ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು “ಕಡೇ ದಿವಸಗಳಲ್ಲಿ” ಇದ್ದೇವೆ ಎಂದು ನಮಗೆ ತಿಳಿದಿರುವ ವಿಧ

ನಾವು “ಕಡೇ ದಿವಸಗಳಲ್ಲಿ” ಇದ್ದೇವೆ ಎಂದು ನಮಗೆ ತಿಳಿದಿರುವ ವಿಧ

ಭಾಗ 9

ನಾವು “ಕಡೇ ದಿವಸಗಳಲ್ಲಿ” ಇದ್ದೇವೆ ಎಂದು ನಮಗೆ ತಿಳಿದಿರುವ ವಿಧ

1, 2. ನಾವು ಕಡೇ ದಿವಸಗಳಲ್ಲಿ ಇದ್ದೇವೊ ಎಂದು ಹೇಗೆ ತಿಳಿಯಬಲ್ಲೆವು?

ಮಾನ  ಆಳಿಕೆಯ ಈ ಸದ್ಯದ ವ್ಯವಸ್ಥೆಯ ವಿರುದ್ಧ ದೇವರ ರಾಜ್ಯವು ಕ್ರಿಯೆಗೈಯುವ ಸಮಯದಲ್ಲಿ ನಾವು ಜೀವಿಸುತ್ತಾ ಇದ್ದೇವೆ ಎಂದು ನಾವು ಹೇಗೆ ಖಾತ್ರಿಯಿಂದಿರಸಾಧ್ಯವಿದೆ? ದೇವರು ಎಲ್ಲಾ ದುಷ್ಟತನ ಮತ್ತು ಕಷ್ಟಾನುಭವವನ್ನು ಅಂತ್ಯಗೊಳಿಸುವ ಸಮಯಕ್ಕೆ ನಾವು ಬಹಳ ನಿಕಟವಾಗಿದ್ದೇವೆ ಎಂದು ನಾವು ಹೇಗೆ ತಿಳಿಯಬಲ್ಲೆವು?

2 ಯೇಸು ಕ್ರಿಸ್ತನ ಶಿಷ್ಯರು ಆ ಸಂಗತಿಗಳನ್ನು ತಿಳಿಯಲು ಬಯಸಿದರು. ರಾಜ್ಯಾಧಿಕಾರದೊಂದಿಗೆ ಅವನ ಸಾನ್ನಿಧ್ಯವು ಮತ್ತು “ವಿಷಯಗಳ ವ್ಯವಸ್ಥೆಯ ಅಂತ್ಯ”ದ “ಸೂಚನೆ”ಯು ಏನಾಗಿರುವುದು ಎಂದು ಅವನನ್ನು ಅವರು ಕೇಳಿದರು. (ಮತ್ತಾಯ 24:3, NW) ಮಾನವ ಕುಲವು “ಅಂತ್ಯಕಾಲ”ದೊಳಗೆ,—ಈ ವಿಷಯಗಳ ವ್ಯವಸ್ಥೆಯ “ಕಡೇ ದಿವಸ”ಗಳೊಳಗೆ—ಪ್ರವೇಶಿಸಿದೆ ಎಂದು ತೋರಿಸಲು, ಸಂಯೋಜಿತವಾಗುವ ಲೋಕ-ಕುಲುಕುವ ಘಟನೆಗಳನ್ನು ಮತ್ತು ಪರಿಸ್ಥಿತಿಗಳನ್ನು ವಿವರವಾಗಿ ಹೇಳಿ ಯೇಸುವು ಉತ್ತರಿಸಿದನು. (ದಾನಿಯೇಲ 11:40; 2 ತಿಮೊಥೆಯ 3:1) ಈ ಶತಮಾನದಲ್ಲಿ ನಾವು ಆ ಸಂಘಟಿತ ಸೂಚನೆಯನ್ನು ನೋಡಿದ್ದೇವೊ? ಹೌದು, ನಾವು ನೋಡಿದ್ದೇವೆ, ಪುಷ್ಕಳವಾಗಿ!

