ್ಲ.—ಮತ್ತಾಯ 7:15-23; ಪ್ರಕಟನೆ, ಅಧ್ಯಾಯಗಳು 17 ರಿಂದ 19ರ ತನಕ.
[ಪಾದಟಿಪ್ಪಣಿಗಳು]
^ ಪ್ಯಾರ. 8 ಯೇಸುವಿನ ಜೀವಿತದ ಪೂರ್ಣ ಆವರಿಸುವಿಕೆಗೋಸ್ಕರ, ವಾಚ್‌ಟವರ್ ಸೊಸೈಟಿಯಿಂದ 1991 ರಲ್ಲಿ ಪ್ರಕಾಶಿತವಾದ ದ ಗ್ರೇಟೆಸ್ಟ್ ಮ್ಯಾನ್ ಹೂ ಎವರ್ ಲಿವ್ಡ್ ಪುಸ್ತಕವನ್ನು ನೋಡಿರಿ.
[ಅಧ್ಯಯನ ಪ್ರಶ್ನೆಗಳು]
[ಪುಟ 18ರಲ್ಲಿರುವ ಚಿತ್ರ]
ನೂತನ ಲೋಕದಲ್ಲಿ ತಾನೇನು ಮಾಡಲಿರುವೆನೆಂದು ತೋರಿಸಲು ಯೇಸುವು ಭೂಮಿಯ ಮೇಲಿರುವಾಗ ರೋಗಿಗಳನ್ನು ವಾಸಿಮಾಡಿದನು ಮತ್ತು ಸತ್ತವರನ್ನು ಎಬ್ಬಿಸಿದನು
[ಪುಟ 19ರಲ್ಲಿರುವ ಚಿತ್ರ]
ದೇವರಿಂದ ಸ್ವತಂತ್ರವಾಗಿರುವ ಎಲ್ಲಾ ವಿಧಗಳ ಆಳಿಕೆಯನ್ನು ಆತನ ಸ್ವರ್ಗೀಯ ರಾಜ್ಯವು ಅಸ್ತಿತ್ವದಲ್ಲಿರದಂತೆ ನಜ್ಜುಗುಜ್ಜುಮಾಡುವುದು