ಲೋಕ ಯುದ್ಧಗಳು

3, 4. ಈ ಶತಮಾನದ ಯುದ್ಧಗಳು ಯೇಸುವಿನ ಪ್ರವಾದನೆಯೊಂದಿಗೆ ಹೇಗೆ ಹೊಂದಿಕೆಯಲ್ಲಿವೆ?

3 ‘ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು’ ಎಂದು ಯೇಸು ಮುಂತಿಳಿಸಿದನು. (ಮತ್ತಾಯ 24:7) ಈ ಮೊದಲಿನ ಯಾವುದೇ ಯುದ್ಧಕ್ಕಿಂತ ಭಿನ್ನವಾಗಿರುವ ರೀತಿಯೊಂದರಲ್ಲಿ ಜನಾಂಗಗಳು ಮತ್ತು ರಾಜ್ಯಗಳು ಸಜ್ಜುಗೊಳಿಸಲ್ಪಟ್ಟ ಒಂದು ಯುದ್ಧದಲ್ಲಿ ಲೋಕವು 1914 ರಲ್ಲಿ ಸಿಕ್ಕಿಕೊಂಡಿತು. ಆ ವಾಸ್ತವಿಕತೆಯ ಅಂಗೀಕಾರದಲ್ಲಿ, ಇತಿಹಾಸಜ್ಞರು ಆ ಸಮಯದಲ್ಲಿ ಅದನ್ನು ಮಹಾ ಯುದ್ಧ ಎಂದು ಕರೆದರು. ಇತಿಹಾಸದಲ್ಲಿ ಅಂತಹ ವಿಧದ ಪ್ರಥಮ ಯುದ್ಧ, ಪ್ರಥಮ ಲೋಕ ಯುದ್ಧ ಅದಾಗಿತ್ತು. ಸುಮಾರು 2,00,00,000 ಸೈನಿಕರು ಮತ್ತು ನಾಗರಿಕರು ತಮ್ಮ ಜೀವಗಳನ್ನು ಕಳೆದುಕೊಂಡರು, ಇದು ಮೊದಲಿನ ಯಾವುದೇ ಯುದ್ಧಕ್ಕಿಂತಲೂ ಎಷ್ಟೋ ಅಧಿಕವಾಗಿತ್ತು.

4 ಪ್ರಥಮ ಲೋಕ ಯುದ್ಧವು ಕಡೇ ದಿವಸಗಳ ಆರಂಭವನ್ನು ಗುರುತಿಸಿತು. ಇದು ಮತ್ತು ಇನ್ನಿತರ ಘಟನೆಗಳು “ಪ್ರಸವವೇದನೆಯ ಪ್ರಾರಂಭ” ಆಗಲಿರುವುವು ಎಂದು ಯೇಸುವು ಹೇಳಿದನು. (ಮತ್ತಾಯ 24:8) ದ್ವಿತೀಯ ಲೋಕ ಯುದ್ಧವು ಅದಕ್ಕಿಂತಲೂ ಹೆಚ್ಚು ಮಾರಕವಾಗಿದ್ದು, ಸುಮಾರು 5,00,00,000 ಸೈನಿಕರು ಮತ್ತು ನಾಗರಿಕರು ತಮ್ಮ ಜೀವ ನಷ್ಟ ಹೊಂದಿದ್ದರಿಂದ, ಅದು ಸತ್ಯವೆಂದು ಸಾಬೀತಾಯಿತು. ಈ 20 ನೆಯ ಶತಮಾನದಲ್ಲಿ, ಯುದ್ಧಗಳಲ್ಲಿ 10,00,00,000ಕ್ಕಿಂತಲೂ ಹೆಚ್ಚೇ ಜನರು ಕೊಲ್ಲಲ್ಪಟ್ಟಿದ್ದಾರೆ, ಇದು ಮುಂಚಿನ 400 ವರ್ಷಗಳಷ್ಟದ್ದನ್ನು ಒಟ್ಟಿಗೆ ಮಾಡಿದರೆ ಅದಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಾಗಿದೆ! ಮಾನವ ಆಳಿಕೆಯ ಎಂಥ ಒಂದು ವಿಪರೀತ ಖಂಡನೆ!

ಇತರ ಪುರಾವೆಗಳು

5-7. ನಾವು ಕಡೇ ದಿವಸಗಳಲ್ಲಿದ್ದೇವೆಂಬುದರ ಇನ್ನಿತರ ಕೆಲವು ಪುರಾವೆಗಳು ಯಾವುವು?

5 ಕಡೇ ದಿವಸಗಳನ್ನು ಒಡಗೂಡಿ ಹೋಗುವ ಇತರ ವೈಶಿಷ್ಟ್ಯಗಳನ್ನು ಕೂಡ ಯೇಸುವು ಸೇರಿಸಿದನು: “ಮತ್ತು ಮಹಾ ಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ [ಅಂಟುರೋಗಗಳು] ಬರುವವು.” (ಲೂಕ 21:11) ಇಂತಹ ವಿಪತ್ತುಗಳಿಂದ ಸಂಕಟಗಳಲ್ಲಿ ಮಹತ್ತಾದ ಏರಿಕೆಯಾಗಿರುವುದರಿಂದ, ಅದು 1914 ರಂದಿನಿಂದ ನಡೆದಿರುವ ಘಟನೆಗಳಿಗೆ ಚೆನ್ನಾಗಿ ಸರಿಹೊಂದುತ್ತದೆ.

6 ಭಾರಿ ಪ್ರಮಾಣದ ಭೂಕಂಪಗಳು ಕ್ರಮದ ಸಂಭವಗಳಾಗಿದ್ದು, ಅನೇಕ ಪ್ರಾಣಗಳನ್ನು ಆಹುತಿ ತಕ್ಕೊಂಡಿವೆ. ಸ್ಪಾನಿಶ್‌ ಇನ್‌ಫ್ಲುಯೆನ್ಸ ಒಂದು ತಾನೇ ಪ್ರಥಮ ಲೋಕ ಯುದ್ಧವನ್ನುನುಸರಿಸಿ 2,00,00,000 ಜೀವಗಳನ್ನು ಕೊಂದಿತು—ಕೆಲವರು ಅದು 3,00,00,000 ಯಾ ಹೆಚ್ಚು ಎಂದು ಅಂದಾಜಿಸಿದ್ದಾರೆ. ಏಯ್ಡ್ಸ್‌ ಲಕ್ಷಗಟ್ಟಲೆ ಜೀವಗಳನ್ನು ಬಲಿತಕ್ಕೊಂಡಿದೆ ಮತ್ತು ಸಮೀಪ ಭವಿಷ್ಯದಲ್ಲಿ ಲಕ್ಷಗಟ್ಟಲೆ ಹೆಚ್ಚು ಜೀವಗಳನ್ನು ತಕ್ಕೊಳ್ಳಬಲ್ಲದು. ಪ್ರತಿ ವರ್ಷ ಹೃದ್ರೋಗಗಳಿಂದ, ಕ್ಯಾನ್ಸರ್‌, ಮತ್ತು ಇತರ ರೋಗಗಳಿಂದ ಲಕ್ಷಗಟ್ಟಲೆ ಜನರು ಸಾಯುತ್ತಾರೆ. ಹಸಿವೆಯ ನಿಧಾನ ಮರಣದಿಂದ ಇನ್ನು ಲಕ್ಷಗಟ್ಟಲೆ ಹೆಚ್ಚು ಸಾಯುತ್ತಾರೆ. ನಿಸ್ಸಂದೇಹವಾಗಿ ಅವರ ಯುದ್ಧ, ಆಹಾರದ ಅಭಾವ, ಮತ್ತು ಸಾಂಕ್ರಾಮಿಕ ರೋಗದೊಂದಿಗೆ ‘ಅಪೊಕಲಿಪ್ಸ್‌ನ ಕುದುರೆ ಸವಾರರು’ 1914 ರಿಂದ ಮಾನವ ಕುಟುಂಬದ ಅಧಿಕ ಸಂಖ್ಯೆಯನ್ನು ಕೆಡವಿ ಬಿಡುತ್ತಾ ಇದ್ದಾರೆ.—ಪ್ರಕಟನೆ 6:3-8.

7 ಎಲ್ಲಾ ದೇಶಗಳಲ್ಲಿ ಅನುಭವಿಸಲ್ಪಡುತ್ತಿರುವ ಪಾತಕದ ಏರಿಕೆಯನ್ನು ಸಹ ಯೇಸುವು ಮುಂತಿಳಿಸಿದನು. ಅವನಂದದ್ದು: “ಇದಲ್ಲದೆ ಅಧರ್ಮವು ಹೆಚ್ಚಾಗುವದರಿಂದ ಬಹು ಜನರ ಪ್ರೀತಿಯು ತಣ್ಣಗಾಗಿಹೋಗುವದು.”—ಮತ್ತಾಯ 24:12.

8. ನಮ್ಮ ಸಮಯಕ್ಕೆ 2 ತಿಮೊಥೆಯ ಅಧ್ಯಾಯ 3 ರಲ್ಲಿರುವ ಪ್ರವಾದನೆಯು ಹೇಗೆ ಹೊಂದಿಕೆಯಾಗುತ್ತದೆ?

8 ಇನ್ನೂ ಹೆಚ್ಚಾಗಿ, ಇಂದು ಲೋಕಾದ್ಯಂತ ಬಹಳವಾಗಿ ವ್ಯಕ್ತವಾಗುತ್ತಿರುವ, ನೈತಿಕ ಕುಸಿತದ ಕುರಿತು ಬೈಬಲ್‌ ಪ್ರವಾದನೆ ಮುನ್ನುಡಿಯಿತು: “ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; . . . ಆದರೆ ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.” (2 ತಿಮೊಥೆಯ 3:1-13) ನಮ್ಮ ಕಣ್ಣುಗಳ ಮುಂದೆಯೇ ಇವೆಲ್ಲವೂ ಸತ್ಯವಾಗಿ ತೋರಿಬಂದಿವೆ.

ಇನ್ನೊಂದು ಅಂಶ

9. ಭೂಮಿಯ ಮೇಲೆ ಕಡೇ ದಿವಸಗಳ ಆರಂಭದೊಂದಿಗೆ ಸಹಘಟನೆಯಾಗಿ ಪರಲೋಕದಲ್ಲಿ ಏನು ಸಂಭವಿಸಿತು?

9 ಈ ಶತಮಾನದಲ್ಲಿ ಕಷ್ಟಾನುಭವದಲ್ಲಿ ಭಾರಿ ಪ್ರಮಾಣದ ಏರಿಕೆಗೆ ಜವಾಬ್ದಾರವಾಗಿರುವ ಇನ್ನೊಂದು ಅಂಶವಿದೆ. ಸಹಘಟನೆಯಾಗಿ, 1914 ರಲ್ಲಿ ಕಡೇ ದಿವಸಗಳ ಆರಂಭದಲ್ಲಿ, ಮಾನವ ಕುಲವನ್ನು ಇನ್ನಷ್ಟು ಅಪಾಯಕ್ಕೊಡ್ಡಿದ ಯಾವುದೋ ಒಂದು ಸಂಗತಿಯು ಸಂಭವಿಸಿತು. ಆ ಸಮಯದಲ್ಲಿ, ಬೈಬಲಿನ ಕೊನೆಯ ಪುಸ್ತಕದಲ್ಲಿನ ಒಂದು ಪ್ರವಾದನೆಯು ತಿಳಿಸುವಂತೆ: “ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ [ಸ್ವರ್ಗೀಯ ಅಧಿಕಾರದಲ್ಲಿ ಕ್ರಿಸ್ತನು] ಅವನ ದೂತರೂ ಘಟಸರ್ಪನ [ಸೈತಾನನ] ಮೇಲೆ ಯುದ್ಧಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ [ದೆವ್ವಗಳು] ಯುದ್ಧಮಾಡಿ ಸೋತುಹೋದರು, ಮತ್ತು ಪರಲೋಕದೊಳಗೆ ಅವರಿಗೆ ಸ್ಥಾನವು ತಪ್ಪಿಹೋಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.”—ಪ್ರಕಟನೆ 12:7-9.

10, 11. ಸೈತಾನನೂ, ಅವನ ದೆವ್ವಗಳೂ ಭೂಮಿಗೆ ದೊಬ್ಬಲ್ಪಟ್ಟಾಗ, ಮಾನವ ಕುಲವು ಹೇಗೆ ಬಾಧಿತವಾಯಿತು?

10 ಮಾನವ ಕುಟುಂಬದ ಮೇಲೆ ಇದರಿಂದಾದ ಪರಿಣಾಮಗಳೇನು? ಪ್ರವಾದನೆಯು ಮುಂದುವರಿಸುವುದು: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” ಹೌದು, ಅವನ ವ್ಯವಸ್ಥೆಯ ಅಂತ್ಯವು ಸನ್ನಿಹಿತವಾಗಿದೆ ಎಂದು ಸೈತಾನನು ಬಲ್ಲನು, ಆದುದರಿಂದ, ಅವನನ್ನು ಮತ್ತು ಆತನ ಲೋಕವನ್ನು ಕಿತ್ತೆಸೆಯುವ ಮೊದಲು ದೇವರ ವಿರೋಧವಾಗಿ ಮಾನವರನ್ನು ತಿರುಗಿಸಲು ಅವನು ಸಕಲ ಪ್ರಯತ್ನವನ್ನೂ ಮಾಡುತ್ತಾ ಇದ್ದಾನೆ. (ಪ್ರಕಟನೆ 12:12; 20:1-3) ತಮ್ಮ ಇಚ್ಛಾ ಸ್ವಾತಂತ್ರ್ಯವನ್ನು ದುರುಪಯೋಗಿಸಿದ್ದರಿಂದ, ಆ ಆತ್ಮ ಜೀವಿಗಳು ಎಂತಹ ಅಧೋಗತಿಗೆ ಇಳಿದಿರುತ್ತಾರೆ! ಅವರ ಪ್ರಭಾವದ ಕೆಳಗೆ, ವಿಶೇಷವಾಗಿ 1914 ರಿಂದ ಭೂಮಿಯ ಮೇಲೆ ಪರಿಸ್ಥಿತಿಗಳು ಎಷ್ಟೊಂದು ಘೋರವಾಗಿವೆ!

11 ನಮ್ಮ ಸಮಯಗಳ ಕುರಿತು ಯೇಸುವು ಹೀಗೆ ಮುಂತಿಳಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ: “ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವದು. . . . ಮನುಷ್ಯರು ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.”—ಲೂಕ 21:25, 26.

ಮಾನವ ಮತ್ತು ದೆವ್ವ ಆಳಿಕೆಯ ಅಂತ್ಯ ಸಮೀಪದಲ್ಲಿದೆ

12. ಈ ವ್ಯವಸ್ಥೆಯ ಅಂತ್ಯದ ಮೊದಲು ನೆರವೇರಲಿರುವ ಉಳಿದಿರುವ ಪ್ರವಾದನೆಗಳಲ್ಲಿ ಒಂದು ಯಾವುದು?

12 ಈ ಸದ್ಯದ ವ್ಯವಸ್ಥೆಯನ್ನು ದೇವರು ನಾಶಮಾಡುವ ಮೊದಲು ಇನ್ನೆಷ್ಟು ಬೈಬಲ್‌ ಪ್ರವಾದನೆಗಳು ನೆರವೇರಲು ಬಾಕಿ ಉಳಿದಿರುತ್ತವೆ? ಕೇವಲ ಕೆಲವೇ! ಕೊನೆಯ ಕೆಲವುಗಳಲ್ಲಿ ಒಂದು, 1 ಥೆಸಲೊನೀಕ 5:3 ರಲ್ಲಿದ್ದು, ಅದು ಹೇಳುವುದು: “ಶಾಂತಿ ಮತ್ತು ಭದ್ರತೆ ಎಂದು ಅವರು ಮಾತಾಡುತ್ತಿರುವಾಗಲೇ, ಫಕ್ಕನೆ ವಿಪತ್ತು ಅವರ ಮೇಲೆ ಬರುವದು.” (ದ ನ್ಯೂ ಇಂಗ್ಲಿಷ್‌ ಬೈಬಲ್‌) ಇದು ತೋರಿಸುತ್ತದೇನಂದರೆ, ಈ ವ್ಯವಸ್ಥೆಯ ಅಂತ್ಯವು “ಅವರು ಮಾತಾಡುತ್ತಿರುವಾಗಲೇ,” ಆರಂಭಗೊಳ್ಳುವದು. ಲೋಕದಿಂದ ಮುಂಗಾಣಲ್ಪಡದೆ ಇದ್ದು, ನಿರೀಕ್ಷಿತ ಶಾಂತಿ ಮತ್ತು ಭದ್ರತೆಯ ಮೇಲೆ ಮಾನವರ ಗಮನವು ಇರುವಾಗ, ಅತಿ ಕೊಂಚವೇ ನಿರೀಕ್ಷಿಸಿದ ಸಮಯದಲ್ಲಿ ನಾಶನವು ಎರಗಲಿರುವುದು.

13, 14. ಯಾವ ತೊಂದರೆಯ ಸಮಯದ ಕುರಿತು ಯೇಸುವು ಮುಂತಿಳಿಸಿದನು, ಮತ್ತು ಅದು ಹೇಗೆ ಸಮಾಪ್ತಿಗೊಳ್ಳಲಿರುವುದು?

13 ಸೈತಾನನ ಪ್ರಭಾವದ ಕೆಳಗಿರುವ ಈ ಲೋಕಕ್ಕೆ ಸಮಯವು ಮುಗಿಯುತ್ತಾ ಇದೆ. ಬಲುಬೇಗನೆ, ಯೇಸುವು ಹೇಳಿದ ಸಂಕಟದ ಸಮಯದಲ್ಲಿ ಅದರ ಅಂತ್ಯವು ಬರುವುದು: “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನು ಮುಂದೆಯೂ ಆಗುವದಿಲ್ಲ.”—ಮತ್ತಾಯ 24:21.

14 “ಮಹಾ ಸಂಕಟದ” ಪರಾಕಾಷ್ಠೆಯು ಅರ್ಮಗೆದೋನಿನ ದೇವರ ಯುದ್ಧವಾಗಿರುವುದು. ದೇವರು “ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡು”ವನೆಂದು ಪ್ರವಾದಿ ದಾನಿಯೇಲನು ನುಡಿದ ಸಮಯ ಅದಾಗಿರುವುದು. ದೇವರಿಂದ ಸ್ವತಂತ್ರವಾಗಿರುವ ಸದ್ಯದ ಎಲ್ಲಾ ಮಾನವನಾಳಿಕೆಗಳ ಅಂತ್ಯ ಎಂದು ಇದರ ಅರ್ಥವಾಗಿದೆ. ಅವನ ರಾಜ್ಯವು ಅನಂತರ ಪರಲೋಕದಿಂದ ಆಳುತ್ತಾ, ಭೂಮಿಯ ಎಲ್ಲಾ ಮಾನವ ವ್ಯವಹಾರಗಳ ಮೇಲೆ ಪೂರ್ಣ ನಿಯಂತ್ರಣ ತಕ್ಕೊಳ್ಳಲಿರುವುದು. ದಾನಿಯೇಲನು ಮುಂತಿಳಿಸಿದಂತೆ, ಇನ್ನೆಂದಿಗೂ ಆಳುವ ಅಧಿಕಾರವು “ಬೇರೆ ಜನಾಂಗಕ್ಕೆ” ಬಿಡಲ್ಪಡುವುದಿಲ್ಲ.—ದಾನಿಯೇಲ 2:44; ಪ್ರಕಟನೆ 16:14-16.

15. ಸೈತಾನನ ಮತ್ತು ಆತನ ದೆವ್ವಗಳ ಪ್ರಭಾವಕ್ಕೆ ಏನು ಸಂಭವಿಸಲಿರುವುದು?

15 ಆ ಸಮಯದಲ್ಲಿ ಎಲ್ಲಾ ಸೈತಾನಿಕ ಮತ್ತು ದೆವ್ವ ಪ್ರಭಾವವೂ ಕೂಡ ನಿಂತುಹೋಗುವುದು. ಆ ದಂಗೆಕೋರ ಆತ್ಮ ಜೀವಿಗಳು “ಜನಗಳನ್ನು ಮರುಳುಗೊಳಿಸ” ಸಾಧ್ಯವಾಗದಂತೆ ತೊಲಗಿಸಲ್ಪಡುವರು. (ಪ್ರಕಟನೆ 12:9; 20:1-3) ಅವರಿಗೆ ಮರಣ ದಂಡನೆಯು ವಿಧಿಸಲಾಗಿದೆ ಮತ್ತು ನಾಶನವನ್ನು ಅವರು ಮುನ್ನೋಡುತ್ತಿದ್ದಾರೆ. ಅವರ ಕೆಡಿಸುವ ಪ್ರಭಾವದಿಂದ ಸ್ವತಂತ್ರರಾಗುವುದು, ಮಾನವ ಕುಲಕ್ಕೆ ಎಂತಹ ಒಂದು ಉಪಶಮನವಾಗಲಿರುವುದು!

ಯಾರು ಪಾರಾಗುವರು? ಯಾರು ಆಗುವುದಿಲ್ಲ?

16-18. ಈ ವ್ಯವಸ್ಥೆಯ ಅಂತ್ಯವನ್ನು ಯಾರು ಪಾರಾಗುವರು ಮತ್ತು ಯಾರು ಪಾರಾಗುವುದಿಲ್ಲ?

16 ದೇವರ ನ್ಯಾಯತೀರ್ಪುಗಳು ಈ ಲೋಕದ ವಿರುದ್ಧವಾಗಿ ಜಾರಿಗೊಳಿಸಲ್ಪಟ್ಟಾಗ, ಯಾರು ಪಾರಾಗುವರು? ಯಾರು ಪಾರಾಗುವುದಿಲ್ಲ? ದೇವರಾಳಿಕೆಯನ್ನು ಆಶಿಸುವವರೆಲ್ಲರೂ ​ಸಂರಕ್ಷಿಸಲ್ಪಡುವರು ಮತ್ತು ಪಾರಾಗುವರು ಎಂದು ಬೈಬಲ್‌ ತೋರಿಸುತ್ತದೆ. ದೇವರಾಳಿಕೆಯನ್ನು ಬಯಸದಿರುವವರೆಲ್ಲರೂ ಸಂರಕ್ಷಿಸಲ್ಪಡುವುದಿಲ್ಲ, ಬದಲಾಗಿ ಸೈತಾನನ ಲೋಕದೊಂದಿಗೆ ನಾಶಗೊಳಿಸಲ್ಪಡುವರು.

17ಜ್ಞಾನೋಕ್ತಿ 2:21, 22 ಹೇಳುವುದು: “ಯಥಾರ್ಥವಂತರು [ದೇವರ ಆಳಿಕೆಗೆ ಅಧೀನರಾಗುವವರು] ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ [ದೇವರ ಆಳಿಕೆಗೆ ಅಧೀನರಾಗದವರು] ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲವಾಗುವರು.”

18ಕೀರ್ತನೆ 37:10, 11 ಸಹ ಹೇಳುವದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” ವಚನ 29 ಕೂಡಿಸುವದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”

19. ಯಾವ ಬುದ್ಧಿವಾದವನ್ನು ನಾವು ಹೃದಯಕ್ಕೆ ತಕ್ಕೊಳ್ಳತಕ್ಕದ್ದು?

19ಕೀರ್ತನೆ 37:34 ರಲ್ಲಿ ಕೊಡಲ್ಪಟ್ಟಿರುವ ಬುದ್ಧಿವಾದವನ್ನು ನಾವು ಹೃದಯಕ್ಕೆ ತಕ್ಕೊಳ್ಳತಕ್ಕದ್ದು: “ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವದನ್ನು ನೀನು ನೋಡುವಿ.” ವಚನ 37 ಮತ್ತು 38 ಹೇಳುವುದು: “ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಶಾಂತನಿಗೆ ಸಂತಾನವೃದ್ಧಿ ಆಗುವದು. ದ್ರೋಹಿಗಳೆಲ್ಲರೂ ನಾಶವಾಗುವರು; ದುಷ್ಟರ ಸಂತಾನವು ತೆಗೆದುಹಾಕಲ್ಪಡುವದು.”

20. ಇವು ಜೀವಿಸಲು ರೋಮಾಂಚಕರವಾಗಿರುವ ಸಮಯಗಳು ಎಂದು ನಾವು ಯಾಕೆ ಹೇಳಬಲ್ಲೆವು?

20 ದೇವರು ನಮ್ಮ ಕುರಿತಾಗಿ ನಿಜವಾಗಿಯೂ ಚಿಂತಿಸುತ್ತಾನೆಂದೂ, ಎಲ್ಲಾ ದುಷ್ಟತನ ಮತ್ತು ಕಷ್ಟಾನುಭವವನ್ನು ಅವನು ಶೀಘ್ರದಲ್ಲಿಯೇ ಅಂತ್ಯಗೊಳಿಸಲಿರುವನೆಂದೂ ತಿಳಿಯುವುದು ಎಂತಹ ಸಂತೈಸುವಿಕೆ, ಹೌದು, ಸ್ಫೂರ್ತಿದಾಯಕವಾಗಿರುತ್ತದೆ! ಆ ಮಹಿಮಾಭರಿತ ಪ್ರವಾದನೆಗಳ ನೆರವೇರಿಕೆಯು ಕೇವಲ ಕೊಂಚ ಸಮಯದಲ್ಲಿದೆ ಎಂದು ತಿಳಿಯುವುದು ಎಷ್ಟೊಂದು ರೋಮಾಂಚಕರವಾಗಿದೆ!

[ಅಧ್ಯಯನ ಪ್ರಶ್ನೆಗಳು]

[ಪುಟ 20ರಲ್ಲಿರುವ ಚಿತ್ರ]

ಕಡೇ ದಿವಸಗಳ “ಸೂಚನೆ”ಯನ್ನುಂಟುಮಾಡುವ ಘಟನೆಗಳನ್ನು ಬೈಬಲು ಮುಂತಿಳಿಸಿತು

[ಪುಟ 22ರಲ್ಲಿರುವ ಚಿತ್ರ]

ಬಲುಬೇಗನೇ, ಅರ್ಮಗೆದೋನಿನಲ್ಲಿ, ದೇವರಾಳಿಕೆಗೆ ಅಧೀನರಾಗದವರನ್ನು ನಾಶಮಾಡಲಾಗುವುದು. ಅಧೀನರಾಗುವವರು ನೀತಿಯ ನೂತನ ಲೋಕದೊಳಗೆ ಪಾರಾಗುವರು